ಕಬ್ಜ ಸಿನಿಮಾ (Kabzaa) ರಿಲೀಸ್ ಆಗಿ ಉತ್ತಮ ಪ್ರತಿಕ್ರಿಯೆಯನ್ನು ಗಳಿಸುತ್ತಿದೆ. ಸೋಷಿಯಲ್ ಮೀಡಿಯಾದಲ್ಲಂತೂ (Social Media) ಕಬ್ಜ ಹವಾ ಜೋರಾಗಿದೆ. ಎಲ್ಲೆಡೆ ಕಬ್ಜ ಸಿನಿಮಾದ ಫೋಟೋ (Photo) ಹಾಗೂ ವಿಡಿಯೋ ತುಣುಕುಗಳು (Video Clips) ಓಡಾಡುತ್ತಿದ್ದು ಪ್ರೇಕ್ಷಕರು ಸಿನಿಮಾ ಬಗ್ಗೆ ಉತ್ತಮ ಪ್ರತಿಕ್ರಿಯೆಗಳನ್ನು (Reactions) ಕೊಟ್ಟಿದ್ದಾರೆ. ಚಂದ್ರು (Chandru) ನಿರ್ದೇಶನದ ಈ ಸಿನಿಮಾ ಅಪ್ಪು ಬರ್ತ್ಡೇ ದಿನವೇ ರಿಲೀಸ್ ಆಗಿದ್ದು ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡುತ್ತಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಏಕ ಕಾಲಕ್ಕೆ ರಿಲೀಸ್ ಆಗಿರೋ ಸಿನಿಮಾ ಬಗ್ಗೆ ನಾರ್ತ್ ಪ್ರೇಕ್ಷಕರು ಕೂಡಾ ಪಾಸಿಟಿವ್ ರಿಯಾಕ್ಷನ್ (Positive Reaction) ಕೊಟ್ಟಿದ್ದಾರೆ.
ವಿಡಿಯೋ ಶೇರ್ ಮಾಡಿದ್ದ ಉಪ್ಪಿ
ರಿಯಲ್ ಸ್ಟಾರ್ ಉಪೇಂದ್ರ ಅವರು ಇನ್ಸ್ಟಾಗ್ರಾಮ್ನಲ್ಲಿ ಹಿಂದಿ ಕಬ್ಜ ಸಿನಿಮಾ ನೋಡಿದ ಪ್ರೇಕ್ಷಕರ ಪ್ರತಿಕ್ರಿಯೆಯ ವಿಡಿಯೋ ಕ್ಲಿಪ್ ಒಂದನ್ನು ಶೇರ್ ಮಾಡಿದ್ದಾರೆ. ಇದರಲ್ಲಿ ಪ್ರೇಕ್ಷಕರು ಕಬ್ಜ ಸಿನಿಮಾಗೆ ಕೊಟ್ಟ ರಿಯಾಕ್ಷನ್ ನೋಡಬಹುದು.
View this post on Instagram
ಅಂತೂ ಕಬ್ಜ ಸಿನಿಮಾಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನಾರ್ತ್ ಬೆಲ್ಟ್ನಲ್ಲಿಯೂ ಸಿನಿಮಾವನ್ನು ನೋಡಲು ಪ್ರೇಕ್ಷಕರು ಥಿಯೇಟರ್ನತ್ತ ಧಾವಿಸುತ್ತಿದ್ದಾರೆ. ಅಂತೂ ಉಪ್ಪಿ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಭರ್ಜರಿಯಾಗಿ ಸದ್ದು ಮಾಡುತ್ತಿದೆ.
ಉಪ್ಪಿ ಸರ್ ನೀವಂತೂ ಪ್ರೇಕ್ಷಕರನ್ನೂ ಯಾವತ್ತೂ ನಿರಾಸೆ ಮಾಡಲ್ಲ. ತೆಲಂಗಾಣದಿಂದ ನಮ್ಮ ಪ್ರೀತಿ ನಿಮಗೆ ಕಳಿಸುತ್ತಿದ್ದೇವೆ ಎಂದಿದ್ದಾರೆ ಇನ್ನೊಬ್ಬ ವ್ಯಕ್ತಿ.
ವಿಡಿಯೋ ನೋಡಿದ ಕನ್ನಡಿಗರು ಬೇರೆ ಭಾಷೆ ಜನ ಕನ್ನಡ ಸಿನಿಮಾ ನೋಡಿ ಹೊಗಳೋದನ್ನು ನೋಡುವುದೇ ಒಂದು ಖುಷಿ ಎಂದು ಬಹಳಷ್ಟು ಜನರು ಕಮೆಂಟ್ ಮಾಡಿದ್ದಾರೆ.
ಬೇರೆ ಭಾಷೆ ಅವರು ನಮ್ಮ ಕನ್ನಡ ಸಿನಿಮಾದ ಬಗ್ಗೆ ಮಾತಾಡೋದು ಅಂದ್ರೆ ಅದು ನಮ್ಮ ಕನ್ನಡಿಗರಿಗೆ ಹೆಮ್ಮೆಯ ವಿಷಯ ಎಂದಿದ್ದಾರೆ ಇನ್ನೊಬ್ಬರು. ವಿದ್ಯಾರ್ಥಿಯೊಬ್ಬರು ನಾಳೆ ಎಕ್ಸಾಮ್ ಇದೆ, ಆದ್ರೆ ಇವತ್ತೇ ಪಕ್ಕಾ ಥಿಯೇಟರ್ನಲ್ಲಿ ಸಿನಿಮಾ ನೋಡ್ತೀನಿ ಎಂದಿದ್ದಾರೆ.
ಸಿನಿಮಾ ಬಗ್ಗೆ ಭರ್ಜರಿ ಕಮೆಂಟ್
ಕನ್ನಡ ಸಿನಿ ಪ್ರೇಮಿಗಳಂತೂ ಕಬ್ಜ ಸಿನಿಮಾ ನೋಡಿ ಸಿನಿಮಾವನ್ನು ಕೊಂಡಾಡುತ್ತಿದ್ದಾರೆ. ವಿಶೇಷವಾಗಿ ಎಲ್ಲರೂ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅವರ ಅಭಿನಯದ ಬಗ್ಗೆ ಮಾತನಾಡುತ್ತಿದ್ದು ಶಿವಣ್ಣ ಅವರ ಎಂಟ್ರಿ ಗೂಸ್ಬಂಪ್ಸ್ ಕೊಡುತ್ತೆ ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ