Nayanthara-Samantha ಜೊತೆ ಈ ಹೀರೋ ರೋಮ್ಯಾನ್ಸ್, ಇಬ್ಬರೂ ನಂಗೇ ಬೇಕು ಅಂತಿದ್ದಾರೆ ಇವ್ರು!

ಟೀಸರ್‌ನಲ್ಲಿ ಕಣ್ಮಣಿ ಮತ್ತು ಕತೀಜಾ ಪಾತ್ರಗಳಲ್ಲಿ ನಯನತಾರಾ ಮತ್ತು ಸಮಂತಾ ಕಾಣಿಸಿಕೊಂಡಿದ್ದಾರೆ. ಟೀಸರ್‌ನಲ್ಲಿ ವಿಜಯ್ ಸೇತುಪತಿ "ಫಸ್ಟ್ ನೋಡಿದ್ದು ನಿನ್ನನ್ನೇ" ಎಂದು ಇಬ್ಬರಿಗೂ ಹೇಳುವ ದೃಶ್ಯ ರಂಜಿಸುತ್ತದೆ.

ವಿಜಯ್ ಸೇತುಪತಿ, ನಯನ ತಾರಾ ಮತ್ತು ಸಮಂತಾ

ವಿಜಯ್ ಸೇತುಪತಿ, ನಯನ ತಾರಾ ಮತ್ತು ಸಮಂತಾ

 • Share this:
  “ಕಥುವಕುಲ ರೆಂಡು ಕಾದಲ್” (Kaatu Vaaklu Rendu Kaadal) ತಮಿಳು ಚಿತ್ರವಾಗಿದ್ದು ಸಿನಿಮಾ (Movie) ಟೀಸರ್ ರಿಲೀಸ್ (Teaser release) ಆಗಿದ್ದು, ಸಿನಿ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಾಯಕ ನಟನಾಗಿ ವಿಜಯ್ ಸೇತುಪತಿ (Vijay Setupati), ನಾಯಕ ನಟಿಯರಾಗಿ ನಯನ ತಾರಾ (Nayantara) ಮತ್ತು ಸಮಂತಾ ರುತ್ ಪ್ರಭು (Samantha Ruth Prabhu) ಅಭಿನಯಿಸಿದ್ದಾರೆ. ಟೀಸರ್ ನಲ್ಲಿ ಕಂಡಂತೆ ನಯನ ತಾರಾ ಮತ್ತು ಸಮಂತಾ ಬ್ಯೂಟಿ ಮೋಡಿ ಮಾಡುವಂತಿದೆ. ಇದೊಂದು ಟ್ರಯಾಂಗಲ್ ಲವ್ ಸ್ಟೋರಿ (Love story) ಎಂಬುದು ಟೀಸರ್ ನಿಂದ ಕಂಡು ಬಂದಿದೆ. ಹಾಟ್ ನಟಿಯರಿಬ್ಬರ ನಟನೆ ಅಭಿಮಾನಿಗಳ ಹುಬ್ಬೇರುವಂತೆ ಮಾಡಿದೆ. ಚಿತ್ರವನ್ನು ನಟಿ ನಯನತಾರಾ ಗೆಳೆಯ ವಿಘ್ನೇಶ್ ಶಿವನ್ ನಿರ್ದೇಶಿಸಿದ್ದಾರೆ.  ಇನ್ನು ನಟಿ ಸಮಂತಾ ಫ್ಯಾನ್ಸ್ ಗೆ ಡಬಲ್ ಖುಷಿ ಸಿಕ್ಕಂತಾಗಿದೆ. ಯಾಕೆಂದರೆ ಚಿತ್ರ ಸಮಂತಾ ಬರ್ತ್ ಡೇ ಯಂದು ರಿಲೀಸ್ ಆಗಲಿದೆ.

  ಅಭಿಮಾನಿಗಳ ಮನ ಗೆಲ್ಲುತ್ತಿದ್ದಾರೆ ಹಾಟ್ ಬ್ಯೂಟಿ ಸಮಂತಾ

  ನಟ ನಾಗಚೈತನ್ಯ ಅವರೊಂದಿಗೆ ವಿಚ್ಛೇದನ ಪಡೆದ ನಂತರ ಸಮಂತಾ ತನ್ನ ಹಾಟ್ ಬ್ಯೂಟಿ ಹಾಗೂ ಫಿಟ್ನೆಸ್ ನಿಂದಾಗಿ ಸಾಕಷ್ಟು ಸುದ್ದಿಯಾಗುತ್ತಲೇ ಇದ್ದಾರೆ. ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿದ್ದು, ತಮ್ಮ ನಟನೆಯ ಮೂಲಕ ಅಭಿಮಾನಿಗಳ ಮನ ಗೆಲ್ಲುತ್ತಿದ್ದಾರೆ.

  ಟೀಸರ್ ನಲ್ಲಿ ಕಣ್ಮಣಿ ಮತ್ತು ಕತೀಜಾ ಪಾತ್ರ ಸಖತ್

  ಟೀಸರ್ ನಲ್ಲಿ ಕಣ್ಮಣಿ ಮತ್ತು ಕತೀಜಾ ಪಾತ್ರಗಳಲ್ಲಿ ನಯನತಾರಾ ಮತ್ತು ಸಮಂತಾ ಕಾಣಿಸಿಕೊಂಡಿದ್ದಾರೆ. ಟೀಸರ್ ನಲ್ಲಿ ವಿಜಯ್ ಸೇತುಪತಿ ‘ಫರ್ಸ್ಟ್ ನೋಡಿದ್ದು ನಿನ್ನನ್ನೇ’ ಎಂದು ಇಬ್ಬರಿಗೂ ಹೇಳುವ ದೃಶ್ಯ ರಂಜಿಸುತ್ತದೆ. ವಿಜಯ್ ಸೇತುಪತಿ ಎಂದಿನಂತೆ ತಮ್ಮ ಸರಳ ವ್ಯಕ್ತಿತ್ವ ಮತ್ತು ನಟನೆಯಿಂದ ಅಭಿಮಾನಿಗಳಲ್ಲಿ ಮತ್ತೆ ಹೊಸ ಹುರುಪು ಹುಟ್ಟು ಹಾಕಿದ್ದಾರೆ. ಈಗಾಗಲೇ ಟೀಸರ್ ನೋಡಿದ ಸಿನಿ ಪ್ರೇಮಿಗಳು ಫಿದಾ ಆಗಿದ್ದಾರೆ.

  ಇದನ್ನೂ ಓದಿ: ಬಾಲಿವುಡ್ ಚೆಲುವೆಯರು ಬಳಸುವ ಫೇಮಸ್ ಡೇಟಿಂಗ್ ಆ್ಯಪ್​ ಇದೇ ನೋಡಿ

  ಇನ್ನು ಚಿತ್ರದಲ್ಲಿ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಶ್ರೀಶಾಂತ್ ಕೂಡ ಇದ್ದಾರೆ. ಚಿತ್ರದಲ್ಲಿ ಶ್ರೀಶಾಂತ್ ಪಾತ್ರ ಮುಖ್ಯ ಮತ್ತು ನಿರ್ಣಾಯಕವಾಗಿದೆಯಂತೆ. ಸ್ಟಾರ್ ನಟಿ ಸಮಂತಾ ಜೊತೆ ಶ್ರೀಶಾಂತ್ ಹಲವು ಪ್ರಮುಖ ದೃಶ್ಯಗಳಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.

  ಟೀಸರ್ ನೋಡಿ ಫಿದಾ ಆಗಿರುವ ಸಿನಿ ಅಭಿಮಾನಿಗಳು ದೊಡ್ಡ ಪರದೆಯಲ್ಲಿ ಸಮಂತಾ, ನಯನತಾರಾ, ವಿಜಯ್ ಸೇತುಪತಿ ಮತ್ತು ಶ್ರೀಶಾಂತ್ ಅವರ ಅಭಿನಯವನ್ನು ನೋಡಲು ಕಾಯುತ್ತಿದ್ದಾರೆ.  ಟ್ರಯಾಂಗಲ್ ಲವ್ ಸ್ಟೋರಿ

  ಕಥುವಕುಲ ರೆಂಡು ಅಧಿಕೃತ ಟೀಸರ್ ಟ್ರಯಾಂಗಲ್ ಲವ್ ಸ್ಟೋರಿ ಎಂಬುದನ್ನು ತೋರಿಸುತ್ತಿದೆ. ಟೀಸರ್ ಟ್ವಿಟ್ಟರ್, ಇನ್ಸ್ಟಾಗ್ರಾಂ ಮತ್ತು ಯುಟ್ಯೂಬ್ ನಲ್ಲಿ ರಿಲೀಸ್ ಆಗಿದೆ. ರೊಮ್ಯಾಂಟಿಕ್ ಹಾಗೂ ಹಾಸ್ಯ ಭರಿತ ಡೈಲಾಗ್ ಗಳನ್ನು ಟೀಸರ್ ನಲ್ಲಿ ನೋಡಬಹುದು.

  ವಿಜಯ್ ಸೇತುಪತಿ, ನಯನತಾರಾ ಮತ್ತು ಸಮಂತಾ ರುತ್ ಪ್ರಭು ಅವರೊಂದಿಗೆ ರೋಮ್ಯಾನ್ಸ್ ಮಾಡುವ ದೃಶ್ಯವನ್ನು ಕಾಣಬಹುದು. ಸೆವೆನ್ ಸ್ಕ್ರೀನ್ ಸ್ಟುಡಿಯೋ ಮತ್ತು ರೌಡಿ ಪಿಕ್ಚರ್ಸ್‌ನಿಂದ ಕಥುವಕುಲ ರೆಂಡು ಕಾದಲ್ ಸಿನಿಮಾ ಅನ್ನು ಬೆಂಬಲಿಸಲಾಗಿದೆ ಮತ್ತು ಏಪ್ರಿಲ್ 28 ರಂದು ಥಿಯೇಟರ್‌ ಗಳಿಗೆ ಸಿನಿಮಾ ಲಗ್ಗೆ ಇಡಲಿದೆ.

  ಇದನ್ನೂ ಓದಿ: ರಕ್ಷಿತ್​ ಶೆಟ್ಟಿಗೆ ತಾಳಿ ಕಟ್ಟುವ ಶುಭ ವೇಳೆ ಬಂದಿದ್ಯಂತೆ.. `ಚಾರ್ಲಿ’ ಕೈಹಿಡಿಯೋ ಅದೃಷ್ಟವಂತೆ ಅವ್ರೇನಾ?

  ಓವರ್ ಗ್ಲಾಮರ್ ಇಲ್ಲದ ಸ್ಕ್ರಿಪ್ಟ್

  ಇನ್ನು ಇಂತಹ ಸಿನಿಮಾ ಸ್ಕ್ರಿಪ್ಟ್ ಬರೆಯುವುದು ತುಂಬಾ ಸವಾಲಿನ ಕೆಲಸ. ಯಾವುದೇ ರೀತಿಯ ಓವರ್ ಗ್ಲಾಮರ್ ಇಲ್ಲದೆ, ಯಾವ ವಿಷಯಕ್ಕೂ ಕುಗ್ಗದೆ, ಯಾರ ಪಾತ್ರಗಳಿಗೂ ಧಕ್ಕೆಯಾಗದೇ, ಕಿರಿ ಕಿರಿ ಎನ್ನಿಸದಂತೆ ಒಂದು ಸ್ಕ್ರಿಪ್ಟ್ ಬರೆಯುವುದು ಮತ್ತು ನಿರ್ದೇಶಿಸುವುದು ತುಂಬಾ ಕಷ್ಟ. ಆದರೆ ವಿಘ್ನೇಶ್ ಶಿವನ್ ಒಳ್ಳೆಯ ಕೆಲಸ ಮಾಡಿದ್ದಾರೆ.

  ಟೀಸರ್ ನೋಡಿದಾಗ ಇದು ತಮಾಷೆ ಹಾಗೂ ಒಳ್ಳೆಯ ಸಂಭಾಷಣೆಗಳ ಮೂಲಕ ಜನರ ಮನಸ್ಸು ತಟ್ಟಲಿದೆ ಎಂಬುದು ಗೊತ್ತಾಗುತ್ತದೆ. ನಯನ ತಾರಾ ಈಗಲೂ 20 ವರ್ಷದವರಂತೆ ಯಂಗ್ ಆಗಿ ಕಾಣುತ್ತಾರೆ. ಸಮಂತಾ ತನ್ನ ಕ್ಯೂಟ್ ನೆಸ್ ನಿಂದ ಜನರ ಮನಸ್ಸನ್ನು ಕದಿಯುತ್ತಾರೆ. ಹಾಗೂ  ವಿಜಯ್ ಸೇತುಪತಿ ಬೆಸ್ಟ್ ನಟ ಅನ್ನೋದನ್ನ ಪ್ರೂವ್ ಮಾಡಿದ್ದಾರೆ.
  Published by:renukadariyannavar
  First published: