ವಿವಾಹದ ನಂತರ ಕಾಜಲ್ ಅಗರ್‌ವಾಲ್ ಚಿತ್ರಕತೆಗಳನ್ನು ಆಯ್ದುಕೊಳ್ಳುವಲ್ಲಿ ಹೆಚ್ಚಿನ ಮುತುವರ್ಜಿ ವಹಿಸುತ್ತಿದ್ದು ಉಮಾ ಎಂಬ ಹಿಂದಿ ಚಿತ್ರದಲ್ಲಿ ಪ್ರಧಾನ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಒಂದು ವರದಿಯ ಪ್ರಕಾರ ದೊಡ್ಡ ಬಜೆಟ್‌ನ ಹಿಂದಿ ಚಿತ್ರವೊಂದಕ್ಕೆ 2 ಕೋಟಿ ಸಂಭಾವನೆಯನ್ನು ಕಾಜಲ್ ತೆಗೆದುಕೊ ಳ್ಳುತ್ತಿದ್ದು ಇದು ಆಕೆಯ ವೃತ್ತಿರಂಗದಲ್ಲಿಯೇ ಅತ್ಯಧಿಕ ಮೊತ್ತವಾಗಿದೆ. ಕಂಗನಾ ರಣಾವತ್ ಹಿಟ್ ಚಿತ್ರ ಕ್ವೀನ್‌ನ ರಿಮೇಕ್ ಆಗಿರುವ ತಮಿಳು ಚಿತ್ರ ಪ್ಯಾರಿಸ್ ಪ್ಯಾರಿಸ್ ನಲ್ಲಿ ಕೂಡ ಕಾಜಲ್ ನಟಿಸಿದ್ದು ಚಿತ್ರ ಬಿಡುಗಡೆಯಾಗಬೇಕಾಗಿದೆ. ಕಾಜಲ್ ಚಿತ್ರ ಗಳನ್ನು ಆರಿಸುವಲ್ಲಿ ಹೆಚ್ಚಿನ ಗಮನಹರಿಸುತ್ತಿದ್ದು ಆರು ಮಹಿಳೆಯರನ್ನು ಆಧರಿಸಿರುವ ತೆಲುಗು ಚಿತ್ರ ಶೂರ್ಪಣಖವನ್ನು ತಿರಸ್ಕರಿಸಿದ್ದಾರೆ.
ಕಾಜಲ್ ತಮ್ಮ ಸಿನಿ ಜೀವನದಲ್ಲಿ ಹಿಟ್ ಚಿತ್ರಗಳನ್ನು ನೀಡುವುದರ ಜೊತೆ ಜೊತೆಗೆ ಸೂಪರ್ ಸ್ಟಾರ್‌ಗಳೊಂದಿಗೆ ತೆರೆ ಹಂಚಿಕೊಂಡಿರುವ ಪ್ರತಿಭಾನ್ವಿತ ನಟಿ. ಚಿರಂಜೀವಿ ಯಿಂದ ಹಿಡಿದು ಮಹೇಶ್ ಬಾಬುವರೆಗೆ ಕಾಜಲ್ ನಾಯಕಿಯಾಗಿ ಹಲವಾರು ಚಿತ್ರಗಳಲ್ಲಿ ಜೋಡಿಯಾಗಿದ್ದಾರೆ. ವಿಶಾಲ್, ಕಾರ್ತಿ, ಅಕ್ಷಯ್‌ಕುಮಾರ್ ಹೀಗೆ ಚಿತ್ರರಂಗದ ಬಿಗ್ ಶಾಟ್‌ಗಳ ಜೊತೆ ಅಭಿನಯಿಸಿ ಸೈ ಅನ್ನಿಸಿಕೊಂಡಿದ್ದಾರೆ.
ವಿವಾಹದ ನಂತರ ಕಾಜಲ್ ಚಿತ್ರಗಳನ್ನು ಆಯ್ದುಕೊಳ್ಳುವಲ್ಲಿ ತುಂಬಾ ಚ್ಯೂಸಿಯಾಗಿ ದ್ದಾರೆ ಎಂಬುದು ಬಲ್ಲ ಮೂಲಗಳ ವರದಿಯಾಗಿದೆ. ಬಿಸಿನೆಸ್‌ಮೆನ್ ಗೌತಮ್ ಕಿಚ್ಲು ವೊಂದಿಗೆ ಸಪ್ತಪದಿ ತುಳಿದು ಕೌಟುಂಬಿಕ ಬದುಕಿಗೆ ಪ್ರವೇಶಿಸಿರುವ ಕಾಜಲ್ ತಮ್ಮ ಖಾಸಗಿ ಬದುಕಿಗೆ ಅಡ್ಡಿಯಾಗದಂತೆ ವೃತ್ತಿ ಬದುಕನ್ನು ಕೊಂಡೊಯ್ಯುತ್ತಿದ್ದಾರೆ. ವಿಭಿನ್ನ ವಿಭಿನ್ನ ಪಾತ್ರಗಳಲ್ಲಿ ಮಿಂಚಬೇಕೆಂಬುದು ಕಾಜಲ್ ಬಯಕೆಯಾಗಿದ್ದು ಸಂಪೂರ್ಣ ತಮ್ಮ ಸಿನಿ ಜೀವನದ ದಿಕ್ಕನ್ನೇ ಬದಲಾಯಿಸಹೊರಟಿದ್ದಾರೆ ಎಂಬುದು ಇದರಿಂದ ನಿಚ್ಚಳವಾಗುತ್ತಿದೆ.
ಒಂದು ವರದಿಯ ಪ್ರಕಾರ ತೆಲುಗು ಚಿತ್ರರಂಗದಲ್ಲಿ ನಾಯಕಿ ಪ್ರಧಾನವಾಗಿರುವ ಚಿತ್ರಗಳಲ್ಲಿ ನಟಿಸಿರುವ ನಟಿಗಳಿಗೆ ಬೇಡಿಕೆ ಕಡಿಮೆ ಎಂಬ ಮಾತೂ ಇದೆ. ಏಕೆಂದರೆ ದೊಡ್ಡ ದೊಡ್ಡ ನಟರು ಇಂತಹ ನಟಿಗಳೊಂದಿಗೆ ತೆರೆಯನ್ನು ಹಂಚಿಕೊಳ್ಳುವುದಿಲ್ಲ ಎಂಬ ಮಾತೂ ಇದೆ. ಅದಾಗ್ಯೂ ಈಗ ಸನ್ನಿವೇಶ ಬದಲಾಗುತ್ತಿದೆ. ಪ್ರೇಕ್ಷಕರು ವಿಭಿನ್ನ ಕಥಾ ಹಂದರವುಳ್ಳ ಚಿತ್ರಗಳನ್ನು ನೋಡಲು ಉತ್ಸುಕರಾಗುತ್ತಿದ್ದಾರೆ. ಹಿಂದೆ ಇದ್ದಂತಹ ಮರ ಸುತ್ತುವ ಚಿತ್ರಗಳು, ಪ್ರೀತಿ ಪ್ರೇಮದ ಕಥೆಗಳಿಗೆ ಹಿಂದಿನ ಮನ್ನಣೆ ಈಗ ದೊರಕುತ್ತಿಲ್ಲ. ಈಗ ಏನಿದ್ದರೂ ಸಸ್ಪೆನ್ಸ್, ಥ್ರಿಲ್ಲಿಂಗ್ ಕಥೆಗೇ ಆಗಿದೆ.
ಸದ್ಯಕ್ಕೆ ಕಾಜಲ್ ಚಿರಂಜೀವಿ ನಟಿಸಿರುವ ಆಚಾರ್ಯ ಚಿತ್ರದಲ್ಲಿಅಭಿನಯಿಸುತ್ತಿದ್ದಾರೆ. ಇನ್ನು ಪ್ರವೀಣ್ ಸಟ್ಟರು ನಿರ್ದೇಶನದ ಚಿತ್ರವೊಂದರಲ್ಲಿ ನಾಗಾರ್ಜುನ ಅವರೊಂದಿಗೆ ನಟಿಸಲಿದ್ದಾರೆ. ಇದನ್ನು ಕುರಿತು ಪ್ರವೀಣ್ ಅವರು ದೃಢಪಡಿಸಿದ್ದು ಪ್ರಾಜೆಕ್ಟ್‌ನಲ್ಲಿ ಕಾಜಲ್ ಅಭಿನಯಿಸಲಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. ನಾಯಕಿ ಪ್ರಧಾನ ಚಿತ್ರಗಳಿಗಿಂತ ಸೂಪರ್ ಸ್ಟಾರ್‌ಗಳಿರುವ ಚಿತ್ರಗಳನ್ನೇ ಕಾಜಲ್ ಆಯ್ದುಕೊಳ್ಳುತ್ತಿದ್ದು ವೃತ್ತಿರಂಗದಲ್ಲಿ ಇನ್ನಷ್ಟು ಮೇಲೇರುವ ಅಭಿಲಾಶೆ ಕಾಜಲ್‌ಗಿದೆ ಎಂಬುದು ತಿಳಿದುಬರುತ್ತದೆ.
ಇದನ್ನೂ ಓದಿ: National Camera Day 2021: ಸಖತ್ ಫೋಟೋ ತೆಗೀಬೇಕು ಅಂದ್ರೆ ಈ 8 ಸ್ಥಳಗಳಿಗೆ ಹೋಗ್ಲೇಬೇಕು !
ವಿವಾಹದ ನಂತರ ಸಿನಿರಂಗದಲ್ಲಿ ತೊಡಗಿಕೊಂಡಿರುವ ಅಭಿನೇತ್ರಿಗಳಲ್ಲಿ ಸಮಂತಾ ನಂತರ ಕಾಜಲ್ ಕೂಡ ಒಬ್ಬರಾಗಿದ್ದಾರೆ. ಸಾಮಾನ್ಯವಾಗಿ ವಿವಾಹವಾದ ಕೂಡಲೇ ನಟಿಗಳ ಬೇಡಿಕೆ ಕುಗ್ಗುತ್ತದೆ ಎಂಬ ಮಾತಿಗೆ ವಿರುದ್ಧವಾಗಿ ಈ ನಟಿಯರು ಹಿಂದಿಗಿಂತಲೂ ಹೆಚ್ಚಿನ ಬೇಡಿಕೆಯನ್ನು ಪಡೆದುಕೊಳ್ಳುತ್ತಿದ್ದಾರೆ ಎಂಬುದಂತೂ ನಿಜ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ