ಕಾಜಲ್ ಅಗರ್ವಾಲ್ (Kajal Aggarwal) ದಕ್ಷಿಣ ಭಾರತದ ಸ್ಟಾರ್ ಹೀರೋಯಿನ್ (Heroin). ತಮ್ಮ ಸೌಂದರ್ಯದಿಂದಲೇ ಲಕ್ಷಾಂತರ ಮಂದಿಯ ಮನ ಕದ್ದಿರುವ ಮನದನ್ನೆ ಸಾಲು ಸಾಲು ಸಿನಿಮಾಗಳಲ್ಲಿ ಸಖತ್ ಬ್ಯುಸಿ ನಟಿ ಎನಿಸಿಕೊಂಡಿದ್ದಾರೆ. ಮಗುವಿನ ತಾಯಿಯಾದ ಮೇಲೂ ತಮ್ಮ ಬ್ಯೂಟಿಯನ್ನು ಎಂದಿನಂತೆ ಉಳಿಸಿಕೊಂಡಿರುವ ಇವರು ಸೋಶಿಯಲ್ ಮೀಡಿಯಾದಲ್ಲಿ (Social Media) ಕೆಲವು ಸುಂದರ ಕ್ಷಣಗಳನ್ನು, ಫೋಟೋಗಳನ್ನು ಹಂಚಿಕೊಳ್ಳುತ್ತಾ ತಮ್ಮ ಲೈಫ್ ಬಗ್ಗೆ ಅಭಿಮಾನಿಗಳಿಗೆ ಅಪ್‌ಡೇಟ್ ಕೊಡುತ್ತಲೇ ಇರುತ್ತಾರೆ.
ವೈಯಕ್ತಿಕ ಜೀವನ
2020ರಲ್ಲಿ ಗೌತಮ್ ಕಿಚ್ಲು ಎಂಬುವರನ್ನು ಮದುವೆಯಾಗುವುದರ ಮೂಲಕ ವಿವಾಹ ಜೀವನಕ್ಕೆ ಕಾಲಿರಿಸಿದ ಅವರು 2022ರಲ್ಲಿ ನೇಲ್ ಕಿಚ್ಲು ಎಂಬ ಮುದ್ದಾದ ಗಂಡು ಮಗುವಿನ ತಾಯಿಯಾದರು. ತಮ್ಮ ಬದುಕಿನ ಅಮೂಲ್ಯ ಸಮಯಗಳನ್ನು ಗೌತಮ್ ಕಿಚ್ಲು ಹಾಗೂ ಕಾಜಲ್ ಅಗರ್ವಾಲ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಸಂಭ್ರಮಿಸುತ್ತಿರುತ್ತಾರೆ.
ಮಗುವಿನ ಸುಂದರ ಕ್ಷಣಗಳನ್ನು ಹಂಚಿಕೊಳ್ಳುವ ಕಾಜಲ್
ಅದೇ ರೀತಿಯಾಗಿ ಕಾಜಲ್ ಕೂಡ ತಮ್ಮ ತಾಯ್ತನವನ್ನು ಬಹಳ ಸಂತೋಷದಿಂದ ಅನುಭವಿಸುತ್ತಿದ್ದು, ಮಗುವಿನ ಚಟುವಟಿಕೆಗಳನ್ನು ಹಂಚಿಕೊಳ್ಳುತ್ತಾ ಖುಷಿಪಡುತ್ತಿದ್ದಾರೆ. ಇದೀಗ ಮಗು ನೇಲ್ ಕಿಚ್ಲು ಮೊದಲ ಬಾರಿಗೆ ಐಸ್ ಕ್ರೀಂ ತಿಂದ ಅನುಭವವನ್ನು ಕೂಡ ತಮ್ಮ ಇನ್‌ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: 'ಅಮೃತವರ್ಷಿಣಿ' ಖ್ಯಾತಿಯ ನಟ ಶರತ್ ಬಾಬು ನಿಧನ; ಗಣ್ಯರ ಸಂತಾಪ
ಕಾಜಲ್ ಈಗ ಹಂಚಿಕೊಂಡಿರುವ ಫೋಟೋ ಯಾವುದು?
ಗೌತಮ್ ಕಿಚ್ಲು ಅವರು ಮಗು ಎದುರು ಐಸ್ ಕ್ರೀಂ ಹಿಡಿದಿದ್ದು, ಅದನ್ನು ನೋಡಿರುವ ಕಾಜಲ್ ಹಾಗೂ ಗೌತಮ್ ಅವರು ಬಹಳ ಖುಷಿಯಲ್ಲಿದ್ದು, ಆ ಫೋಟೋವನ್ನು ಶೇರ್ ಮಾಡಿದ್ದಾರೆ.
ಅದರಲ್ಲಿ ಕಾಜಲ್ ಬಿಳಿ ಬಣ್ಣದ ಶರ್ಟ್ ಧರಿಸಿದ್ದು, ಮಗು ಆಕಾಶ ನೀಲಿ ಬಣ್ಣದ ಟೀ ಶರ್ಟ್ ಹಾಗೂ ಡೆನಿಮ್ ಶಾರ್ಟ್ ಹಾಗೂ ಗೌತಮ್ ಕಿಚ್ಲು ಅವರು ಕಪ್ಪು ಬಣ್ಣದ ಟೀ ಶರ್ಟ್ ಧರಿಸಿದ್ದಾರೆ. ಫಸ್ಟ್ ಟೈಮ್ ಎಕ್ಸ್‌ಪಿರಿಯನ್ಸ್ , ದಿ ಎನ್ ಜಾಯ್ ಆಫ್ ಸ್ಮಾಲ್ ಥಿಂಗ್ಸ್ ಎಂಬ ಹ್ಯಾಶ್ ಟ್ಯಾಗ್ ಹಾಕಿ ಬೇಸಿಗೆಯ ಪರಿಪೂರ್ಣ ಆಹಾರ ಎಂಬ ಅಡಿಬರಹದಡಿ ಫೋಟೋವನ್ನು ಇನ್‌ಸ್ಟಾಗ್ರಾಮ್ ನಲ್ಲಿ ಹಾಕಿದ್ದಾರೆ. ಈ ಫೋಟೋವನ್ನು ಐದು ಲಕ್ಷಕ್ಕೂ ಹೆಚ್ಚು ಮಂದಿ ಇಷ್ಟಪಟ್ಟಿದ್ದಾರೆ.
ಸೆಲೆಬ್ರೆಟಿಗಳು ಏನಂದ್ರು?
ಈ ಫೋಟೋವನ್ನು ಸಾಕಷ್ಟು ಮಂದಿ ಇಷ್ಟಪಟ್ಟಿದ್ದು, ಟಾಲಿವುಡ್ ಬ್ಯೂಟಿ ಸಮಂತಾ ರುತ್ ಪ್ರಭು ಅವರು ಕ್ಯೂಟ್ ಎಂದು ಕಮೆಂಟ್ ಮಾಡಿದ್ದು, ಹಂಸಿಕಾ ಮೊಟ್ವಾನಿ ಮತ್ತು ರಾಶಿ ಖನ್ನಾ ಅವರು ಕೂಡ ಪ್ರತಿಕ್ರಿಯೆ ನೀಡಿದ್ದಾರೆ.
ಕಳೆದ ವರ್ಷದಿಂದ ತಾಯ್ತನದ ಸಂತಸ ಅನುಭವಿಸುತ್ತಿರುವ ಕಾಜಲ್ ಮಗುವಿನೊಂದಿಗಿನ ಫೋಟೋ ಹಂಚಿಕೊಂಡು, ನನ್ನ ಬದುಕಿನ ಇಬ್ಬರು ವಿಶೇಷ ವ್ಯಕ್ತಿಗಳು, ಇದರಲ್ಲಿ ಒಬ್ಬರು ನನಗಾಗಿ ಎಲ್ಲವನ್ನು ಅರ್ಪಿಸಿದವರು ಮತ್ತು ಅದೇ ರೀತಿ ಮಾಡಲು ನನಗೆ ಕಲಿಸಿದವರು. ನೈಲ್ ನನ್ನ ತೋಳುಗಳಲ್ಲಿರುವಾಗ ನಾನು ಆತನ ಸಂತೋಷದ ಬಗ್ಗೆಯೇ ಸದಾ ಯೋಚಿಸುತ್ತಿರುತ್ತೇನೆ. ಸಾಕಷ್ಟು ನಿದರ್ಶನ ಮೂಲಕ ನನಗೆ ಕಲಿಸಿರುವುದಕ್ಕೆ ಧನ್ಯವಾದಗಳು ಎಂದು ಹೇಳಿದ್ದಾರೆ.
ಕಾಜಲ್ ಅಗರ್ವಾಲ್ ಸಿನಿ ಪಯಣ
ಹಿಂದಿ ಹಾಗೂ ತೆಲುಗು ಸಿನಿಮಾಗಳಲ್ಲಿ ನಟಿಸುತ್ತಾ, ತಾಯ್ತನದ ಪ್ರತಿ ಮಜಲುಗಳನ್ನು ಅನುಭವಿಸುತ್ತಾ, ಮಗುವಿನ ಆರೈಕೆಯಲ್ಲಿ ಕಾಲ ಕಳೆಯುತ್ತಿರುವ ಕಾಜಲ್ ಅವರು 2004ರಲ್ಲಿ ಸಿನಿ ಲೋಕಕ್ಕೆ ಹಿಂದಿ ಸಿನಿಮಾ ಮೂಲಕ ಪಾದಾರ್ಪಣೆ ಮಾಡಿದರು.
ನಂತರ 2007ರಲ್ಲಿ ಲಕ್ಷ್ಮೀ ಕಲ್ಯಾಣಂ ಸಿನಿಮಾದ ಮುಖೇನ ಸಂಪೂರ್ಣ ನಾಯಕಿಯಾಗಿ ಬಣ್ಣ ಹಚ್ಚಿ ಬಡ್ತಿ ಪಡೆದರು. ಇನ್ನು ಅದೇ ವರ್ಷ ನಿರ್ಮಾಣವಾದ ಚಂದಮಾಮ ಸಿನಿಮಾದಿಂದ ಖ್ಯಾತಿ ಗಳಿಸಿದರು. ಅಂದಿನಿಂದ ಇಂದಿನವರೆಗೂ ಬೇಡಿಕೆ ನಟಿ ಎಂದೆನಿಸಿಕೊಂಡಿರುವ ಅವರು ಸಾಕಷ್ಟು ಉತ್ಪನ್ನಗಳಿಗೆ ರಾಯಭಾರಿಯೂ ಆಗಿದ್ದಾರೆ. 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಅವರನ್ನು ಸುಮಾರು ಪ್ರಶಸ್ತಿಗಳು ಸಹ ಅರಸಿಕೊಂಡು ಬಂದಿವೆ.
ಸಿನಿಮಾ ಪಯಣ ಆರಂಭಿಸುವ ಮೊದಲು ರೂಪದರ್ಶಿಯಾಗಿದ್ದ ಕಾಜಲ್ ಅವರು, ಸಿನಿಮಾ ಪ್ರವೇಶಿಸಿದ ಬಳಿಕ ಪ್ಯಾನಸಾನಿಕ್, ಡಾಬರ್, ಲಕ್ಸ್, ಪಾಂಡ್ಸ್ ಹೀಗೆ ಹತ್ತು ಹಲವಾರು ಮುಖ್ಯ ಬ್ರಾಂಡ್ ಗಳಿಗೆ ರೂಪದರ್ಶಿಯಾಗಿ ಮಿಂಚಿದ್ದಾರೆ.
ಒಟ್ಟಿನಲ್ಲಿ ಈಗಲೂ ಸಖತ್ ಡಿಮ್ಯಾಂಡ್ ಉಳಿಸಿಕೊಂಡಿರುವ ಕಾಜಲ್ ಹಂತ ಹಂತವಾಗಿ ಬೆಳೆದಿದ್ದು, ತೆಲುಗು ಅಲ್ಲದೆ ಹಲವು ದಕ್ಷಿಣ ಭಾಷೆಯ ಸಿನಿಮಾಗಳಲ್ಲಿ ಸಹ ನಟಿಸಿದ್ದಾರೆ. ಕಾಜಲ್ ಬ್ಯೂಟಿ ಹಾಗೂ ನಟನೆಯಿಂದ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ 25 ಮಿಲಿಯನ್ ಬೆಂಬಲಿಗರನ್ನು ಒಳಗೊಂಡಿದ್ದು, ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್‌ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ