Rocky Aur Rani Ki Prem Kahani ಟೀಸರ್‌ನಲ್ಲಿ ಕಾಣಿಸಿಕೊಂಡ ‘ಕಭಿ ಖುಷಿ ಕಭಿ ಘಮ್’ ಚಿತ್ರದ ಪೂಜೆಯ ತಟ್ಟೆ..!

K3G Thaali Returns In Rocky Aur Rani Ki Prem: ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಚಿತ್ರದಲ್ಲಿ ನಟ ರಣವೀರ್ ಸಿಂಗ್ ಮತ್ತು ನಟಿ ಆಲಿಯಾ ಭಟ್ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದು, ಹಿರಿಯ ನಟರಾದ ಜಯಾ ಬಚ್ಚನ್, ಧರ್ಮೇಂದ್ರ ಮತ್ತು ಶಬಾನಾ ಅಜ್ಮಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನೀವು ಜಯಾ ಬಚ್ಚನ್(Jaya Bachchan) ಅಭಿನಯದ ‘ಕಭಿ ಖುಷಿ ಕಭಿ ಘಮ್’ (Kabhi Kushi KAbhi Gum)ಚಿತ್ರ ನೋಡಿದ್ದರೆ ಅದರಲ್ಲಿ ಒಂದು ಹಾಡಿನಲ್ಲಿ ಜಯಾ ಅವರು ದೇವರಿಗೆ ಪೂಜೆ ಮಾಡಲು ಒಂದು ದೊಡ್ಡ ಥಾಲಿ (ತಟ್ಟೆ) ಯನ್ನು ತಮ್ಮ 2 ಕೈಗಳಿಂದ ಹಿಡಿದುಕೊಂಡು ಬರುವುದನ್ನು ನೋಡಿರುತ್ತೀರಿ. ಇದರ ಬಗ್ಗೆ ಈಗೇಕೆ ಮಾತು ಅಂತೀರಾ..? ಬನ್ನಿ ಹಾಗಾದರೆ ಈ ಪೂಜೆಯ ಥಾಲಿಯು ಮತ್ತೊಂದು ಚಿತ್ರದ ಟೀಸರ್‌ನಲ್ಲಿ ಥಳಕು ಹಾಕಿದೆ.ಜಯಾ ಬಚ್ಚನ್ ಅವರ ಪೂಜೆಯ ಥಾಲಿ ಮತ್ತೊಮ್ಮೆ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’(Rocky Aur Rani Ki Prem Kahani) ಯಲ್ಲಿ ಮರಳಲಿದೆ ಎಂದು ಈ ಟೀಸರ್ ನೋಡಿದರೆ ನಿಮಗೆ ಅರ್ಥವಾಗುತ್ತದೆ. ಸೋಮವಾರ, ಕರಣ್ ಜೋಹರ್(Karan Johar) ಸಾಮಾಜಿಕ ಮಾಧ್ಯಮದಲ್ಲಿ ಮುಂಬರುವ ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದು, ಅದರಲ್ಲಿ ಸಹ ಜಯಾ ಪೂಜೆಯ ಥಾಲಿಯನ್ನು ಹಿಡಿದಿದ್ದು ಪೂಜೆ ಮಾಡುತ್ತಿರುವುದನ್ನು ನೀವು ನೋಡಬಹುದು.

‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಚಿತ್ರದಲ್ಲಿ ನಟ ರಣವೀರ್ ಸಿಂಗ್ ಮತ್ತು ನಟಿ ಆಲಿಯಾ ಭಟ್ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದು, ಹಿರಿಯ ನಟರಾದ ಜಯಾ ಬಚ್ಚನ್, ಧರ್ಮೇಂದ್ರ ಮತ್ತು ಶಬಾನಾ ಅಜ್ಮಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ವಿಡಿಯೋದಲ್ಲಿ ಚಿತ್ರಕ್ಕಾಗಿ ಬಳಸಿದ ಭವ್ಯ ಸೆಟ್‌ಗಳು, ಬೃಹತ್ ಬಂಗಲೆ ಹೀಗೆ ಕರಣ್ ಜೋಹರ್ ಶೈಲಿಗೆ ಅನ್ವಯಿಸುವಂತಹ ಮತ್ತು ರಣವೀರ್ ಹಾಗೂ ಆಲಿಯಾ ತಮ್ಮ ಕುಟುಂಬಗಳೊಂದಿಗೆ ಬಂಧ, ನೃತ್ಯ, ಹಾಡು ಎಲ್ಲವನ್ನೂ ಸಹ ಇದರಲ್ಲಿ ನೋಡಬಹುದಾಗಿದೆ.

ಚಿತ್ರ ತಂಡವು 50 ದಿನಗಳ ಚಿತ್ರೀಕರಣವನ್ನು ಪೂರ್ಣಗೊಳಿಸಿದೆ ಎಂದು ಈ ವಿಡಿಯೋ ಬಹಿರಂಗಪಡಿಸಿದೆ. "ರಾಕಿ, ರಾಣಿ ಮತ್ತು ಪರಿವಾರ ಈಗಾಗಲೇ 50 ದಿನಗಳ ಚಿತ್ರೀಕರಣ ಮುಗಿದಿದೆ. ಆದರೆ 2023ರ ಫೆಬ್ರವರಿ 10ರಂದು ನಿಮ್ಮ ಚಿತ್ರಮಂದಿರಗಳಲ್ಲಿ ಚಿತ್ರದ ಕಥೆಯು ಪೂರ್ಣಗೊಳ್ಳುತ್ತದೆ" ಎಂದು ವೀಡಿಯೋ ಶೀರ್ಷಿಕೆಯಲ್ಲಿ ಬರೆದಿದ್ದಾರೆ.








View this post on Instagram






A post shared by Karan Johar (@karanjohar)






ಇದನ್ನೂ ಓದಿ: Salman Khan ಬಳಸುವುದು 3 ವರ್ಷದ ಹಳೆಯ ಫೋನ್​ ಭಾವನ ಗುಟ್ಟು ರಟ್ಟು ಮಾಡಿದ Aayush Sharma

ಕರಣ್ ಈ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದು, ಅದಕ್ಕೆ "7 ದೀರ್ಘ ವರ್ಷಗಳ ನಂತರ ಒಂದು ಚಿತ್ರ ಮಾಡುತ್ತಿರುವುದು ನನಗೆ ತುಂಬಾನೇ ಸಂತೋಷ ಕೊಡುತ್ತದೆ ಮತ್ತು ನನ್ನ ಮುಂದಿನ ಚಿತ್ರವು ಕೌಟುಂಬಿಕ ಮೌಲ್ಯಗಳೊಂದಿಗೆ ಪ್ರೇಮಕಥೆಯನ್ನು ಹೊಂದಿದೆ. ಫೆಬ್ರುವರಿ 10, 2023ರಂದು ಈ ಚಿತ್ರವು ಬಿಡುಗಡೆಯಾಗಲಿದೆ ಎಂದು ಘೋಷಿಸಲಾಗಿದೆ. ನಾವು ನಿಮಗಾಗಿ ಸಿದ್ಧರಾಗುತ್ತಿದ್ದೇವೆ. ಈ ಮನರಂಜನೆ ಭರಿತ ಸಿನೆಮಾವನ್ನು ತಪ್ಪದೆ ನೋಡಿ" ಎಂದು ಶೀರ್ಷಿಕೆಯನ್ನು ಬರೆದಿದ್ದಾರೆ.

‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಚಿತ್ರ ತಂಡವು ಕೆಲವು ವಾರಗಳಿಂದ ದೆಹಲಿಯಲ್ಲಿ ಚಿತ್ರೀಕರಣ ಮಾಡುತ್ತಿದೆ. ಇತ್ತೀಚೆಗೆ, ಆಲಿಯಾ ಮತ್ತು ರಣವೀರ್ ಕುತುಬ್ ಮಿನಾರ್‌ನಲ್ಲಿ ನೃತ್ಯ ದೃಶ್ಯವನ್ನು ಚಿತ್ರೀಕರಿಸುತ್ತಿರುವ ಚಿತ್ರಗಳು ಆನ್‌ಲೈನ್‌ನಲ್ಲಿ ಹರಿದಾಡುತ್ತಿವೆ. ಧರ್ಮೇಂದ್ರ ಮತ್ತು ಶಬಾನಾ ಅಜ್ಮಿ ಕೂಡ ಸ್ಥಳದಲ್ಲಿಯೇ ಫೋಟೋ ತೆಗೆಸಿಕೊಂಡರು.

ಇದನ್ನೂ ಓದಿ: ಮತ್ತೆ ಟ್ರೋಲ್‍ಗೆ ತುತ್ತಾದ Sabyasachi - ರೂಪದರ್ಶಿಗಳ ಬಗ್ಗೆ ನೆಟ್ಟಿಗರ ಕಾಮೆಂಟ್​

ಕರಣ್ ನಿರ್ದೇಶನದಲ್ಲಿ ಈ ಹಿಂದೆ ಕೊನೆಯದಾಗಿ 2016ರಲ್ಲಿ ಬಿಡುಗಡೆಯಾದ ಚಿತ್ರ ‘ಏ ದಿಲ್ ಹೈ ಮುಷ್ಕಿಲ್’ ಆಗಿತ್ತು.
Published by:Sandhya M
First published: