ಕನ್ನಡದಲ್ಲಿ ನಟಿಸುತ್ತಾರಾ ತೆಲುಗಿನ ಕಾಜಲ್​ ಅಗರ್​ವಾಲ್​?

news18
Updated:August 12, 2018, 5:24 PM IST
ಕನ್ನಡದಲ್ಲಿ ನಟಿಸುತ್ತಾರಾ ತೆಲುಗಿನ ಕಾಜಲ್​ ಅಗರ್​ವಾಲ್​?
news18
Updated: August 12, 2018, 5:24 PM IST
ನ್ಯೂಸ್​ 18 ಕನ್ನಡ 

ಬಹು ಭಾಷಾ ನಟಿ ಕಾಜಲ್​ ಅಗರ್​ವಾಲ್​ ಈಗ ಬಾಲಿವುಡ್​ನಲ್ಲೂ ಬೇಡಿಕೆ ಇರುವ ನಟಿ. ತೆಲುಗಿನಲ್ಲಿ ತಮ್ಮ ಸಿನಿ ಪಯಣ ಆರಂಭಿಸಿದ ಈ ಪಂಜಾಬಿ ಚೆಲುವೆ ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲು ಅಭಿನಯಿಸಿದ್ದಾರೆ.

ತೆಲುಗು, ತಮಿಳು ಹಾಗೂ ಹಿಂದಿಯಲ್ಲಿ ಹಿಟ್​ ಸಿನಿಮಾಗಳನ್ನು ನೀಡಿರುವ ಕಾಜಲ್​ಗೆ ಚಂದನವನದ ಸಿನಿಮಾಗಳಲ್ಲಿ ಅಭಿನಯಿಸಲು ಅವಕಾಶ ಸಿಕ್ಕಿದೆಯಂತೆ. ಹೌದು ಹೀಗೆಂದು ಖುದ್ದು ಕಾಜಲ್​ ಹೇಳಿದ್ದಾರೆ.



ಸ್ಟೋರೀಸ್ ಫರ್ನೀಚರ್ ಮತ್ತು ಹೋಮ್ ನೀಡ್ಸ್ ಮಳಿಗೆಯ ಉದ್ಘಾಟನೆಗೆಂದು ನಿನ್ನೆ(ಆ.11)  ಬೆಂಗಳೂರಿನಗೆ ಬಂದಿದ್ದರು ಕಾಜಲ್​. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 'ಕನ್ನಡ ಚಿತ್ರರಂಗದಿಂದಲೂ ಅವಕಾಶಗಳು ಬರುತ್ತಿವೆ, ಸರಿಯಾದ ಸಮಯದಲ್ಲಿ ಕನ್ನಡಕ್ಕೂ ಕಾಲಿಡುತ್ತೇನೆ' ಎಂದರು.
First published:August 12, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ