High-Protein Snacks: ಈ ಪ್ರೋಟೀನ್ ಭರಿತ ತಿಂಡಿ ತಯಾರಿಸಲು ಬರೀ 15 ನಿಮಿಷ ಸಾಕು! ಟ್ರೈ ಮಾಡಿ

ಯಾವುದೇ ಸಮಯದಲ್ಲಿ ನೀವು ಸೇವಿಸಬಹುದಾದ ಕೆಲವು ರುಚಿಕರವಾದ ಹೆಚ್ಚಿನ ಪ್ರೋಟೀನ್ ತಿಂಡಿಗಳನ್ನು ನಾವು ನಿಮಗಾಗಿ ತಂದಿದ್ದೇವೆ ನೋಡಿ. ಈ ಪಾಕವಿಧಾನಗಳ ಬಗ್ಗೆ ಉತ್ತಮ ಭಾಗವೆಂದರೆ ಅವು ಕೇವಲ 15 ನಿಮಿಷಗಳಲ್ಲಿಯೇ ಸಿದ್ಧಗೊಳ್ಳುತ್ತವೆ ಮತ್ತು ನಿಮ್ಮ ಹೊಟ್ಟೆಯನ್ನು ದೀರ್ಘಕಾಲದವರೆಗೆ ತುಂಬಿಸಿಟ್ಟಿರುತ್ತದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಈಗಾಗಲೇ ಶಾಲೆಗಳು (School), ಕಾಲೇಜುಗಳು ಮತ್ತು ಕಚೇರಿಗಳು ಭರದಿಂದ ಪ್ರಾರಂಭವಾಗಿವೆ ಮತ್ತು ನಮ್ಮಲ್ಲಿ ಹೆಚ್ಚಿನವರು ನಮ್ಮ ಈ ಎರಡು ವರ್ಷಗಳ ಕಾಲ ಕೋವಿಡ್-19 ಸಾಂಕ್ರಾಮಿಕ ರೋಗದ ಹಾವಳಿಂದಾಗಿ ಮನೆಯಲ್ಲಿ (Home) ಕುಳಿತು ಕೆಲಸ ಮಾಡುವಾಗ ಒಳ್ಳೆಯ ಡಯಟ್ ಅನ್ನು (Diet) ಬಹುತೇಕರು ಅನುಸರಿಸಿರುತ್ತಾರೆ. ಆದರೆ ಈಗ ಮತ್ತೆ ಕೆಲಸಕ್ಕೆ (Work) ಮನೆಯಿಂದ ಆಚೆ ಹೋಗುವುದರಿಂದ ಮತ್ತೆ ಡಯಟ್ ಬಿಗಡಾಯಿಸುವುದು ಗ್ಯಾರೆಂಟಿ ಎಂದು ಹೇಳಬಹುದು. ನಾವು ಬೆಳಿಗ್ಗೆ ಎದ್ದು ನಮಗೆ ಲಭ್ಯವಿರುವ ಎಲ್ಲಾ ಪದಾರ್ಥಗಳನ್ನು ಬಳಸಿಕೊಂಡು ಅಡುಗೆ (Cooking) ಮಾಡುತ್ತೇವೆ ಮತ್ತು ಕೆಲವೊಮ್ಮೆ ನಾವು ಮನೆಯಲ್ಲಿ ಅಡುಗೆ ಮಾಡಲು ಸಾಧ್ಯವಾಗದಿದ್ದರೆ, ಹೊರಗಿನ ಊಟವನ್ನು ಕಚೇರಿಗೆ ಆರ್ಡರ್ ಮಾಡಿಕೊಳ್ಳುತ್ತೇವೆ.

ಆದಾಗ್ಯೂ, ನೀವು ಈ ಅನಾರೋಗ್ಯಕರ ತಿನ್ನುವ ದಿನಚರಿಯಿಂದ ಹೊರ ಬರಲು ಮತ್ತು ಪೌಷ್ಟಿಕ ಪದಾರ್ಥಗಳೊಂದಿಗೆ ಮತ್ತೆ ನಿಮ್ಮ ಹಳೆಯ ಟ್ರ್ಯಾಕ್ ಗೆ ಮರಳಲು ಬಯಸಿದರೆ, ನಾವು ನಿಮಗೆ ಕೆಲವು ಉಪಯುಕ್ತವಾದ ಸಲಹೆಗಳನ್ನು ನೀಡುತ್ತೇವೆ. ಯಾವುದೇ ಸಮಯದಲ್ಲಿ ನೀವು ಸೇವಿಸಬಹುದಾದ ಕೆಲವು ರುಚಿಕರವಾದ ಹೆಚ್ಚಿನ ಪ್ರೋಟೀನ್ ತಿಂಡಿಗಳನ್ನು ನಾವು ನಿಮಗಾಗಿ ತಂದಿದ್ದೇವೆ ನೋಡಿ. ಈ ಪಾಕವಿಧಾನಗಳ ಬಗ್ಗೆ ಉತ್ತಮ ಭಾಗವೆಂದರೆ ಅವು ಕೇವಲ 15 ನಿಮಿಷಗಳಲ್ಲಿಯೇ ಸಿದ್ಧಗೊಳ್ಳುತ್ತವೆ ಮತ್ತು ನಿಮ್ಮ ಹೊಟ್ಟೆಯನ್ನು ದೀರ್ಘಕಾಲದವರೆಗೆ ತುಂಬಿಸಿಟ್ಟಿರುತ್ತದೆ.

ನೀವು ಪ್ರಯತ್ನಿಸಲು 7 ಹೈ-ಪ್ರೋಟೀನ್ ಸ್ನ್ಯಾಕ್ಸ್ ಗಳು ಇಲ್ಲಿವೆ
1. ಮೂಂಗ್ ದಾಲ್ ಚಾಟ್
ನೀವು ತಿನ್ನುವ ಚಾಟ್ ಗೆ ಆರೋಗ್ಯಕರ ಸ್ಪರ್ಶವನ್ನು ಸೇರಿಸಲು ನೀವು ಬಯಸಿದರೆ ಈ ಖಾದ್ಯವು ನಿಮಗೆ ಸೂಕ್ತವಾಗಿದೆ. ಹುರಿದ ವಡಾ ಅಥವಾ ಪಪ್ಪಡಿಯ ಬದಲು ಹೆಸರು ಬೇಳೆಯನ್ನು ಬಳಸುವ ಮೂಲಕ ನೀವು ಈ ಮೂಂಗ್ ದಾಲ್ ಚಾಟ್ ಅನ್ನು ತಯಾರಿಸಿಕೊಳ್ಳಬಹುದು. ತಾಜಾ ದಾಳಿಂಬೆ, ಸೌತೆಕಾಯಿ, ಈರುಳ್ಳಿ, ಚಾಟ್ ಮಸಾಲಾ ಮತ್ತು ಕೊತ್ತಂಬರಿ ಸೊಪ್ಪಿನಿಂದ ಇದನ್ನು ಅಲಂಕರಿಸಿಕೊಂಡು ಸೇವಿಸಬಹುದು.

ಇದನ್ನೂ ಓದಿ:  Weight Gain: ನಿಮ್ಮ ಮಕ್ಕಳ ತೂಕ ಹೆಚ್ಚಿಸಲು ಈ ಆರೋಗ್ಯಕರ ಆಹಾರಗಳನ್ನು ಪ್ರತಿನಿತ್ಯ ತಿನ್ನಿಸಿ

2. ಹುರಿದ ಕಡಲೆ
ಕಡಲೆ ಅತ್ಯಂತ ಪ್ರಸಿದ್ಧ ಅಧಿಕ ಪ್ರೋಟೀನ್ ಆಹಾರಗಳಲ್ಲಿ ಒಂದಾಗಿದೆ. ಕಡಲೆಯನ್ನು ಸೇವಿಸಲು ಉತ್ತಮ ಮಾರ್ಗಗಳಲ್ಲಿ ಒಂದು ಕಡಲೆಯನ್ನು ಹುರಿದುಕೊಂಡು ಸೇವಿಸುವುದು. ಇದನ್ನು ಮಾಡಿಕೊಳ್ಳುವುದು ತುಂಬಾನೇ ಸರಳವಾಗಿದ್ದು, ಹೊಟ್ಟೆಯನ್ನು ತುಂಬಿಸುವ ಮತ್ತು ರುಚಿಕರವಾದ ತಿಂಡಿಯಾಗಿದೆ. ಇದು ಯಾವಾಗಲೂ ಉತ್ತಮ ಆಯ್ಕೆಯಾಗಿದೆ.

3. ಟ್ರಯಲ್ ಮಿಕ್ಸ್
ಈ ತಿಂಡಿಯು ಹೆಸರೇ ಸೂಚಿಸುವಂತೆ ಬೀಜಗಳು ಮತ್ತು ಡ್ರೈ ಫ್ರೂಟ್ಸ್ ಗಳ ಸಮತೋಲಿತ ಸಂಯೋಜನೆಯಾಗಿದೆ. ಈ ಟ್ರಯಲ್ ಮಿಕ್ಸ್ ಪಾಕವಿಧಾನದಲ್ಲಿ ನಿಮ್ಮದೇ ಆದ ಆಹಾರದ ಆಯ್ಕೆಗಳನ್ನು ಮಾಡುವ ಮೂಲಕ ಬಾದಾಮಿ ಮತ್ತು ಕುಂಬಳಕಾಯಿ ಬೀಜಗಳಂತಹ ಪ್ರೋಟೀನ್ ಭರಿತ ಆಹಾರಗಳ ಸೇವನೆಯನ್ನು ಹೆಚ್ಚಿಸಿ.

4. ಮಸಾಲಾ ಮೊಟ್ಟೆ ಭುರ್ಜಿ ಟೋಸ್ಟ್
ಮೊಟ್ಟೆಗಳೆಂದರೆ ಯಾರಿಗೆ ತಾನೇ ಇಷ್ಟವಿರುವುದಿಲ್ಲ ಹೇಳಿ? ಮೊಟ್ಟೆಗಳ ತಯಾರಿಕೆಯಲ್ಲಿ ಸರಳವಾದದ್ದು ಎಂದರೆ ಮಸಾಲಾ ಅಂಡಾ ಭುರ್ಜಿ ಟೋಸ್ಟ್ ಆಗಿದೆ. ಅನೇಕ ರೀತಿಯ ಮಸಾಲೆಗಳೊಂದಿಗೆ ಬೆರೆಸಿದ ಸ್ಕ್ರ್ಯಾಂಬಲ್ಡ್ ಮೊಟ್ಟೆಗಳ ಈ ತಯಾರಿಕೆಯು ಭಾರತದಾದ್ಯಂತ ಜನಪ್ರಿಯವಾಗಿದೆ. ಒಂದು ಕಡೆ ಬ್ರೆಡ್ ಅನ್ನು ಟೋಸ್ಟ್ ಮಾಡಿಕೊಂಡು ನಂತರ ಅದಕ್ಕೆ ತಯಾರಿಸಿದ ಅಂಡಾ ಭುರ್ಜಿಯನ್ನು ಹಾಕಿಕೊಳ್ಳಿರಿ. ಈ ಪಾಕವಿಧಾನವನ್ನು ಎಲ್ಲಾ ವಯಸ್ಸಿನವರೂ ಇಷ್ಟ ಪಡುತ್ತಾರೆ.

ಇದನ್ನೂ ಓದಿ:  French Fries Side Effects: ಫ್ರೆಂಚ್ ಫ್ರೈಸ್ ತಿನ್ನುತ್ತೀರಾ? ಇದರಿಂದ ಹೃದಯ ಸಂಬಂಧಿ ಕಾಯಿಲೆ ಬರುತ್ತಂತೆ!

5. ಕಡಲೆಕಾಯಿ ಮಸಾಲ ಚಾಟ್
ಇದನ್ನು ತಯಾರಿಸಲು ತುಂಬಾ ಸರಳವಾಗಿದೆ ಮತ್ತು ತಿನ್ನಲು ಸಹ ತುಂಬಾನೇ ಆಹ್ಲಾದಕರವಾಗಿರುತ್ತದೆ. ನೀವು ಮಾಡಬೇಕಾಗಿರುವುದು ಸೌತೆಕಾಯಿ, ಟೊಮೆಟೊ, ಕೊತ್ತಂಬರಿ ಸೊಪ್ಪು ಮತ್ತು ಈರುಳ್ಳಿಯೊಂದಿಗೆ ಕಡಲೆಕಾಯಿಯನ್ನು ಬೆರೆಸಿ. ನಂತರ ನಿಮ್ಮ ಆದ್ಯತೆಯ ಮಸಾಲೆಗಳನ್ನು ಅದಕ್ಕೆ ಸೇರಿಸಿ. ನಿಮ್ಮ ಕಡಲೆಕಾಯಿ ಮಸಾಲ ಚಾಟ್ ತಿನ್ನಲು ಸಿದ್ದವಾಗಿರುತ್ತದೆ.

6. ಮೊಸರಿನ ಪರ್ಫೈಟ್
ಕೆನೆಭರಿತ ಮೊಸರಿನ ಒಂದು ಪದರ, ತಾಜಾ ಹಣ್ಣುಗಳ ಇನ್ನೊಂದು ಪದರ ಮತ್ತು ಒಂದು ದೊಡ್ಡ ಲೋಟದಲ್ಲಿ ಒಂದರ ಮೇಲೊಂದರಂತೆ ಹೆಚ್ಚಿನ ಪ್ರೋಟೀನ್ ಅಗಸೆ ಬೀಜಗಳ ಒಂದು ಪದರವನ್ನು ಇರಿಸಿ. ಇಷ್ಟು ಮಾಡಿದರೆ ನಿಮ್ಮ ಮೊಸರಿನ ಪರ್ಫೈಟ್ ಸಿದ್ಧವಾಗುತ್ತದೆ. ಈ ಖಾದ್ಯವನ್ನು ನೀವು ಸಿಹಿತಿಂಡಿಯಾಗಿಯೂ ತಿನ್ನಬಹುದು.

7. ಎಗ್ ಚಾಟ್
ಒಂದು ಮೊಟ್ಟೆಯನ್ನು ಕುದಿಸಿಕೊಂಡು ತಿನ್ನುವುದರಿಂದ ನಮಗೆ ಅಗತ್ಯವಿರುವ ದೈನಂದಿನ ಪ್ರೋಟೀನ್ ನ 15 ಪ್ರತಿಶತದಷ್ಟು ಭಾಗವನ್ನು ನೀಡಬಹುದು. ಇದು ಫೋಲಿಕ್ ಆಮ್ಲ, ವಿಟಮಿನ್ ಎ, ಇ, ಕೆ ಮತ್ತು ಬಿ ಅನ್ನು ಸಹ ಹೊಂದಿದೆ. ಎಗ್ ಚಾಟ್ ಮಾಡಲು ನೀವು ಸಾದಾ ಬೇಯಿಸಿದ ಮೊಟ್ಟೆಯನ್ನು ಚಟ್ನಿ, ಮೆಣಸಿನಕಾಯಿ, ಈರುಳ್ಳಿ ಮತ್ತು ಮಸಾಲೆಗಳೊಂದಿಗೆ ಮಿಶ್ರಣ ಮಾಡಿ. ನಿಮ್ಮ ಊಟದಲ್ಲಿ ನೀವು ಇದನ್ನು ಸೇರಿಸಿಕೊಂಡು ಕಚೇರಿಗೂ ಒಯ್ಯಬಹುದು ಮತ್ತು ನಿಮಗೆ ಹಸಿವಾದಾಗಲೆಲ್ಲಾ ಅದನ್ನು ಸೇವಿಸಬಹುದು.
Published by:Ashwini Prabhu
First published: