ದುಬಾರಿ ಕಾರಿನ ಫ್ಯಾನ್ಸಿ ಸಂಖ್ಯೆಗಾಗಿ ಲಕ್ಷ ಲಕ್ಷ ಖರ್ಚು ಮಾಡಿದ ನಟ Junior NTR

ಲುಗು ಚಿತ್ರೋದ್ಯಮದಲ್ಲಿ ಓಡುವ ಕುದುರೆ ಎಂದೇ ಕರೆಸಿಕೊಳ್ಳುವ ನಟ ಜೂನಿಯರ್ ಎನ್‌ಟಿಆರ್. ಈ ನಟ ಇತ್ತೀಚೆಗಷ್ಟೆ 3.16 ಕೋಟಿ ರೂಪಾಯಿ ಬೆಲೆ ಇರುವಂತಹ ಕಪ್ಪು ಬಣ್ಣದ ಲ್ಯಾಂಬೋರ್ಗಿನಿ ಉರುಸ್ ಗ್ರಾಫೈಟ್ ಕ್ಯಾಪ್ಸೂಲ್ ಕಾರನ್ನು ಖರೀದಿಸಿದ್ದು, ಅದಕ್ಕೆ ತಮ್ಮಿಷ್ಟದ ಫ್ಯಾನ್ಸಿ ನಂಬರ್ ಪಡೆಯಲು ಲಕ್ಷ ಲಕ್ಷ ಖರ್ಚು ಮಾಡಿದ್ದಾರಂತೆ. 

ಹೊಸ ಕಾರು ಖರೀದಿಸಿದ ಜೂನಿಯರ್ ಎನ್​ ಟಿ ಆರ್​ (Pc: Twitter)

ಹೊಸ ಕಾರು ಖರೀದಿಸಿದ ಜೂನಿಯರ್ ಎನ್​ ಟಿ ಆರ್​ (Pc: Twitter)

  • Share this:
ಅನೇಕ ಜನರು ಅದರಲ್ಲೂ ಚಿತ್ರರಂಗದ ನಟ ನಟಿಯರು (Movie Celebrities), ಕ್ರಿಕೆಟ್ ಆಟಗಾರರು (Cricketers) ಮತ್ತು ಇನ್ನಿತರೆ ಪ್ರಭಾವಿ ಉದ್ಯಮಿಗಳು ದುಬಾರಿ ಕಾರುಗಳನ್ನು ಒಬ್ಬರಿಗಿಂತ ಇನ್ನೊಬ್ಬರು ಕಡಿಮೆ ಇಲ್ಲ ಎಂಬಂತೆ ಸ್ಪರ್ಧಾತ್ಮಕವಾಗಿ ಕೊಂಡುಕೊಳ್ಳುವುದು ಸಾಮಾನ್ಯ. ಆ ನಟ ಈ ಕಾರು ಖರೀದಿಸಿದರು, ಈ ನಟ ಇಂತಹ ಕಾರನ್ಇಂನು ಖರೀದಿಸಿದರು ಅನ್ನೋ ಸುದ್ದಿಯನ್ನು ಆಗಾಗ ಕೇಳುತ್ತಲೇ ಇರುತ್ತೇವೆ. ಇತ್ತೀಚೆಗಷ್ಟೆ ರಾಮ್​ ಚರಣ್ ಅವರು ಐಷಾರಾಮಿ ಕಾರೊಂದನ್ನು ಖರೀದಿಸಿ ಸುದ್ದಿಯಾಗಿದ್ದರು. ದುಬಾರಿ ಕಾರುಗಳನ್ನು ಕೊಂಡುಕೊಳ್ಳುವುದಷ್ಟೇ ಅಲ್ಲದೆ ಅದಕ್ಕೆ ಫ್ಯಾನ್ಸಿ ಸಂಖ್ಯೆಯನ್ನು ಹಾಕಿಸುವುದು ಎಂದರೆ  ಸೆಲೆಬ್ರಿಟಿಗಳಿಗೆಲ್ಲ ಇಷ್ಟವಾದ ಕೆಲಸ. ಈ ಫ್ಯಾನ್ಸಿ ಸಂಖ್ಯೆಯನ್ನು ಈ ನಟ ನಟಿಯರು ಮತ್ತು ಕ್ರಿಕೆಟ್ ಆಟಗಾರರು ಎಷ್ಟೇ ದುಡ್ಡು ಖರ್ಚಾದರೂ ಪರವಾಗಿಲ್ಲ ಎನ್ನುವಂತೆ ಧಾರಾಳವಾಗಿ ಹಣ ಸುರಿದು ಇಚ್ಛೆಯ ಸಂಖ್ಯೆಯನ್ನು ಪಡೆದುಕೊಳ್ಳುತ್ತಾರೆ.

ತಮ್ಮ ಇಷ್ಟದ ಕಾರುಗಳ ಮೇಲೆ ಎಷ್ಟು ಪ್ರೀತಿ ಇರುತ್ತದೆಯೋ ಅದರಲ್ಲಿನ ಅರ್ಧದಷ್ಟು ಪ್ರೀತಿ ಅವರ ಕಾರಿಗೆ ಹಾಕಿಸುವಂತಹ ಫ್ಯಾನ್ಸಿ ಸಂಖ್ಯೆಯ ಮೇಲೆಯೋ ಇರುತ್ತದೆ ಎಂದರೆ ಅತಿಶಯೋಕ್ತಿಯಲ್ಲ. ಕೆಲವೊಬ್ಬರಂತೂ ತಮ್ಮ ಇಷ್ಟವಾದ ಸಂಖ್ಯೆ ಹಾಕಿಸಿ ಅದರ ಜೊತೆಗೆ ಒಂದು ಭಾವನಾತ್ಮಕ ಸಂಬಂಧವನ್ನು ಹೊಂದುವುದನ್ನು ಸಹ ನಾವು ನೋಡಿರುತ್ತೇವೆ.

Happy Birthday Junior NTR, Jr NTR Birthday Komaram Bheem Rajamouli RRR Tollywood, Komaram Bheem Poster, Junior NTR, Alia Bhatt, Ram Charan, Ajay Devgn, Rajamouli, Junior NTR speaks in Kannada, Alia Bhatt in Telugu, Corona Awareness, rrr movie,rrr movie twitter,rrr movie shooting,rrr movie climax begun rajamouli tweet,rajamouli twitter,ram charan rrr shooting,jr ntr shooting rrr,ram charan jr ntr shooting in rrr,telugu cinema, ಆರ್​ಆರ್​ಆರ್​ ಸಿನಿಮಾದ ಕ್ಲೈಮ್ಯಾಕ್ಸ್​ ಶೂಟಿಂಗ್​, ಜೂನಿಯರ್​ ಎನ್​ಟಿಆರ್​ ರಾಮ್​ ಚರಣ್​ ತೇಜ, ಎನ್​ಟಿಆರ್​, ರಾಜಮೌಳಿ, ಆರ್​ಆರ್​ಆರ್​ ಸಿನಿಮಾ
ನಟ ಜೂನಿಯರ್ ಎನ್​ಟಿಆರ್​


ತೆಲುಗು ಚಿತ್ರೋದ್ಯಮದಲ್ಲಿ ಓಡುವ ಕುದುರೆ ಎಂದೇ ಕರೆಸಿಕೊಳ್ಳುವ ನಟ ಜೂನಿಯರ್ ಎನ್‌ಟಿಆರ್. ಈ ನಟ ಇತ್ತೀಚೆಗಷ್ಟೆ 3.16 ಕೋಟಿ ರೂಪಾಯಿ ಬೆಲೆ ಇರುವಂತಹ ಕಪ್ಪು ಬಣ್ಣದ ಲ್ಯಾಂಬೋರ್ಗಿನಿ ಉರುಸ್ ಗ್ರಾಫೈಟ್ ಕ್ಯಾಪ್ಸೂಲ್ ಕಾರನ್ನು ಖರೀದಿಸಿದ್ದು, ಅದಕ್ಕೆ ತಮ್ಮಿಷ್ಟದ ಫ್ಯಾನ್ಸಿ ನಂಬರ್ ಪಡೆಯಲು ಲಕ್ಷ ಲಕ್ಷ ಖರ್ಚು ಮಾಡಿದ್ದಾರಂತೆ.

ಹೌದು, ಲ್ಯಾಂಬೋರ್ಗಿನಿ ಉರುಸ್ ಗ್ರಾಫೈಟ್ ಕ್ಯಾಪ್ಸೂಲ್ ಕಾರಿಗೆ  TS 09 FS 9999 ಫ್ಯಾನ್ಸಿ ಸಂಖ್ಯೆ ಪಡೆಯಲು ಈ ನಟ ಖರ್ಚು ಮಾಡಿದ್ದು ಬರೋಬ್ಬರಿ 17 ಲಕ್ಷ ರೂಪಾಯಿ ಅಂತೆ.

ಇದನ್ನೂ ಓದಿ: Bheem Mania Begins: ತಮ್ಮ ವಿಡಿಯೋ ನೋಡಲು ಕಾತರರಾಗಿದ್ದಾರೆ ಜೂನಿಯರ್ ಎನ್​ಟಿಆರ್​: ಟ್ರೆಂಡಿಂಗ್​ನಲ್ಲಿದೆ ಭೀಮ್ ಮೇನಿಯಾ

ಕೆಲವು ಸುದ್ದಿ ಮಾಧ್ಯಮಗಳ ವರದಿಯ ಪ್ರಕಾರ, ಭಾರತದಲ್ಲಿ ಈ ಕಾರು ಖರೀದಿಸಿದ ಮೊದಲ ವ್ಯಕ್ತಿ ಇವರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಕಾರನ್ನು ಖರೀದಿಸಿದ ಮೊದಲ ವ್ಯಕ್ತಿ ಆದ ನಂತರ ಅದಕ್ಕೆ ತಕ್ಕಂತೆ ಫ್ಯಾನ್ಸಿ ಸಂಖ್ಯೆ ಬೇಡವೇ ನೀವೇ ಹೇಳಿ. ಅವರ ಕಾರಿನ ನಂಬರ್ ಪ್ಲೇಟ್ ಇತ್ತೀಚೆಗೆ ಹೈದರಾಬಾದ್‌ನ ಖೈರತಾಬಾದ್ ಆರ್‌ಟಿಒ ಕಚೇರಿಯಲ್ಲಿ ನೋಂದಾಯಿಸಲ್ಪಟ್ಟಿದೆ ಮತ್ತು ಇದಕ್ಕಾಗಿ ನಟ ತಮ್ಮ ಲ್ಯಾಂಬೋರ್ಗಿನಿ ಕಾರಿನಲ್ಲಿ ಬಂದಿದ್ದರು ಎನ್ನಲಾಗಿದೆ.

ಸುದ್ದಿ ಮಾಧ್ಯಮದ ವರದಿಗಳ ಪ್ರಕಾರ, ತೆಲುಗು ಚಿತ್ರೋದ್ಯಮದ ಹೆಸರಾಂತ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರ 'ಆರ್ ಆರ್ ಆರ್' ಚಿತ್ರದ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಈ ಹಿಂದೆ ಅಕ್ಟೋಬರ್ 13ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಬೇಕಿದ್ದ ಸಿನಿಮಾವನ್ನು ಈಗ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.

ಇದನ್ನೂ ಓದಿ: Junior NTR: ಕೊರೋನಾ ಜಾಗೃತಿ: ಮತ್ತೊಮ್ಮೆ ಕನ್ನಡದಲ್ಲಿ ಮಾತನಾಡಿ ಕನ್ನಡಿಗರ ಮನೆ ಗೆದ್ದ ಜೂನಿಯರ್​ ಎನ್​ಟಿಆರ್​

ಚಿತ್ರದ ಬಿಡುಗಡೆ ದಿನಾಂಕ ಶೀಘ್ರದಲ್ಲಿಯೇ ತಿಳಿಸುವ ಸಾಧ್ಯತೆಯಿದೆ. ಈ ಚಿತ್ರದಲ್ಲಿ ಜೂನಿಯರ್ ಎನ್‌ಟಿಆರ್ ಮತ್ತು ನಟ ರಾಮ್ ಚರಣ್ ಇಬ್ಬರೂ ನಟಿಸುತ್ತಿದ್ದು, ಬಾಲಿವುಡ್ ನಟಿ ಆಲಿಯಾ ಭಟ್, ನಟ ಅಜಯ್ ದೇವಗನ್ ಮತ್ತು ಸಮುತಿರಕನಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಈಗಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ಈ ಚಿತ್ರದ ಬಿಡುಗಡೆಗಾಗಿ ಅಭಿಮಾನಿಗಳು ಕಾತುರರಾಗಿದ್ದಾರೆ. ಇದಲ್ಲದೇ ಜೂನಿಯರ್ ಎನ್‌ಟಿಆರ್ ಕೊರಟಾಲ ಶಿವ ನಿರ್ದೇಶನದ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
Published by:Anitha E
First published: