ಸಾಮಾನ್ಯವಾಗಿ ಚಿತ್ರೋದ್ಯಮದ ನಟ ಮತ್ತು ನಟಿಯರು ತಮ್ಮ ಜಿಮ್ ನಲ್ಲಿ ಮಾಡುವ ತಾಲೀಮಿನ ಫೋಟೋಗಳನ್ನು ಮತ್ತು ವೀಡಿಯೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವುದನ್ನು ನಾವೆಲ್ಲಾ ನೋಡಿರುತ್ತೇವೆ. ಆದರೆ ಇಲ್ಲೊಬ್ಬ ನಟಿ ನೋಡಿ ಮಾರ್ಷಲ್ ಆರ್ಟ್ಸ್ ನಲ್ಲಿ ಎಷ್ಟೊಂದು ಪರಿಣಿತರಾಗಿದ್ದಾರೆ ನೋಡಿ. ಇದು ನಿಜಕ್ಕೂ ಅದ್ಭುತವಾಗಿದೆ ಅಂತ ಹೇಳ್ತಾ ಇದ್ದಾರೆ ಅವರ ಚಿತ್ರೋದ್ಯಮದ ಸಹೊದ್ಯೋಗಿಗಳು.
ಮಾರ್ಷಲ್ ಆರ್ಟ್ಸ್ ಕಲೆಗಳ ವೀಡಿಯೋವನ್ನು ಹಂಚಿಕೊಂಡ ದಿಶಾ
ಆ ನಟಿ ಯಾರು ಅಂತ ತಿಳಿದುಕೊಳ್ಳಲು ನಿಮಗೆ ಕುತೂಹಲ ಹೆಚ್ಚಾಗಿರಬೇಕಲ್ಲವೇ? ಆ ನಟಿ ಬಾಲಿವುಡ್‌ನ ಚೆಲುವೆ ದಿಶಾ ಪಟಾನಿ. ದಿಶಾ ಡ್ಯಾನ್ಸ್, ನಟನೆಯನ್ನು ನೀವೆಲ್ಲಾ ಆಕೆಯ ಸಿನೆಮಾದಲ್ಲಿ ನೋಡಿರುತ್ತೀರಿ. ಆದರೆ ಈ ನಟಿ ಮಾರ್ಷಲ್ ಆರ್ಟ್ಸ್ ನಲ್ಲಿ ಇಷ್ಟೊಂದು ಅಭಿರುಚಿಯನ್ನು ಹೊಂದಿದ್ದಾರೆ ಅಂತ ಬಹುತೇಕರಿಗೆ ಗೊತ್ತಿಲ್ಲ.
ಈ ನಟಿ ತಮ್ಮ ಇನ್‌ಸ್ಟಾಗ್ರಾಮ್ ನಲ್ಲಿ ಇತ್ತೀಚಿಗೆ ಅನೇಕ ರೀತಿಯ ಮಾರ್ಷಲ್ ಆರ್ಟ್ಸ್ ನ ಕಲೆಗಳನ್ನು ತೋರಿಸುವ ವೀಡಿಯೋಗಳನ್ನು ಹಂಚಿಕೊಂಡಿದ್ದಾರೆ. ನಯವಾದ ಸಮರ ಕಲೆಗಳ ಚಲನೆಗಳನ್ನು ತೋರಿಸುವ ವೀಡಿಯೋಗಳನ್ನು ನೋಡಿದ ಚಿತ್ರರಂಗದವರು ‘ಭೇಷ್’ ಅಂತ ಹೇಳ್ತಾ ಇದ್ದಾರೆ. ಮಂಗಳವಾರ ಇದೇ ರೀತಿಯ ವೀಡಿಯೋವನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಈ ನಟಿ ಹಂಚಿಕೊಂಡಿದ್ದಾರೆ.
ದಿಶಾ ವೀಡಿಯೋವನ್ನು ಮೆಚ್ಚಿಕೊಂಡು ಕಾಮೆಂಟ್ ಮಾಡಿದ ಸಮಂತಾ
ಅವರ ಈ ಮಾರ್ಷಲ್ ಆರ್ಟ್ಸ್ ನ ಹೊಸ ವೀಡಿಯೋವನ್ನು ನೋಡಿ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಮತ್ತು ಅವರ ಅಭಿಮಾನಿಗಳು ನೋಡಿ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಾರೆ. ಫಿಟ್ನೆಸ್ ಉತ್ಸಾಹಿಯಾಗಿರುವ ದಕ್ಷಿಣ ಭಾರತದ ನಟಿ ಸಮಂತಾ ರುತ್ ಪ್ರಭು ಅವರು ಸಹ ದಿಶಾ ಪಟಾನಿ ಅವರ ಇತ್ತೀಚಿನ ಮಾರ್ಷಲ್ ಆರ್ಟ್ಸ್ ನ ಕ್ಲಿಪ್ ಅನ್ನು ನೋಡಿ "ಇದು ನಿಜವಾದ ತಾಲೀಮು" ಅಂತ ಕಾಮೆಂಟ್ ಮಾಡಿದ್ದಾರೆ.
ನಟ ಟೈಗರ್ ಶ್ರಾಫ್ ಅವರ ತಾಯಿ ಆಯೇಷಾ ಶ್ರಾಫ್ ಕೂಡ ದಿಶಾ ಅವರ ವೀಡಿಯೋ ನೋಡಿ "ತುಂಬಾ ಚೆನ್ನಾಗಿದೆ, ದೀಶು" ಎಂದು ಬರೆದು ಅದರ ಮುಂದೆ ಚಪ್ಪಾಳೆ ಮತ್ತು ಕೆಂಪು ಹೃದಯದ ಐಕಾನ್ ಗಳೊಂದಿಗೆ ಕಾಮೆಂಟ್ ಮಾಡಿದ್ದಾರೆ. ಈ ವೀಡಿಯೋದಲ್ಲಿ ದಿಶಾ ಪಟಾನಿ ತ್ರಿವಳಿ ಕಿಕ್ ಗಳನ್ನು ಹೊಡೆಯುವುದನ್ನು ನಾವು ನೋಡಬಹುದು. ಇನ್‌ಸ್ಟಾಗ್ರಾಮ್ ಕ್ಲಿಪ್ ಹಂಚಿಕೊಳ್ಳುವಾಗ ಅವರು ಶೀರ್ಷಿಕೆಗೆ ಪೆಂಗ್ವಿನ್ ಎಮೋಜಿಯನ್ನು ಸೇರಿಸಿದ್ದಾರೆ.
ಮಾರ್ಷಲ್ ಆರ್ಟ್ಸ್ ತರಬೇತಿಯಲ್ಲಿನ ಅಪ್ಡೇಟ್ ಗಳನ್ನ ಹಂಚಿಕೊಳ್ತಾರೆ ದಿಶಾ
ದಿಶಾ ಪಟಾನಿ ತನ್ನ ಸಮರ ಕಲೆಗಳ ತರಗತಿಗಳಿಂದ ಅಪ್ಡೇಟ್ ಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಹಾರಿಕೊಂಡು ಒದೆಯಲು ಪ್ರಯತ್ನಿಸುತ್ತಿರುವ ವೀಡಿಯೋವನ್ನು ಹಂಚಿಕೊಂಡ ಅವರು "ಬೇಸಿಕ್ಸ್ ಮೊದಲು" ಎಂದು ಬರೆದಿದ್ದಾರೆ. ನಟಿ ಸೋನಮ್ ಕಪೂರ್ ಅವರನ್ನು ಮದುವೆಯಾಗಿರುವ ಉದ್ಯಮಿ ಆನಂದ್ ಅಹುಜಾ ಈ ವೀಡಿಯೋವನ್ನು ನೋಡಿ "ನಿಜವಾಗಿಯೂ ಪ್ರಭಾವಶಾಲಿ ಮತ್ತು ಪ್ರೇರೇಪಿಸುವ ವೀಡಿಯೋ" ಎಂದು ಹೇಳಿದ್ದಾರೆ.
View this post on Instagram
ಇನ್ನೂ ಕೆಲಸದ ವಿಷಯಕ್ಕೆ ಬಂದರೆ ನಟಿ ದಿಶಾ ಪಟಾನಿ ಅವರು ಕೊನೆಯ ಬಾರಿಗೆ ‘ಏಕ್ ವಿಲನ್: ರಿಟರ್ನ್ಸ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ನಟ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ನಟಿ ಶ್ರದ್ಧಾ ಕಪೂರ್ ಅವರ 2014 ರ ಚಿತ್ರ ‘ಏಕ್ ವಿಲನ್’ ನ ಎರಡನೇ ಕಂತಿನ ಮೋಹಿತ್ ಸೂರಿ ಚಿತ್ರದಲ್ಲಿ ಅವರು ಅರ್ಜುನ್ ಕಪೂರ್, ಜಾನ್ ಅಬ್ರಹಾಂ ಮತ್ತು ತಾರಾ ಸುತಾರಿಯಾ ಅವರೊಂದಿಗೆ ನಟಿಸಿದ್ದಾರೆ.
ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ರಾಶಿ ಖನ್ನಾ ಅವರೊಂದಿಗೆ ದಿಶಾ ಯೋಧಾ ಚಿತ್ರದಲ್ಲೂ ನಟಿಸಲಿದ್ದಾರೆ. ಈ ಚಿತ್ರವು ಈ ವರ್ಷದ ಜುಲೈನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ಮುಖ್ಯ ಭೂಮಿಕೆಯಲ್ಲಿರುವ ಪ್ರಾಜೆಕ್ಟ್ ಕೆ ಚಿತ್ರದಲ್ಲಿ ಸಹ ದಿಶಾ ಕಾಣಿಸಿಕೊಳ್ಳಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ