HOME » NEWS » Entertainment » KAALAVE MOSAGARA FILM HERO VISIT KUKKE SUBRAMANYA TEMPLE FOR PREVENT CORONA VIRUS HTV LG

ಕುಕ್ಕೆ ಸನ್ನಿಧಾನದಲ್ಲಿ ಕಾಲವೇ ಮೋಸಗಾರ ನಾಯಕ; ಕೊರೋನಾ ಹಾವಳಿ ತಪ್ಪಿಸಲು ದೇವರ ಮೊರೆ...!

ಕನ್ನಡ ಚಿತ್ರರಂಗ ಮಾತ್ರವಲ್ಲ, ಇಡೀ ವಿಶ್ವವನ್ನು ಕೊರೋನಾ ಕಂಟಕದಿಂದ ಪಾರು ಮಾಡುವಂತೆ ಸ್ಯಾಂಡಲ್‍ವುಡ್ ನಟ, ಕಾಲವೇ ಮೋಸಗಾರ ಚಿತ್ರದ ನಾಯಕ ಭರತ್ ಸಾಗರ್ ಕುಕ್ಕೆ ಸುಬ್ರಹ್ಮಣ್ಯ ದೇವರ ಮೊರೆ ಹೋಗಿದ್ದಾರೆ.

news18-kannada
Updated:March 30, 2021, 3:34 PM IST
ಕುಕ್ಕೆ ಸನ್ನಿಧಾನದಲ್ಲಿ ಕಾಲವೇ ಮೋಸಗಾರ ನಾಯಕ; ಕೊರೋನಾ ಹಾವಳಿ ತಪ್ಪಿಸಲು ದೇವರ ಮೊರೆ...!
ಕಾಲವೇ ಮೋಸಗಾರ ನಾಯಕ
  • Share this:
ಕೊರೋನಾ ಸೋಂಕಿನ ಹಾವಳಿಯ ಮೊದಲ ಅಲೆಯ ಹೊಡೆತದಿಂದಲೇ ಇನ್ನೂ ಚೇತರಿಸಿಕೊಳ್ಳಲು ಸಾಧ್ಯವಾಗಿಲ್ಲ. ಎಲ್ಲ ಕ್ಷೇತ್ರಗಳಿಗೂ ಆರ್ಥಿಕ ಹೊಡೆತ ಬಿದ್ದು ಇನ್ನೂ ಹೆಣಗಾಡುತ್ತಿವೆ. ಅದರಲ್ಲಂತೂ ಕೊರೋನಾ ಲಾಕ್‍ಡೌನ್ ಅಧಿಕೃತವಾಗಿ ಘೋಷಣೆ ಆಗುವ ಮುನ್ನವೇ ಹಾಗೂ ಲಾಕ್‍ಡೌನ್ ಅನ್‍ಲಾಕ್ ಆಗಿ ಎರಡು, ಮೂರು ತಿಂಗಳು ಕಳೆದರೂ ಚಿತ್ರರಂಗಗಳು ಮಾತ್ರ ಸಮಸ್ಯೆಯಲ್ಲಿಯೇ ಇದ್ದವು. ಥಿಯೇಟರ್​​ಗಳಲ್ಲಿ ಶೇಕಡಾ 50ರಷ್ಟು ನಿರ್ಬಂಧ ಹೇರಿದ್ದು, ಫೆಬ್ರವರಿ ತಿಂಗಳಿನಿಂದಷ್ಟೇ ಶೇಕಡಾ ನೂರರಷ್ಟು ಹೌಸ್‍ಫುಲ್ ಆಗಲು ಅನುಮತಿ ನೀಡಲಾಗಿದೆ.

ಆದರೆ ಥಿಯೇಟರ್, ಮಲ್ಟಿಪ್ಲೆಕ್ಸ್‍ಗಳು ಮತ್ತೆ ಶೇಕಡಾ ನೂರರಷ್ಟು ಓಪನ್ ಆಗಿ ಸಿನಿಮಾ ಕ್ಷೇತ್ರ ಮತ್ತೆ ಟ್ರ್ಯಾಕ್‍ಗೆ ಮರಳಿತು ಎನ್ನುತ್ತಿರುವಾಗಲೇ ಮತ್ತೆ ಎರಡನೇ ಅಲೆಯ ಮುನ್ಸೂಚನೆ ಆಘಾತ ನೀಡಿದೆ. ಕಳೆದ ಎರಡು ವಾರಗಳಿಂದ ಸತತವಾಗಿ ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಏರುತ್ತಿದ್ದು, ಪಕ್ಕದ ಮಹಾರಾಷ್ಟ್ರ ಹಾಗೂ ಕೇರಳ ರಾಜ್ಯಗಳಲ್ಲೂ ಸಾವಿರಾರು ಕೇಸ್‍ಗಳು ರಿಪೋರ್ಟ್ ಆಗುತ್ತಿವೆ. ಹೀಗಾಗಿ ಎರಡನೇ ಅಲೆ ದೊಡ್ಡ ಮಟ್ಟದಲ್ಲಿ ಅಪ್ಪಳಿಸಿ, ಸಮಸ್ಯೆ ಉಂಟು ಮಾಡುವ ಮೊದಲೇ ರಾಜ್ಯ ಸರ್ಕಾರ ಕೂಡ ಕಠಿಣ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.

ಈ ಹಿನ್ನೆಲೆಯಲ್ಲಿ ಮತ್ತೆ ಚಿತ್ರರಂಗಕ್ಕೆ ಕಠಿಣ ರೂಲ್ಸ್ ಎದುರಾಗುವ ಆತಂಕವಿದೆ. ಈಗಿನ್ನೂ ಪ್ರೇಕ್ಷಕರು ಥಿಯೇಟರ್​​ಗೆ ಬರಲು ಪ್ರಾರಂಭಿಸಿದ್ದು, ಈಗ ಮತ್ತೆ ಥಿಯೇಟರ್​​ಗಳಲ್ಲಿ ಶೇಕಡಾ 50ರಷ್ಟು ಅನುಮತಿ ನೀಡಿದರೆ ಎಂಬ ಭಯ ಕಾಡಲಾರಂಭಿಸಿದೆ. ಈಗಾಗಲೇ ಹಲವಾರು ಸಿನಿಮಾಗಳು ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದು, ಪ್ರಚಾರದಲ್ಲಿ ತೊಡಗಿವೆ. ಅವುಗಳಲ್ಲಿ ಕನ್ನಡ, ತೆಲುಗು, ತಮಿಳು ಸೇರಿದಂತೆ ನಾಲ್ಕು ಭಾಷೆಗಳಲ್ಲಿ ರೆಡಿಯಾಗಿರುವ ಕಾಲವೇ ಮೋಸಗಾರ ಚಿತ್ರ ಕೂಡ ಒಂದು.

ಎಂಜಿನಿಯರಿಂಗ್‌ ಸಂಶೋಧನೆ-ಅಭಿವೃದ್ಧಿ ನೀತಿ ಅಮೆರಿಕ ಕಂಪನಿಗಳ ಹೂಡಿಕೆಗೆ ಪೂರಕ; ಡಿಸಿಎಂ ಅಶ್ವತ್ಥ ನಾರಾಯಣ

ಕನ್ನಡ ಚಿತ್ರರಂಗ ಮಾತ್ರವಲ್ಲ, ಇಡೀ ವಿಶ್ವವನ್ನು ಕೊರೋನಾ ಕಂಟಕದಿಂದ ಪಾರು ಮಾಡುವಂತೆ ಸ್ಯಾಂಡಲ್‍ವುಡ್ ನಟ, ಕಾಲವೇ ಮೋಸಗಾರ ಚಿತ್ರದ ನಾಯಕ ಭರತ್ ಸಾಗರ್ ಕುಕ್ಕೆ ಸುಬ್ರಹ್ಮಣ್ಯ ದೇವರ ಮೊರೆ ಹೋಗಿದ್ದಾರೆ. ಈ ಕುರಿತು ನ್ಯೂಸ್ 18 ಜೊತೆ ಮಾತನಾಡಿದ ಅವರು, ಕೊರೋನಾ ಹಾವಳಿಯಿಂದ ಇಡೀ ವಿಶ್ವವೇ ತಲ್ಲಣಗೊಂಡಿದೆ. ಅದರಲ್ಲಂತೂ ಚಿತ್ರರಂಗಗಳು ಅತಿ ಹೆಚ್ಚು ಸಮಸ್ಯೆಗೆ ಒಳಗಾಗಿವೆ. ಇದರ ನಡುವೆ ಈಗ ಎರಡನೇ ಅಲೆ ಅಂತೆಲ್ಲ ಹೇಳುತ್ತಿದ್ದಾರೆ. ಮತ್ತೆ ಕೊರೋನಾ ಪ್ರಕರಣಗಳು ಹೆಚ್ಚಾಗಿ ಮತ್ತೆ ಲಾಕ್‍ಡೌನ್ ಅಂತೆಲ್ಲಾ ಆದರೆ ಎಲ್ಲರೂ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗದಿರಲಿ ಮತ್ತೆ ಉತ್ತಮ ದಿನಗಳು ಮರಳಲಿ, ಎಲ್ಲೆಡೆ ನೆಮ್ಮದಿ ನೆಲೆಸಲಿ ಅಂತ ದೇವರ ಬಳಿ ಕೇಳಿಕೊಂಡಿದ್ದೇನೆ ಎನ್ನುತ್ತಾರೆ. ರಾಜೇಶ್ ಗುರೂಜಿಯವರ ನೇತೃತ್ವದಲ್ಲಿ ಭರತ್ ಸಾಗರ್ ಹಾಗೂ ಅವರ ಗೆಳೆಯರು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಶೇಷ ಪೂಜೆ, ಹೋಮಗಳನ್ನು ಮಾಡಿಸಿದ್ದಾರೆ.

ಇನ್ನು ಕಾಲವೇ ಮೋಸಗಾರ ಚಿತ್ರದ ವಿಷಯಕ್ಕೆ ಬಂದರೆ, ಸಂಜಯ್ ವದಾತ್ ನಿರ್ದೇಶಿಸಿರುವ ಈ ಚಿತ್ರ ರೊಮ್ಯಾಂಟಿಕ್ ಆಕ್ಷನ್ ಎಂಟರ್‍ಟೈನರ್ ಕಥೆ ಹೊಂದಿದೆ. ಈಗಾಗಲೇ ಟಗರು ಟೈಟಲ್ ಟ್ರ್ಯಾಕ್ ಹಾಡಿದ್ದ ಆಂಟನಿ ದಾಸ್ ಹಾಡಿರುವ ಎಣ್ಣೆ ಬೇಕಾ, ಹುಡುಗಿ ಬೇಕಾ ಹಾಡು ಎಲ್ಲೆಡೆ ಸಾಕಷ್ಟು ವೈರಲ್ ಆಗಿದೆ. ಹಾಗೇ ಕೆಲ ದಿನಗಳ ಹಿಂದಷ್ಟೇ ರಿಲೀಸ್ ಆದ ರೊಮ್ಯಾಂಟಿಕ್ ಸಾಂಗ್ ಏನಿದು ಜಗವೇ ಕೂಡ ಸಖತ್ ಸದ್ದು ಮಾಡುತ್ತಿದೆ.

https://youtu.be/BlS8FKHQTKoಎಲ್ಲವೂ ಅಂದುಕೊಂಡಂತಾಗಿದ್ದರೆ ಕಾಲವೇ ಮೋಸಗಾರ ನಾಲ್ಕು ಭಾಷೆಗಳಲ್ಲಿ ಕಳೆದ ವರ್ಷವೇ ರಿಲೀಸ್ ಆಗಬೇಕಿತ್ತು. ಆದರೆ ಕೊರೋನಾ ಲಾಕ್‍ಡೌನ್‍ನಿಂದಾಗಿ ತಡವಾಗಿದ್ದು ಇದೇ ಏಪ್ರಿಲ್ ತಿಂಗಳಲ್ಲಿ ತೆರೆಗೆ ತರಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿತ್ತು. ಆದರೆ ಈಗ ಮತ್ತೆ ಎರಡನೇ ಅಲೆ, ಭಾಗಶಃ ಲಾಕ್‍ಡೌನ್ ಅಂತೆಲ್ಲಾ ಮಾತುಗಳು ಕೇಳಿಬರುತ್ತಿರುವುದು ಚಿತ್ರತಂಡವನ್ನು ಮತ್ತೆ ಆತಂಕಕ್ಕೀಡು ಮಾಡಿದೆ. ಕಾಲವೇ ಮೋಸಗಾರ ಮಾತ್ರವಲ್ಲ ಸದ್ಯ ರಿಲೀಸ್‍ಗೆ ರೆಡಿಯಿರುವ ಎಲ್ಲ ಸಿನಿಮಾಗಳ ಪರಿಸ್ಥಿತಿಯೂ ಇದೇ ಆಗಿದೆ.
Published by: Latha CG
First published: March 30, 2021, 3:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories