• Home
  • »
  • News
  • »
  • entertainment
  • »
  • Kaccha Badam: ನಟನೆಗೆ ಪಾದಾರ್ಪಣೆ ಮಾಡಲಿದ್ದಾರಂತೆ ಕಚ್ಚಾ ಬಾದಾಮ್ ಖ್ಯಾತಿಯ ಭುವನ್ ಬಡ್ಯಾಕರ್

Kaccha Badam: ನಟನೆಗೆ ಪಾದಾರ್ಪಣೆ ಮಾಡಲಿದ್ದಾರಂತೆ ಕಚ್ಚಾ ಬಾದಾಮ್ ಖ್ಯಾತಿಯ ಭುವನ್ ಬಡ್ಯಾಕರ್

ಭುಬನ್ ಬಡ್ಯಾಕರ್

ಭುಬನ್ ಬಡ್ಯಾಕರ್

ಕಚ್ಚಾ ಬಾದಾಮ್ ಖ್ಯಾತಿಯ ಭುವನ್ ಬಡ್ಯಾಕರ್ ನಟನೆಗೆ (Acting) ಪಾದಾರ್ಪಣೆ ಮಾಡಲಿದ್ದಾರೆ ಎಂಬ ಮಾಹಿತಿ ಒಂದು ತಿಳಿದುಬಂದಿದೆ. ಆದರೆ ಯಾವ ಚಿತ್ರ ಅಥವಾ ಏನಂದು ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

  • Share this:

ಸಾಮಾಜಿಕ ಮಾಧ್ಯಮದಲ್ಲಿ (Social media) ಕೆಲ ದಿನಗಳ ಹಿಂದೆ ಬದಾಮ್. .. ಬದಾಮ್ . . .ಎ ದಾದಾ ಕಚ್ಚಾ ಬದಾಮ್. . (Kacha Badam ) ಅಮರ್ ಕಚೆ ನೆಯ್ಕೋ ಬುಬು ವಜಾ ಬದಾಮ್. ಹಾಡಿನದ್ದೇ ಹವಾ ಆಗಿತ್ತು. ಈ ಕಚ್ಚಾ ಬದಾಮ್ ಹಾಡಿನ ಸೃಷ್ಟಿಕರ್ತ ಭುಬನ್ ಬಡ್ಯಾಕರ್ (Bhuban Badyakar) ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಹೌದು ಕಚ್ಚಾ ಬಾದಾಮ್ ಖ್ಯಾತಿಯ ಭುವನ್ ಬಡ್ಯಾಕರ್ ನಟನೆಗೆ (Acting) ಪಾದಾರ್ಪಣೆ ಮಾಡಲಿದ್ದಾರೆ ಎಂಬ ಮಾಹಿತಿ ಒಂದು ತಿಳಿದುಬಂದಿದೆ. ಆದರೆ ಯಾವ ಚಿತ್ರ ಅಥವಾ ಏನಂದು ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಒಟ್ಟಿನಲ್ಲಿ ಭುಬನ್ ಬಡ್ಯಾಕರ್ ಅವರ ಒಂದು ಹಾಡಿನಿಂದ ಅನೇಕ ಪ್ರಸಿದ್ಧಿಗೆ ಕಾರಣವಾಯಿತು ಎಂದರೂ ತಪ್ಪಾಗಲಾರದು.


ನಟನೆಗೆ ಇಳಿದ ಭುಬನ್ ಬಡ್ಯಾಕರ್:


ಕಚ್ಚಾ ಬದಾಮ್ ಖ್ಯಾತಿಯ ಭುಬನ್ ಬಡ್ಯಾಕರ್ ಅವರು ಇದೀಗ ನಟನೆಗೆ ಇಳಿದಿದ್ದಾರಂತೆ ಎಂದು ತಿಳಿದುಬಂದಿದೆ. ಆದರೆ ಈ ಕುರಿತ ಅಧಿಕೃತ ಮಾಹಿತಿ ಲಭ್ಯವಿಲ್ಲದಿದ್ದರೂ ಭುಬನ್ ಬಡ್ಯಾಕರ್ ಅವರ ಖ್ಯಾತಿಗೆ ಅವರು ನಟನೆಗೆ ಬಂದಿರಬಹುದೆಂದು ಅನೇಕರು ಹೇಳುತ್ತಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಈ ಸುದ್ದಿ ಸಖತ್ ವೈರಲ್ ಆಗುತ್ತಿದೆ.
ಭುವನ್ ಅವರ ಹೊಸ ಮನೆಯ ವೀಡಿಯೊ ವೈರಲ್:


ಇತ್ತೀಚೆಗೆ, ಭುವನ್ ಅವರ ಹೊಸ ಮನೆಯ ವೀಡಿಯೊ ವೈರಲ್ ಆಗಿತ್ತು. ಭುವನ್ ಇಡೀ ಮನೆಯನ್ನು ಅಮೃತಶಿಲೆಯಿಂದ ಮಾಡಲ್ಪಟ್ಟಿದೆ. ಸೀಲಿಂಗ್ ಮೇಲೆ 'ರಾಧೆ ರಾಧೆ' ಎಂದು ಬರೆಯಲಾಗಿದೆ. ಮನೆಯ ಇಂಟೀರಿಯರ್ ಡೆಕೊರೇಶನ್ ನಲ್ಲಿ ಆಧುನಿಕತೆಯೊಂದಿಗೆ ಬೆಂಗಾಲಿ ಸ್ಪರ್ಶ ಎದ್ದು ಕಾಣುತ್ತದೆ. ಭುವನ್ ಇಂಟೀರಿಯರ್ ಡೆಕೊರೇಶನ್ ಗೆ ಮಾತ್ರ 3-4 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ಇಲ್ಲಿಯವರೆಗೆ ಮನೆ ಕಟ್ಟಲು 6 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ ಎಂದು ಭುವನ್ ತಿಳಿಸಿದ್ದಾರೆ.


ಇದನ್ನೂ ಓದಿ: Bhool Bhulaiyaa 2: 100 ಕೋಟಿ ಸನಿಹದಲ್ಲಿ ಭೂಲ್​ ಬುಲಯ್ಯ 2, ಕಾರ್ತಿಕ್ ಆರ್ಯನ್ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್​


ಭುಬನ್ ಜೊತೆ 3 ಲಕ್ಷ ರೂ.ಗಳ ಒಪ್ಪಂದ


“ಭುಬನ್ ಅವರೊಂದಿಗೆ ನಾವು 3 ಲಕ್ಷ ರೂ.ಗಳ ಒಪ್ಪಂದ ಮಾಡಿಕೊಂಡಿದ್ದೇವೆ ಮತ್ತು ಅವರಿಗೆ ಇಂದು 1.5 ಲಕ್ಷ ರೂ.ಗಳ ಚೆಕ್ ನೀಡಲಾಗಿದೆ. ಉಳಿದ ಹಣವನ್ನು ಅವರಿಗೆ ಮುಂದಿನ ವಾರ ನೀಡಲಾಗುವುದು. ಇದು ಅವರಿಗೆ ದೀರ್ಘ ಕಾಲದಿಂದ ಬಾಕಿ ಇತ್ತು” ಎಂದು ಗೋಧೋಳಿಬೆಳ ಮ್ಯೂಸಿಕ್ ಸಂಸ್ಥೆಯ ಗೋಪಾಲ್ ಘೋಷ್ ಹೇಳಿದ್ದಾರೆ.


ಇದನ್ನೂ ಓದಿ: Jacqueline Fernandez: ವಿಕ್ರಾಂತ್ ರೋಣ ಬೆಡಗಿಯ ಟ್ರೆಡಿಷನಲ್ ಲುಕ್ - ಮಲ್ಲಿಗೆ ಮುಡಿದು, ಸೀರೆಯಲ್ಲಿ ಜಾಕ್ಲಿನ್ ಮಿಂಚಿಂಗ್


ಹೊಟ್ಟೆಪಾಡಿಗಾಗಿ ಹಾಡು ಹೇಳುತ್ತಿದ್ದ ಭುಬನ್​!


ಆದರೆ ಅಸಲಿಗೆ ಈ ಹಾಡು ಸೃಷ್ಟಿಯಾಗಿದ್ದು ಸಂಗೀತದ ಮೇಲಿನ ಆಸಕ್ತಿಯಿಂದಲ್ಲ, ಹೊಟ್ಟೆಪಾಡಿನ ಅನಿವಾರ್ಯತೆಯಿಂದ. ಬೀರ್‍ಭೂಮ್ ಜಿಲ್ಲೆಯ ಹಳ್ಳಿ ಹಳ್ಳಿಗಳಲ್ಲಿ ಸಂಚರಿಸಿ ಕಡಲೇಕಾಯಿ ಮಾರುವಾಗ, ಗ್ರಾಹಕರನ್ನು ಆಕರ್ಷಿಸಲೆಂದು ಭುಬನ್ ಈ ಹಾಡನ್ನು ಸೃಷ್ಟಿಸಿದರಂತೆ. ತನ್ನ ದ್ವಿಚಕ್ರ ವಾಹನದಲ್ಲಿ ಕಡಲೇಕಾಯಿ ಬೀಜದ ಚೀಲ ಮತ್ತು ತಕ್ಕಡಿಯನ್ನು ಇಟ್ಟುಕೊಂಡು ಊರೂರು ಸುತ್ತಿ ಕಡಲೇಕಾಯಿ ಮಾರುವ ಅವರ ಈ ಹಾಡು ಗ್ರಾಹಕರನ್ನು ತುಂಬಾ ಆಕರ್ಷಿಸಿದೆಯಂತೆ. ಕಡಲೇಕಾಯನ್ನು ಖರೀದಿಸುವ ಗ್ರಾಹಕರು ಬದಾಮ್ ಬದಾಮ್ ಹಾಡನ್ನು ಕೇಳುತ್ತಾ ಅಲ್ಲೇ ನಿಲ್ಲುವುದುಂಟಂತೆ. ಇನ್ನು, ಕಚ್ಚಾ ಬದಾಮಂ ಹಾಡು ರಿಮಿಕ್ಸ್ ಮಾಡಡಲಾಗಿದ್ದು, ಯೂಟ್ಯೂಬ್‍ನಲ್ಲಿ 50 ಮಿಲಿಯನ್ ವೀಕ್ಷಣೆಗಳನ್ನು ಕಂಡಿದ್ದು, ಹಾಡು ರಾತ್ರಿ ಬೆಳಗಾಗುವುದರ ಒಳಗೆ ವೈರಲ್ ಆಗಿದೆ.

Published by:shrikrishna bhat
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು