• Home
  • »
  • News
  • »
  • entertainment
  • »
  • Kacha Badam: ಎಲ್ಲೆಲ್ಲೂ ಕಚ್ಚಾ ಬಾದಾಮ್ ಹವಾ, ಗಾಯಕನಿಗೆ ಸಿಗ್ತು ಬಹುಮಾನದ ಜೊತೆ ಭರ್ಜರಿ ಆಫರ್

Kacha Badam: ಎಲ್ಲೆಲ್ಲೂ ಕಚ್ಚಾ ಬಾದಾಮ್ ಹವಾ, ಗಾಯಕನಿಗೆ ಸಿಗ್ತು ಬಹುಮಾನದ ಜೊತೆ ಭರ್ಜರಿ ಆಫರ್

ಭುಬನ್​ ಬದ್ಯಕರ್​

ಭುಬನ್​ ಬದ್ಯಕರ್​

ಕಡಲೆಕಾಯಿ ಮಾರಲೆಂದು ಕಟ್ಟಿದ್ದ ಹಾಡು ಕನಸಿನಲ್ಲೂ ಕಾಣದಷ್ಟು ಕಾಸು ಭುಬನ್ ಕಿಸೆಯನ್ನು ತುಂಬಿಸಿದೆ. ಮ್ಯೂಸಿಕ್​ ಕಂಪನಿ 3 ಲಕ್ಷ ಹಣ ನೀಡಿ ಒಪ್ಪಂದ ಮಾಡಿಕೊಂಡಿದೆ.

  • Share this:

ಸಾಮಾಜಿಕ ಮಾಧ್ಯಮದಲ್ಲಿ (Social media) ಈಗ , ಬದಾಮ್. .. ಬದಾಮ್ . . .ಎ ದಾದಾ ಕಚ್ಚಾ ಬದಾಮ್. . (Kacha Badam ) ಅಮರ್ ಕಚೆ ನೆಯ್ಕೋ ಬುಬು ವಜಾ ಬದಾಮ್.  ಹಾಡಿನದ್ದೇ ಹವಾ. ಸಾಮಾನ್ಯ ಜನರಿಂದ ಹಿಡಿದು ಹಲವಾರು ಸೆಲೆಬ್ರಿಟಿಗಳವರೆಗೆ ಎಲ್ಲರೂ ಸಾಮಾಜಿಕ ಮಾಧ್ಯಮದಲ್ಲಿ ಈ ಹಾಡಿಗೆ ಹೆಜ್ಜೆ (Dance) ಹಾಕುತ್ತಿರುವ ರೀಲ್‍ಗಳನ್ನು ಮಾಡಿ ಖುಷಿ ಪಡುತ್ತಿದ್ದಾರೆ. ನಮ್ಮ ದೇಶ ಮಾತ್ರವಲ್ಲ, ಅನ್ಯ ದೇಶಗಳಲ್ಲೂ ಈ ಹಾಡು ಜನಪ್ರಿಯವಾಗಿದೆ. ಈ ಮಟ್ಟಕ್ಕೆ ವೈರಲ್ (Viral) ಆಗಿರುವ ಈ ಕಚ್ಚಾ ಬದಾಮ್ ಹಾಡಿನ ಸೃಷ್ಟಿಕರ್ತ ಭುಬನ್ ಬಡ್ಯಾಕರ್. ಈಗ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಕಚ್ಚಾ ಬಾದಾಮ್‍ನಂತದ್ದೇ ಮತ್ಯಾವುದಾದರೂ ಹೊಸ ಹಾಡನ್ನು ಕಟ್ಟಿದ್ದಾರಾ ಅಥವಾ ಬಾಲಿವುಡ್‍ನಿಂದೇನಾದರೂ ಅವಕಾಶ ಬಂತೆ? ಎಂದು ನೀವು ಆಲೋಚಿಸಲು ಆರಂಭಿಸಿದ್ದರೆ, ಆ ನಿಮ್ಮ ಆಲೋಚನೆಗೆ ಕೊಂಚ ಬ್ರೇಕ್ ನೀಡಿ. ಏಕೆಂದರೆ ಈ ಬಾರಿ ಅವರು ಸುದ್ದಿಯಾಗಿರುವುದು ಯಾವುದೇ ಹೊಸ ಹಾಡಿನಿಂದಲ್ಲ, ಕಚ್ಚಾ ಬಾದಾಮ್ ಹಾಡಿಗೆ ಬಂದ ಸಂಭಾವನೆಯಿಂದ !


ಹೌದು, ಕಡಲೇಕಾಯಿ ಮಾರಲೆಂದು ಕಟ್ಟಿದ್ದ ಹಾಡು ಕನಸಿನಲ್ಲೂ ಕಾಣದಷ್ಟು ಕಾಸು ಭುಬನ್ ಕಿಸೆಯನ್ನು ತುಂಬಿದೆ. ಹೇಗಂತೀರಾ? ಕಚ್ಚಾ ಬಾದಾಮ್ ಹಾಡಿನ ರಿಮಿಕ್ಸ್ ಆವೃತ್ತಿಯನ್ನು ಸೃಷ್ಟಿಸಿದ್ದ ಗೋಧುಳಿಬೆಳ ಮ್ಯೂಸಿಕ್ ಸಂಸ್ಥೆ ಭುಬನ್ ಬಡ್ಯಾಕರ್​ ಗೆ ಮೂರು ಲಕ್ಷ ರೂಪಾಯಿಗಳನ್ನು ನೀಡಿದೆ. ಎಲ್ಲೆಡೆ ಸಿಕ್ಕಾಪಟ್ಟೆ ವೈರಲ್ ಆಗುತ್ತಿರುವ ಈ ಹಾಡಿನ ಅಸಲಿ ಸೃಷ್ಟಿಕರ್ತನಿಗೆ ಇದರಿಂದ ಏನಾದರೂ ಹಣಕಾಸಿನ ಲಾಭವಾಗಿದೆಯೇ ಎಂದು ಸಾಮಾಜಿಕ ಮಾಧ್ಯಮದಿಂದ ಪ್ರಶ್ನೆ ಎದ್ದ ನಂತರ, ಈ ಮೊತ್ತದ ಸಂಭಾವನೆ ಭುಬನ್ ಅವರನ್ನು ಹುಡುಕಿಕೊಂಡು ಬಂದಿದೆ.


ಭುಬನ್ ಜೊತೆ 3 ಲಕ್ಷ ರೂ.ಗಳ ಒಪ್ಪಂದ


“ಭುಬನ್ ಅವರೊಂದಿಗೆ ನಾವು 3 ಲಕ್ಷ ರೂ.ಗಳ ಒಪ್ಪಂದ ಮಾಡಿಕೊಂಡಿದ್ದೇವೆ ಮತ್ತು ಅವರಿಗೆ ಇಂದು 1.5 ಲಕ್ಷ ರೂ.ಗಳ ಚೆಕ್ ನೀಡಲಾಗಿದೆ. ಉಳಿದ ಹಣವನ್ನು ಅವರಿಗೆ ಮುಂದಿನ ವಾರ ನೀಡಲಾಗುವುದು. ಇದು ಅವರಿಗೆ ದೀರ್ಘ ಕಾಲದಿಂದ ಬಾಕಿ ಇತ್ತು” ಎಂದು ಗೋಧೋಳಿಬೆಳ ಮ್ಯೂಸಿಕ್ ಸಂಸ್ಥೆಯ ಗೋಪಾಲ್ ಘೋಷ್ ಹೇಳಿದ್ದಾರೆ.


ಇದನ್ನೂ ಓದಿ: Kaccha Badam: ಮೊಬೈಲ್​ ಓಪನ್​ ಮಾಡಿದ್ರೆ ಸಾಕು `ಕಚ್ಚಾ ಬಾದಾಮ್​’ ಕ್ವಾಟ್ಲೆ.. ಈ ಹಾಡು ಹಾಡಿದ ಪುಣ್ಯಾತ್ಮನಾದ್ರೂ ಯಾರು? ಇಲ್ಲಿದೆ ನೋಡಿ ಡೀಟೆಲ್ಸ್​!


ಈ ಹಾಡು ಸೃಷ್ಟಿಸಿರುವ ಸಂಚಲನದಿಂದ ಭುಬನ್ ಬಡ್ಯಾಕಿಯಾ ಏನನ್ನೂ ಪಡೆಯಲಿಲ್ಲ ಮತ್ತು ಅವರು ಹಕ್ಕು ಸ್ವಾಮ್ಯವನ್ನು ಹೊಂದಿದ್ದಾರೆ, ಹಾಗಾಗಿ ಅದು ಬಾಕಿ ಇತ್ತು ಎಂದಿದ್ದಾರೆ ಗೋಪಾಲ್ ಘೋಷ್.


ಕಚ್ಚಾ ಬಾದಾಮ್ ಸಾಂಗ್​ ಫುಲ್​ ವೈರಲ್​


ಭುಬನ್ ಬಡ್ಯಾಕಿಯಾ ಪಶ್ಚಿಮ ಬಂಗಾಳದ ಬೀರ್‍ಭೂಮ್ ಜಿಲ್ಲೆಯ ನಿವಾಸಿ, ವೃತ್ತಿಯಲ್ಲಿ ಕಡಲೇಕಾಯಿ ವ್ಯಾಪಾರಿ. ಈ ಹಾಡು ಕೂಡ ಹುಟ್ಟಿದ್ದು ಕಡಲೇಕಾಯಿ ವ್ಯಾಪಾರ ದೆಸೆಯಿಂದಲೇ! ಬೀರ್‍ಭೂಮ್ ಜಿಲ್ಲೆಯ ಹಳ್ಳಿ ಹಳ್ಳಿಗಳಲ್ಲಿ ಸಂಚರಿಸಿ ಕಡಲೇಕಾಯಿ ಮಾರುವ ಇವರು, ತಮ್ಮ ಗ್ರಾಹಕರನ್ನು ಕಡಲೇಕಾಯಿ ಕೊಳ್ಳಲು ಆಕರ್ಷಿಸಲೆಂದು ಈ ಹಾಡನ್ನು ಕಟ್ಟಿದರಂತೆ. ಈ ಹಾಡಿನ ಸಾಹಿತ್ಯವೂ ಅವರದ್ದೇ, ಸಂಗೀತ ಸಂಯೋಜನೆಯೂ ಅವರದ್ದೇ. ತನ್ನ ದ್ವಿಚಕ್ರ ವಾಹನದಲ್ಲಿ ಕಡಲೇಕಾಯಿ ಬೀಜದ ಚೀಲ ಮತ್ತು ತಕ್ಕಡಿಯನ್ನು ಇಟ್ಟುಕೊಂಡು ಊರೂರು ಸುತ್ತಿ ಕಡಲೇಕಾಯಿ ಮಾರುವ ಅವರ ಬದಾಮ್. .. ಬದಾಮ್ . . .ಎ ದಾದಾ ಕಚ್ಚಾ ಬದಾಮ್. . ಹಾಡು ಗ್ರಾಹಕರನ್ನು ತುಂಬಾ ಆಕರ್ಷಿಸಿದೆಯಂತೆ.


ಇದನ್ನೂ ಓದಿ: Kaccha Badam: ಒಂದೇ ಹಾಡಿನಿಂದ ಸ್ಟಾರ್​ ಆದ ಕಚ್ಚಾ ಬಾದಾಮ್​ ಸಿಂಗರ್​​.. ಪೊಲೀಸರಿಗೂ ಇವ್ರನ್ ಕಂಡ್ರೆ ಸಖತ್​ ಇಷ್ಟ!


ಈ ಹಾಡು ವೈರಲ್ ಆದ ನಂತರ ಪ್ರತಿಯೊಬ್ಬರು ಭುಬನ್ ಅವರನ್ನು ಪ್ರಶಂಸಿಸುತ್ತಿದ್ದಾರೆ. ಎಲೆಮರೆಯ ಕಾಯಿಯಂತಿದ್ದ ಅವರ ಪ್ರತಿಭೆ ಸಾಮಾಜಿಕ ಮಾಧ್ಯಮದ ಮೂಲಕ ಈಗ ದೇಶವಿದೇಶಗಳನ್ನು ತಲುಪಿದೆ. ಎಲ್ಲರೂ ಬಾಯಿಮಾತಿನಲ್ಲಿ ಭುಬನ್ ಅವರನ್ನು ಹೊಗಳಿದರೆ, ಪಶ್ಚಿಮ ಬಂಗಾಳದ ಪೋಲಿಸರು ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಕಳೆದ ವಾರ ಅವರು , ಪಶ್ಚಿಮ ಬಂಗಾಳದ ಪೊಲೀಸ್ ಪ್ರಧಾನ ಕಚೇರಿಗೆ ಭುಬನ್ ಬಡ್ಯಾಕಿಯಾ ಅವರನ್ನು ಕರೆದುಕೊಂಡು ಹೋಗಿ, ಸನ್ಮಾನ ಮಾಡಿದ್ದರು.

Published by:Pavana HS
First published: