ಅ.14 ರಂದು ಒಟಿಟಿಯಲ್ಲಿ ರಿಲೀಸ್​ Jyotika ಅಭಿನಯದ 50ನೇ ಚಿತ್ರ Udanpirappe

ಹೃದಯ ಸ್ಪರ್ಶಿ ಕೌಟುಂಬಿಕ ಕಥಾ ಹಂದರ ಹೊಂದಿರುವ ಈ ಸಿನಿಮಾ 2021 ಅಕ್ಟೋಬರ್ 14ರಂದು ತಮಿಳು ಹಾಗೂ ತೆಲುಗಿನಲ್ಲಿ ರಕ್ತ ಸಂಬಂಧಂ ಎಂಬ ಹೆಸರಿನಲ್ಲಿ , ಸುಮಾರು 240ಕ್ಕೂ ಹೆಚ್ಚು ದೇಶ ಹಾಗೂ ಪ್ರಾಂತ್ಯಗಳಲ್ಲಿ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆ ಆಗಲಿದೆ.

ನಟಿ ಜ್ಯೋತಿಕಾ.

ನಟಿ ಜ್ಯೋತಿಕಾ.

  • Share this:
Udanpirappe ಸಿನಿಮಾ.... ಸೂರ್ಯ ಅವರ 2 ಡಿ ಎಂಟರ್‌ಟೈನ್ಮೆಂಟ್ ಅಡಿಯಲ್ಲಿ ನಿರ್ಮಾಣವಾಗಿದ್ದು ನೇರವಾಗಿ ಒಟಿಟಿಯಲ್ಲಿ ಬಿಡುಗಡೆ ಆಗುತ್ತಿರುವ ಎರಡನೇ ಚಿತ್ರವಾಗಿದೆ. ಈ ಮೊದಲು ರಾಮೆ ಅಂಡಾಲುಂ ರಾವಣೆ ಅಂಡಾಲುಂ (Raame Aandalum Raavane Aandalum) ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಆಗಿತ್ತು. ಉದನ್ಪಿರಪ್ಪೆ ಸಿನಿಮಾವು ಅಕ್ಟೋಬರ್ 14ರಂದು ನೇರವಾಗಿ ಅಮೆಜಾನ್ ಪ್ರೈಮ್‍ನಲ್ಲಿ ಬಿಡುಗಡೆ ಆಗಲಿದೆ. ಎರ ಶರವಣನ್ ಬರೆದು , ನಿರ್ದೇಶಿಸಿರುವ ಈ ಸಿನಿಮಾದಲ್ಲಿ ಜ್ಯೋತಿಕಾ ಸೇರಿದಂತೆ ತಮಿಳಿನ ಪ್ರಮುಖ ಕಲಾವಿದರು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಇದು ನಟಿ ಜ್ಯೋತಿಕಾ ಅವರ 50ನೇ ಸಿನಿಮಾ ಎಂಬುವುದೇ ಅವರ ಅಭಿಮಾನಿಗಳ ಪಾಲಿಗೆ ವಿಶೇಷ.

ಹೃದಯ ಸ್ಪರ್ಶಿ ಕೌಟುಂಬಿಕ ಕಥಾ ಹಂದರ ಹೊಂದಿರುವ ಈ ಸಿನಿಮಾ 2021 ಅಕ್ಟೋಬರ್ 14ರಂದು ತಮಿಳು ಹಾಗೂ ತೆಲುಗಿನಲ್ಲಿ ರಕ್ತ ಸಂಬಂಧಂ ಎಂಬ ಹೆಸರಿನಲ್ಲಿ , ಸುಮಾರು 240ಕ್ಕೂ ಹೆಚ್ಚು ದೇಶ ಹಾಗೂ ಪ್ರಾಂತ್ಯಗಳಲ್ಲಿ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆ ಆಗಲಿದೆ.ಹಲವು ವರ್ಷಗಳಿಂದ ಬಹುಭಾಷಾ ಸಿನಿಮಾಗಳಲ್ಲಿ ಅತ್ಯುತ್ತಮ ಪಾತ್ರಗಳನ್ನು ನಿರ್ವಹಿಸುವ ಮೂಲಕ, ತಮ್ಮ ಅದ್ಭುತ ಅಭಿನಯದಿಂದಾಗಿ ಲಕ್ಷಾಂತರ ಅಭಿಮಾನಿಗಳ ಮನ ಗೆದ್ದಿರುವ ಜ್ಯೋತಿಕಾರದ್ದು ಇದು 50ನೇ ಚಿತ್ರವಾಗಲಿದೆ. ಜ್ಯೋತಿಕಾ ಹಿಂದೆ ಕನ್ನಡ ಸಿನಿಮಾ ಒಂದರಲ್ಲಿ ಉಪೇಂದ್ರ ಅವರಿಗೆ ನಾಯಕಿಯಾಗಿಯೂ ನಟಿಸಿದ್ದರು. ಉದನ್ಪಿರಪ್ಪೆ ವಿಶ್ವಾದ್ಯಂತ ತಮಿಳು ಸಿನಿಮಾ ಅಭಿಮಾನಿಗಳ ಪಾಲಿಗೆ ಬಹುನಿರೀಕ್ಷಿತ ಚಿತ್ರವಾಗಿದ್ದು, ಈ ಕೌಟುಂಬಿಕ ಸಿನಿಮಾದಲ್ಲಿ ಶಶಿ ಕುಮಾರ್ , ಸಮುದ್ರ ಕಣಿ, ಕಲೈಯರಸನ್, ಸೂರಿ ಮುಂತಾದವರು ತಾರಾ ಬಳಗದಲ್ಲಿ ಇದ್ದಾರೆ.

“ಕೌಟುಂಬಿಕ ಸಂಬಂಧಗಳ ಒಂದು ಬಲವಾದ ಎಳೆಯನ್ನು ಭಾವತಾನ್ಮಕವಾಗಿ ಶಕ್ತಿಯುತವಾದ ನಿರೂಪಣೆಯಲ್ಲಿ ಹಣೆದಿರುವ , ಉದನ್ಪಿರಪ್ಪೆ ಒಡಹುಟ್ಟಿದವರ ಪ್ರೀತಿ, ಸಂಬಂಧಗಳು ಮತ್ತು ಭಾವನೆಗಳ ಕುರಿತ ಆಳವಾದ ಒಂದು ಕಥೆ” ಎಂದು ನಿರ್ಮಾಪಕರು ತಮ್ಮ ಸಿನಿಮಾದ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಇನ್​ಸ್ಟಾಗ್ರಾಂಗೆ ಲಗ್ಗೆ ಇಟ್ಟ ನಟಿ Jyotika: ಕೆಲವೇ ನಿಮಿಷಗಳಲ್ಲಿ 1 ಮಿಲಿಯನ್​ಗೂ ಹೆಚ್ಚು ಹಿಂಬಾಲಕರು..!

Udanpirappe ಸಿನಿಮಾವನ್ನು ಸೂರ್ಯ ಮತು ಜ್ಯೋತಿಕಾ ನಿರ್ಮಿಸಿದ್ದಾರೆ, ರಾಜಶೇಖರ್ಕರ್ಪೂರಸುಂದರಪಾಂಡಿಯನ್ ಈ ಸಿನಿಮಾದ ಸಹ ನಿರ್ಮಾಪಕರು. ಸಿನಿಮಾಕ್ಕೆ ವೆಲ್ರಾಜ್ ಛಾಯಾಗ್ರಹಣ, ಆ್ಯಂಟೊನಿ ಎಲ್ ರೂಬೆನ್ ಸಂಕಲನವಿದೆ. ಡಿ. ಇಮಾಮ್ ಸಂಗೀತ ಸಂಯೋಜನೆ ಮಾಡಿದ್ದಾರೆ.

ಈ ಚಿತ್ರದ ಶೂಟಿಂಗ್‍ಗಾಗಿ ತಂಜಾವೂರಿಗೆ ಹೋಗಿದ್ದಾಗ, ಅಲ್ಲಿನ ದೇವಸ್ಥಾನದ ಬಗ್ಗೆ ಜ್ಯೋತಿಕಾ ನೀಡಿದ್ದ ಹೇಳಿಕೆ, ಬಹಳಷ್ಟು ಜನರನ್ನು ಕೆರಳಿಸುವ ಮೂಲಕ ವಿವಾದಕ್ಕೆ ಕಾರಣವಾಗಿತ್ತು. ಆದರೆ ಅವರ ಹೇಳಿಕೆಗೆ ತಮಿಳು ಚಿತ್ರರಂಗದ ಹಲವಾರು ಮಂದಿ ಬೆಂಬಲ ಸೂಚಿಸಿದ್ದರು.

ಇದನ್ನೂ ಓದಿ: ಸರ್ಕಾರಿ ಆಸ್ಪತ್ರೆಗೆ 25 ಲಕ್ಷ ರೂ. ದಾನ ಮಾಡಿದ ತಮಿಳಿನ ಖ್ಯಾತ ನಟಿ!

ಇತ್ತೀಚೆಗೆ ಸೂರ್ಯ ಅವರ 2 ಡಿ ಎಂಟರ್‌ಟೈನ್‌ಮೆಂಟ್ ನಿರ್ಮಾಣ ಸಂಸ್ಥೆಯಿಂದ ರಾಮೆ ಅಂಡಾಲುಂ ರಾವಣೆ ಅಂಡಾಲುಂ ಸಿನಿಮಾ ಬಿಡುಗಡೆ ಆಗಿತ್ತು. ಅಮೆಜಾನ್ ಪ್ರೈಮ್‍ನಲ್ಲಿ ಬಿಡುಗಡೆಯಾದ ಈ ಸಿನಿಮಾ ವೀಕ್ಷಕರಿಂದ ಮಾತ್ರವಲ್ಲ ಚಿತ್ರ ವಿಮರ್ಶಕರಿಂದಲೂ ಅತ್ಯುತ್ತಮ ಪ್ರತಿಕ್ರಿಯೆ ಪಡೆದಿದೆ.

ಮಿಥುನ್ ಮನಿಕ್ಕಮ್ ಮತ್ತು ರಮ್ಯಾ ಪಾಂಡಿಯನ್ ಈ ಸಿನಿಮಾದಲ್ಲಿ ಮುಖ್ಯ ಪಾತ್ರ ವಹಿಸಿದ್ದರು. ತನ್ನ ಹಸುಗಳನ್ನು ಕಳೆದುಕೊಳ್ಳುವ ರೈತನೊಬ್ಬನ ಕುರಿತ ಹಳ್ಳಿಗಾಡಿನ ಕಥೆಯುಳ್ಳ ಸಿನಿಮಾ ಇದಾಗಿತ್ತು. ಜ್ಯೋತಿಕಾ ಅವರು ಇತ್ತೀಚೆಗಷ್ಟೆ ಇನ್​ಸ್ಟಾಗ್ರಾಂನಲ್ಲಿ ಖಾತೆ ತೆರೆದಿದ್ದಾರೆ. ಪತಿ ಸೂರ್ಯ ಸಹ ಮಡದಿ ಜ್ಯೋತಿಕಾಗೆ ವಿಶೇಷವಾಗಿ ಸ್ವಾಗತ ಕೋರಿದ್ದಾರೆ. ಸದ್ಯ ಜ್ಯೋತಿಕಾ ಅವರು ಪತಿ ಸೂರ್ಯ, ಮೈದುನ ಕಾರ್ತಿ ಸೇರಿದಂತೆ ನಾಲ್ವರನ್ನು ಮಾತ್ರ ಹಿಂಬಾಲಿಸುತ್ತಿದ್ದಾರೆ. ಇನ್ನು ಜ್ಯೋತಿಕಾ ಖಾತೆ ತೆರೆಯುತ್ತಿದ್ದಂತೆ ಅಭಿಮಾನಿಗಳು ಮುಗಿ ಬಿದ್ದು ಫಾಲೋ ಮಾಡಲಾರಂಭಿಸಿದ್ದಾರೆ. ಕೆಲವೇ ನಿಮಿಷಗಳಲ್ಲಿ 1.5 ಮಿಲಿಯನ್​ ಹಿಂಬಾಲಕರಾಗಿದ್ದಾರೆ.
Published by:Anitha E
First published: