Kajal Aggarwal: ನಟಿ ಕಾಜಲ್‍ಗಾಗಿ ಆತ ಕಳೆಕೊಂಡಿದ್ದು 75 ಲಕ್ಷ : ಈ ಅಭಿಮಾನಿ ಸ್ಟೋರಿ ಕೇಳಿ ಪೊಲೀಸರೇ ಸುಸ್ತು !

Kajal Aggarwal: ಕಾಜಲ್ ಅಗರ್ವಾಲ್... ತಮಿಳು, ತೆಲುಗು ಜತೆಗೆ ಹಿಂದಿಯಲ್ಲೂ ನಟಿಸಿ ತಮ್ಮದೇ ಛಾಪು ಮೂಡಿಸಿರುವ ಬ್ಯೂಟಿ. ದಕ್ಷಿಣ ಭಾರತದ ಟಾಪ್ ನಟಿಯರಲ್ಲಿ ಒಬ್ಬರಾಗಿರೋ ಕಾಜಲ್‍ಗೆ ದಕ್ಷಿಣದಲ್ಲೇ ಅತಿಹೆಚ್ಚು ಅಭಿಮಾನಿಗಳು ಇದ್ದಾರೆ. ಅಂತಹ ಹಲವು ಅಭಿಮಾನಿಗಳಿಗೆ, ಅದರಲ್ಲೂ ಹುಡುಗರಲ್ಲಿ ತಮ್ಮ ನೆಚ್ಚಿನ ನಟಿ ಕಾಜಲ್‍ರನ್ನು ಭೇಟಿಯಾಗಬೇಕು, ಕೆಲ ಕಾಲ ಅವರ ಜತೆ ಮಾತನಾಡಬೇಕು ಅನ್ನೋ ಆಸೆ ಇದ್ದೇ ಇರುತ್ತೆ. ಆದರೆ ಆ ಆಸೆ ನೆರವೇರಿಸಿಕೊಳ್ಳಲು ಹೋದ ತಮಿಳುನಾಡಿನ ಅಭಿಮಾನಿಯೊಬ್ಬರು ಬರೋಬ್ಬರಿ 75 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.

news18
Updated:August 2, 2019, 7:49 PM IST
Kajal Aggarwal: ನಟಿ ಕಾಜಲ್‍ಗಾಗಿ ಆತ ಕಳೆಕೊಂಡಿದ್ದು 75 ಲಕ್ಷ : ಈ ಅಭಿಮಾನಿ ಸ್ಟೋರಿ ಕೇಳಿ ಪೊಲೀಸರೇ ಸುಸ್ತು !
ಬಹುಭಾಷಾ ನಟಿ ಕಾಜಲ್ ​
  • News18
  • Last Updated: August 2, 2019, 7:49 PM IST
  • Share this:
ತಮ್ಮ ನೆಚ್ಚಿನ ನಟ, ನಟಿಯರನ್ನು ಭೇಟಿಯಾಗಬೇಕು ಅನ್ನೋ ಆಸೆ ಎಲ್ಲ ಅಭಿಮಾನಿಗಳಲ್ಲೂ ಇರುತ್ತೆ. ಆದರೆ ಇಲ್ಲೊಬ್ಬ ಅಂದಾಭಿಮಾನಿ ತನ್ನ ನೆಚ್ಚಿನ ನಟಿಯನ್ನು ಭೇಟಿಯಾಗುವ ಆಸೆಯಿಂದ ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾರೆ.

ಕಾಜಲ್ ಅಗರ್ವಾಲ್... ತಮಿಳು, ತೆಲುಗು ಜತೆಗೆ ಹಿಂದಿಯಲ್ಲೂ ನಟಿಸಿ ತಮ್ಮದೇ ಛಾಪು ಮೂಡಿಸಿರುವ ಬ್ಯೂಟಿ. ದಕ್ಷಿಣ ಭಾರತದ ಟಾಪ್ ನಟಿಯರಲ್ಲಿ ಒಬ್ಬರಾಗಿರೋ ಕಾಜಲ್‍ಗೆ ದಕ್ಷಿಣದಲ್ಲೇ ಅತಿಹೆಚ್ಚು ಅಭಿಮಾನಿಗಳು ಇದ್ದಾರೆ. ಅಂತಹ ಹಲವು ಅಭಿಮಾನಿಗಳಿಗೆ, ಅದರಲ್ಲೂ ಹುಡುಗರಲ್ಲಿ ತಮ್ಮ ನೆಚ್ಚಿನ ನಟಿ ಕಾಜಲ್‍ರನ್ನು ಭೇಟಿಯಾಗಬೇಕು, ಕೆಲ ಕಾಲ ಅವರ ಜತೆ ಮಾತನಾಡಬೇಕು ಅನ್ನೋ ಆಸೆ ಇದ್ದೇ ಇರುತ್ತೆ. ಆದರೆ ಆ ಆಸೆ ನೆರವೇರಿಸಿಕೊಳ್ಳಲು ಹೋದ ತಮಿಳುನಾಡಿನ ಅಭಿಮಾನಿಯೊಬ್ಬರು ಬರೋಬ್ಬರಿ 75 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.

Bollywood Actress Kajal
ಬಹುಭಾಷಾ ನಟಿ ಕಾಜಲ್ ​


ಹೌದು, ತಮಿಳುನಾಡಿನ ರಾಮನಾಥಪುರಂನ ಶ್ರೀಮಂತ ಉದ್ಯಮಿ ಕದಿರೇಸನ್‍ರ ಮಗ ಪ್ರದೀಪ್ ಕುಮಾರ್, ಕಾಜಲ್ ಅಗರ್ವಾಲ್‍ರ ಹಾರ್ಡ್‍ಕೋರ್ ಫ್ಯಾನ್. ಕಾಜಲ್‍ರನ್ನು ಭೇಟಿಯಾಗುವ ಆಸೆ ಅವರದ್ದು. ಹೀಗೆ ಒಮ್ಮೆ ಇಂಟರ್​ನೆಟ್​ನಲ್ಲಿ ಏನನ್ನೋ ಹುಡುಕುವಾಗ, ವೆಬ್‍ಸೈಟ್ ಒಂದರಲ್ಲಿ ಕಾಜಲ್ ಅಗರ್ವಾಲ್‍ರನ್ನು ಭೇಟಿ ಮಾಡಿಸುವ ಕುರಿತ ಪೋಸ್ಟ್ ನೋಡಿದ್ದಾರೆ

ಇದನ್ನೂ ಓದಿ: ಕೋಟಿಗಳ ಒಡತಿ ದೀಪಿಕಾ ಪಡುಕೋಣೆ ಹೋಟೆಲ್​ಗಳಲ್ಲಿ ಏನು​ ಕದಿಯುತ್ತಾರೆ ಗೊತ್ತಾ..?

ತಕ್ಷಣ ಅಲ್ಲಿದ್ದ ಲಿಂಕ್​ ಅನ್ನು ಕ್ಲಿಕ್ ಮಾಡಿದ್ದಾನೆ. ಅದಾಗಿ ಕೆಲವೇ ನಿಮಿಷಗಳಲ್ಲಿ ಆತನಿಗೆ ಕರೆ ಬಂದಿದೆ. ಮೊದಲು 25 ಸಾವಿರ ರೂಪಾಯಿ ಡೆಪಾಸಿಟ್ ಮಾಡುವಂತೆ ತಿಳಿಸಿ, ಅವರ ಫೋಟೋಗಳನ್ನು ಕೇಳಿದ್ದಾರೆ. ಆತ ಫೋಟೋ ಕಳಿಸಿದ ಬಳಿಕ, ಅವುಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಬ್ಲ್ಯಾಕ್‍ಮೇಲ್ ಮಾಡತೊಡಗಿದ್ದಾರೆ.

ಅವರಿಗೆ ಹೆದರಿದ ಪ್ರದೀಪ್ ಹಂತಹಂತವಾಗಿ ಬರೋಬ್ಬರಿ 75 ಲಕ್ಷ ರೂಪಾಯಿ ಕೊಟ್ಟಿದ್ದಾರೆ. ಕಡೆಗೆ ಕಾಟ ತಡೆಯಲಾರದೇ ಮನೆ ಬಿಟ್ಟು ಕೊಲ್ಕತ್ತಾಗೆ ಓಡಿಹೋಗಿದ್ದಾರೆ. ತಂದೆ ಕದಿರೇಸನ್ ದೂರಿನ ಮೇರೆಗೆ ಪ್ರದೀಪ್‍ರನ್ನು ಹುಡುಕಿ ವಾಪಸ್ ಕರೆತಂದು ವಿಚಾರಣೆ ನಡೆಸಲಾಯಿತು. ಆಗ ಈ ಪ್ರಕರಣ ಬಿಚ್ಚಿಕೊಂಡಿದೆ. ಈ ಹಿನ್ನೆಲೆಯಲ್ಲಿ ನಿರ್ಮಾಪಕ ಸರವಣ ಕುಮಾರ್ ಹಾಗೂ ನಿರ್ದೇಶಕ ಮನಿಕಂಠನ್‍ ಅವರನ್ನು ಬಂಧಿಸಲಾಗಿದೆ.ಇದನ್ನೂ ಓದಿ: Rashmika Mandanna: ಸಿನಿಮಾಗಾಗಿ ಮೈ ಚಳಿ ಬಿಟ್ಟ ರಶ್ಮಿಕಾ ಮಂದಣ್ಣ: ಪೂಜಾ ಹೆಗ್ಡೆಗೆ ನಕ್ಷತ್ರ ತೋರಿಸುತ್ತಿದ್ದಾರಾ ಲಿಲ್ಲಿ..?

ಆದರೆ ಈ ಕುರಿತು ನಟಿ ಕಾಜಲ್ ಅಗರ್ವಾಲ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅದೇನೇ ಇರಲಿ, ಈ ಹಿಂದೆ ಸ್ಯಾಂಡಲ್‍ವುಡ್‍ನಲ್ಲೀ ಚಾಲೆಂಜಿಂಗ್ ಸ್ಟಾರ್ ದರ್ಶನ್‍ರನ್ನು ಭೇಟಿ ಮಾಡಿಸುತ್ತೇನೆಂದು, ವ್ಯಕ್ತಿಯೊಬ್ಬ ಲಕ್ಷಾಂತರ ರೂಪಾಯಿ ವಸೂಲಿ ಮಾಡಿಕೊಂಡಿದ್ದ. ಇಂತಹ ಪ್ರಕರಣಗಳು ಪದೇ ಪದೇ ಮರುಕಳಿಸುತ್ತಿರುವ ಕಾರಣ, ಅಭಿಮಾನಿಗಳಲ್ಲಿ ಸ್ಟಾರ್​ಗಳು ಅರಿವು ಮೂಡಿಸಬೇಕಿದೆ.

HBD Tapsi: 34ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನಟಿ ತಾಪ್ಸಿ ಪನ್ನು ಹಾಟ್​ ಚಿತ್ರಗಳು..!


 
First published:August 2, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading