ಸ್ಯಾಂಡಲ್ವುಡ್ನಲ್ಲಿ ಸಾಕಷ್ಟು ಭರವಸೆ ಮೂಡಿಸಿರುವ ರವಿಚಂದ್ರನ್ ಪುತ್ರ ವಿಕ್ರಂ ಅಭಿನಯದ ಚೊಚ್ಚಲ ಸಿನಿಮಾ ತ್ರಿವಿಕ್ರಮ ನಾನಾ ಕಾರಣಗಳಿಂದ ಸಿನಿಪ್ರಿಯರ ಗಮನ ಸೆಳೆಯುತ್ತಿದೆ. ಈಗಾಗಲೇ ಟೀಸರ್, ಫಸ್ಟ್ಲುಕ್ ಪೋಸ್ಟರ್ ಮೂಲಕ ಸಿನಿಪ್ರಿಯರನ್ನು ಸೆಳೆದಿರುವ ತ್ರಿವಿಕ್ರಮ ಇದೀಗ ಒಂದೇ ಒಂದು ಡೈಲಾಗ್ ಉದುರಿಸಿ ಸಖತ್ ಸೆನ್ಸೇಷನ್ ಕ್ರಿಯೇಟ್ ಮಾಡಿದೆ.
ಹೌದು, ತ್ರಿವಿಕ್ರಮ ಚಿತ್ರದ ನಾಯಕ ನಟ ವಿಕ್ರಂ ಇತ್ತೀಚೆಗೆ ಖಾಸಗಿ ಚಾನೆಲ್ವೊಂದರ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ನಿರೂಪಕಿ ಅನುಶ್ರೀ ಜೂ.ಕ್ರೇಜಿಸ್ಟಾರ್ ಜೊತೆ ಒಂದೇ ಒಂದು ಡೈಲಾಗ್ ಹೇಳುವಂತೆ ಕೋರಿಕೊಂಡಿದ್ದರು. ಅಷ್ಟೇ ಸಾಕಾಯ್ತು, ವಿಕ್ರಂ ಬಾಯಿಯಿಂದ ಮೊದಲ ಡೈಲಾಗ್ ಅಣಿಮುತ್ತೊಂದು ಹೊರಬಿತ್ತು. "ಕೆಲವು ಹುಡುಗೀರು ರೇಂಜ್ ನೋಡಿ ಲವ್ ಮಾಡ್ತಾರೆ...ಆದ್ರೆ ನಮ್ಮಂತ ಹುಡುಗ್ರು ಲವ್ ನ ರೇಂಜ್ ನಲ್ಲಿ ಮಾಡ್ತಾರೆ" ಎಂದೇಳಿ ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು.
ಇದೀಗ ಇದೇ ಡೈಲಾಗ್ ಸೋಷಿಯಲ್ ಮೀಡಿಯಾದಲ್ಲಿ ಹೊಸ ಹವಾ ಸೃಷ್ಟಿಸಿದೆ. ಅದರಲ್ಲೂ ಟಿಕ್ ಟಾಕ್ನಲ್ಲಿ ತ್ರಿವಿಕ್ರಮನ ಡೈಲಾಗ್ ಭಾರೀ ಸದ್ದು ಮಾಡುತ್ತಿದೆ. ವಿಕ್ರಂ ಹೇಳಿದ ಡೈಲಾಗ್ನ್ನು ಅನೇಕ ಟಿಕ್ಟಾಕ್ ಬಳಕೆದಾರರು ಮರು ಸೃಷ್ಟಿಸಿದ್ದು, ರೇಂಜ್ ಲೆವೆಲ್ನಲ್ಲಿ ವೈರಲ್ ಆಗುತ್ತಿದೆ.
ಕೇವಲ ಒಂದು ಒಂದು ಡೈಲಾಗ್ ಮೂಲಕ ಹೊಸ ರೇಂಜ್ ಸೃಷ್ಟಿಸಿರುವ ಜೂ. ಕ್ರೇಜಿಸ್ಟಾರ್ ಅವರ ಮತ್ತಷ್ಟು ಡೈಲಾಗ್ ಕೇಳಬೇಕು ಅಂದರೆ ನೀವು ಚಿತ್ರ ತೆರೆ ಮೇಲೆ ಬರುವರೆಗೂ ಕಾಯಬೇಕು. ಗೌರಿ ಎಂಟರ್ಟೈನರ್ ಬ್ಯಾನರ್ ಅಡಿಯಲ್ಲಿ ಸೋಮಣ್ಣ (ramco) ನಿರ್ಮಿಸುತ್ತಿರುವ ಈ ಚಿತ್ರಕ್ಕೆ ರೋಸ್' ಮತ್ತು 'ಮಾಸ್ ಲೀಡರ್' ಖ್ಯಾತಿಯ ಸಹನಾಮೂರ್ತಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ಇನ್ನು ಚಿತ್ರದಲ್ಲಿ ಇಬ್ಬರು ನಾಯಕಿಯರು ಇರಲಿದ್ದು, ಆಕಾಂಕ್ಷ ಮತ್ತು ಅಕ್ಷರಾ ಗೌಡ ಜೂ. ಕ್ರೇಜಿಸ್ಟಾರ್ ಜೊತೆ ರೋಮ್ಯಾನ್ಸ್ ಮಾಡಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ