ಹುಟ್ಟುಹಬ್ಬದ ಸಂಭ್ರಮದಲ್ಲಿ ಭರತ್ ಸಾಗರ್​: ಕಾಲವೇ ಮೋಸಗಾರ ತಂಡದಿಂದ ಪೋಸ್ಟರ್ ಉಡುಗೊರೆ!

ಇನ್ನು, ಕಾಲವೇ ಮೋಸಗಾರ ಚಿತ್ರಕ್ಕೆ ಕೆ.ಲೋಕೇಶ್ ಸಂಗೀತವಿದ್ದು, ಹುಡುಗಿ ಬೇಕಾ ಎಂದು ಸಾಗುವ ಪೆಪ್ಪಿ ಎಣ್ಣೆ ಸಾಂಗ್ ಪಡ್ಡೆ ಹೈಕಳನ್ನು ಕುಣಿಯುವಂತೆ ಮಾಡುವಷ್ಟು ವೈರಲ್ ಆಗಿದೆ.. ಸಂಚಿತ್ ಹೆಗ್ಡೆ, ಅನುರಾಧ ಭಟ್, ಇಂಚರಾ ರಾವ್ ಹಾಡಿರುವ ಮೂರು ಹಾಡುಗಳು ಮುಂದಿನ ದಿನಗಳಲ್ಲಿ ಒಂದಾದ ಮೇಲೊಂದರಂತೆ ರಿಲೀಸ್ ಆಗಲು ರೆಡಿಯಿವೆ. ಥ್ರಿಲ್ಲರ್ ಮಂಜು ಹಾಗೂ ಡಿಫರೆಂಟ್ ಡ್ಯಾನಿ ಸಂಯೋಜನೆಯಲ್ಲಿ ಮೂಡಿ ಬಂದಿರುವ ಆ್ಯಕ್ಷನ್ ಸೀನ್ಸ್ ಕಾಲವೇ ಮೋಸಗಾರ ಚಿತ್ರದ ಪ್ರಮುಖ ಆಕರ್ಷಣೆಯಾಗಿರಲಿವೆ ಎನ್ನುತ್ತಾರೆ ಭರತ್ ಸಾಗರ್.

news18-kannada
Updated:September 26, 2020, 1:42 PM IST
ಹುಟ್ಟುಹಬ್ಬದ ಸಂಭ್ರಮದಲ್ಲಿ ಭರತ್ ಸಾಗರ್​: ಕಾಲವೇ ಮೋಸಗಾರ ತಂಡದಿಂದ ಪೋಸ್ಟರ್ ಉಡುಗೊರೆ!
ನಟ ಭರತ್​ ಸಾಗರ್
  • Share this:
ಸ್ಯಾಂಡಲ್​ವುಡ್​ ಯಂಗ್ ಆ್ಯಂಡ್​ ಎನರ್ಜಿಟಿಕ್ ನಟ ಭರತ್ ಸಾಗರ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಖತರ್ನಾಕ್, ಆಟಕ್ಕುಂಟು ಲೆಕ್ಕಕ್ಕಿಲ್ಲ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಅವರು, ಸದ್ಯ ಕಾಲವೇ ಮೋಸಗಾರ ಚಿತ್ರದ ರಿಲೀಸ್​ಗಾಗಿ ಎದುರು ನೋಡುತ್ತಿದ್ದಾರೆ. ಕಾಲವೇ ಮೋಸಗಾರ ನಾಲ್ಕು ಭಾಷೆಗಳಲ್ಲಿ ರಿಲೀಸ್​ ಆಗಲಿರುವ ಸಿನಿಮಾ. ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿಯಲ್ಲಿ ತೆರೆಗೆ ಅಪ್ಪಳಿಸಲು ರೆಡಿಯಾಗಿದೆ. ಸಂಜಯ್ ವದತ್  ಆ್ಯಕ್ಷನ್ ಕಟ್ ಹೇಳಿರುವ ಕಾಲವೇ ಮೋಸಗಾರ ಚಿತ್ರವನ್ನು ರಜತ್ ದುರ್ಗೋಜಿ ನಿರ್ಮಿಸಿದ್ದಾರೆ. ನಾಯಕ ಭರತ್ ಸಾಗರ್ ಹುಟ್ಟುಹಬ್ಬದ ಅಂಗವಾಗಿ ಚಿತ್ರತಂಡ ಹೊಚ್ಚ ಹೊಸ ಪೋಸ್ಟರ್ ರಿಲೀಸ್ ಮಾಡಿದೆ. ಭರತ್ ಸಾಗರ್ ಈ ಚಿತ್ರದಲ್ಲಿ ರೊಮ್ಯಾಂಟಿಕ್  ಆ್ಯಕ್ಷನ್ ಹೀರೋ ಆಗಿ ರಗಡ್ ಲುಕ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದು ಈಗಾಗಲೇ ಈ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಕೊಂಚ ಮಟ್ಟಿಗೆ ಸಿನಿಪ್ರಿಯರನ್ನು ಸೆಳೆಯುವಲ್ಲಿ ಸಕ್ಸಸ್ ಕೂಡ ಆಗಿದೆ.

ಇನ್ನು, ಕಾಲವೇ ಮೋಸಗಾರ ಚಿತ್ರಕ್ಕೆ ಕೆ.ಲೋಕೇಶ್ ಸಂಗೀತವಿದ್ದು, ಹುಡುಗಿ ಬೇಕಾ ಎಂದು ಸಾಗುವ ಪೆಪ್ಪಿ ಎಣ್ಣೆ ಸಾಂಗ್ ಪಡ್ಡೆ ಹೈಕಳನ್ನು ಕುಣಿಯುವಂತೆ ಮಾಡುವಷ್ಟು ವೈರಲ್ ಆಗಿದೆ.. ಸಂಚಿತ್ ಹೆಗ್ಡೆ, ಅನುರಾಧ ಭಟ್, ಇಂಚರಾ ರಾವ್ ಹಾಡಿರುವ ಮೂರು ಹಾಡುಗಳು ಮುಂದಿನ ದಿನಗಳಲ್ಲಿ ಒಂದಾದ ಮೇಲೊಂದರಂತೆ ರಿಲೀಸ್ ಆಗಲು ರೆಡಿಯಿವೆ. ಥ್ರಿಲ್ಲರ್ ಮಂಜು ಹಾಗೂ ಡಿಫರೆಂಟ್ ಡ್ಯಾನಿ ಸಂಯೋಜನೆಯಲ್ಲಿ ಮೂಡಿ ಬಂದಿರುವ ಆ್ಯಕ್ಷನ್ ಸೀನ್ಸ್ ಕಾಲವೇ ಮೋಸಗಾರ ಚಿತ್ರದ ಪ್ರಮುಖ ಆಕರ್ಷಣೆಯಾಗಿರಲಿವೆ ಎನ್ನುತ್ತಾರೆ ಭರತ್ ಸಾಗರ್.

Kaalave Mosagara poster, Kaalave Mosagara Movie, Bharath sagar, Happpy Birthday Bharath Sagar, Kaalave Mosagara team released new poster on actor Bharath sagar birthday
ಕಾಲವೇ ಮೋಸಗಾರ ಸಿನಿಮಾದ ಪೋಸ್ಟರ್​

ಲಾಕ್​ಡೌನ್​ ಸಂಪೂರ್ಣವಾಗಿ ಅನ್​ಲಾಕ್​ ಆಗಿ ಚಿತ್ರಮಂದಿರಗಳು ಹಾಗೂ ಮಲ್ಟಿಪ್ಲೆಕ್ಸ್​ಗಳು ಬಾಗಿಲು ತೆರೆದು, ಪ್ರೇಕ್ಷಕರು ಮತ್ತೆ ಚಿತ್ರಮಂದಿರಗಳಿಗೆ ಬರಲು ಆರಂಭಿಸುತ್ತಿದ್ದಂತೆಯೇ ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ. ಹಾಗೇ ನಾಲ್ಕು ಭಾಷೆಗಳಲ್ಲಿ ತೆರೆಗೆ ಬರುತ್ತಿರುವ ಕಾರಣ, ಬೇರೆ ಬೇರೆ ರಾಜ್ಯಗಳಲ್ಲೂ ಪ್ರಚಾರಕ್ಕೆ ರೆಡಿಯಾಗಿದೆ.

ಇದನ್ನೂ ಓದಿ: ಹೀರೋ ಆಗಲು ದೇಹದ ತೂಕ ಇಳಿಸಿಕೊಳ್ಳಲಿಲ್ಲ ಎಂದಿದ್ದ ಬಾಲಸುಬ್ರಹ್ಮಣ್ಯಂ

ಕಾಲವೇ ಮೋಸಗಾರ ರಿಲೀಸ್​ ಸಿದ್ಧವಾಗುತ್ತಿದ್ದಂತೆಯೇ ಅಂದರೆ, ಲಾಕ್​ಡೌನ್​ ಸಮಯದಲ್ಲೇ ಭರತ್ ಸಾಗರ್ ಮೂರ್ನಾಲ್ಕು ಸಿನಿಮಾಗಳಿಗೆ ನಾಯಕನಾಗಿ ಆಯ್ಕೆಯಾಗಿದ್ದಾರೆ. ಸದ್ಯಕ್ಕಿನ್ನೂ ಆ ಚಿತ್ರಗಳು ಪ್ರೀ-ಪ್ರೊಡಕ್ಷನ್ ಹಂತದಲ್ಲಿದ್ದು, ಕೆಲವೇ ದಿನಗಳಲ್ಲಿ ಶೂಟಿಂಗ್ ಶುರುವಾಗಲಿದೆ ಎಂದು ಖುಷಿಯಿಂದ ಹೇಳಿಕೊಳ್ಳುತ್ತಾರೆ ಭರತ್ ಸಾಗರ್.

ಇದನ್ನೂ ಓದಿ: 25 ವರ್ಷಗಳ ಹಿಂದೆ ಧ್ವನಿ ಪೆಟ್ಟಿಗೆಯ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದರು ಬಾಲಸುಬ್ರಹ್ಮಣ್ಯಂಇನ್ನು ಪ್ರತಿ ವರ್ಷ ಅಭಿಮಾನಿಗಳ ಜತೆ, ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ಬರ್ತ್ ಡೇ ಬಾಯ್ ಭರತ್ ಸಾಗರ್, ಈ ವರ್ಷ ಸರಳ ಆಚರಣೆಗೆ ಒತ್ತು ನೀಡಿದ್ದಾರೆ. ಹೀಗಾಗಿಯೇ ಮನೆಯಲ್ಲೇ ಕುಟುಂಬದವರ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡು, ಪ್ರತಿವರ್ಷದಂತೆ ಅನಾಥಾಶ್ರಮಗಳಿಗೆ ಭೇಟಿ, ನೀಡಿ ಮಕ್ಕಳೊಂದಿಗೆ ಕೆಲ ಕಾಲ ಕಳೆಯುವ ಐಡಿಯಾ ಮಾಡಿಕೊಂಡಿದ್ದಾರೆ.
Published by: Anitha E
First published: September 26, 2020, 1:42 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading