• Home
  • »
  • News
  • »
  • entertainment
  • »
  • Kajal Aggarwal: ತಾಯಿಯಾಗ್ತಿದ್ದಾರೆ `ಮಗಧೀರ’ನ ಬೆಡಗಿ.. ಸಂತಸ ಹಂಚಿಕೊಂಡ ಕಾಜಲ್​ ಪತಿ ಗೌತಮ್​!

Kajal Aggarwal: ತಾಯಿಯಾಗ್ತಿದ್ದಾರೆ `ಮಗಧೀರ’ನ ಬೆಡಗಿ.. ಸಂತಸ ಹಂಚಿಕೊಂಡ ಕಾಜಲ್​ ಪತಿ ಗೌತಮ್​!

ಕಾಜಲ್​, ಗೌತಮ್​

ಕಾಜಲ್​, ಗೌತಮ್​

  • Share this:

ಟಾಲಿವುಡ್ ನಟಿ ಕಾಜಲ್ ಅಗರ್​ವಾಲ್(Kajal Aggarwal) ಅವರು ಒಂದು ಕಾಲದಲ್ಲಿ ಎಲ್ಲ ಚಿತ್ರರಂಗವನ್ನು ರೂಲ್​ ಮಾಡಿದವರು. ಮಗಧೀರನ ಬೆಡಗಿ ಬಹುಬೇಡಿಕೆಯ ನಟಿಯಾಗಿ ಮಿಂಚಿದವರು. ಆಕೆಯ ಸೌಂದರ್ಯಕ್ಕೆ ಸಿನಿರಸಿಕರು ಮನಸೋತಿದ್ದರು. ಮದುವೆ(Marriage)ಯಾದ ಬಳಿಕವೂ ಕಾಜಲ್​ ಅಗರ್​ವಾಲ್​ ಕೆಲ ಚಿತ್ರಗಳಲ್ಲಿ ನಟಿಸಿದ್ದರು. ಆದರೆ, ಇತ್ತೀಚೆಗೆ ಸಿನಿಮಾರ ರಂಗದಿಂದ ಬ್ರೇಕ್​(Break) ತೆಗೆದುಕೊಂಡಿದ್ದರು. ಪ್ರಮುಖ ಪ್ರಾಜೆಕ್ಟ್​ಗಳನ್ನು ಕಾಜಲ್​ ಅಗರ್​ವಾಲ್​ ರಿಜೆಕ್ಟ್​ ಮಾಡಿದ್ದರಂತೆ. ಇವರನ್ನು ಹುಡುಕಿಕೊಂಡು ಪಾತ್ರಗಳನ್ನು ಇವರು ರಿಜೆಕ್ಟ್​(Reject) ಮಾಡುತ್ತಿದ್ದಂತೆ ಬೇರೆಯವರ ಪಾಲಾಗುತ್ತಿಂತೆ. ಹೀಗೆ ಮಾಡುತ್ತಿದ್ದನ್ನು ಕಂಡು ಎಲ್ಲರೂ ಕಾಜಲ್​ ಅಗರ್​ವಾಲ್​ ತಾಯಿಯಾಗ್ತಿದ್ದಾರೆ ಎಂಬ ವಂದತಿಗಳು ಕೇಳಿಬಂದಿತ್ತು. ಕೆಲ ಫೋಟೋಗಳು ಇದಕ್ಕೆ ಪುಷ್ಠಿ ನೀಡಿತ್ತು. ಇದೀಗ ಈ ವಿಚಾರದ ಬಗ್ಗೆ ಕಾಜಲ್​ ಅಗರ್​ವಾಲ್​ ಹಾಗೂ ಅವರ ಪತಿ ಗೌತಮ್(Gautham)​ ಮಾತನಾಡಿದ್ದಾರೆ. ಹೊಸ ವರ್ಷಕ್ಕೆ ಗುಡ್​ನ್ಯೂಸ್(Good News)​ ಕೊಟ್ಟಿದ್ದಾರೆ.ಹೊಸ ವರ್ಷದ ಸಂದರ್ಭದಲ್ಲಿ ಈ ಜೋಡಿ ತಾವು ಪೋಷಕರಾಗುತ್ತಿರುವುದನ್ನು ಅಧಿಕೃತವಾಗಿ(Husband has Confirmed it) ಘೋಷಿಸಿದ್ದಾರೆ. ಇದನ್ನು ಕೇಳಿದ ಕಾಜಲ್​ ಅಗರ್​ವಾಲ್​ ಫ್ಯಾನ್ಸ್​ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಜೊತೆಗೆ ನಟಿಗೆ ಶುಭ ಕೋರುತ್ತಿದ್ದಾರೆ. 


ಪೋಸ್ಟ್​ ಹಂಚಿಕೊಂಡ ಕಾಜಲ್​-ಗೌತಮ್​ ದಂಪತಿ!


ಇನ್​ಸ್ಟಾಗ್ರಾಂನಲ್ಲಿ ಚಿತ್ರಗಳನ್ನು ಹಂಚಿಕೊಂಡಿರುವ ಕಾಜಲ್ ಮತ್ತು ಗೌತಮ್ ಜೋಡಿ- ಕುಟುಂಬಕ್ಕೆ ಹೊಸ ಅತಿಥಿಯ ಆಗಮಿಸುವುದನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ‘‘ನಿನ್ನೆಡೆಗೇ ನೋಡುತ್ತಿದ್ದೇನೆ 2022’’ ಎಂದು ಬರೆದಿರುವ ಗೌತಮ್, ಕಾಜಲ್ ಚಿತ್ರವನ್ನು ಹಂಚಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಮದುವೆಯ ವಾರ್ಷಿಕೋತ್ಸವವನ್ನು ಆಚರಿಸಿದ್ದ ಕಾಜಲ್- ಗೌತಮ್ ಹೊಸ ವರ್ಷವನ್ನು ಹೊಸ ಭರವಸೆಯೊಂದಿಗೆ ಬರಮಾಡಿಕೊಂಡಿದ್ದಾರೆ. ಕಾಜಲ್ ಕೂಡ ಪೋಸ್ಟ್ ಹಂಚಿಕೊಂಡಿದ್ದು, ಅದರಲ್ಲಿ ಅವರು ಎಲ್ಲರಿಗೂ ಶುಭಕೋರಿದ್ದಾರೆ. ಜತೆಗೆ ಹೊಸ ಫೋಟೋವೊಂದನ್ನು ಶೇರ್​ ಮಾಡಿದ್ದಾರೆ.



ಇದನ್ನು ಓದಿ : ಅಂತೆ-ಕಂತೆಗಳಿಗೆ ಫುಲ್​ಸ್ಟಾಪ್​ ಇಟ್ಟ `ರಾಧೆ ಶ್ಯಾಮ್​’: ಹೇಳಿದ್​ ಡೇಟ್​ಗೆ ಸಿನಿಮಾ ರಿಲೀಸ್​!


2020ರ ಅಕ್ಟೋಬರ್​​ನಲ್ಲಿ ಮದುವೆಯಾಗಿದ್ದ ಜೋಡಿ!


ಕಾಜಲ್ ಹಾಗೂ ಗೌತಮ್ 2020ರ ಅಕ್ಟೋಬರ್​ನಲ್ಲಿ ಮುಂಬೈನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಗೌತಮ್ ಖ್ಯಾತ ಉದ್ಯಮಿ.ಕೊರೊನಾ ಕಾರಣದಿಂದ ಕುಟುಂಬಸ್ಥರ ಮಧ್ಯೆ ಇವರಿಬ್ಬರ ವಿವಾಹ ನಡೆದಿತ್ತು. ದಕ್ಷಿಣ ಭಾರತದ ಈ ಖ್ಯಾತ ನಟಿಯ ಮದುವೆಯಲ್ಲಿ ಕಲಾವಿದರು ಭಾಗವಹಿಸಿರಲಿಲ್ಲ. ಮದುವೆ ನಂತರದಲ್ಲಿ ಕಾಜಲ್ ದಂಪತಿ ಮಾಲ್ಡೀವ್ಸ್‌ಗೆ ಹನಿಮೂನ್‌ಗೆ ತೆರಳಿತ್ತು, ಅಲ್ಲಿನ ಫೋಟೋಗಳನ್ನು ಕಾಜಲ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.'ಮಗಧೀರ' ಸಿನಿಮಾ ನಟಿ ಕಾಜಲ್ ಅಗರ್ವಾಲ್ ತಾಯಿಯಾಗುತ್ತಿರುವ ವಿಚಾರವನ್ನು ಅವರ ಪತಿ ಗೌತಮ್ ಕಿಚಲು ಸೋಶಿಯಲ್ ಮೀಡಿಯಾ ಪೋಸ್ಟ್ ಮೂಲಕ ಹೇಳಿದ್ದಾರೆ.









View this post on Instagram






A post shared by Gautam Kitchlu (@kitchlug)




ಇದನ್ನು ಓದಿ : ಹೊಸ ವರ್ಷದಲ್ಲೇ ಸಿನಿರಸಿಕರಿಗೆ ಭಾರೀ ನಿರಾಸೆ: `ಆರ್​ಆರ್​ಆರ್​’ ಸಿನಿಮಾ ರಿಲೀಸ್​​ ಡೇಟ್​ ಮುಂದೂಡಿಕೆ!


ಕಾಜಲ್​ ಕೈಯಲ್ಲಿವೆ ಸಾಲು ಸಾಲು ಚಿತ್ರಗಳು!


ಕಾಜಲ್ 2004ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. 2007ರಲ್ಲಿ ತೆಲುಗು ಚಿತ್ರರಂಗದಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು. ಸದ್ಯ 7 ಚಿತ್ರಗಳಿಗೆ ಸಹಿ ಹಾಕಿದ್ದಾರೆ. ಅದರಲ್ಲಿ ನಾಲ್ಕು ಸಿನಿಮಾಗಳ ಶೂಟಿಂಗ್​ ಮುಗಿದಿದೆ. ಚಿರಂಜೀವಿ ಜೊತೆ 'ಆಚಾರ್ಯ' ಸಿನಿಮಾದಲ್ಲಿ ಕಾಜಲ್ ನಟಿಸಬೇಕಿತ್ತು, ಆದರೆ ಮದುವೆ ಕಾರಣಕ್ಕೆ ಈ ಸಿನಿಮಾದಿಂದ ಹೊರಬಂದಿದ್ದಾರೆ ಎನ್ನಲಾಗಿತ್ತು. ಕಾಜಲ್ ನಟನೆಯ 'ಮೋಸಗಾಳ್ಳು' ಸಿನಿಮಾ ರಿಲೀಸ್ ಆಗಿದೆ. ಕಮಲ್ ಹಾಸನ್ ಜೊತೆ 'ಇಂಡಿಯನ್ 2', 'ಮುಂಬೈ ಸಾಗಾ', , 'ಹೇ ಸಿನಾಮಿಕಾ' ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. 2021ರಲ್ಲಿ ಕಾಜಲ್ ನಟನೆಯ ಯಾವ ಸಿನಿಮಾಗಳೂ ರಿಲೀಸ್ ಆಗಿಲ್ಲ. ಆದರೆ Live Telecast ಎಂಬ ವೆಬ್ ಸಿರೀಸ್ ತೆರೆ ಕಂಡಿತ್ತು.

Published by:Vasudeva M
First published: