• Home
  • »
  • News
  • »
  • entertainment
  • »
  • ಪ್ರೇಮಿಗಳ ದಿನಕ್ಕೆ ಯಂಗ್​​ ರೆಬೆಲ್ ಅಭಿಷೇಕ್​ರಿಂದ​ ಒಲವಿನ ಉಡುಗೊರೆ..!

ಪ್ರೇಮಿಗಳ ದಿನಕ್ಕೆ ಯಂಗ್​​ ರೆಬೆಲ್ ಅಭಿಷೇಕ್​ರಿಂದ​ ಒಲವಿನ ಉಡುಗೊರೆ..!

'ಅಮರ್​' ಸಿನಿಮಾದಲ್ಲಿ ಅಭಿಷೇಕ್​ ಅಂಬರೀಷ

'ಅಮರ್​' ಸಿನಿಮಾದಲ್ಲಿ ಅಭಿಷೇಕ್​ ಅಂಬರೀಷ

ಜೂನಿಯರ್​ ರೆಬೆಲ್​ ಸ್ಟಾರ್​ ಅಭಿಷೇಕ್​ ಚಂದನವನದಲ್ಲಿ ಸಿನಿ ಪಯಣ ಆರಂಭಿಸುವ ಹೊಸ್ತಿಲಲ್ಲಿದ್ದಾರೆ. ಅವರ ಅಭಿನಯದ ಚೊಚ್ಚಲ ಸಿನಿಮಾ 'ಅಮರ್​' ಚಿತ್ರೀಕರಣದ ಜೋರಾಗಿ ಸಾಗಿದೆ.

  • News18
  • 2-MIN READ
  • Last Updated :
  • Share this:

-ಅನಿತಾ ಈ, 

ಯಂಗ್​ ರೆಬೆಲ್​ ಸ್ಟಾರ್​ ಅಭಿಷೇಕ್​  ಅಂಬರೀಷ ಅಭಿನಯದ 'ಅಮರ್'​ ಸಿನಿಮಾ ಚಿತ್ರೀಕರಣ ಬರದಿಂದ ಸಾಗುತ್ತಿದೆ. ಇದರ ಬೆನ್ನಲೆ ಜೂನಿಯರ್​ ರೆಬೆಲ್​ ನಟನೆಯ ಚೊಚ್ಚಲ ಸಿನಿಮಾದ ಟೀಸರ್​ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ.

ಇದನ್ನೂ ಓದಿ: 38 ವರ್ಷಗಳ ನಂತರ ಅಂಬಿ ಅಭಿನಯದ 'ಅಂತ' ಸಿನಿಮಾ ಮರು ಬಿಡುಗಡೆ..!

ತಂದೆಯ ನೋವಿನಿಂದ ಹೊರ ಬಾರದ ಅಭಿಷೇಕ್​, ಸದ್ಯ 'ಅಮರ್​' ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಈ ಸಿನಿಮಾದ ಟೀಸರ್​ ಬಿಡುಗಡೆಗೆ ಸಿದ್ದವಾಗಿದೆ. ಈ ಬಗ್ಗೆ ಸುಮಲತಾ ಟ್ವೀಟ್​ ಮಾಡಿದ್ದಾರೆ.ಪ್ರೇಮಿಗಳ ದಿನದಂದು ಅಂದರೆ ಫೆ.14ರಂದು 'ಅಮರ್' ಸಿನಿಮಾದ ಟೀಸರ್​ ಬಿಡುಗಡೆಯಾಗಲಿದೆ. ಮಗನ ಸಿನಿಮಾದ ಟೀಸರ್ ನೋಡಿ, ಬೆಂಬಲಿಸಿ ಎಂದು ಸುಮಲತಾ ಬರೆದುಕೊಂಡಿದ್ದಾರೆ.

ಸಂದೇಶ್​ ನಾಗರಾಜ್​ ನಿರ್ಮಾಣದ ಈ ಸಿನಿಮಾವನ್ನು ನಾಗಶೇಖರ್​ ನಿರ್ದೇಶಿಸುತ್ತಿದ್ದು, ಈ ವರ್ಷಾಂತ್ಯಕ್ಕೆ ಸಿನಿಮಾ ತೆರೆಗಪ್ಪಳಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

'ಕೆ.ಜಿ.ಎಫ್'​ ರಿಯಲ್​ ಹೀರೋ ಪ್ರಶಾಂತ್​ರ ರೊಮ್ಯಾಂಟಿಕ್​ ಲುಕ್ಸ್​...

First published: