ಬಿಟಿಎಸ್ ತಂಡ ಹರಿಬಿಟ್ಟ ‘ಬಟರ್’ ವಿಡಿಯೋ ಹಾಡಿಗೆ ಸಂಗೀತ ಪ್ರಿಯರು ಫುಲ್ ಫಿದಾ..!

ಬಿಟಿಎಸ್ ತಂಡದ ಬಟರ್​ ವಿಡಿಯೋ ಹಾಡಿನ ಪೋಸ್ಟರ್​

ಬಿಟಿಎಸ್ ತಂಡದ ಬಟರ್​ ವಿಡಿಯೋ ಹಾಡಿನ ಪೋಸ್ಟರ್​

BTS ತಂಡದ ಬಟರ್​ ವಿಡಿಯೋ ಹಾಡು ವಿವಿಧ ವೇದಿಕೆಗಳಲ್ಲಿ ಅಂದರೆ ಬಾಸ್ಕೆಟ್ ಬಾಲ್ ಅಂಗಳ, ಅಭಿಮಾನಿಗಳ ಮುಂದೆ ಪ್ರದರ್ಶಿಸುವ ರೀತಿ, ಲಿಫ್ಟ್‌ನಲ್ಲಿ ಹಾಡುವ ರೀತಿ, ಕುಳಿತು ಚರ್ಚಿಸುವ, ಮೈಕ್ ಮುಂದೆ ಮಾತನಾಡುವ ರೀತಿ ಹೀಗೆ ವಿಭಿನ್ನ ಶೈಲಿಯ ಬಟ್ಟೆಗಳೊಂದಿಗೆ ಮಿಂಚಿದ ರೀತಿ ಎಲ್ಲವನ್ನು ಒಳಗೊಂಡು ಬಹಳ ಆಕರ್ಷಕವಾಗಿದೆ. ಇನ್ನು ಬೆಳಕಿನ ವಿನ್ಯಾಸ, ಛಾಯಾಗ್ರಹಣ ಹೀಗೆ ಪ್ರತಿಯೊಂದು ಸುಂದರವಾಗಿ ಮೂಡಿ ಬಂದಿದೆ.

ಮುಂದೆ ಓದಿ ...
  • Share this:

BTS ಇದು ಒಂದು ಮನೋರಂಜನೆ ನೀಡುತ್ತಿರುವ ಮ್ಯೂಸಿಕ್ ಬ್ಯಾಂಡ್​. ಅಂದರೆ ಬ್ಯಾಂಗ್ಟನ್ ಬಾಯ್ಸ್ ಎಂದೇ ಪ್ರಸಿದ್ದವಾಗಿರುವ ಈ ತಂಡದಲ್ಲಿ ದಕ್ಷಿಣ ಕೊರಿಯಾದ ಏಳು ಮಂದಿ ಹುಡುಗರೇ ಮನೋರಂಜನಕಾರರು. 2010ರಲ್ಲಿ ಆರಂಭವಾದ ತಂಡ ಬಿಗ್ ಹಿಟ್ ಎಂಟರ್‌ಟೈನ್‌ಮೆಂಟ್‌ ಎಂಬ ಪ್ರಸಿದ್ಧ ಕಾರ್ಯಕ್ರಮದೊಂದಿಗೆ ಮುನ್ನೆಲೆಗೆ ಬಂದಿತು. ಹಿಪ್‍ಹಾಪ್ ಶೈಲಿ ಅನುಸರಿಸುವ ತಂಡ ತಮ್ಮದೇ ಸಂಗೀತ ರಚನೆ ಹಾಗೂ ನೃತ್ಯದ ಮೂಲಕ ಸಾವಿರಾರು ಪ್ರೇಕ್ಷಕರ ಮನ ಗೆದ್ದಿದೆ. ಇದೀಗ ಈ ತಂಡ ಬಟರ್ ಎಂಬ ವಿಡಿಯೋ ಹಾಡನ್ನು ಹೊರತಂದಿದ್ದು, ಈ ಹಾಡು ಎಲ್ಲರನ್ನು ಒಂದು ಕ್ಷಣ ಕುಣಿಸುವುದಂತೂ ನಿಜ. ಈ ಹಾಡಿನಲ್ಲಿ ಪಾಪ್ ಟ್ರ್ಯಾಕ್ ರೂಪದಲ್ಲಿರುವ ಸಂಗೀತ, ಬಿಟಿಎಸ್‍ನ ಸುಮಧುರವಾದ ಸಾಹಿತ್ಯ ಹಾಗೂ ನೃತ್ಯವು ಹಾಡಿನ ವರ್ಚಸ್ಸಿನ ಮೇಲೆ ಬೆಳಕು ಚೆಲ್ಲುತ್ತದೆ.


ಗಾಯಕ ಜಂಗ್ ಕುಕ್ “Smooth like butter, like a criminal undercover…" ಎಂದು ಹಾಡಲು ಶುರುವಿಡುತ್ತಿದ್ದಂತೆ ವಿಜೆ ಹೋಪ್, ಆರ್‌ಎಂ, ಸುಗಾ, ಜಿನ್ ಮತ್ತು ಜಿಮಿನ್ ಇವರ ಜೊತೆಗೂಡಿ ಹಾಡುವ ಹಾಗೂ ಹೆಜ್ಜೆ ಹಾಕುವ ಶೈಲಿ ಸಂಪೂರ್ಣ ಹಾಡು ಪಾಪ್-ಡಿಸ್ಕೋ ಭಾವವನ್ನು ಒಳಗೊಂಡಿದೆ ಎಂದು ಭಾಸವಾಗುವಂತಿದೆ.




ಈ ಹಾಡು ವಿವಿಧ ವೇದಿಕೆಗಳಲ್ಲಿ ಅಂದರೆ ಬಾಸ್ಕೆಟ್ ಬಾಲ್ ಅಂಗಳ, ಅಭಿಮಾನಿಗಳ ಮುಂದೆ ಪ್ರದರ್ಶಿಸುವ ರೀತಿ, ಲಿಫ್ಟ್‌ನಲ್ಲಿ ಹಾಡುವ ರೀತಿ, ಕುಳಿತು ಚರ್ಚಿಸುವ, ಮೈಕ್ ಮುಂದೆ ಮಾತನಾಡುವ ರೀತಿ ಹೀಗೆ ವಿಭಿನ್ನ ಶೈಲಿಯ ಬಟ್ಟೆಗಳೊಂದಿಗೆ ಮಿಂಚಿದ ರೀತಿ ಎಲ್ಲವನ್ನು ಒಳಗೊಂಡು ಬಹಳ ಆಕರ್ಷಕವಾಗಿದೆ. ಇನ್ನು ಬೆಳಕಿನ ವಿನ್ಯಾಸ, ಛಾಯಾಗ್ರಹಣ ಹೀಗೆ ಪ್ರತಿಯೊಂದು ಸುಂದರವಾಗಿ ಮೂಡಿ ಬಂದಿದೆ.


ಇದನ್ನೂ ಓದಿ: ಬಾಲಿವುಡ್​ ಸಿನಿಮಾದಲ್ಲಿ ಕನ್ನಡದ ನಟ ಜೆಕೆ: ಕ್ರಿಕೆಟರ್​ ಪಾತ್ರದಲ್ಲಿ ಕಾರ್ತಿಕ್​ ಜಯರಾಮ್


ಬಟರ್ ಇದೇ ತಂಡದ ಎರಡನೇ ಹಾಡು ಇದಾಗಿದ್ದು, ಇದರ ಮೊದಲು ಡೈನಾಮೈಟ್ ಎಂಬ ಹಾಡನ್ನು ಹೊರತಂದಿದ್ದರು. ಆಗಸ್ಟ್ 2020ರಲ್ಲಿ ಹೊರ ಬಂದಿದ್ದ ಈ ಹಾಡು ಹಲವಾರು ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿತ್ತು ಹಾಗೂ ಎಲ್ಲಾ ದಾಖಲೆಗಳನ್ನು ಮುರಿದಿತ್ತು. ಈ ಬಟರ್ ಹಾಡು ಕೂಡ ಡೈನಾಮೈಟ್ ರೀತಿಯಲ್ಲೇ ಇರಲಿದೆ ಎಂದು ಭಾವಿಸಿದ್ದಾರೆ. ಎಲ್ಲದಕ್ಕಿಂತ ಹೆಚ್ಚಾಗಿ ಈ ಹಾಡಿನಲ್ಲಿ ARMY ಎಂದು ಬ್ಯಾಂಡ್​ನ ಸದಸ್ಯರು ಪೋಸ್​ ಕೊಡುವ ರೀತಿ ಅಭಿಮಾನಿಗಳನ್ನು ಹುಚ್ಚೆಬ್ಬಿಸಿದೆ.


“Got ARMY right behind us when we say so” and the members positioned spelling out “ARMY”😭😭#BTSBackWithButter#SpreadTheButter#SmoothLikeBTS #GetItLetItRoll#BTS_Butter @BTS_twt pic.twitter.com/Fr0MCgGSC5





ARMYಗಳಿಗಾಗಿ ತಯಾರಿಸುತ್ತಿರುವ ವಿಭಿನ್ನ ರುಚಿಯ ಟೋಸ್ಟ್ ಮಾಡಲು ಬೆಣ್ಣೆ ಬಳಸುವ ಪರಿ ಹೇಗೆ ಎಂದು ಈಟ್ ಜಿನ್, ಎಂಸಿ ಮತ್ತು ಆರು ಸದಸ್ಯರೊಂದಿಗೆ ವಿವರಿಸುತ್ತಲೇ ಈ ಹಾಡು ಪ್ರಥಮವಾಗಿ ಪ್ರದರ್ಶನಗೊಳ್ಳುವ ಬಗ್ಗೆ ಸುಳಿವು ಬಿಟ್ಟುಕೊಟ್ಟರು.



ಬಿಟಿಎಸ್ ತಂಡದ ಇಂಗ್ಲಿಷ್ ಸಾಹಿತ್ಯವನ್ನೊಳಗೊಂಡಿರುವ ಎರಡನೇ ಹಾಡು ಇದಾಗಿದ್ದು, ಇದು ಯೂಟ್ಯೂಬ್‍ನಲ್ಲಿ ಒಂದು ಗಂಟೆಯೊಳಗೆ 47 ಮಿಲಿಯನ್ನು ಪ್ರೇಕ್ಷಕರನ್ನು ತಲುಪಿದೆ. ಇದು ಕೇಳುಗರಿಗೆ ಹಾಗೂ ನೋಡುಗರಿಗೆ ಡೈನಾಮೈಟ್ ಹಾಡಿಗಿಂತ ವಿಭಿನ್ನ ಮನೋಭಾವವನ್ನು ಮೂಡಿಸುತ್ತದೆ.


ಇದನ್ನೂ ಓದಿ: Pranitha Subhash: ಒಟಿಟಿಯಲ್ಲಿ ರಿಲೀಸ್ ಆಗಲಿದೆಯಂತೆ ಕನ್ನಡದ ನಟಿ ಪ್ರಣೀತಾ ಅಭಿನಯದ ಈ ಹೊಸ ಸಿನಿಮಾ..!

ಪ್ರಪಂಚದ ಮೂಲೆ ಮೂಲೆಗೂ ಇವರ ಸಂಗೀತದ ಮಾಧುರ್ಯ ತಲುಪಿದ್ದು, ಬಿಟಿಎಸ್ ಗುಂಪಿನ ಹೆಸರು ಕೊರಿಯಾ ಅಭಿವ್ಯಕ್ತಿ ಬ್ಯಾಂಗ್ಟಾನ್ ಸೋನಿಯೊಂಡನ್ ಅನ್ನು ಸೂಚಿಸುತ್ತದೆ. ಇದರ ಅರ್ಥ ಬುಲೆಟ್ ಪ್ರೂಫ್ ಬಾಯ್ ಸ್ಕೌಟ್ಸ್. ಸದಸ್ಯ ಜೆ-ಹೋಪ್ ಪ್ರಕಾರ, ಈ ಹೆಸರು ಹದಿಹರೆಯದವರ ಮೇಲೆ ಗುಂಡುಗಳಂತಹ ಗುರಿಯನ್ನು ಹೊಂದಿರುವ ಸ್ಟೀರಿಯೊಟೈಪ್ಸ್, ಟೀಕೆಗಳು ಮತ್ತು ನಿರೀಕ್ಷೆಗಳನ್ನು ತಡೆಯುವ ಗುರಿ ಈ ಗುಂಪಿನ ಬಯಕೆ ಎಂಬುದನ್ನು ಸೂಚಿಸುತ್ತದೆ ಎಂದು ವಿವರಿಸಿದರು.

Published by:Anitha E
First published: