ಪವರ್ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಬರ್ತ್ಡೇ. ಸ್ಯಾಂಡಲ್ವುಡ್ನ (Sandalwood) ಎಲ್ಲರ ನೆಚ್ಚಿನ ನಟ ಅಗಲಿದ ನಂತರ ಅವರ ಅಭಿಮಾನಿಗಳು ಇಂದಿಗೂ ಅವರನ್ನು ನೆನಪಿಸಿಕೊಂಡು ಅವರ ಹೆಸರಲ್ಲಿ ಬಹಳಷ್ಟು ಕೆಲಸಗಳನ್ನು ಮಾಡುತ್ತಿದ್ದಾರೆ. ಅಪ್ಪು (Appu) ಸದಾ ಜೀವಂತ. ಟ್ವಿಟರ್ (Twitter) ಸೇರಿದಂತೆ ಸೋಷಿಯಲ್ ಮೀಡಿಯಾದಲ್ಲಿ (Social Media) #AppuLivesOn ಹ್ಯಾಶ್ಟ್ಯಾಗ್ ಯಾವಾಗಲೂ ಇರುತ್ತದೆ. ಅಷ್ಟರಮಟ್ಟಿಗೆ ಅಪ್ಪು ಜನರ ಮನಸಿನಲ್ಲಿ ಸ್ಥಿರವಾಗಿದ್ದಾರೆ. ಇದೀಗ ಪುನೀತ್ ಬರ್ತ್ಡೇ ದಿನವೇ ಉಪೇಂದ್ರ (Upendra) ಅವರ ಕಬ್ಜ (Kabzaa) ಸಿನಿಮಾ ರಿಲೀಸ್ ಆಗಿದೆ. ಈ ಸಿನಿಮಾವನ್ನು ಉಪ್ಪಿ ಅಪ್ಪುಗೆ ಗಿಫ್ಟ್ (Gift) ಮಾಡಿದ್ದಾರೆ. ತಮ್ಮ ಸಿನಿಮಾ (Cinema) ಕುರಿತು ಮಾತನಾಡುವಾಗ ಅಪ್ಪುವನ್ನು ನೆನಪಿಸಿ ಉಪ್ಪಿ ಭಾವುಕರಾಗಿದ್ದಾರೆ.
ಕಬ್ಜ ನಟ ಉಪೇಂದ್ರ ಅವರು ಇತ್ತೀಚೆಗೆ ಕಬ್ಜ ಸಿನಿಮಾದ ಮೂರನೇ ಹಾಡು ರಿಲೀಸ್ ಸಂದರ್ಭ ಅಪ್ಪು ಅವರ ಬಗ್ಗೆ ಮಾತನಾಡಿದ್ದರು. ಚಂದ್ರು ನಿರ್ದೇಶನದ ಸಿನಿಮಾ ಕಬ್ಜದಲ್ಲಿ ಉಪೇಂದ್ರ ಅವರ ಹೊಸ ಅವತಾರ ರಿವೀಲ್ ಆಗಿದ್ದು ಮೂರನೇ ಸಾಂಗ್ನಲ್ಲಿ ಉಪ್ಪಿ ಹಾಗೂ ತಾನ್ಯಾ ಡ್ಯಾನ್ಸ್ ಮಾಡಿದ್ದಾರೆ.
ಆ್ಯಕ್ಷನ್ ಕಟ್ ಹೇಳೋ ಆಸೆ ಹಾಗೆಯೇ ಉಳಿಯಿತು
ಈ ಹಾಡಿನ ಲಾಂಚ್ ಸಂದರ್ಭ ಉಪ್ಪಿ ಅಪ್ಪುವನ್ನು ನೆನಪಿಸಿಕೊಂಡು ಭಾವುಕರಾಗಿದ್ದಾರೆ. ವೇದಿಕೆಯಲ್ಲಿ ಪುನೀತ್ ರಾಜ್‌ಕುಮಾರ್ ಬಗ್ಗೆ ಮಾತನಾಡಿದ ನಟ, ನಾನು ಪುನೀತ್ ರಾಜ್ಕುಮಾರ್ಗೆ ಆ್ಯಕ್ಷನ್ ಕಟ್ ಎಂದು ಹೇಳಲು ಬಯಸಿದ್ದೆ.
ಆದರೆ ಸಾಧ್ಯವಾಗಲಿಲ್ಲ. ಆದರೆ ಶೀಘ್ರ ಶಿವಣ್ಣ ಅವರಿಗೆ ಆ್ಯಕ್ಷನ್ ಕಟ್ ಹೇಳಿ ಅವರ ಬ್ಯಾನರ್ನಲ್ಲಿ ಸಿನಿಮಾ ಮಾಡುವ ಗೀತಕ್ಕ ಅವರ ಕನಸು ನನಸು ಮಾಡುತ್ತೇನೆ ಎಂದಿದ್ದಾರೆ.
ಕಿಚ್ಚ ಸುದೀಪ್, ಶಿವರಾಜ್ಕುಮಾರ್ ಅವರ ಜೊತೆ ಮಲ್ಟಿಸ್ಟಾರರ್ ಸಿನಿಮಾದಲ್ಲಿ ಉಪೇಂದ್ರ ಪ್ರೇಕ್ಷಕರ ಮುಂದೆ ಬರಲಿದ್ದು ಇದು ಪ್ರೇಕ್ಷಕರಿಗೆ ಸಿನಿ ಹಬ್ಬವಾಗಲಿದೆ.
ಇದನ್ನೂ ಓದಿ: Kabzaa Movie: ಸರ್ಪೈಸ್ ಆಗಿರಬೇಕಿತ್ತು ಶಿವಣ್ಣ ಲುಕ್! ಆದ್ರೆ ಕಬ್ಜ ಡೈರೆಕ್ಟರ್ಗೆ ಕಾಡಿತ್ತು ಆ ಒಂದು ಭಯ
ಪುನೀತ್ ಅವರ ನೆನಪು ಇಂದಿಗೂ ಹಸಿರು. ಅವರ ಅಭಿಮಾನಿಗಳು ಅವರ ಬರ್ತ್ಡೇ ದಿನವನ್ನು ವಿಶೇಷವಾಗಿ ಆಚರಿಸುತ್ತಿದ್ದಾರೆ. ಬಹಳಷ್ಟು ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಅಪ್ಪು ಜನ್ಮದಿನವನ್ನು ಆಚರಿಸುತ್ತಿದ್ದಾರೆ. ಇಂದು ರಾಜ್ಯದೆಲ್ಲೆಡೆ ಅಪ್ಪು ಅಭಿಮಾನಿಗಳು ಪುನೀತ್ ಅವರನ್ನು ಸಂಭ್ರಮಿಸುತ್ತಿದ್ದಾರೆ.
ಅಪ್ಪು ಬರ್ತ್ಡೇ ದಿನವೇ ಯಾಕೆ ಕಬ್ಜ ರಿಲೀಸ್
ಕನ್ನಡದ ಪ್ಯಾನ್ ಇಂಡಿಯಾ ಕಬ್ಜ ಸಿನಿಮಾ ತನ್ನದೇ ರೀತಿಯಲ್ಲಿ ಹೊಸ ಅಲೆಯನ್ನ ಎಬ್ಬಿಸಿದೆ. ಚಿತ್ರದಲ್ಲಿ ರವಿ ಬಸ್ರೂರು ಸಂಗೀತ ಮೋಡಿ ಮಾಡಿದೆ. ಟ್ರೈಲರ್ ಅಂತೂ ಚಿತ್ರದ ಬಗೆಗಿನ ನಿರೀಕ್ಷೆಯನ್ನ ಮತ್ತಷ್ಟು ಜಾಸ್ತಿ ಮಾಡಿತ್ತು. ಕಬ್ಜ ಚಿತ್ರದ ರಿಲೀಸ್ ದಿನದ ಬಗ್ಗೆನೂ ಒಂದು ಕುತೂಹಲ ಇದ್ದೇ ಇದೆ. ಪುನೀತ್ ರಾಜ್‌ಕುಮಾರ್ ಅವರಿಗೂ ಕಬ್ಜ ಸಿನಿಮಾಕ್ಕೂ ಏನು ಸಂಬಂಧ?
ಮಾರ್ಚ್-17 ರಂದು ಅಪ್ಪು ಜನ್ಮ ದಿನ ಇದೆ. ಇದೇ ದಿನವೇ ಸಿನಿಮಾ ಯಾಕೆ ರಿಲೀಸ್ ಆಗುತ್ತಿದೆ? ಈ ಒಂದು ಪ್ರಶ್ನೆಗೆ ಕಬ್ಜ ಡೈರೆಕ್ಟರ್ ಆರ್.ಚಂದ್ರು ಉತ್ತರ ಕೊಟ್ಟಿದ್ದಾರೆ. ಕಬ್ಜ ಡೈರೆಕ್ಟರ್ ಆರ್. ಚಂದ್ರು ತಮ್ಮ ಕಬ್ಜ ಚಿತ್ರದ ಬಗ್ಗೆ ಅಪ್ಪು ಅವರಿಗೆ ಹೇಳ್ತಾನೇ ಇದ್ದರು. ಪವರ್ ಸ್ಟಾರ್ ಪುನೀತ್ ಸದಾ ಚಂದ್ರು ಅವರ ಕೆಲಸಕ್ಕೆ ಶುಭ ಹಾರೈಸುತ್ತಿದ್ದರು.
ದೊಡ್ಡ ಸಿನಿಮಾ ಮಾಡ್ತಾಯಿದ್ದಿರಿ, ನಿಮಗೆ ಒಳ್ಳೆಯದಾಗಲಿ ಅಂತಲೂ ಚಂದ್ರುಗೆ ಅಪ್ಪು ಹೇಳಿದ್ದರು.ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ತಮ್ಮ ಈ ಚಿತ್ರದ ಬಗ್ಗೆ ತುಂಬಾನೇ ಕುತೂಹಲ ಇಟ್ಟುಕೊಂಡಿದ್ದರು. ಕೆಲಸದ ಎಲ್ಲ ವಿಷಯವನ್ನೂ ಸದಾ ಕೇಳುತ್ತಿದ್ದರು. ಅಂತಹ ಅಪ್ಪು ನಮ್ಮೊಂದಿಗಿಲ್ಲ. ಅವರ ನೆನಪಿಗಾಗಿ ಅವರ ಅಭಿಮಾನಿಯಾಗಿ ನಾನು ಈ ಚಿತ್ರವನ್ನ ಅವರ ಜನ್ಮ ದಿನದಂದು ರಿಲೀಸ್ ಮಾಡ್ತಾ ಇದ್ದೇನೆ ಎಂದು ಆರ್ ಚಂದ್ರು, ನ್ಯೂಸ್-18 ಕನ್ನಡ ಡಿಜಿಟಲ್‌ಗೆ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ