ಮದುವೆಯಾಗುವ ಹುಡುಗ ಹೇಗಿರಬೇಕು? ಮನದಾಳ ಬಿಚ್ಚಿಟ್ಟ ನಟಿ ಕಾಜಲ್

ತೆಲುಗಿನ ಟಿ.ವಿ ಶೋವೊಂದಕ್ಕೆ ಭಾಗವಹಿಸಿದ್ದ ಅವರು ಶೀಘ್ರವೇ ಹಸೆಮಣೆ ಏರುವುದಾಗಿ ಹೇಳಿದ್ದಾರೆ. ಇತ್ತೀಚೆಗೆ ವಿಜಯವಾಡದಲ್ಲಿ ನಡೆದ ಶಾಪಿಂಗ್​ ಕಾಂಪ್ಲೆಕ್ಸ್​ವೊಂದರ ಉದ್ಘಾಟನ ಕಾರ್ಯಕ್ರಮದಲ್ಲಿ ಕಾಜಲ್​ ಪಾಲ್ಗೊಂಡಿದ್ದರು. ಈ ವೇಳೆ ಅಲ್ಲಿದ್ದ ಮಾಧ್ಯಮದವರು ಮದುವೆ ವಿಚಾರವನ್ನು  ಪ್ರಸ್ತಾಪಿಸಿದ್ದಾಗ ಕಾಜಲ್​ ಒಮ್ಮೆ ಸಿಟ್ಟಾಗಿದ್ದರಂತೆ.

news18-kannada
Updated:December 21, 2019, 9:50 PM IST
ಮದುವೆಯಾಗುವ ಹುಡುಗ ಹೇಗಿರಬೇಕು? ಮನದಾಳ ಬಿಚ್ಚಿಟ್ಟ ನಟಿ ಕಾಜಲ್
ನಟಿ ಕಾಜಲ್
  • Share this:
ತೆಲುಗು ಚಿತ್ರದ ಮೋಹಕ ತಾರೆ ಕಾಜಲ್​ ಅಗರ್​ವಾಲ್​​​​ ಸಪ್ತಪದಿ ತುಳಿಯಲು ಸಜ್ಜಾಗಿದ್ದಾರೆ. 34 ವರ್ಷದ ಕಾಜಲ್​​ ಮದುವೆ ವಿಚಾರದಿಂದ ಕೊಂಚ ದೂರ ಉಳಿದಿದ್ದರು. ಆದರೆ ಸಾಮಾಜಿಕ ತಾಣದಲ್ಲಿ ಮದುವೆ ಆಗಲಿದ್ದಾರೆ ಎಂಬ ಗಾಳಿ ಸುದ್ದಿ ಆಗಾಗ ಕೇಳಿಬರುತ್ತಿತ್ತು. ಹಾಗಾಗಿ ಇಂತಹ ಸುದ್ದಿಗಳಿಗೆ ಫುಲ್​ ಸ್ಟಾಪ್​ ನೀಡಲು ನಟಿ ಕಾಜಲ್​ ಮುಂದಾಗಿದ್ದು, ತಮ್ಮ ಮದುವೆ ವಿಚಾರವನ್ನು ಕೊನೆಗೂ ಬಹಿರಂಗ ಪಡಿಸಿದ್ದಾರೆ.

ತೆಲುಗಿನ ಟಿ.ವಿ ಶೋವೊಂದಕ್ಕೆ ಭಾಗವಹಿಸಿದ್ದ ಅವರು ಶೀಘ್ರವೇ ಹಸೆಮಣೆ ಏರುವುದಾಗಿ ಹೇಳಿದ್ದಾರೆ. ಇತ್ತೀಚೆಗೆ ವಿಜಯವಾಡದಲ್ಲಿ ನಡೆದ ಶಾಪಿಂಗ್​ ಕಾಂಪ್ಲೆಕ್ಸ್​ವೊಂದರ ಉದ್ಘಾಟನ ಕಾರ್ಯಕ್ರಮದಲ್ಲಿ ಕಾಜಲ್​ ಪಾಲ್ಗೊಂಡಿದ್ದರು. ಈ ವೇಳೆ ಅಲ್ಲಿದ್ದ ಮಾಧ್ಯಮದವರು ಮದುವೆ ವಿಚಾರವನ್ನು  ಪ್ರಸ್ತಾಪಿಸಿದ್ದಾಗ ಕಾಜಲ್​ ಒಮ್ಮೆ ಸಿಟ್ಟಾಗಿದ್ದರಂತೆ.

‘ನನ್ನ ಮದುವೆ ವಿಚಾರದಲ್ಲಿ ಯಾರೊಬ್ಬರನ್ನು ಮೂಗು ತೂರಿಸುವ ಅವಕಾಶವಿಲ್ಲ‘ ಎಂದು ಹೇಳಿದ್ದರಂತೆ. ಇದೀಗ ನಟಿ ಕಾಜಲ್​ ಮದುವೆ ವಿಚಾರವನ್ನು ಪ್ರಸ್ತಾಪಿಸಿದ್ದಾರೆ.

ಇನ್ನು ಕಾಜಲ್​ ಬಳಿ ನಿಮ್ಮನ್ನು ವಿವಾಹವಾಗುವ ಹುಡುಗ ಹೇಗಿರಬೇಕು ಎನ್ನುವ ಪ್ರಶ್ನೆಗೆ, ‘ಆತ ನನ್ನ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು‘ ಎಂದು ಉತ್ತರಿಸಿದ್ದಾರೆ.

ಈ ಹಿಂದೆ ನಟಿ ಕಾಜಲ್​ ಉದಗಯಮಿಯೊಬ್ಬರನ್ನು ವಿವಾಹವಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಆಕೆ ಅದೊಂದು ಮುಗಿದ ಅಧ್ಯಾಯವೆಂದು ಹೇಳಿದ್ದಾರೆ.

ಬಾಲಿವುಡ್​ ನಟಿಯರಾದ ಪ್ರಿಯಾಂಕ ಚೋಪ್ರಾ ಮತ್ತು ದೀಪಿಕಾ ಪಡುಕೋಣೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನನ್ನ ಬಳಿ ಸಾಕಷ್ಟು ಸಿನಿಮಾಗಳಿದ್ದವು ಹಾಗಾಗಿ ಮದುವೆ ವಿಚಾರದಲ್ಲಿ ಕೊಂಚ ತಡವಾಯಿತು. ಈಗ ಅಂತಹ ಪರಿಸ್ಥಿತಿ ಇಲ್ಲ  ಎಂದಿದ್ದಾರೆ.

ಸದ್ಯ ನಟಿ ಕಾಜಲ್​ ಅಗರ್​ವಾಲ್​ ತಮಿಳಿನಲ್ಲಿ ಮೂಡಿ ಬರುತ್ತಿರುವ ಇಂಡಿಯನ್​ 2, ಅಂತೆಯೇ ಹಿಂದಿಯ ಮುಂಬೈ ಸಗ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ತೆಲುಗು ಮತ್ತು ಇಂಗ್ಲಿಷ್​ನಲ್ಲಿ ಬರುತ್ತಿರುವ ಮೋಸಗಲ್ಲಿ ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿದ್ದಾರೆ.ರಮೇಶ್​ ಅರವಿಂದ್​​ ನಿರ್ದೇಶನದ ಪ್ಯಾರೀಸ್​ ಪ್ಯಾರೀಸ್​ ಸಿನಿಮಾದಲ್ಲೂ ಕಾಜಲ್​ ನಟಿಸುತ್ತಿದ್ದಾರೆ. ಈಗಾಗಲೇ ಚಿತ್ರದ ಶೂಟಿಂಗ್​ ಪೂರ್ಣಗೊಂಡಿದ್ದು, ಪೋಸ್ಟ್​ ಪ್ರೊಡಕ್ಷನ್​ ಕೆಲಸ ನಡೆಯುತ್ತಿದೆ.
First published: December 21, 2019, 9:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading