Sandalwood: ಹಿರಿಯ ನಟ ಸತ್ಯಜಿತ್ ನೆರವಿಗೆ ಬಂದ ಕಾಗೆಮೊಟ್ಟೆ ಚಿತ್ರತಂಡ..!

ಸಹಾಯಕ್ಕಾಗಿ ಎದುರು ನೋಡುತ್ತಿರುವ ಹಿರಿಯ ನಟ ಸತ್ಯಜಿತ್ ಅವರ ಸಮಸ್ಯೆಯನ್ನು ಮನಗಂಡ 'ಕಾಗೆಮೊಟ್ಟೆ' ಚಿತ್ರತಂಡ ಇತ್ತೀಚೆಗಷ್ಟೆ ಬೌರಿಂಗ್ ಆಸ್ಪತ್ರೆಗೆ ತೆರಳಿ ಸತ್ಯಜಿತ್ ಅವರ ಆರೋಗ್ಯ ವಿಚಾರಿಸಿದೆ. ಜೊತೆಗೆ ಚಿಕಿತ್ಸೆಗೆ ಸಹಾಯಹಸ್ತ ಚಾಚಿದೆ.

ನಟ ಸತ್ಯಜಿತ್ ಅವರಿಗೆ ಧನ ಸಹಾಯ ಮಾಡಲು ಮುಂದಾದ ಕಾಗೆಮೊಟ್ಟೆ ಚಿತ್ರತಂಡ

ನಟ ಸತ್ಯಜಿತ್ ಅವರಿಗೆ ಧನ ಸಹಾಯ ಮಾಡಲು ಮುಂದಾದ ಕಾಗೆಮೊಟ್ಟೆ ಚಿತ್ರತಂಡ

  • Share this:
ಇದುವರೆಗೆ ಬರೋಬ್ಬರಿ 650ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಹಿರಿಯ ನಟ ಸತ್ಯಜಿತ್ ಅನಾರೋಗ್ಯಕ್ಕೊಳಗಾಗಿ ಕಳೆದ ನಾಲ್ಕು ದಿನಗಳಿಂದ ನಗರದ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಪರಿಸ್ಥಿತಿ ಗಂಭೀರವಾಗಿದ್ದು ಬೌರಿಂಗ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಲ ದಿನಗಳ ಹಿಂದೆ ಅವರಿಗೆ ಜಾಂಡಿಸ್ ತಗುಲಿತ್ತು, ಅದರಿಂದ ಇನ್ನೇನು ಚೇತರಿಸಿಕೊಂಡರು ಎನ್ನುತ್ತಿರುವಾಗಲೇ ಹೃದಯಾಘಾತ ಸಂಭವಿಸಿತ್ತು. ತಕ್ಷಣ ಅವರ ಪುತ್ರ ಆಕಾಶ್ ಜಿತ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದ್ದರು. ಇನ್ನೇನು ಚೇತರಿಸಿಕೊಂಡರು ಎನ್ನುತ್ತಿರುವಾಗಲೇ ಮತ್ತಷ್ಟು ಆರೋಗ್ಯ ಹದಗೆಟ್ಟಿತ್ತು. ಹೀಗಾಗಿಯೇ ಭಾನುವಾರ ಅವರನ್ನ ಬೌರಿಂಗ್ ಆಸ್ಪತ್ರೆಗೆ ದಾಖಲಿಸಿದ್ದರು.

ಇನ್ನು ಈ ಹಿಂದೆಯೇ ಗ್ಯಾಂಗ್ರಿನ್‍ನಿಂದಾಗಿ ನಟ ಸತ್ಯಜಿತ್ ಅವರ ಎಡಗಾಲನ್ನು ತೆಗೆಯಲಾಗಿತ್ತು. ಈಗ ಅವರ ಬಲಗಾಲಿಗೂ ಗ್ಯಾಂಗ್ರಿನ್ ಹರಡಿಕೊಂಡಿದೆ. ಜೊತೆಗೆ ಅವರ ಬಿಪಿ ಹಾಗೂ ಶುಗರ್ ಲೆವೆಲ್ ಕೂಡ ಏರುಪೇರಾಗುತ್ತಿದ್ದು, ಗ್ಯಾಂಗ್ರಿನ್‍ಗೆ ಚಿಕಿತ್ಸೆ ನೀಡಲಾಗುತ್ತಿದೆ. ಈಗಾಗಲೇ ಗ್ಯಾಂಗ್ರಿನ್ ಹಾಗೂ ಆರೋಗ್ಯ ಸಮಸ್ಯೆಯಿಂದಾಗಿ ಸಾಕಷ್ಟು ಹಣ ಖರ್ಚು ಮಾಡಿರುವ ಕಾರಣ ಸತ್ಯಜಿತ್ ಅವರ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಆದರೂ ಜನರಿಂದ ಏನೂ ನೆರವನ್ನು ಬಯಸಿಲ್ಲ. ಬದಲಾಗಿ ಸರ್ಕಾರದಿಂದ ಅಥವಾ ಚಿತ್ರರಂಗದಿಂದ ಯಾರಾದರೂ ಸಹಾಯ ಮಾಡುತ್ತಾರಾ ಎಂದು ಎದುರು ನೋಡುತ್ತಿದ್ದಾರೆ. ಅವರ ಸಮಸ್ಯೆಯನ್ನು ಮನಗಂಡ 'ಕಾಗೆಮೊಟ್ಟೆ' ಚಿತ್ರತಂಡ ಇತ್ತೀಚೆಗಷ್ಟೆ ಬೌರಿಂಗ್ ಆಸ್ಪತ್ರೆಗೆ ತೆರಳಿ ಸತ್ಯಜಿತ್ ಅವರ ಚಿಕಿತ್ಸೆಗೆ ಸಹಾಯಹಸ್ತ ಚಾಚಿದೆ.

Sathyajith health Updates, Sandalwood Actor Sathyajith Health Upset, Sathyajith admitted to Hospital, Sathyajith Heart Stork, ನಟ ಸತ್ಯಜಿತ್ ಸ್ಥಿತಿ ಗಂಭೀರ, ಆಸ್ಪತ್ರೆಗೆ ದಾಖಲಾದ ನಟ ಸತ್ಯಜಿತ್, ನಟ ಸತ್ಯಜಿತ್, ನಟ ಸತ್ಯಜಿತ್ ವಿರುದ್ಧ ಅವರ ಮಗಳು ಸ್ವಲೇಹಾ ದೂರು, ಸ್ಯಾಂಡಲ್‌ವುಡ್, ಸತ್ಯಜಿತ್, ನಟ, ಕನ್ನಡ, Sathyajith, sandalwood, kannada, actor, Actor Sathyajith admitted to hospital his condition is serious ae
ಸ್ಯಾಂಡಲ್​ವುಡ್​ನ ಹಿರಿಯ ನಟ ಸತ್ಯಜಿತ್​


ಹೌದು, ಕೊರೋನಾ ಎರಡನೆಯ ಅಲೆಯ ಪಾಸಿಟಿವ್ ಪ್ರಕರಣಗಳು ಕಡಿಮೆಯಾದ ಬೆನ್ನಲ್ಲೇ ರಾಜ್ಯ ಸರ್ಕಾರ ಇದೇ ಅಕ್ಟೋಬರ್ 1 ರಿಂದ ಥಿಯೇಟರ್ ಹಾಗೂ ಮಲ್ಟಿಪ್ಲೆಕ್ಸ್‍ಗಳಲ್ಲಿ ಶೇಕಡಾ 100ರಷ್ಟು ಹೌಸ್‍ಫುಲ್ ಪ್ರದರ್ಶನಕ್ಕೆ ಅನುಮತಿ ನೀಡಿತು. ಅಕ್ಟೋಬರ್ ಒಂದರಂದೇ ರಿಲೀಸ್ ಆದ ಸಿನಿಮಾ ಕಾಗೆಮೊಟ್ಟೆ.

ಇದನ್ನೂ ಓದಿ: ಕೊರೋನಾ 2.0 ಬಳಿಕ Kaage Motte ತೆರೆಗೆ: ಚಂದ್ರಹಾಸಗೆ ಸಿಗುತ್ತಾ ಪ್ರೇಕ್ಷಕರ ಮಂದಹಾಸ..!

ಚಂದ್ರಹಾಸ ನಿರ್ದೇಶಿಸಿರುವ ಈ ಚಿತ್ರದಲ್ಲಿ ನವರಸ ನಾಯಕ ಜಗ್ಗೇಶ್ ಪುತ್ರ ಗುರುರಾಜ್ ನಾಯಕನಾಗಿ ಹಾಗೂ ನವನಟಿ ತನುಜ ನಾಯಕಿಯಾಗಿದ್ದಾರೆ. ಉಳಿದಂತೆ ಸರ್ದಾರ್ ಸತ್ಯ, ಮಾದೇಶ್, ಪೆಟ್ರೋಲ್ ಪ್ರಸನ್ನ, ಶರತ್ ಲೋಹಿತಾಶ್ವ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಹಾಗೇ ಹಿರಿಯ ನಟ ಸತ್ಯಜಿತ್ ಕೂಡ ಪ್ರಮುಖ ತಾರಾಗಣದಲ್ಲಿ ನಟಿಸಿದ್ದಾರೆ. ಹೀಗಾಗಿಯೇ ತಮ್ಮ ಚಿತ್ರತಂಡದಲ್ಲಿದ್ದ ಹಿರಿಯ ನಟನ ನೆರವಿಗೆ ನಿಂತಿದೆ 'ಕಾಗೆಮೊಟ್ಟೆ' ಟೀಮ್.

'ಕಾಗೆಮೊಟ್ಟೆ' ರಿಲೀಸ್ ಆದ ಮೊದಲ ದಿನದ ಮಾರ್ನಿಂಗ್ ಶೋ ಗಾಂಧಿನಗರದ ಕೆಜಿ ರಸ್ತೆಯ ಪ್ರಮುಖ ಚಿತ್ರಮಂದಿರ ತ್ರಿವೇಣಿ ಥಿಯೇಟರ್‍ನಲ್ಲಿ ಹೌಸ್‍ಫುಲ್ ಪ್ರದರ್ಶನ ಕಂಡಿತ್ತು. ಫಸ್ಟ್ ಡೇ ಫಸ್ಟ್ ಶೋನಲ್ಲಿ ಚಿತ್ರ 25 ಸಾವಿರ ರೂಪಾಯಿ ಕಲೆಕ್ಷನ್ ಮಾಡಿಕೊಂಡಿತ್ತು. ಇತ್ತೀಚೆಗಷ್ಟೇ 'ಕಾಗೆಮೊಟ್ಟೆ' ಚಿತ್ರತಂಡ ಬೌರಿಂಗ್ ಆಸ್ಪತ್ರೆಗೆ ತೆರಳಿ ಸತ್ಯಜಿತ್ ಅವರ ಆರೋಗ್ಯ ವಿಚಾರಿಸಿ ಆ ಹಣವನ್ನು ಅವರ ಕುಟುಂಬದವರಿಗೆ ನೀಡಿದೆ. ಶೀಘ್ರವಾಗಿ ಸತ್ಯಜಿತ್ ಅವರು ಗುಣಮುಖರಾಗಲಿ ಎಂದು ಶುಭಹಾರೈಸಿದೆ.

ಇದನ್ನೂ ಓದಿ: Actor Jaggesh: ನನ್ನ ಮಗನ ಭವಿಷ್ಯಕ್ಕೆ ನಾನೇ ಮಣ್ಣು ಹಾಕಿದೆ- ಮಗನ ಸಿನಿ ಜರ್ನಿಯ ಬಗ್ಗೆ ನೆನೆದು ಬೇಸರ ವ್ಯಕ್ತಪಡಿಸಿದ ಜಗ್ಗೇಶ್

ಇನ್ನು ಕಳೆದ ಶುಕ್ರವಾರ ರಾಜ್ಯಾದ್ಯಂತ 108 ಸೆಂಟರ್​ಗಳಲ್ಲಿ 'ಕಾಗೆಮೊಟ್ಟೆ' ಚಿತ್ರ ರಿಲೀಸ್ ಆಗಿತ್ತು. ವಿಶೇಷ ಅಂದರೆ ಎಲ್ಲೆಡೆಯಿಂದ ಈ ಆಕ್ಷನ್ ಎಂಟರ್‍ಟೈನರ್ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಸಿಗುತ್ತಿದ್ದು, ಎರಡನೇ ವಾರ ಇನ್ನೂ ಹೆಚ್ಚುವರಿ 15ರಿಂದ 20 ಸ್ಕ್ರೀನ್‍ಗಳಲ್ಲಿ ರಿಲೀಸ್ ಮಾಡುವ ಆಲೋಚನೆ ಚಿತ್ರತಂಡದ್ದು.
Published by:Anitha E
First published: