ಕೆ.ಜಿ.ಎಫ್ ಚಿತ್ರದ ಎರಡನೇ ಹಾಡು ಬಿಡುಗಡೆ: ಅನನ್ಯ ಮಾಧುರ್ಯಕ್ಕೆ ಅಭಿಮಾನಿಗಳು ಫಿದಾ

ಬಿಡುಗಡೆಯಾದ​ ಕೆಲವೇ ಗಂಟೆಗಳಲ್ಲಿ ಬರೊಬ್ಬರಿ ಸುಮಾರು 4 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸುವ ಮೂಲಕ ಸ್ಯಾಂಡಲ್​ವುಡ್​ನಲ್ಲಿ ದಾಖಲೆ ಬರೆದಿತ್ತು.

zahir | news18
Updated:December 9, 2018, 9:19 PM IST
ಕೆ.ಜಿ.ಎಫ್ ಚಿತ್ರದ ಎರಡನೇ ಹಾಡು ಬಿಡುಗಡೆ: ಅನನ್ಯ ಮಾಧುರ್ಯಕ್ಕೆ ಅಭಿಮಾನಿಗಳು ಫಿದಾ
Yash
  • News18
  • Last Updated: December 9, 2018, 9:19 PM IST
  • Share this:
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆ.ಜಿ.ಎಫ್ ಸಿನಿಮಾದ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಪಂಚಭಾಷೆಯಲ್ಲಿ ತಯಾರಾಗಿರುವ ಈ ಸಿನಿಮಾಗಾಗಿ ಇಡೀ ಭಾರತೀಯ ಚಿತ್ರರಂಗವೇ ಕಾಯುತ್ತಿದೆ. ಇದೀಗ ಅಭಿಮಾನಿಗಳ ಕುತೂಹಲ ಹೆಚ್ಚಿಸಲು ಚಿತ್ರತಂಡ ಒಂದೊಂದೇ ಗೀತೆಗಳನ್ನು ಬಿಡುಗಡೆ ಮಾಡುತ್ತಿದೆ.

ಡಿ.4 ರಂದು ಬಿಡುಗಡೆಯಾದ ಸಲಾಂ ರಾಕಿ ಭಾಯ್.. ಹಾಡು ಯೂಟ್ಯೂಬ್​ನಲ್ಲಿ ಧೂಳೆಬ್ಬಿಸಿತ್ತು. ರಿಲೀಸ್​ ಆದ ಕೆಲವೇ ಗಂಟೆಗಳಲ್ಲಿ ಬರೊಬ್ಬರಿ ಸುಮಾರು 4 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸುವ ಮೂಲಕ ಸ್ಯಾಂಡಲ್​ವುಡ್​ನಲ್ಲಿ ದಾಖಲೆ ಬರೆದಿತ್ತು.

ಮೊದಲ ಹಾಡು ಅಭಿಮಾನಿಗಳ ತನು ಮನ ತಣಿಸುವಲ್ಲಿ ಯಶಸ್ವಿಯಾದ ಬೆನ್ನಲ್ಲೇ ಈಗ ಎರಡನೇ ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಸಿನಿಮಾದ ಟ್ರೇಲರ್​​ನ ಹಿನ್ನಲೆ ಸಂಗೀತದಲ್ಲಿ ಬಳಸಲಾದ ಟ್ಯೂನ್ ಹೊಂದಿರುವ ಈ ಹಾಡಿಗೆ ಗಾಯಕಿ ಅನನ್ಯ ಭಟ್ ತಮ್ಮ ಮಾಧುರ್ಯ ಧ್ವನಿ ನೀಡಿದ್ದಾರೆ. ರವಿ ಬಸ್ರೂರು ಸಂಗೀತದಲ್ಲಿ ಮೂಡಿ ಬಂದಿರುವ ಗರ್ಭದಿ... ಗೀತೆಯು ತಾಯಿ ಮಗನ ಸೆಂಟಿಮೆಂಟನ್ನು ಸಾರುತ್ತಿದ್ದು, ಸಂಗೀತ ಪ್ರಿಯರಿಂದ ಗೀತೆಗೆ ಭರ್ಜರಿ ರೆಸ್ಪಾನ್ಸ್​ ಸಿಕ್ಕಿದೆ.


ಭಾನುವಾರ ಬಿಡುಗಡೆಯಾದ ಲಿರಿಕಲ್ ಸಾಂಗ್ ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು ಮತ್ತು ಮಲಯಾಳಂ ನಲ್ಲಿ ಬಿಡುಗಡೆಯಾಗಿದೆ. ಲಹರಿ ಮ್ಯೂಸಿಕ್ಸ್ ಚಿತ್ರದ ಹಾಡಿನ ಹಕ್ಕು ಪಡೆದುಕೊಂಡಿದ್ದು, ಲಹರಿ ಮ್ಯೂಸಿಕ್ ಯೂಟ್ಯೂಬ್ ಖಾತೆಯಲ್ಲಿ ಚಿತ್ರದ ಹಾಡನ್ನು ಬಿಡುಗಡೆ ಮಾಡಿದ್ದಾರೆ.First published:December 9, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading