Actress Kajol: ಹೇರ್​ಸ್ಟೈಲ್, ಮೇಕಪ್ ಮಧ್ಯೆ ನಿಟ್ಟಿಂಗ್! ಕಾಜೊಲ್ ಮಲ್ಟಿ ಟಾಸ್ಕಿಂಗ್ ಅವತಾರ

ಕಾಜೊಲ್, ಅಜಯ್ ದೇವ್​​ಗನ್

ಕಾಜೊಲ್, ಅಜಯ್ ದೇವ್​​ಗನ್

ಕಾಜೊಲ್ ಅವರು ಇತ್ತೀಚೆಗೆ ತಮ್ಮ ಮಲ್ಟಿ ಟಾಸ್ಕಿಂಗ್ ವಿಡಿಯೋ ಶೇರ್ ಮಾಡಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಅಬ್ಬಾ ನೀವು ನಿಜಕ್ಕೂ ಟ್ಯಾಲೆಂಟೆಡ್ ಎಂದು ಹೊಗಳಿದ್ದಾರೆ.

  • News18
  • 3-MIN READ
  • Last Updated :
  • Bangalore, India
  • Share this:

ಬಾಲಿವುಡ್​ನ ಟಾಪ್ ನಟಿ ಕಾಜೋಲ್ (Kajol) ತನ್ನ ಮೇಕಪ್ ಸೆಷನ್‌ನ ಒಂದು ವೀಡಿಯೊವನ್ನು (Video) ಇನ್​ಸ್ಟಾಗ್ರಾಮ್​ನಲ್ಲಿ (Instagram) ಶೇರ್ ಮಾಡಿದ್ದಾರೆ. ತನ್ನ ಬ್ಯುಸಿ ಶೆಡ್ಯೂಲ್​ನಲ್ಲಿಯೂ ನಟಿ (Actress) ತನ್ನ ನಿಟ್ಟಿಂಗ್ ಹವ್ಯಾಸವನ್ನು (Hobby) ಮುಂದುವರಿಸಲು ಹೇಗೆ ಸಮಯವನ್ನು ಬಳಸುತ್ತಾರೆ ಎನ್ನುವುದು ವಿಡಿಯೋದಲ್ಲಿ ರಿವೀಲ್ ಆಗಿದೆ. ವಿಡಿಯೋ ಕ್ಲಿಪ್‌ನಲ್ಲಿ ಮೇಕ್ಅಪ್ (Makeup) ಮಾಡುವಾಗ ನಟಿ ಹೆಣಿಗೆ ಮಾಡುವುದನ್ನು ಕಾಣಬಹುದು. ಕಾಜೊಲ್ ಅದನ್ನು 'ಮಲ್ಟಿ ಟಾಸ್ಕಿಂಗ್' (Multi Tasking) ಎಂದು ಕರೆದಿದ್ದಾರೆ. ಆಕೆಯ ಪ್ರತಿಭೆಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 


ಕಾಜೋಲ್ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಹೇರ್​ಸ್ಟೈಲ್, ಮೇಕಪ್, ನಗು ಮತ್ತು ಹವ್ಯಾಸ. ಮಲ್ಟಿ ಟಾಸ್ಕಿಂಗ್ ಅತ್ಯುತ್ತಮವಾಗಿದೆ! ಎಂದು ನಟಿ ಹ್ಯಾಶ್‌ಟ್ಯಾಗ್‌ಗಳನ್ನು ಸೇರಿಸಿದ್ದಾರೆ.


ಅಭಿಮಾನಿಯೊಬ್ಬರು ವಿಡಿಯೋಗೆ ಕಮೆಂಟ್ ಮಾಡಿದ್ದಾರೆ. ಓ ಮೈ ಗಾಡ್!ನೀವು ಇದನ್ನು ಹೇಗೆ ಮಾಡುತ್ತೀರಿ ಎಂದು ಪ್ರಶ್ನಿಸಿದ್ದಾರೆ. ಇನ್ನೊಬ್ಬರು ಕಮೆಂಟ್ ಮಾಡಿ ನೀವು ಈ ಎಲ್ಲಾ ಪ್ರತಿಭೆಯಿಂದ ಆಶೀರ್ವದಿಸಲ್ಪಟ್ಟಿದ್ದೀರಿ ಮೇಡಂ ಎಂದಿದ್ದಾರೆ.


ಅಭಿಮಾನಿಯೊಬ್ಬರು ಕಮೆಂಟ್ ಮಾಡಿ ವಾವ್ ಎಷ್ಟು ಸ್ಪೀಡ್! ಅವರು ನೋಡದೆಯೇ ಇಷ್ಟು ಚೆನ್ನಾಗಿ ಹೆಣಿಯುತ್ತಾರೆ ಎಂದು ಹೊಗಳಿದ್ದಾರೆ. ಅಭಿಮಾನಿಯೊಬ್ಬರು ನಟಿಯನ್ನು 'ಮಲ್ಟಿಟಾಸ್ಕಿಂಗ್ ಕ್ವೀನ್' ಎಂದು ಕರೆದಿದ್ದಾರೆ.


ಮೊಮ್ಮಗುವಿಗೆ ಬಟ್ಟೆ ಹೆಣೆಯುತ್ತಿದ್ದಾರಾ?


ಒಬ್ಬ ವ್ಯಕ್ತಿ ಕೂಡ ಕಮೆಂಟ್ ಮಾಡಿ, ಈ ದಿನಗಳಲ್ಲಿ ಮಕ್ಕಳು ಹೆಣೆದ ಬಟ್ಟೆಗಳನ್ನು ಧರಿಸುವುದಿಲ್ಲ, ಅವರು ಮೊಮ್ಮಗನಿಗೆ ಮುಂಚಿತವಾಗಿ ಹೆಣಿಗೆ ಮಾಡುತ್ತಿರಬೇಕು. ಇದು ಉತ್ತಮ ಆಯ್ಕೆ ಮತ್ತು ಉತ್ತಮ ಹವ್ಯಾಸ ಎಂದಿದ್ದಾರೆ.


ಮಕ್ಕಳಿಗೆ ಸ್ಪೆಟರ್ ಹೆಣೆಯುತ್ತಾರೆ ನಟಿ


ಕಾಜೋಲ್ ಸಾಂದರ್ಭಿಕವಾಗಿ ತಾನು ತಯಾರಿಸಿದ ಸ್ವೆಟರ್‌ಗಳು, ಟಾಪ್‌ಗಳು ಮತ್ತು ಡ್ರೆಸ್‌ಗಳ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಅವರು ಒಮ್ಮೆ ತಮ್ಮ ಮಗ ಯುಗ್ ಜೊತೆಗಿನ ಫೋಟೋವನ್ನು ಹಂಚಿಕೊಂಡರು. ಇದರಲ್ಲಿ ಮಗ ನಟಿ ತಯಾರಿಸಿದ ಸ್ವೆಟರ್ ಧರಿಸಿದ್ದರು.


ಇದನ್ನೂ ಓದಿ: Alia Bhatt: ಮಗುವಿನ ಫೋಟೋ ಪೋಸ್ಟ್ ಮಾಡಿದ ಆಲಿಯಾ ಭಟ್


ಕಾಜೋಲ್ ಇತ್ತೀಚೆಗೆ ಸಲಾಮ್ ವೆಂಕಿ ಚಿತ್ರದಲ್ಲಿ ಕಾಣಿಸಿಕೊಂಡರು. ಇದರಲ್ಲಿ ಅವರು ಅನಾರೋಗ್ಯ ಇರುವ ಮಗನ ಸಿಂಗಲ್ ಮದರ್ ಆಗಿ ನಟಿಸಿದ್ದಾರೆ. ದಕ್ಷಿಣದ ನಟಿ ಮತ್ತು ನಿರ್ದೇಶಕಿ ರೇವತಿ ನಿರ್ದೇಶನದ ಈ ಚಿತ್ರ ಕಳೆದ ವರ್ಷ ಡಿಸೆಂಬರ್ 9 ರಂದು ಬಿಡುಗಡೆಯಾಗಿತ್ತು.




ಅವರು ಈಗ ಮುಂಬರುವ ವೆಬ್ ಸರಣಿ ದಿ ಗುಡ್ ವೈಫ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಅದೇ ಹೆಸರಿನ ಅಮೇರಿಕನ್ ಸಿನಿಮಾದ ಭಾರತೀಯ ರೂಪಾಂತರವಾಗಿದ್ದು, ಜೂಲಿಯಾನಾ ಮಾರ್ಗುಲೀಸ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದು ಏಳು ಸೀಸನ್‌ಗಳನ್ನು ಹೊಂದಿದೆ.


ಕಾಜೋಲ್ ಗೃಹಿಣಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ತನ್ನ ಗಂಡನ ಹಗರಣದಿಂದ ಜೈಲಿಗೆ ಬಂದ ನಂತರ ಮತ್ತೆ ವಕೀಲನಾಗಿ ಕೆಲಸ ಮಾಡಲು ಹೋಗುತ್ತಾರೆ. ಸುಪನ್ ವರ್ಮಾ ನಿರ್ದೇಶನದ ಈ ಸರಣಿಯು ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾಗಲಿದೆ.

Published by:Divya D
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು