ಜ್ಯೋತಿಕಾ ಅಭಿನಯದ Udanpirappe ಇಂದು ಅಮೆಜಾನ್ ಪ್ರೈಮ್‍ನಲ್ಲಿ ಬಿಡುಗಡೆ

ಉದನ್ಪಿರಪ್ಪೆ ಜ್ಯೋತಿಕಾ ಪಾಲಿಗೆ ತುಂಬಾ ವಿಶೇಷ, ಏಕೆಂದರೆ ಇದು ಅವರ 50ನೇ ಚಿತ್ರ. ತಮ್ಮ ವೃತ್ತಿ ಜೀವನದಲ್ಲಿ ಈ ಮೈಲಿಗಲ್ಲನ್ನು ಗುರುತಿಸಲು, ಇದಕ್ಕಿಂತ ಉತ್ತಮ ಪಾತ್ರ ಇನ್ನೊಂದು ಇರಲಿಕ್ಕಿಲ್ಲ ಎಂಬುವುದು ಅವರಿಗೆ ಮನವರಿಕೆ ಆಗಿದೆ.

ಉದನ್ಪಿರಪ್ಪೆ ಸಿನಿಮಾ ರಿಲೀಸ್​

ಉದನ್ಪಿರಪ್ಪೆ ಸಿನಿಮಾ ರಿಲೀಸ್​

  • Share this:
ಬಹುಭಾಷಾ ನಟಿ ಜ್ಯೋತಿಕಾ  ( Jyotika) ಮತ್ತೊಂದು ಹೊಸ ಚಿತ್ರದ ಜೊತೆ ತಮ್ಮ ಅಭಿಮಾನಿಗಳ ಮುಂದೆ ಬರುತ್ತಿದ್ದಾರೆ. ಈ ಚಿತ್ರ ಅವರ ಪಾಲಿಗೆ ತುಂಬಾ ವಿಶೇಷ. ಜ್ಯೋತಿಕಾ ತಮ್ಮ ಮುಂದಿನ ಚಿತ್ರ ಉದನ್ಪಿರಪ್ಪೆ (Udanpirappe) ಸಿನಿಮಾದಲ್ಲಿ ಹಳ್ಳಿ ಹೆಂಗಸಿನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಅವರು ತಮ್ಮ ವೃತ್ತಿ ಜೀವನದಲ್ಲಿ ಇಂತಹ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲು. ಈ ಪಾತ್ರ, ತಮ್ಮ ಅತ್ತೆ ಮತ್ತು ಇಂದಿಗೂ ತಮ್ಮ ಹಳ್ಳಿಗಳಲ್ಲಿ ಬದುಕುತ್ತಿರುವ ಪತಿ ಸೂರ್ಯ ಅವರ  ಪೂರ್ವಜರರಿಂದ ಪ್ರೇರಣೆ ಪಡೆದಿರುವುದಾಗಿದೆ ಎಂದು ಹೇಳಿಕೊಂಡಿದ್ದಾರೆ ಜ್ಯೋತಿಕಾ.

“ಈ ಪಾತ್ರಕ್ಕಾಗಿ ತಯಾರಿ ನಡೆಸುವಾಗ, ನಾನು ನಿಜ ಜೀವನದ ಹಲವಾರು ಪಾತ್ರಗಳನ್ನು ಮಾದರಿಯಾಗಿ ತೆಗೆದುಕೊಂಡಿದ್ದೇನೆ. ನಮ್ಮ ಮನೆಯಲ್ಲಿ ಅತ್ತೆ ಮತ್ತು ಮದುವೆಯಾದ 15 ವರ್ಷಗಳಿಂದ ನನಗೆ ಗೊತ್ತಿರುವ ಹಲವಾರು ಮಹಿಳೆಯರು ನನ್ನ ಸ್ಪೂರ್ತಿ. ನನ್ನ ಪತಿಯ ಇಡೀ ಕುಟುಂಬ ಕೊಯಮತ್ತೂರಿನ ಸುತ್ತಮುತ್ತಲಿನ ಸಣ್ಣ ಹಳ್ಳಿಗಳಿಗೆ ಸೇರಿದ್ದು. ಕುಟುಂಬದ ಎಲ್ಲ ಮಹಿಳೆಯರ ಜೊತೆಗೆ ಮಾತನಾಡುವ ಸಂದರ್ಭಗಳಲ್ಲಿ, ನಾನು ಹಲವಾರು ವಿಷಯಗಳನ್ನು ಪಡೆದುಕೊಂಡಿದ್ದೇನೆ” ಎಂದು ಜ್ಯೋತಿಕಾ ಹೇಳಿದ್ದಾರೆ.
View this post on Instagram


A post shared by Jyotika (@jyotika)


ಚಿತ್ರದ ಟ್ರೈಲರನ್ನು ನೋಡಿದರೆ, ಉದನ್‍ಪಿರಪ್ಪೆ 90ರ ದಶಕನ ನೋವಿನ ಕಥೆಯಂತೆ ಕಾಣುತ್ತದೆ. ಜ್ಯೋತಿಕಾ ಈ ಸಿನಿಮಾ ಒಪ್ಪಿಕೊಳ್ಳಲು ಒಂದು ಭಾವನಾತ್ಮಕ ಕಾರಣವೂ ಇದೆಯಂತೆ.

“ನಾನು ಹಿಂದೆಂದೂ ಮಾಡದೇ ಇರುವಂತ ಪಾತ್ರ ನೀಡಿದ್ದರಿಂದ ನನ್ನನ್ನು ಈ ಚಿತ್ರ ಆಕರ್ಷಿಸಿತು. ನೀವು ವಿಭಿನ್ನ ವಯೋಮಾನದ ಪಾತ್ರಗಳಲ್ಲಿ ನಟಿಸುವುದರಿಂದ, ನಿಮಗೆ ಸಂಪೂರ್ಣ ಮತ್ತು ತೃಪ್ತಿದಾಯಕ ಅನುಭವ ನೀಡುತ್ತದೆ” ಎನ್ನುತ್ತಾರೆ ಅವರು.

ಇದನ್ನೂ ಓದಿ: ಇನ್​ಸ್ಟಾಗ್ರಾಂಗೆ ಲಗ್ಗೆ ಇಟ್ಟ ನಟಿ Jyotika: ಕೆಲವೇ ನಿಮಿಷಗಳಲ್ಲಿ 1 ಮಿಲಿಯನ್​ಗೂ ಹೆಚ್ಚು ಹಿಂಬಾಲಕರು..!

ಉದನ್ಪಿರಪ್ಪೆ ಜ್ಯೋತಿಕಾ ಪಾಲಿಗೆ ತುಂಬಾ ವಿಶೇಷ, ಏಕೆಂದರೆ ಇದು ಅವರ 50ನೇ ಚಿತ್ರ. ತಮ್ಮ ವೃತ್ತಿ ಜೀವನದಲ್ಲಿ ಈ ಮೈಲಿಗಲ್ಲನ್ನು ಗುರುತಿಸಲು, ಇದಕ್ಕಿಂತ ಉತ್ತಮ ಪಾತ್ರ ಇನ್ನೊಂದು ಇರಲಿಕ್ಕಿಲ್ಲ ಎಂಬುವುದು ಅವರಿಗೆ ಮನವರಿಕೆ ಆಗಿದೆ.

“ನಾನು ಮಹಿಳೆಯ ಅತ್ಯಂತ ದೊಡ್ಡ ಸಾಮರ್ಥ್ಯವನ್ನು ಈ ಸಿನಿಮಾದಲ್ಲಿ ನಿರ್ವಹಿಸಲು ಸಾಧ್ಯವಾಗಿದೆ. ಅದು ಮೌನ. ಏಕೆಂದರೆ ಸುಮಾರು ಶೇಕಡಾ 90ರಷ್ಟು ಮಹಿಳೆಯರು ಮೌನದಲ್ಲಿ ಬದುಕುತ್ತಿದ್ದಾರೆ, ಆದರೆ ಅವರು ಬಲಿಷ್ಟರು. ನಾನು ನನ್ನ ವೃತ್ತಿ ಜೀವನದಲ್ಲಿ ಅಭಿನಯಿಸಿದ ಅತ್ಯಂತ ಸುಂದರ ಪಾತ್ರವಿದು” ಎಂದು ಸಂತಸ ವ್ಯಕ್ತಪಡಿಸಿದ್ದಾರೆ ಜ್ಯೋತಿಕಾ.

ಉದನ್ಪಿರಪ್ಪೆ... ಸೂರ್ಯಾ ಅವರ 2ಡಿ ಎಂಟರ್‌ಟೈನ್‍ಮೆಂಟ್, ಅಮೆಜಾನ್ ಪ್ರೈಮ್ ವಿಡಿಯೋ ಜೊತೆ ಮಾಡಿಕೊಂಡಿರುವ ನಾಲ್ಕು ಸಿನಿಮಾಗಳ ಒಪ್ಪಂದದಲ್ಲಿ ಎರಡನೆಯದ್ದು. ಅರಿಸಿಲ್ ಮೂರ್ತಿ ನಿರ್ದೇಶನದ , ರಾಜಕೀಯ ವಿಡಂಬನೆಯುಳ್ಳ ರಾಮನ್ ಅಂಡಾಲುಮ್ ರಾವಣನ್ ಅಂಡಾಲುಮ್ ಮೊದಲನೇ ಚಿತ್ರ.ಈರಾ ಶರವಣನ್ ಬರೆದು , ನಿರ್ದೇಶಿಸಿರುವ, ಹೃದಯ ಸ್ಪರ್ಶಿ ಕೌಟುಂಬಿಕ ಕಥಾ ಹಂದರ ಹೊಂದಿರುವ ಉದನ್ಪಿರಪ್ಪೆ ಸಿನಿಮಾದಲ್ಲಿ, ಶಶಿ ಕುಮಾರ್, ಸಮುದ್ರಕಣಿ, ಕಲೈ ಅರಸನ್ ಮತ್ತು ಸೂರಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: ಚಂದ್ರಮುಖಿ-2 ಸಿನಿಮಾದಲ್ಲಿ ನಟಿ ಜ್ಯೋತಿಕಾ ನಟಿಸೋದಿಲ್ಲವಂತೆ!; ಹಾಗಿದ್ದರೆ ಮತ್ಯಾರು?

ಈ ಸಿನಿಮಾ ಅಮೆಜಾನ್ ಪ್ರೈಮ್‍ನಲ್ಲಿ ಅಕ್ಟೋಬರ್ 14ರಂದು ಅಂದು ಇಂದು ಬಿಡುಗಡೆ ಆಗಲಿದೆ. ತೆಲುಗಿನಲ್ಲಿ ರಕ್ತ ಸಂಬಂಧಂ ಎಂಬ ಹೆಸರಿನಲ್ಲಿ ಬಿಡುಗಡೆ ಆಗಲಿದೆ. ರಾಜಶೇಖರ ಕರ್ಪೂರ ಸುಂದರ ಪಾಂಡಿಯನ್ ಈ ಸಿನಿಮಾದ ಸಹ ನಿರ್ಮಾಪಕರು. ಸಿನಿಮಾಕ್ಕೆ ವೆಲ್ರಾಜ್ ಛಾಯಾಗ್ರಹಣ ಮತ್ತು ಆ್ಯಂಟೋನಿ ಎಲ್ ರೂಬೆಲ್ ಸಂಕಲನವಿದೆ. ಡಿ. ಇಮಾಮ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ.
Published by:Anitha E
First published: