news18 Updated:July 19, 2020, 5:42 PM IST
ವಿಷ್ಣು ವಿಶಾಲ್ -ಜ್ವಾಲಾ ಗುಟ್ಟಾ
- News18
- Last Updated:
July 19, 2020, 5:42 PM IST
ಕಾಲಿವುಡ್ ನಟ ವಿಷ್ಣು ವಿಶಾಲ್ ಶುಕ್ರವಾರದಂದು ತಮ್ಮ 36ನೇ ಹಟುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಅಷ್ಟು ಮಾತ್ರವಲ್ಲದೆ, ಅದೇ ದಿನ ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ ಅವರು ವಿಷ್ಣು ವಿಶಾಲ್ ಮನೆಗೆ ದಿಢೀರ್ ಭೇಟಿ ನೀಡುವ ಮೂಲಕ ಅವರಿಗೆ ಸರ್ಪ್ರೈಸ್ ನೀಡಿದ್ದಾರೆ. ಸದ್ಯ ಇವರಿಬ್ಬರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಮತ್ತೊಂದೆಡೆ ಕಾಲಿವುಡ್ನಲ್ಲಿ ವಿಷ್ಣು ವಿಶಾಲ್ ಮತ್ತು ಜ್ವಾಲಾ ಗುಟ್ಟಾ ಅವರ ನಡುವೆ ಲವ್ಚಿಡವ್ವಿ ನಡೀತಾ ಇದೆ ಎಂಬ ಮಾತುಗಳು ಕೂಡ ಕೇಳಿಬರುತ್ತಿದೆ. ಶೀಘ್ರದಲ್ಲೇ ಈ ಜೋಡಿಗಳು ಹಸೆಮಣೆ ಏರಲಿದ್ದಾರೆ ಎಂಬ ಗುಸುಗುಸು ಮಾತುಗಳು ಹರಿದಾಡುತ್ತಿದೆ. ಜ್ವಾಲಾ ಗುಟ್ಟಾ ಕೂಡ ತಮ್ಮ ಮದುವೆ ಸಿದ್ಧತೆ ಬಗ್ಗೆ ಸಂದರ್ಶನದಲ್ಲೊಂದರಲ್ಲಿ ಹೇಳಿಕೊಂಡಿದ್ದರು.
ಇತ್ತೀಚೆಗೆ ವಿಶಾಲ್ಗೆ ಅಭಿಮಾನಿಗಳು ಜ್ವಾಲಾ ಗುಟ್ಟರೊಂದಿಗಿನ ಸ್ನೇಹದ ಬಗ್ಗೆ ಪ್ರಶ್ನೆ ಮುಂದಿಟ್ಟಿದ್ದರು. ಇದಕ್ಕೆ ಉತ್ತರಿಸಿದ ವಿಶಾಲ್ ತನ್ಮ ತಂಗಿಯ ಮದುವೆ ಸಂಗೀತ ಕಾರ್ಯಕ್ರಮದಲ್ಲಿ ಜ್ವಾಲಾರನ್ನು ಮೊದಲು ಭೇಟಿ ಮಾಡಿದ್ದೆ ಎಂದು ಹೇಳಿಕೊಂಡಿದ್ದಾರೆ.

ವಿಷ್ಣು ವಿಶಾಲ್ -ಜ್ವಾಲಾ ಗುಟ್ಟಾ

ವಿಷ್ಣು ವಿಶಾಲ್ -ಜ್ವಾಲಾ ಗುಟ್ಟಾ
ಆದರೀಗ ಟಾಲಿವುಡ್ನಲ್ಲಿ ಹರಿದಾಡುತ್ತಿರುವ ಮಾಹಿತಿ ಪ್ರಕಾರ ವಿಶಾಲ್ ಮತ್ತು ಜ್ವಾಲ ಗುಟ್ಟಾರನ್ನು ಪ್ರೀತಿಸುತ್ತಿದ್ದಾರೆ. ಸದ್ಯದಲ್ಲೇ ಈ ಜೋಡಿ ಮದುವೆಯಾಗಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ.
Published by:
Harshith AS
First published:
July 19, 2020, 5:39 PM IST