• Home
  • »
  • News
  • »
  • entertainment
  • »
  • Salman Khan: ಸಲ್ಲು ಭಾಯ್​ ಕಥೆ ಮುಗಿಸೋಕೆ ಬಂದಿದ್ದ ಅಪ್ರಾಪ್ತ, ಬಾಲಾಪರಾಧಿ ಬಾಯ್ಬಿಟ್ಟ ಸತ್ಯ ಕಂಡು ಖಾಕಿ ಶಾಕ್​!

Salman Khan: ಸಲ್ಲು ಭಾಯ್​ ಕಥೆ ಮುಗಿಸೋಕೆ ಬಂದಿದ್ದ ಅಪ್ರಾಪ್ತ, ಬಾಲಾಪರಾಧಿ ಬಾಯ್ಬಿಟ್ಟ ಸತ್ಯ ಕಂಡು ಖಾಕಿ ಶಾಕ್​!

ನಟ ಸಲ್ಮಾನ್​​ ಖಾನ್​

ನಟ ಸಲ್ಮಾನ್​​ ಖಾನ್​

ಪಂಜಾಬ್ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಮೇ 9 ರಂದು ನಡೆದ RPG (ರಾಕೆಟ್ ಚಾಲಿತ ಗ್ರೆನೇಡ್) ದಾಳಿಗೆ ಸಂಬಂಧಿಸಿದಂತೆ ಒಬ್ಬ ಬಾಲಾಪರಾಧಿ ಸೇರಿದಂತೆ ಇಬ್ಬರು ಭಯೋತ್ಪಾದಕ ಆರೋಪಿಗಳನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ನಟ ಸಲ್ಮಾನ್ ಖಾನ್‌ರನ್ನು ಟಾರ್ಗೆಟ್ ಮಾಡುವಂತೆ ಬಾಲಾಪರಾಧಿಗೆ ನಿರ್ದೇಶಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಮುಂದೆ ಓದಿ ...
  • Share this:

ಮೊಹಾಲಿ (Mohali) ಯಲ್ಲಿರುವ ಪಂಜಾಬ್ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಮೇ 9 ರಂದು ನಡೆದ RPG (ರಾಕೆಟ್ ಚಾಲಿತ ಗ್ರೆನೇಡ್) ದಾಳಿಗೆ ಸಂಬಂಧಿಸಿದಂತೆ ಒಬ್ಬ ಬಾಲಾಪರಾಧಿ (Juvenile Delinquent) ಸೇರಿದಂತೆ ಇಬ್ಬರು ಭಯೋತ್ಪಾದಕ ಆರೋಪಿಗಳನ್ನು ದೆಹಲಿ (Delhi) ಪೊಲೀಸರು ಬಂಧಿಸಿದ್ದಾರೆ. ನಟ ಸಲ್ಮಾನ್ ಖಾನ್‌ (Salman Khan) ರನ್ನು ಟಾರ್ಗೆಟ್ (Target) ಮಾಡುವಂತೆ ಬಾಲಾಪರಾಧಿಗೆ ನಿರ್ದೇಶಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಾಪರಾಧಿಯಲ್ಲದೆ, ದೆಹಲಿ ಪೊಲೀಸರ ವಿಶೇಷ ತಂಡವು ಸುಧಾರಿತ ಸ್ಫೋಟಕ ಸಾಧನ (ಐಇಡಿ) ಮರುಪಡೆಯುವಿಕೆಗೆ ಸಂಬಂಧಿಸಿದಂತೆ ಅರ್ಷದೀಪ್ ಸಿಂಗ್ ಎಂದು ಗುರುತಿಸಲಾದ ಇನ್ನೊಬ್ಬ ವ್ಯಕ್ತಿಯನ್ನು ಆಗಸ್ಟ್ 4 ರಂದು ಹರಿಯಾಣದಲ್ಲಿ ಬಂಧಿಸಿರುವುದಾಗಿ ತಿಳಿಸಿದ್ದಾರೆ.


ಪಂಜಾಬ್ ಪೊಲೀಸ್‌ ಗುಪ್ತಚರ ಪ್ರಧಾನ ಕಛೇರಿಯ ಮೇಲೆ ಗ್ರೆನೇಡ್ ದಾಳಿ


ಪೋಲೀಸರ ಪ್ರಕಾರ, ಲಾರೆನ್ಸ್ ಬಿಷ್ಣೋಯ್ ಮತ್ತು ಜಗ್ಗು ಭಗವಾನ್ ಪುರಿಯಾ ಸಿಂಡಿಕೇಟ್, ಬಾಲಾಪರಾಧಿ ಜೊತೆಗೆ ದೀಪಕ್ ಸುರಕ್‌ಪುರ್ (ಪ್ರಸ್ತುತ ತಲೆಮರೆಸಿಕೊಂಡಿದ್ದಾರೆ) ಮತ್ತು ಮೋನು ದಾಗರ್‌ಗೆ (ಜೈಲಿನಲ್ಲಿರುವ) ನಟ ಸಲ್ಮಾನ್ ಖಾನ್ ಅವರ ಮೇಲೆ ದಾಳಿ ನಡೆಸುವುದಕ್ಕೆ ನಿರ್ದೇಶನ ನೀಡಿದ್ದರು. ಮೇ 9 ರಂದು ರಾಕೆಟ್ ಚಾಲಿತ ಗ್ರೆನೇಡ್ ಅನ್ನು ಮೊಹಾಲಿಯಲ್ಲಿರುವ ಪಂಜಾಬ್ ಪೊಲೀಸ್‌ ಗುಪ್ತಚರ ಪ್ರಧಾನ ಕಛೇರಿಯ ಮೇಲೆ ಹಾರಿಸಲಾಯಿತು.


ಸಲ್ಮಾನ್ ಖಾನ್‌ರನ್ನು ಟಾರ್ಗೆಟ್ ಮಾಡಿದ್ದ ದಾಳಿಕೋರರು


ತನಿಖೆಯ ಸಮಯದಲ್ಲಿ, ದಾಳಿಯು ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‌ಐ) ಮತ್ತು ಸ್ಥಳೀಯ ದರೋಡೆಕೋರರ ಬೆಂಬಲದೊಂದಿಗೆ ಬಬ್ಬರ್ ಖಾಲ್ಸಾ ಇಂಟರ್‌ನ್ಯಾಶನಲ್ (ಬಿಕೆಐ) ನ ಪಿತೂರಿ ಎಂದು ದೃಢಪಟ್ಟಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ಬಾಲಾಪರಾಧಿ ಬಾಯ್ಬಿಟ್ಟಿದ್ದೇನು?


ಗ್ರೆನೇಡ್ ದಾಳಿಯನ್ನು ನಡೆಸಿರುವ ದಾಳಿಕೋರರನ್ನು ಪೊಲೀಸರು ಗುರುತಿಸಿದ್ದು ಬಾಲಾಪರಾಧಿ ಉತ್ತರ ಪ್ರದೇಶದ ಫೈಜಾಬಾದ್ ನಿವಾಸಿಯಾಗಿದ್ದು ಮತ್ತು ದೀಪಕ್ ಹರಿಯಾಣದ ಸುರಖ್‌ಪುರ ನಿವಾಸಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಾಳಿಯನ್ನು ದರೋಡೆಕೋರ-ಬದಲಾದ ಐಎಸ್ಐ ಗೂಂಡಾ ಹರ್ವಿಂದರ್ ಸಿಂಗ್ ಅಲಿಯಾಸ್ ರಿಂಡಾ ಎಂಬಾತ ಆಯೋಜಿಸಿದ್ದಾನೆ ಎಂದು ಹೇಳಲಾಗಿದ್ದು ಮತ್ತೊಬ್ಬ ಆರೋಪಿ ಪರಾರಿಯಾಗಿದ್ದು ಆತನನ್ನು ಕೆನಡಾ ಮೂಲದ ದರೋಡೆಕೋರ- ಭಯೋತ್ಪಾದಕ ಲಖ್ಬೀರ್ ಸಿಂಗ್ ಲಾಂಡಾ – ದಾಳಿಗೆ ಸಂಬಂಧಿಸಿದ ಸಂಪನ್ಮೂಲಗಳನ್ನು ಹಂಚಿಕೊಳ್ಳುವಲ್ಲಿ ರಿಂಡಾ ಜೊತೆ ಕೈಜೋಡಿಸಿದ್ದಾನೆ ಎಂಬುದು ತಿಳಿದು ಬಂದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.


ಗ್ರೆನೇಡ್ ದಾಳಿಯ ಮಾಸ್ಟರ್ ಮೈಂಡ್‌ಗಳು


ಹರಿಯಾಣದ ಕರ್ನಾಲ್‌ನಲ್ಲಿ ಪಾಕ್‌ಗೆ ಸಂಬಂಧಿಸಿದ ನಾಲ್ವರು ಶಂಕಿತ ಉಗ್ರರನ್ನು ಬಂಧಿಸಿದ ನಂತರ ನವಾನ್‌ಶಹರ್‌ನಲ್ಲಿರುವ ಅಪರಾಧ ತನಿಖಾ ಸಂಸ್ಥೆ (ಸಿಐಎ) ಕಚೇರಿಯಲ್ಲಿ ನಡೆದ ಗ್ರೆನೇಡ್ ದಾಳಿಯಲ್ಲಿ ರಿಂಡಾ ಹೆಸರು ಈಗಾಗಲೇ ಕೇಳಿಬಂದಿತ್ತು ಎಂಬುದಾಗಿ ಪೊಲೀಸ್ ಇಲಾಖೆ ತಿಳಿಸಿದೆ. ಮಹಾರಾಷ್ಟ್ರದ ನಾಂದೇಡ್‌ನಲ್ಲಿ ಏಪ್ರಿಲ್ 5 ರಂದು ಬಿಲ್ಡರ್ ಸಂಜಯ್ ಬಿಯಾನಿ ಹತ್ಯೆ ಮತ್ತು ಕಳೆದ ವರ್ಷ ಆಗಸ್ಟ್ 4 ರಂದು ಅಮೃತಸರದ ಖಾಸಗಿ ಆಸ್ಪತ್ರೆಯ ಹೊರಗೆ ದರೋಡೆಕೋರ ರಾಣಾ ಕಂಡೋವಾಲಿಯಾ ಹತ್ಯೆಯಲ್ಲೂ ಬಾಲಾಪರಾಧಿ ಪ್ರಮುಖ ಆರೋಪಿಯಾಗಿದ್ದು ಈತನಿಗಾಗಿ ತಂಡ ಶೋಧ ನಡೆಸುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಲ್ಲಿ ಕಾಂಡೋವಾಲಿಯಾ ಪ್ರಮುಖ ಶೂಟರ್ ಎಂಬುದು ತಿಳಿದು ಬಂದಿದೆ.


ಇದನ್ನೂ ಓದಿ: ರಣಬೀರ್ ಹುಟ್ಟುಹಬ್ಬಕ್ಕೆ ಅತ್ತೆ ಸೋನಿ ಕಡೆಯಿಂದ ಸಿಕ್ಕ ಗಿಫ್ಟ್ ಏನು ಗೊತ್ತಾ?


ಉಗ್ರರ ಜೊತೆ ಸಂಪರ್ಕ ಹೊಂದಿದ್ದ ಆಪಾದಿತರು


ಪಂಜಾಬ್‌ನ ತರ್ನ್ ತರಣ್ ನಿವಾಸಿ ಅರ್ಶ್‌ದೀಪ್ ಸಿಂಗ್, ಕುರುಕ್ಷೇತ್ರದಲ್ಲಿ ಐಇಡಿ ವಸೂಲಿ ಪ್ರಕರಣದಲ್ಲಿ ಮತ್ತು ತರನ್ ತರಣ್‌ನಲ್ಲಿ ಇದೇ ರೀತಿಯ ಪ್ರಕರಣ ಅಂತೆಯೇ ಮಾದಕ ದ್ರವ್ಯ ಮತ್ತು ಶಸ್ತ್ರಾಸ್ತ್ರ ಪೂರೈಕೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಅಪರಾಧಿಯಾಗಿದ್ದು ಪೊಲೀಸರು ಈತನಿಗಾಗಿ ಬಲೆ ಬೀಸಿದ್ದರು ಎಂದು ತಿಳಿಸಿದ್ದಾರೆ.


ತನಿಖೆಯ ಸಮಯದಲ್ಲಿ, ಪೊಲೀಸರು ಸಿಂಗ್ ಮತ್ತು ಬಾಲಾಪರಾಧಿಯನ್ನು ಗುಜರಾತ್‌ನ ಜಾಮ್‌ನಗರದಿಂದ ಬಂಧಿಸಿದ್ದಾರೆ ಎಂದು ವಿಶೇಷ ಪೊಲೀಸ್ ಕಮಿಷನರ್ (ವಿಶೇಷ ಕೋಶ) ಎಚ್‌ಜಿಎಸ್ ಧಲಿವಾಲ್ ತಿಳಿಸಿದ್ದಾರೆ. ಬಾಲಾಪರಾಧಿ ಮತ್ತು ಸಿಂಗ್ ಬಂಧನದ ಭೀತಿಯೊಂದಿಗೆ, ರಿಂಡಾ ಮತ್ತು ಲಾಂಡಾ ನಡುವಿನ ನಂಟು ಬಹಿರಂಗವಾಗಿದೆ. ಬಾಲಾಪರಾಧಿಯ ರಿಂಡಾ ಕೆಳಗೆ ಕೆಲಸ ಮಾಡುತ್ತಿದ್ದರೆ, ಅರ್ಷದೀಪ್‌ಗೆ ಬೇಕಾದ ನಿರ್ದೇಶನಗಳನ್ನು ಲಾಂಡಾ ನೀಡುತ್ತಿದ್ದನು ಎಂಬುದು ತನಿಖೆಯಿಂದ ತಿಳಿದು ಬಂದಿದೆ.


ಇದನ್ನೂ ಓದಿ: ಲೈಂಗಿಕ ಕಿರುಕುಳದ ಆರೋಪ; ಬಿಗ್ ಬಾಸ್​ನಿಂದ ಈ ಸ್ಪರ್ಧಿಯನ್ನು ಹೊರಹಾಕಲು ಒತ್ತಾಯ


ಲಾರೆನ್ಸ್ ಬಿಷ್ಣೋಯ್ ಬಾಲಾಪರಾಧಿಯೊಂದಿಗೆ ದೀಪಕ್ ಸುರಕ್‌ಪುರ್ ಮತ್ತು ಮೋನು ದಾಗರ್‌ಗೆ ಸಲ್ಮಾನ್ ಖಾನ್‌ ಮೇಲೆ ದಾಳಿ ನಡೆಸುವ ಟಾಸ್ಕ್ ನೀಡಿದ್ದರು ಎಂದು ಬಾಲಾಪರಾಧಿ ತಿಳಿಸಿದ್ದಾನೆ. ನಂತರ ಖಾನ್ ಬದಲಿಗೆ ಕಾಂಡೋವಾಲಿಯಾರ ಮೇಲೆ ದಾಳಿ ನಡೆಸುವ ತೀರ್ಮಾನವನ್ನು ತಂಡ ಕೈಗೊಂಡಿತು ಎಂಬುದು ತಿಳಿದು ಬಂದಿದೆ. ಗ್ರೆನೇಡ್ ದಾಳಿಯ ನಂತರ ಬೇರೆ ಬೇರೆ ರೂಪದಲ್ಲಿ ರಿಂಡಾ ಇವರುಗಳಿಗೆ ಹಣ ಕಳುಹಿಸುತ್ತಿದ್ದ ಅಂತೆಯೇ ಸಂಜಯ್ ಬಯಾನಿ ಹತ್ಯೆಗೆ ರೂ 9 ಲಕ್ಷ ರೂಪಾಯಿ ಪಡೆದಿರುವುದಾಗಿ ಅಪರಾಧಿಗಳು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Published by:ವಾಸುದೇವ್ ಎಂ
First published: