90ರ ದಶಕದ ಬಾಲಿವುಡ್ (Bollywood Movie) ಹಿಟ್ ಸಿನಿಮಾ ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ (DDLJ) ಅನ್ನು ಯಾರು ನೋಡಿಲ್ಲ ಅಂತ ಕೇಳಿ. ಈ ಸಿನಿಮಾ ಎವರ್‌ಗ್ರೀನ್ ಹಿಟ್ ಎಂದೇ ಹೇಳಬಹುದು. ಎಷ್ಟರ ಮಟ್ಟಿಗೆ ಈ ಚಿತ್ರ ಸಿನಿರಸಿಕರಿಗೆ ಮೋಡಿ ಮಾಡಿದೆ ಎಂದರೆ ಮುಂಬೈನ ಮರಾಠಾ ಚಿತ್ರಮಂದಿರದಲ್ಲಿ 27 ವರ್ಷಗಳಿಂದಲೂ ಈ ಚಿತ್ರ ತೆರೆಕಾಣುತ್ತಿದೆ. ಚಿತ್ರವನ್ನು ಬೇರೆ ಭಾಷೆಗಳಿಗೆ ರಿಮೇಕ್ ಮಾಡಬೇಕು ಎಂಬ ಚರ್ಚೆ ಹಿಂದೆಯಿಂದಲೂ ಇದೆ. ಇದಕ್ಕೆ ನಟಿ ಕಾಜೋಲ್ (Actress Kajol) ಪ್ರತಿಕ್ರಿಯಿಸಿದ್ದಾರೆ.
ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ ಸಿನಿಮಾ ರಿಮೇಕ್ ಬಗ್ಗೆ ಕಾಜೋಲ್ ಏನಂದ್ರು?
ಶಾರುಖ್ ಖಾನ್ ಮತ್ತು ನಟಿ ಕಾಜೋಲ್ ಅಭಿನಯದ ಈ ಚಿತ್ರ, ಪ್ರೇಮಿಗಳ ಪಾಲಿನ ಸೂಪರ್ ಮ್ಯೂಸಿಕಲ್ ಹಿಟ್ ಸಿನಿಮಾ. ಹೀಗಾಗಿ ಚಿತ್ರವನ್ನು ಬೇರೆ ಭಾಷೆಗಳಿಗೆ ರಿಮೇಕ್ ಮಾಡಬೇಕು ಎಂಬ ಚರ್ಚೆ ಹಿಂದೆಯಿಂದಲೂ ಇದೆ.
ಆದಾಗ್ಯೂ ಕಳೆದ ವರ್ಷ, ನಟ ವಿಜಯ್ ದೇವರಕೊಂಡ ನಿರ್ಮಾಪಕ ಆದಿತ್ಯ ಚೋಪ್ರಾ ಅವರೊಂದಿಗೆ ಚಿತ್ರದ ರಿಮೇಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಗುಸು ಗುಸು ಹರಿದಾಡಿತ್ತು. ಇನ್ನೂ ಇದೇ ವಿಷಯದ ಬಗ್ಗೆ ನಟಿ ಕಾಜೋಲ್ ಪ್ರಸ್ತುತ ಪ್ರತಿಕ್ರಿಯೆ ನೀಡಿದ್ದು, ರಿಮೇಕ್ ಮಾಡುವ ಗೋಜು ಬೇಡ ಎಂದಿದ್ದಾರೆ.
"ಈ ಸಿನಿಮಾ ಮ್ಯಾಜಿಕ್ ಇದ್ದಂತೆ. ಮತ್ತೆ ರೀಕ್ರಿಯೇಟ್ ಮಾಡುವುದು ಕಷ್ಟ"
ವಿಶೇಷ ಸಂದರ್ಶನವೊಂದರಲ್ಲಿ ಡಿಡಿಎಲ್‌ಜೆ ಸಿನಿಮಾದಲ್ಲಿ ಶಾರುಖ್ ಖಾನ್‌ಗೆ ಜೊತೆಯಾಗಿ ನಟಿಸಿದ್ದ ಕಾಜೋಲ್ ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ, ಕಭಿ ಖುಷಿ ಕಭಿ ಗಮ್‌ನಂತ ಚಿತ್ರಗಳನ್ನು ರಿಮೇಕ್ ಮಾಡಬೇಕು ಎಂದು ನಾನು ಎಂದಿಗೂ ಯೋಚಿಸುವುದಿಲ್ಲ.
ಇವೆಲ್ಲಾ ಸಿನಿಮಾಗಳು ಒಂದು ಮ್ಯಾಜಿಕ್ ಇದ್ದಂತೆ. ಇಂತಹ ಮ್ಯಾಜಿಕ್‌ಗಳನ್ನು ಒಮ್ಮೆ ಮಾತ್ರ ಸೃಷ್ಟಿಸಬಹುದೇ ಹೊರತು ಪದೇ ಪದೇ ಕ್ರಿಯೇಟ್ ಮಾಡಲು ಆಗುವುದಿಲ್ಲ ಎಂದ ಕಾಜೋಲ್ ಡಿಡಿಎಲ್‌ಜೆ ಚಿತ್ರವನ್ನು ರಿಮೇಕ್ ಮಾಡುವುದು ಬೇಡ ಎಂದಿದ್ದಾರೆ.
ಮ್ಯಾಜಿಕ್ ಅನ್ನು ಒಮ್ಮೆ ಮಾತ್ರ ಸೃಷ್ಟಿಸಬಹುದು. ಅದನ್ನು ಮತ್ತೆ ಮತ್ತೆ ಮರುಸೃಷ್ಟಿಸಿದರೆ ಮ್ಯಾಜಿಕ್ ಎಲ್ಲಾ ಹಾಳುಗುತ್ತದೆ. ಅದು ಮೊದಲ ಅನುಭವ ನೀಡದಿರಬಹುದು.
1995 ರ ಮೂಲ ಚಲನಚಿತ್ರಗಳನ್ನು ರಿಮೇಕ್ ಮಾಡುವುದು ಅಭಿಮಾನಿಗಳಿಗೆ ನಿರಾಶೆ ಉಂಟು ಮಾಡಿದಂತೆ ಅಷ್ಟೇ ಎಂದು ಕಾಜೋಲ್ ಅಭಿಪ್ರಾಯ ಪಟ್ಟಿದ್ದಾರೆ.
ಹಾಗೆಯೇ ನೀವು ಇಂತಹ ಸಿನಿಮಾಗಳನ್ನು ಮೊದಲ ಬಾರಿಗೆ ನೋಡಿದಾಗ ಅದರ ನಿಜವಾದ ಭಾವೆನೆಯನ್ನು ಅನುಭವಿಸುತ್ತೀರಿ ಮತ್ತು ನೀವು ಮತ್ತೆ ಮತ್ತೆ ಸಿನಿಮಾ ನೋಡಿದರೂ ಮೊದಲ ಫೀಲಿಂಗ್ ಅನ್ನು ಅನುಭವಿಸಲು ಸಾಧ್ಯವಿಲ್ಲ. ಆ ಮೊದಲ ಭಾವನೆ ಪುನರಾವರ್ತಿಸುವುದಿಲ್ಲ ಎಂದು ಕಾಜೋಲ್ ಹೇಳಿದರು.
"ಮಹಿಳಾ ಪ್ರಧಾನ ಸಿನಿಮಾಗಳು ಬರುತ್ತಿರುವುದು ಖುಷಿ ತಂದಿದೆ"
ಇನ್ನು ಸಿನಿ ಉದ್ಯಮದಲ್ಲಿ ಮಹಿಳೆಯರ ಬಗ್ಗೆ ಮಾತನಾಡಿದ ಕಾಜೋಲ್ ಹೆಚ್ಚಾಗಿ ಮಹಿಳಾ ಪ್ರಧಾನ ಸಿನಿಮಾಗಳು ಬರುತ್ತಿರುವುದು ನಿಜಕ್ಕೂ ಖುಷಿ ತಂದಿದೆ. ಕಳೆದ ಕೆಲವು ವರ್ಷಗಳಿಂದ ಹಿಂದಿ ಚಲನಚಿತ್ರೋದ್ಯಮದಲ್ಲಿ ಸಂಭವಿಸಿದ ಈ ಮಾದರಿ ಬದಲಾವಣೆ ನಿಜಕ್ಕೂ ಗಮನಾರ್ಹ ವಿಷಯ.
ಮೇಕಪ್‌ನಿಂದ ಹಿಡಿದು, ನಿರ್ಮಾಣ, ನೃತ್ಯ ಸಂಯೋಜನೆ, ನಿರ್ಮಾಕಪರವರೆಗೂ ಪ್ರತಿಯೊಂದು ವಿಭಾಗದಲ್ಲೂ ಮಹಿಳೆಯರನ್ನು ಸದ್ಯ ಚಿತ್ರರಂಗ ಹೊಂದಿದೆ. ಇದು ಅದ್ಭುತ ಎಂದು ನಾನು ಭಾವಿಸುತ್ತೇನೆ ಎಂದು ಕಾಜೋಲ್ ಹೇಳಿದರು.
ಅಷ್ಟೇ ಅಲ್ಲ, ಸಿನಿಮಾ ಕ್ಷೇತ್ರದಲ್ಲಿ ಲಿಂಗ ಸಮತೋಲನ ನೋಡಲು ಖುಷಿಯಾಗುತ್ತಿದೆ. DoP ಗಳಿಂದ ಹಿಡಿದು ಧ್ವನಿ ರೆಕಾರ್ಡಿಸ್ಟ್‌ಗಳವರೆಗೆ ಹಿಂದೆಂದೂ ಭಾಗವಹಿಸದ ವಿಭಾಗದಲ್ಲಿ ಅನೇಕ ಮಹಿಳೆಯರನ್ನು ನೋಡುವುದು ತುಂಬಾ ಸಂತೋಷದಾಯಕವಾಗಿದೆ. ಇದು ಈ ಯುಗದ ಅಸಾಧಾರಣ ಬೆಳವಣಿಗೆ ಎಂದು ಸಿನಿ ಕ್ಷೇತ್ರದಲ್ಲಿನ ಮಹಿಳೆಯರ ಭಾಗವಹಿಸುವಿಕೆಯನ್ನು ಹೊಗಳಿದ್ದಾರೆ.
?utm_source=sharechat&utm_medium=Referral&utm_campaign=sharechat&comscorekw=sharechat
ನಾನು ಸಿನಿಮಾ ಮಾಡುವಾಗ ಸ್ಕ್ರಿಪ್ಟ್ ಮಾತ್ರ ನೋಡುತ್ತೇನೆ ಹೊರತು ನಿರ್ದೇಶಕರು ಮಹಿಳೆಯೋ, ಪುರುಷರೋ ಎಂಬುದನ್ನಲ್ಲ. ನಾನು ಕೆಲವು ಅಸಾಧಾರಣ ಮಹಿಳಾ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದೇನೆ ಎಂದು ಕಾಜೋಲ್ ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ