Justin Bieber: ಹಾಲಿವುಡ್ನ ಖ್ಯಾತ ಗಾಯಕ ಜಸ್ಟಿನ್ ಬೀಬರ್ಗೆ ಪಾರ್ಶ್ವವಾಯು, ಗಂಭೀರ ಸಮಸ್ಯೆಯಿಂದ ಬಳಲುತ್ತಿದ್ದಾರಂತೆ ಪಾಪ್ ಸಿಂಗರ್
ಬೀಬರ್ ಅವರೇ ತಮ್ಮ ಇನ್ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ತಾವು ‘ರಾಮ್ಸೆ ಹಂಟ್ ಸಿಂಡ್ರೋಮ್’ ನಿಂದ ಬಳಲುತ್ತಿದ್ದಾರೆ ಎಂಬ ಆಘಾತಕಾರಿ ಸುದ್ದಿವೊಂದನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ, ಇದು ಅವರಿಗೆ ಭಾಗಶಃ ಮುಖದ ಪಾರ್ಶ್ವವಾಯುವಿಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
‘ರಾಮ್ಸೆ ಹಂಟ್ ಸಿಂಡ್ರೋಮ್’ ನಿಂದ ಬಳಲುತ್ತಿರುವ ಜಸ್ಟಿನ್ ಬೈಬರ್
28 ವರ್ಷದ ಪಾಪ್ ಗಾಯಕರಾದ (Pop Singer) ಜಸ್ಟಿನ್ ಬೀಬರ್ (Justin Bieber) ಅವರಿಗೆ ಇದೇ ವರ್ಷದ ಫೆಬ್ರುವರಿ ತಿಂಗಳಲ್ಲಿ ಕೋವಿಡ್-19 ಸೋಂಕು ತಗುಲಿತ್ತು ಎಂದು ಹೇಳಿ ಲಾಸ್ ವೇಗಾಸ್ ನಲ್ಲಿ ತಮ್ಮ ‘ಜಸ್ಟಿಸ್ ವರ್ಲ್ಡ್ ಟೂರ್ ನ ಭಾಗವಾಗಿ ನೀಡಬೇಕಿದ್ದ ಶೋ ವನ್ನು ಮುಂದೂಡಬೇಕಾಗಿ ಬಂದದ್ದು ಬಹುತೇಕ ಅಭಿಮಾನಿಗಳಿಗೆ ಗೊತ್ತಿರುವ ವಿಚಾರವೇ ಆಗಿತ್ತು. ಇವರ ಅಭಿಮಾನಿಗಳಿಗೆ (Fans) ಮತ್ತೊಂದು ಆಘಾತಕಾರಿ ಸುದ್ದಿವೊಂದು ಬಂದಿದೆ. ಹೌದು, ಖುದ್ದು ಬೀಬರ್ ಅವರೇ ತಮ್ಮ ಇನ್ಸ್ಟಾಗ್ರಾಮ್ ಖಾತೆಯ (Instagram) ಪುಟದಲ್ಲಿ ತಾವು ‘ರಾಮ್ಸೆ ಹಂಟ್ ಸಿಂಡ್ರೋಮ್’ (Ramsay Hunt Syndrome) ನಿಂದ ಬಳಲುತ್ತಿದ್ದಾರೆ ಎಂಬ ಆಘಾತಕಾರಿ ಸುದ್ದಿವೊಂದನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ, ಇದು ಅವರಿಗೆ ಭಾಗಶಃ ಮುಖದ ಪಾರ್ಶ್ವವಾಯುವಿಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
ಅನಾರೋಗ್ಯದ ಕಾರಣ ‘ಜಸ್ಟೀಸ್ ವರ್ಲ್ಡ್ ಟೂರ್’ ಕಾರ್ಯಕ್ರಮ ರದ್ದು:
ಅನಾರೋಗ್ಯದ ಕಾರಣದಿಂದಾಗಿ ಅವರು ತಮ್ಮ ‘ಜಸ್ಟೀಸ್ ವರ್ಲ್ಡ್ ಟೂರ್’ ಕಾರ್ಯಕ್ರಮವನ್ನು ಮುಂದುವರಿಸುವುದಿಲ್ಲ ಎಂದು ಅವರು ಇತ್ತೀಚೆಗೆ ಘೋಷಿಸಿದ ನಂತರ ಈ ಸುದ್ದಿ ಹೊರ ಬಂದಿದೆ ನೋಡಿ. ಇವರು ಹಂಚಿಕೊಂಡ ವೀಡಿಯೋದಲ್ಲಿ "ನೀವು ನೋಡುವಂತೆ, ಈ ಕಣ್ಣುಗಳು ಮಿಟುಕಿಸುತ್ತಿಲ್ಲ, ನನ್ನ ಮುಖದ ಒಂದು ಬದಿಯಿಂದ ನನಗೆ ನಗಲು ಸಹ ಸಾಧ್ಯವಾಗುತ್ತಿಲ್ಲ, ಈ ಮೂಗಿನ ಹೊಳ್ಳೆಯನ್ನು ಅತ್ತ ಇತ್ತ ಹೊರಳಾಡಿಸಲು ಸಹ ಆಗುತ್ತಿಲ್ಲ" ಎಂದು ಅವರು ಹೇಳುವುದನ್ನು ಕಾಣಬಹುದು.
ಅವರು ತಮ್ಮ ಶೋ ವನ್ನು ಏಕೆ ರದ್ದುಗೊಳಿಸಿದರು ಎಂಬುದನ್ನು ವಿವರಿಸುತ್ತಾ " ನನ್ನ ಮುಖದ ಒಂದು ಬದಿಯಲ್ಲಿ ಸಂಪೂರ್ಣ ಪಾರ್ಶ್ವವಾಯು ಉಂಟಾಗಿರುವ ರೀತಿ ಆಗಿದೆ. ಆದ್ದರಿಂದ ಮುಂದಿನ ಪ್ರದರ್ಶನಗಳ ರದ್ದತಿಯಿಂದ ಹತಾಶೆಗೊಂಡ ನನ್ನ ಅಭಿಮಾನಿಗಳಿಗೆ, ನಾನು ದೈಹಿಕವಾಗಿ, ಸ್ಪಷ್ಟವಾಗಿ, ಅವುಗಳನ್ನು ಮಾಡಲು ಸಮರ್ಥನಲ್ಲ ಎಂದು ತಿಳಿಸಲು ಬಯಸುತ್ತೇನೆ. ನೀವು ನೋಡುವಂತೆ ಇದು ತುಂಬಾ ಗಂಭೀರವಾಗಿದೆ" ಎಂದು ಸಹ ಬೈಬರ್ ಈ ವೀಡಿಯೋದಲ್ಲಿ ಹೇಳಿದ್ದಾರೆ.
ಪಾಪ್ ಗಾಯಕ ‘ರಾಮ್ಸೆ ಹಂಟ್ ಸಿಂಡ್ರೋಮ್’ ಬರಲು ಕಾರಣವೇನು ಎಂದು ವೀಡಿಯೋದಲ್ಲಿ ವಿವರಿಸಿದ್ದಾರೆ. ನಂತರ ಅವರು ಸಾಮಾನ್ಯ ಸ್ಥಿತಿಗೆ ಮರಳಲು ಏನು ಮಾಡಬೇಕೋ ಅದನ್ನು ಮಾಡುತ್ತಿದ್ದಾರೆ ಎಂದು ಸಹ ಅವರ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಮುಖದ ವ್ಯಾಯಾಮಗಳ ಜೊತೆಗೆ, ಅವರು ತುಂಬಾನೇ ವಿಶ್ರಾಂತಿ ಸಹ ಪಡೆಯುತ್ತಿದ್ದಾರೆ ಮತ್ತು ಸಂಪೂರ್ಣವಾಗಿ ಗುಣಮುಖರಾಗಿ ಹಿಂತಿರುಗಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ" ಎಂದು ಜಸ್ಟಿನ್ ಹೇಳಿದ್ದಾರೆ.
ಗಾಯಕ ತಮ್ಮ ವೀಡಿಯೋ ಪೋಸ್ಟ್ ಗೆ "ದಯವಿಟ್ಟು ಗಮನಿಸಿ.. ನಾನು ನಿಮ್ಮನ್ನು ತುಂಬಾನೇ ಪ್ರೀತಿಸುತ್ತೇನೆ ಮತ್ತು ನಿಮ್ಮ ಪ್ರಾರ್ಥನೆಯಲ್ಲಿ ನನ್ನ ಬಗ್ಗೆ ದೇವರಲ್ಲಿ ಪ್ರಾರ್ಥಿಸಿ" ಎಂದು ಶೀರ್ಷಿಕೆಯನ್ನು ಸಹ ಬರೆದಿದ್ದಾರೆ.
ಹರ್ಪಿಸ್ ಜೋಸ್ಟರ್ ಒಟಿಕಸ್ ಎಂದೂ ಸಹ ಕರೆಯಲ್ಪಡುವ ‘ರಾಮ್ಸೆ ಹಂಟ್ ಸಿಂಡ್ರೋಮ್’ ವೆರಿಸೆಲ್ಲಾ-ಜೋಸ್ಟರ್ ವೈರಸ್ ಸೋಂಕಿನಿಂದ ಸಂಭವಿಸುವ ರೋಗವಾಗಿದೆ. ಇದು ಕಪಾಲದ ನರದ ಜೆನೆಕ್ಯುಲೇಟ್ ಗ್ಯಾಂಗ್ಲಿಯನ್ನ ಉರಿಯೂತಕ್ಕೆ ಕಾರಣವಾಗುತ್ತದೆ ಎಂದು ಯುನೈಟೆಡ್ ಸ್ಟೇಟ್ಸ್ ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ತಿಳಿಸಿದೆ.
Published by:shrikrishna bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ