• Home
  • »
  • News
  • »
  • entertainment
  • »
  • ತಾರ್ಕಿಕ ಅಂತ್ಯ ಕಾಣದ ಕೆ.ಕಲ್ಯಾಣ್ ದಾಂಪತ್ಯ ಕಲಹ; ನನ್ನ ಬಾಳಲ್ಲಿ ಅಶ್ವಿನಿ ಮತ್ತೆ ಬರ್ತಾಳೆ ಪ್ರೇಮ ಕವಿ ವಿಶ್ವಾಸ

ತಾರ್ಕಿಕ ಅಂತ್ಯ ಕಾಣದ ಕೆ.ಕಲ್ಯಾಣ್ ದಾಂಪತ್ಯ ಕಲಹ; ನನ್ನ ಬಾಳಲ್ಲಿ ಅಶ್ವಿನಿ ಮತ್ತೆ ಬರ್ತಾಳೆ ಪ್ರೇಮ ಕವಿ ವಿಶ್ವಾಸ

ಚಿತ್ರ ಸಾಹಿತಿ ಕೆ.ಕಲ್ಯಾಣ್

ಚಿತ್ರ ಸಾಹಿತಿ ಕೆ.ಕಲ್ಯಾಣ್

ಹೆಂಡತಿ ಅಶ್ವಿನಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದ ಯಾವುದೇ ನೋಟಿಸ್ ನನಗೆ ಬಂದಿಲ್ಲ. ನನ್ನ ಬಿಟ್ಟು ನರಕದಿಂದ ಹೊರ ಬಂದೆ ಎನ್ನುವ ಹೆಂಡತಿ ತನ್ನ ಸಂಬಂಧಿಕರನ್ನು‌ ಏಕೆ ಬಿಟ್ಟಿದ್ದಾರೆ ಅಂತಾ ಕಲ್ಯಾಣ ಪ್ರಶ್ನಿಸಿದರು.

  • Share this:

ಚಿಕ್ಕೋಡಿ(ಅಕ್ಟೋಬರ್​. 04): ಪ್ರೇಮಕವಿ ಕೆ.ಕಲ್ಯಾಣ್ ದಾಂಪತ್ಯದಲ್ಲಿ‌ನ ಕಲಹ ಪೊಲೀಸ್ ಠಾಣೆ ಮೆಟ್ಟಿಲೇರಿದ ವಿಚಾರಕ್ಕೆ ಮೇಜರ್ ಟ್ವಿಸ್ಟ್ ಸಿಕ್ಕಿದೆ. ತಮ್ಮ ಹೆಂಡತಿ, ಅತ್ತೆ, ಮಾವ ಅಪಹರಣವಾಗಿದೆ ಎಂಬ ದೂರಿನ ಮೇರೆಗೆ ವಶಕ್ಕೆ ಪಡೆದಿರುವ ಶಿವಾನಂದ ವಾಲಿ ಬಳಿ ಮಾಟ ಮಂತ್ರ ಮಾಡುವ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ‌. ಬೆಳಗಾವಿಯ ಖಾಸಗಿ ಹೋಟೆಲ್‌ನಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಸುದ್ದಿಗೋಷ್ಠಿ ನಡೆಸಿದ ಕೆ‌.ಕಲ್ಯಾಣ್ ತಮ್ಮ ಮನೆ ಕೆಲಸದಾಕೆ ಗಂಗಾ ಕುಲಕರ್ಣಿ ಹಾಗೂ ಪೊಲೀಸರು ಸದ್ಯ ವಶಕ್ಕೆ ಪಡೆದ ಶಿವಾನಂದ ವಾಲಿ ವಿರುದ್ಧ ಹರಿಹಾಯ್ದರು.  ತನ್ನ‌ ಹೆಂಡತಿ ಅತ್ತೆ ಮಾವ ಎಲ್ಲರೂ ಒಳ್ಳೆಯವರು. ಗಂಗಾ ಕುಲಕರ್ಣಿ ಮನೆ ಕೆಲಸಕ್ಕೆ ಬಂದ ಮೇಲೆ ತಮ್ಮ ಅತ್ತೆಯ‌ ಜೊತೆ ಆತ್ಮೀಯವಾಗಿದ್ದರು. ಬಳಿಕ ಆಕೆಯಿಂದ ಪರಿಚಿತನಾದ ಶಿವಾ‌ನಂದ ವಾಲಿಯನ್ನು ಗುರೂಜಿ ಅಂತಾ ಕರೆಯುತಿದ್ದರು. ಹೆಂಡತಿ ಸಂಬಂಧಿಕರ ಮನೆಯಲ್ಲಿ ಏನೋ ಪೂಜೆ ನಡೆಯುತ್ತಿತ್ತು. ಅಂದು ಹೆಂಡತಿಯ ಹಣೆಗೆ ಕುಂಕುಮ ಹಚ್ಚಿದ ಮೇಲೆ ವಿಚಿತ್ರವಾಗಿ ವರ್ತಿಸಲು ಆರಂಭಿಸಿದಳು.


ಬಳಿಕ ನನ್ನ ಜೊತೆ ಮಾತುಕತೆಗೂ ಅವಕಾಶ ನೀಡಲಿಲ್ಲ. ಇದಾದ ಮೇಲೆ ನನ್ನ ಪತ್ನಿ, ಅತ್ತೆ, ಮಾವ ಅಕೌಂಟ್‌ನಿಂದ ಸುಮಾರು 20 ಲಕ್ಷ ಹಣ ವರ್ಗಾವಣೆ ಆಗಿದೆ. ಜಾಯಿಂಟ್ ಪ್ರಾಪರ್ಟಿಯೂ ಶಿವಾನಂದ ವಾಲಿ ಹೆಸರಿನಲ್ಲಿ ಖರೀದಿ ಆಗಿದೆ.


ಇನ್ನು ಹೆಂಡತಿ ಅಶ್ವಿನಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದ ಯಾವುದೇ ನೋಟಿಸ್ ನನಗೆ ಬಂದಿಲ್ಲ. ನನ್ನ ಬಿಟ್ಟು ನರಕದಿಂದ ಹೊರ ಬಂದೆ ಎನ್ನುವ ಹೆಂಡತಿ ತನ್ನ ಸಂಬಂಧಿಕರನ್ನು‌ ಏಕೆ ಬಿಟ್ಟಿದ್ದಾರೆ ಅಂತಾ ಪ್ರಶ್ನಿಸಿದರು. ಅಲ್ಲದೇ ಈ ಕ್ಷಣಕ್ಕೂ ನನ್ನ ಹೆಂಡತಿಯ ಜೊತೆ ಇರಲು ನಾನು ಹಂಬಲಿಸುತ್ತೇನೆ ಅಂತಾ ತಿಳಿಸಿದರು.


ಇನ್ನು ಸುದ್ದಿಗೋಷ್ಠಿ ವೇಳೆ ಮಾತನಾಡಿದ ಕೆ.ಕಲ್ಯಾಣ್ ಪರ ವಕೀಲ ಜಹೀರ್ ಅಬ್ಬಾಸ್ ಹತ್ತರಕಿ, ಕೆ‌.ಕಲ್ಯಾಣ್ ಹೆಂಡತಿಗೆ ಹಿಪ್ನಾಟಿಸಮ್ ಆಗಿರಬಹುದು ಎಂಬ ಶಂಕೆ ವ್ಯಕ್ತಪಡಿಸಿದರು.


ನಿನ್ನೆ ತಡರಾತ್ರಿ ವರೆಗೂ ಕೆ‌.ಕಲ್ಯಾಣ್ ಹೆಂಡತಿ ಅಶ್ವಿನಿ ಕೌನ್ಸಲಿಂಗ್ ಮಾಡಲಾಗಿತ್ತು. ಇಂದೂ ಸಹ ಬೆಳಗಾವಿಯ ಮಾಳಮಾರುತಿ ಠಾಣೆಯಲ್ಲಿ ಅಶ್ವಿನಿಗೆ ಕೌನ್ಸಲಿಂಗ್ ಮಾಡಲಾಯಿತು. ಮನೋರೋಗ ತಜ್ಞ ಡಾ.ಸಂದೀಪ್ ಪಾಟೀಲ್ ಆನ್‌ಲೈನ್ ಮೂಲಕ ಅಶ್ವಿ‌ನಿಗೆ ಕೌನ್ಸಲಿಂಗ್ ಮಾಡಿದರು.


ಇತ್ತ ಕೆ.ಕಲ್ಯಾಣ ಸುದ್ದಿಗೋಷ್ಠಿ ಬಳಿಕ ಕೆ‌.ಕಲ್ಯಾಣ ಅಣ್ಣ ಅತ್ತಿಗೆ, ಅಶ್ವಿನಿಯವರ ದೊಡ್ಡಪ್ಪ, ದೊಡ್ಡಮ್ಮ ಸೋದರ ಸಂಬಂಧಿ ಎಲ್ಲರೂ ಸೇರಿ ಕೆ.ಕಲ್ಯಾಣ್ ಜೊತೆ ಮಾತುಕತೆ ನಡೆಸಿದರು. ಬಳಿಕ ಮಾಳಮಾರುತಿ ಠಾಣೆಗೆ ಬಂದ ಉಭಯ ಕುಟುಂಬಸ್ಥರು ಕೆ.ಕಲ್ಯಾಣ ಹೆಂಡತಿ ಅಶ್ವಿನಿ ಭೇಟಿಯಾಗಿ ಮಾತುಕತೆ ನಡೆಸಿದರು.


ಇದನ್ನೂ ಓದಿ : ಈಶಾನ್ಯ ವಲಯ ಶಿಕ್ಷಕರ ವಿಧಾನ ಪರಿಷತ್ ಚುನಾವಣೆ ; ಟಿಕೆಟ್ ಸಿಗದ್ದಕ್ಕೆ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅಂಬಲಗಿ ರಾಜೀನಾಮೆ


ಬಳಿಕ ಪೊಲೀಸ್ ಠಾಣೆಯಿಂದ ತೆರಳುವ ವೇಳೆ ಎಲ್ಲ ಸರಿ ಹೋಗುತ್ತೆ ಅಂತಾ ಕೆ.ಕಲ್ಯಾಣ ಅತ್ತಿಗೆ ಹೇಳಿ ಹೊರಟರು. ಇತ್ತ ಬೆಳಗ್ಗೆ ಕೌನ್ಸಲಿಂಗ್ ಬಳಿಕ ಪ್ರತಿಕ್ರಿಯೆ ನೀಡುವೆ ಎಂದಿದ್ದ ಅಶ್ವಿನಿ ಅವರನ್ನು ಪೊಲೀಸರು ಪೊಲೀಸ್ ಠಾಣೆ ಹಿಂಭಾಗದಿಂದ ಕಳುಹಿಸಿಕೊಟ್ಟರು.


ಒಟ್ಟಾರೆಯಾಗಿ ಕೆ.ಕಲ್ಯಾಣ ದಾಂಪತ್ಯದಲ್ಲಿ ಉಂಟಾದ ಕಲಹ ಪ್ರಕರಣದಲ್ಲಿ ಮಾಟ ಮಂತ್ರದ ಸದ್ದು ಕೇಳುತ್ತಿದ್ದು ಆರೋಪಿ ಶಿವಾನಂದ ವಾಲಿ ಬಳಿ ಮಾಟ ಮಂತ್ರ ವಸ್ತು ಜಪ್ತಿ ಮಾಡಿದ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ. ಇವತ್ತು ರಾಜಿ ಸಂಧಾನದ ಮೂಲಕ ಸಮಸ್ಯೆ ಬಗೆಹರಿಯುತ್ತೆ ಎಂದು ಕೊಂಡಿದ್ದರು. ಆದರೆ, ಪ್ರಕರಣಕ್ಕೆ ಮಾತ್ರ ಇದುವರೆಗೂ ಯಾವುದೆ ತಾರ್ಕಿಕ ಅಂತ್ಯ ಮಾತ್ರ ಕಂಡಿಲ್ಲ

Published by:G Hareeshkumar
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು