Pramod Shetty: ಪ್ರಮೋದ್ ಶೆಟ್ಟಿ ಬರ್ತ್​ಡೇಗೆ ಕಾಶೀಯಾತ್ರೆ ಟೀಸರ್! ಸಖತ್ ಫನ್ನಿ

Pramod shetty: ಸ್ಯಾಂಡಲ್​​ವುಡ್ ನಟ ಪ್ರಮೋದ್ ಶೆಟ್ಟಿ ಇಂದು ಹುಟ್ಟಿದ ಹಬ್ಬ ಆಚರಿಸುತ್ತಿದ್ದು ನಟನ ಬರ್ತ್​ಡೇ ಪ್ರಯುಕ್ತ ಸಖತ್ ಇಂಟ್ರೆಸ್ಟಿಂಗ್ ಆಗಿರುವ ಒಂದು ಟೀಸರ್ ಬಿಡುಗಡೆ ಮಾಡಲಾಗಿದೆ.

Pramod shetty: ಸ್ಯಾಂಡಲ್​​ವುಡ್ ನಟ ಪ್ರಮೋದ್ ಶೆಟ್ಟಿ ಇಂದು ಹುಟ್ಟಿದ ಹಬ್ಬ ಆಚರಿಸುತ್ತಿದ್ದು ನಟನ ಬರ್ತ್​ಡೇ ಪ್ರಯುಕ್ತ ಸಖತ್ ಇಂಟ್ರೆಸ್ಟಿಂಗ್ ಆಗಿರುವ ಒಂದು ಟೀಸರ್ ಬಿಡುಗಡೆ ಮಾಡಲಾಗಿದೆ.

Pramod shetty: ಸ್ಯಾಂಡಲ್​​ವುಡ್ ನಟ ಪ್ರಮೋದ್ ಶೆಟ್ಟಿ ಇಂದು ಹುಟ್ಟಿದ ಹಬ್ಬ ಆಚರಿಸುತ್ತಿದ್ದು ನಟನ ಬರ್ತ್​ಡೇ ಪ್ರಯುಕ್ತ ಸಖತ್ ಇಂಟ್ರೆಸ್ಟಿಂಗ್ ಆಗಿರುವ ಒಂದು ಟೀಸರ್ ಬಿಡುಗಡೆ ಮಾಡಲಾಗಿದೆ.

  • Share this:
ಸ್ಯಾಂಡಲ್​ವುಡ್​ನ ಪ್ರತಿಭಾನ್ವಿತ ನಟ ಪ್ರಮೋದ್ ಶೆಟ್ಟಿಗೆ (Pramod Shetty) ಅವರಿಗೆ ಒಂದು ವರ್ಷ ವಯಸ್ಸು ಹೆಚ್ಚಾಗಿದೆ. ಕನ್ನಡ ಸಿನಿಮಾಗಳ ಮೂಲಕ ಸಿನಿ ರಸಿಕರನ್ನು ರಂಜಿಸುವ ಪ್ರಮೋದ್ ಶೆಟ್ಟಿ ಹುಟ್ಟಿದ ಹಬ್ಬವನ್ನು (Birthday) ಆಚರಿಸಿದ್ದು, ಆ ಪ್ರಯುಕ್ತ ಯೂಟ್ಯೂಬ್​ನಲ್ಲಿ (Youtube) ಟೀಸರ್ ಬಿಡುಗಡೆ ಮಾಡಲಾಗಿದೆ. ಈ ಟೀಸರ್ ಫನ್ನಿಯಾಗಿದ್ದು ಡಿಫರೆಂಟಾಗಿದೆ. ಗುನ್ನಿ ಬ್ಯಾಗ್ ಸ್ಟುಡಿಯೋಸ್ ಯೂಟ್ಯೂಬ್ ಚಾನೆಲ್ ಬರ್ತ್​ಡೇ ಟೀಸರ್ ಬಿಡುಗಡೆ ಮಾಡಿದ್ದು, ವಿಡಿಯೋ 937 ವ್ಯೂಸ್ ಗಳಿಸಿದೆ. ವಿಡಿಯೋಗೆ (Video) 99 ಲೈಕ್ಸ್ ಬಂದಿದ್ದು ಸೂಪರ್ ಫನ್ನಿಯಾಗಿರುವ ಟೀಸರ್​ ನೋಡಿ ಜನರು ಮೆಚ್ಚಿಕೊಂಡಿದ್ದಾರೆ.

ಪ್ರಮೋದ್ ಶೆಟ್ಟಿ 2014ರಲ್ಲಿ ರಿಲೀಸ್ ಆದ ಉಳಿದವರು ಕಂಡಂತೆ, 2016ರಲ್ಲಿ ಕಿರಿಕ್ ಪಾರ್ಟಿ, ಯೂ ಟರ್ನ್, ರಿಕ್ಕಿ, 2018ರಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಕೊಡುಗೆ ರಾಮಣ್ಣ ರೈ, ಬೆಲ್ ಬಾಟಮ್, ಹಂಬಲ್ ಪೊಲಿಟಿಷಿಯನ್ ನಾಗರಾಜ್ ಸಿನಿಮಾದಲ್ಲಿ ನಟಿಸಿದ್ದಾರೆ.

2019ರಲ್ಲಿ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ, ನನ್ನ ಪ್ರಕಾರ, ಕಥಾ ಸಂಗಮ, ಅವನೇ ಶ್ರೀಮನ್ನಾರಾಯಣ ಸಿನಿಮಾಗಳಲ್ಲಿ ನಟಿಸಿದ್ದಾರೆ. 2020ರಲ್ಲಿ ಆಕ್ಟ್-1978, ಒಂದು ಶಿಕಾರಿಯ ಕಥೆ, 2021 ಹೀರೋ, ಕೃಷ್ಣ ಟಾಕೀಸ್, ಕಬ್ಜಾ, ಚೇಸ್ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಪ್ರಮೋದ್ ಶೆಟ್ಟಿಗೆ ಒಲಿದ ಪ್ರಶಸ್ತಿಗಳು

ನಟ ಪ್ರಮೋದ್ ಅವರು ಸೌತ್ ಇಂಡಿಯನ್ ಇಂಟರ್‌ನ್ಯಾಶನಲ್ ಮೂವೀ ಅವಾರ್ಡ್ಸ್ 2017 ಪಡೆದುಕೊಂಡಿದ್ದು ಕಿರಿಕ್ ಪಾರ್ಟಿಗಾಗಿ ಅತ್ಯುತ್ತಮ ಹಾಸ್ಯನಟನಾಗಿ ನಾಮನಿರ್ದೇಶನಗೊಂಡಿದ್ದರು.ಸೌತ್ ಇಂಡಿಯನ್ ಇಂಟರ್‌ನ್ಯಾಶನಲ್ ಮೂವೀ ಅವಾರ್ಡ್ಸ್ 2019 ಮುಂದಿನ ನಿಲ್ದಾಣ ಚಿತ್ರಕ್ಕಾಗಿ ಅತ್ಯುತ್ತಮ ಪೋಷಕ ನಟನಾಗಿ ನಾಮನಿರ್ದೇಶನಗೊಂಡಿದ್ದರು. ಸೌತ್ ಇಂಡಿಯನ್ ಇಂಟರ್‌ನ್ಯಾಶನಲ್ ಮೂವೀ ಅವಾರ್ಡ್ಸ್ 2021 - ಚೊಚ್ಚಲ ಪಾತ್ರದಲ್ಲಿ ಒಂದು ಶಿಕಾರಿಯ ಕಥೆಯಲ್ಲಿ ಅತ್ಯುತ್ತಮ ನಟನಾಗಿ ನಾಮನಿರ್ದೇಶನಗೊಂಡಿದ್ದರು.

‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು‘, ‘ಕಿರಿಕ್​ ಪಾರ್ಟಿ‘, ‘ಅವನೇ ಶ್ರೀಮನ್ನಾರಾಯಣ‘ ಸಿನಿಮಾದಲ್ಲಿ ಪೋಷಕ ಪಾತ್ರದಲ್ಲಿ ಮಿಂಚಿದ್ದ ಪ್ರಮೋದ್​ ಶೆಟ್ಟಿ ನಂತರ ನಾಯಕನಾಗಿ ಬಡ್ತಿ ಪಡೆದುಕೊಂಡಿದ್ದರು.

ಇದನ್ನೂ ಓದಿ: Rishabh Shetty New Movie: ಈಗಾಗ್ಲೇ ಮದ್ವೆಯಾಗಿರೋ ರಿಷಭ್ ಶೆಟ್ಟಿ 'ಬ್ಯಾಚುರಲ್ ಪಾರ್ಟಿ' ಮಾಡ್ತಿದ್ದಾರೆ!

ರಂಗಭೂಮಿ ಕಲಾವಿದರಾದ ಪ್ರಮೋದ್​ ಶೆಟ್ಟಿ ‘ಒಂದು ಶಿಕಾರಿಯ ಕಥೆ‘ ಸಿನಿಮಾದಲ್ಲಿ ಹೀರೋ ಆಗಿ ಕಾಣಿಸಿಕೊಂಡಿದ್ದರು. ‘ಒಂದು ಶಿಕಾರಿಯ ಕಥೆ‘ ಸಿನಿಮಾವುವು ಸಸ್ಪೆನ್ಸ್​ ಥ್ರಿಲ್ಲರ್​ ಸ್ಟೋರಿಯಾಗಿದ್ದು, 50ರ ಆಸುಪಾಸಿನ ಕಾದಂಬರಿಕಾರನ ಪಾತ್ರದಲ್ಲಿ ಪ್ರಮೋದ್​ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಪತ್ನಿಯನ್ನು ತೊರೆದು ಏಕಾಂಗಿಯಾಗಿ ವಾಸಿಸುವ ಕರಾವಳಿ ಭಾಗದ ವಿರಕ್ತ ಕಾದಂಬರಿಕಾರನ ಬದುಕು ಈ ಸಿನಿಮಾದಲ್ಲಿದೆ. ಅಲ್ಲದೆ, ಓರ್ವ ಸಾಹಿತಿ ಕೋವಿಯನ್ನು ಹಿಡಿಯಬೇಕಾಗಿ ಬರುವ ಸಂದಿಗ್ಧತೆಯನ್ನು ಈ ಸಿನಿಮಾದಲ್ಲಿ ಹೆಣೆಯಲಾಗಿದೆ.

ಏನಿದೆ ಕಥೆ

‘ಒಂದು ಶಿಕಾರಿಯ ಕಥೆ‘ 80ರ ದಶಕದ ಹಿನ್ನಲೆಯನ್ನು ಹೊಂದಿರುವ ಕಥೆಯಾಗಿದೆ. ಕುಂದಾಪುರಲ್ಲಿ ಎರಡು ದಿನಗಳ ಕಾಲ ಸೆಟ್​ ಹಾಕಿ ಯಕ್ಷಗಾನ ಚಿತ್ರೀಕರಿಸಲಾಗಿತ್ತು.

ಇದನ್ನೂ ಓದಿ: Gattimela serial: ಕಳ್ಳ ಡಾಕ್ಟರ್ ತೇಜಸ್ ಬಗ್ಗೆ ಸತ್ಯ ಪತ್ತೆ ಹಚ್ಚಿದ ವಿಕ್ರಾಂತ್, ಅದಿತಿ ನಿಶ್ಚಿತಾರ್ಥ ನಿಲ್ಲಿಸುತ್ತಾನಾ?

‘ಒಂದು ಶಿಕಾರಿಯ ಕಥೆ‘ ಸಿನಿಮಾಗೆ ಸಚಿನ್​ ಶೆಟ್ಟಿ ಆ್ಯಕ್ಷನ್​ ಕಟ್​ ಹೇಳಿದ್ದು, ರಾಜೀವ್​ ಶೆಟ್ಟಿ ಹಾಗೂ ಸಚಿನ್​ ಶೆಟ್ಟಿ ಬಂಡವಾಳ ಹೂಡಿದ್ದಾರೆ. ಸಿರಿ ಪ್ರಹ್ಲಾದ್​, ಪ್ರಸಾದ್​ ಚೆರ್ಕಾಡಿ, ಎಂ.ಕೆ ಮಠ, ಅಭಿಮನ್ಯು ಪ್ರಜ್ವಲ್​, ಶ್ರೀಪ್ರಿಯ ನಟಿಸಿದ್ದಾರೆ.
Published by:Divya D
First published: