Kabzaa Twitter Review: ಸ್ಯಾಂಡಲ್​ವುಡ್​ಗೆ ಮತ್ತೊಮ್ಮೆ ಹೆಮ್ಮೆ! ಕಬ್ಜ ಸೂಪರ್ ಎಂದ ನೆಟ್ಟಿಗರು

ಕಬ್ಜ ಸಿನಿಮಾ ಟ್ವಿಟರ್ ರಿವ್ಯೂ

ಕಬ್ಜ ಸಿನಿಮಾ ಟ್ವಿಟರ್ ರಿವ್ಯೂ

ಕಬ್ಜ ಸಿನಿಮಾ ನೋಡಿದ ನೆಟ್ಟಿಗರು ಸಿನಿಮಾ ಬಗ್ಗೆ ಟ್ವಿಟರ್​ನಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ನೆಟ್ಟಿಗರು ಸಿನಿಮಾ ಬಗ್ಗೆ ಏನ್ ಹೇಳ್ತಿದ್ದಾರೆ? ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್.

  • News18 Kannada
  • 3-MIN READ
  • Last Updated :
  • Bangalore, India
  • Share this:

ನಿರ್ದೇಶಕ ಚಂದ್ರು (Direction Chandru) ಆ್ಯಕ್ಷನ್ ಕಟ್ ಹೇಳಿರೋ ರಿಯಲ್ ಸ್ಟಾರ್ ಉಪೇಂದ್ರ (Real Star Upendra) ಅಭಿನಯದ ಕಬ್ಜ (Kabzaa) ಸಿನಿಮಾ ರಿಲೀಸ್ ಆಗಿದೆ. ಸ್ಯಾಂಡಲ್​ವುಡ್ (Sandalwood) ಬಾದ್​ಶಾ ಕಿಚ್ಚ ಸುದೀಪ್, ನಟ ಶಿವರಾಜ್​ಕುಮಾರ್ (Shivarajkumar) ಅವರು ಸ್ಪೆಷಲ್ ರೋಲ್​ನಲ್ಲಿ ಕಾಣಿಸಿಕೊಂಡಿರುವ ಈ ಸ್ಯಾಂಡಲ್​ವುಡ್ ​ನ (Sandalwood)  ಪ್ಯಾನ್ ಇಂಡಿಯಾ ಸಿನಿಮಾ ಬಿಗ್​ಸ್ಕ್ರೀನ್​ಗೆ ಬಂದಾಗಿದೆ. ಸಿನಿ ಪ್ರೇಮಿಗಳು ಈಗಾಗಲೇ ಕಬ್ಜ ಸಿನಿಮಾವನ್ನು ನೋಡಿ ಟ್ವಿಟರ್ ಮೂಲಕ ತಮ್ಮ ವಿಮರ್ಶೆಯನ್ನು (Twitter Review) ಹೇಳುತ್ತಿದ್ದಾರೆ. ಸಿನಿ ಪ್ರಿಯರು ಕಬ್ಜ ಬಗ್ಗೆ ಏನಂದ್ರು? ಹೇಗಿದೆ ಸಿನಿಮಾ? ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್.


ಸಿನಿಮಾ ವಿಶ್ವಾದ್ಯಂತ 4000 ಸ್ಕ್ರೀನ್​ಗಳಲ್ಲಿ ರಿಲೀಸ್ ಆಗಿದ್ದು ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿಯಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ. ಕಬ್ಜ ಸಿನಿಮಾದ ಪ್ಲಾಟ್ ಗಾಂಧೀ ಫಾಲೋವರ್ಸ್ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಮೇಲೆ ಕ್ರೂರವಾಗಿ ಹಲ್ಲೆ ನಡೆಯುವುದನ್ನು ತೋರಿಸುತ್ತದೆ.


ಅವಾಯ್ಡ್ ಮಾಡಲು ಪ್ರಯತ್ನಿಸಲು ಅವಾಯ್ಡ್ ಮಾಡಲು ಸಾಧ್ಯವಾಗದಂತಹ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರನ ಪುತ್ರ ಮಾಫಿಯಾ ಜಗತ್ತಿನಲ್ಲಿ ಸಿಕ್ಕಿಹಾಕಿಕೊಳ್ಳುತ್ತಾನೆ. ಈ ಸಿನಿಮಾ ಕಥೆ 1942ರಿಂದ 1986ರ ಮಧ್ಯೆ ನಡೆಯುತ್ತದೆ. ಈ ಸಿನಿಮಾ ಬಗ್ಗೆ ಟ್ವಿಟರ್​ನಲ್ಲಿ ಜನ ಏನ್ ಹೇಳಿದ್ದಾರೆ ನೋಡಿ.


ಕೆಜಿಎಫ್ ವೈಬ್ಸ್ ಇದೆ


ಕಬ್ಜ ಎವರೇಜ್ ಆ್ಯಕ್ಷನ್ ಸಿನಿಮಾ. ಸಿನಿಮಾದ ಮೈನ್ ಹೀರೋ ಉಪೇಂದ್ರ ಮಾತ್ರ. ಕಿಚ್ಚ ಸುದೀಪ್ ಹಾಗೂ ಶಿವಣ್ಣ 10ರಿಂದ 15 ನಿಮಿಷ ಬಂದು ಹೋಗುತ್ತಾರೆ. ಕೆಜಿಎಫ್​ನಂತಹ ಸಿನಿಮಾ ಲೆವೆಲ್​ಗೆ ಈ ಸಿನಿಮಾ ಇಲ್ಲ. ಈ ಸಿನಿಮಾ ಕೆಜಿಎಫ್ ವೈಬ್ಸ್ ಕೊಡುತ್ತದೆ ಎಂದು ಟ್ವಿಟರ್ ರಿವ್ಯೂ ಬಂದಿದೆ.



ಕಬ್ಜ ಫಸ್ಟ್ ಹಾಫ್ ಸೂಪರ್, ಉಪೇಂದ್ರ ಅವರ ಲುಕ್ ಸೂಪರ್ ಆಗಿದೆ. ಉಳಿದರ ಲುಕ್ ಕೂಡಾ ಓಕೆ. ಬಿಜಿಎಂ ಬೆಂಕಿ ಎಂದು ಬರೆದಿದ್ದಾರೆ ಇನ್ನೊಬ್ಬರು.



Real Star Upendra Kabzaa movie trailer will be released on 4th March
ಮಾರ್ಚ್ 4ಕ್ಕೆ 'ಕಬ್ಜ' ಟ್ರೇಲರ್ ಬಿಡುಗಡೆ


ಕಬ್ಜ ಕನ್ನಡ ಸಿನಿಮಾದ ಇನ್ನೊಂದು ಚಿನ್ನದ ಗಣಿ. ಆರ್ ಚಂದ್ರು ಅವರ ನಿರ್ದೇಶನ ಫೆಂಟಾಸ್ಟಿಕ್. ಉಪೇಂದ್ರ ಅವರ ನಟನೆ ನೆಕ್ಸ್ಟ್ ಲೆವೆಲ್​ನಲ್ಲಿದೆ. ಶಿವಣ್ಣ ಎಂಟ್ರಿಯಲ್ಲಿ ಗೂಸ್​ಬಂಪ್ಸ್ ಬರುತ್ತೆ. ಇದು 2023ರ ಫಸ್ಟ್ ಬ್ಲಾಕ್ ಬಸ್ಟರ್ ಅನ್ನೋದ್ರದಲ್ಲಿ ಡೌಟೇ ಇಲ್ಲ ಎಂದಿದ್ದಾರೆ.




ಕಬ್ಜ ಸಿನಿಮಾ ಸ್ಯಾಂಡಲ್​ವುಡ್​ನನ್ನು ಮತ್ತೊಮ್ಮೆ ಹೆಮ್ಮೆ ಪಡುವಂತೆ ಮಾಡಿದೆ. ನೆಗೆಟಿವ್ ಅನ್ನು ನಂಬಬೇಡಿ. ಸಿನಿಮಾ ಬೆಂಕಿ ಗುರೂ ಎಂದು ಕಮೆಂಟ್ ಮಾಡಿದ್ದಾರೆ.


ಅಂತೂ ಸಿನಿಮಾ ಫಸ್ಟ್ ಆಫ್ ನೋಡಿ ಜನರು ಸಿನಿಮಾ ಬಗ್ಗೆ ಪಾಸಿಟಿವ್ ರಿಯಾಕ್ಷನ್ ಕೊಡುತ್ತಿದ್ದಾರೆ. ಆದರೆ ಇನ್ನೊಂದಷ್ಟು ಜನರು ನೆಗೆಟಿವ್ ರಿವ್ಯೂ ಕೂಡಾ ಕೊಡುತ್ತಿದ್ದಾರೆ.

Published by:Divya D
First published: