Coffee Nadu Chandu: ಅರೇ, ಇಲ್ನೋಡ್ರಿ ಜೂನಿಯರ್ ಕಾಫಿ ನಾಡು ಚಂದು! ಸೇಮ್​ ಹಂಗೆ ಅವ್ರಲ್ಲ ಗುರೂ, ಜನ ಸೆಲ್ಫಿಗೂ ಮುಗಿಬಿದ್ರಂತೆ

ಒಬ್ಬರ ಹಾಗೇ 7 ಮಂದಿ ಇರುತ್ತಾರೆ ಎಂದು ಹೇಳುವುದನ್ನು ನಾವು ನೋಡಿದ್ದೇವೆ. ಆದರೆ, ಇಲ್ಲಿ ಕಾಫಿ ನಾಡು ಚಂದು ರೀತಿಯಲ್ಲೇ ಇರುವ ವ್ಯಕ್ತಿಯೊಬ್ಬನ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಸೇಮ್​ ಕಾಫಿ ನಾಡು ಚಂದು ರೀತಿಯಲ್ಲೇ ಈ ವ್ಯಕ್ತಿ ಕಾಣುತ್ತಾನೆ.

ಜೂ. ಕಾಫಿ ನಾಡು ಚಂದು ಅಂತ ವೈರಲ್​ ಆದ ವ್ಯಕ್ತಿ

ಜೂ. ಕಾಫಿ ನಾಡು ಚಂದು ಅಂತ ವೈರಲ್​ ಆದ ವ್ಯಕ್ತಿ

  • Share this:
ಇದು ಫಾಸ್ಟ್​ ಫುಡ್ (Fast Food)​ ಯುಗ.. ಊಟ ಆರ್ಡರ್​​ ಮಾಡಿದ ಕೂಡಲೇ ಹೇಗೆ ಫಾಸ್ಟಾಗಿ ಡೆಲಿವರಿ ಆಗುತ್ತೋ ಹಾಗೇ ಇಲ್ಲಿ ಯಾರು ಬೇಕಾದರೂ ಕ್ಷಣ ಮಾತ್ರದಲ್ಲಿ ಫೇಮಸ್ ​(Famous) ಆಗಬಹುದು. ಇಂಟರ್​ನೆಟ್ (Internet)​ ಮೂಲಕ ಹಲವು ಪ್ರತಿಭೆಗಳು ಬೆಳಕಿಗೆ ಬಂದಿವೆ. ತೇರಿ ಮೇರಿ ಹಾಡಿದ್ದ ರಾನು ಮಂಡಲ್ (Ranu Mondal), ಬಚಪನ್ ಕಾ ಪ್ಯಾರ್ (Bachpan Ka Pyaar) ಹಾಡಿದ್ದ ಬಾಲಕ ಎಲ್ಲರೂ ದಿನ ಬೆಳಗಾಗುವುದರೊಳಗಾಗಿ ಸ್ಟಾರ್ ಆಗಿ ಬಳಿಕ ಮುಂದೆ ಕಳೆದು ಹೋದರು. ಕಚ್ಚಾ ಬಾದಾಮ್​ ಕೂಡ ಇವಾಗ ಸೈಲೆಂಟ್ ಆಗಿದ್ದಾರೆ. ಇದು ಉತ್ತರ ಭಾರತದ ಕಥೆಯಾದ್ರೆ, ರಾಜ್ಯದಲ್ಲಿ ಎಲ್ಲಿ ನೋಡಿದ್ರೂ ಕಾಫಿ ನಾಡಿನ ಚಂದು (Coffee Nadu Chandu) ಅಣ್ಣನ್ನದ್ದೇ ಹವಾ. ಎಲ್ಲಿ ಹೋದರೂ ಅವರೇ, ಎಲ್ಲಿ ನೋಡಿದರೂ ಅವರೇ. 

ಜ್ಯೂನಿಯರ್​ ಕಾಫಿ ನಾಡು ಚಂದು ನೋಡಿ!

ಹೌದು, ಒಬ್ಬರ ಹಾಗೇ 7 ಮಂದಿ ಇರುತ್ತಾರೆ ಎಂದು ಹೇಳುವುದನ್ನು ನಾವು ನೋಡಿದ್ದೇವೆ. ಆದರೆ, ಇಲ್ಲಿ ಕಾಫಿ ನಾಡಿನ ಚಂದು ರೀತಿಯಲ್ಲೇ ಇರುವ ವ್ಯಕ್ತಿಯೊಬ್ಬನ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಸೇಮ್​ ಕಾಫಿ ನಾಡು ಚಂದು ರೀತಿಯಲ್ಲೇ ಈ ವ್ಯಕ್ತಿ ಕಾಣುತ್ತಾನೆ. ಇಬ್ಬರ ಹೇರ್​ಸ್ಟೈಲ್​ ಕೂಡ ಒಂದೇ, ಗಡ್ಡ ಸ್ಟೈಲ್​ ಕೂಡ ಒಂದೇ, ಎತ್ತರ, ತೂಕ ಎಲ್ಲವೂ ಒಂದೇ ರೀತಿ ಇದೆ. ಸದ್ಯಕ್ಕೆ ಜೂನಿಯರ್​ ಕಾಫಿ ನಾಡಿನ ಚಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.











View this post on Instagram






A post shared by Madhu Mandya (@jeeva5720)





ಜೂ. ಚಂದು ಜೊತೆ ಸೆಲ್ಫಿಗಾಗಿ ಮುಗಿಬಿದ್ದ ಮಂದಿ!

ಜೂನಿಯರ್​ ಚಂದು ಅವರನ್ನು ಕಂಡು ಜನರು ಇವರೇ ಕಾಫಿ ನಾಡಿನ ಚಂದು ಎಂದುಕೊಂಡು ಸೆಲ್ಫಿಗಾಗಿ ಮುಗಿಬಿದ್ರಂತೆ. ಈ ವ್ಯಕ್ತಿ ನಡೆದುಕೊಂಡು ಹೋಗುತ್ತಿದ್ದರು, ಜನ ಇವರನ್ನು ಕಾಫಿ ನಾಡಿನ ಚಂದು ಎಂದು ಗುರುತಿಸುತ್ತಿದ್ದಾರಂತೆ. ಈ ಬಗ್ಗೆ ಆ ವ್ಯಕ್ತಿಯೇ ಹೇಳಿಕೊಂಡಿದ್ದಾನೆ. ಈ ಜೂನಿಯರ್​ ಚಂದು ಇರೋದು ಬೆಂಗಳೂರಿನ ವಿಜಯನಗರದಲ್ಲಿ ಎಂದು ಅವರೇ ಹೇಳಿಕೊಂಡಿದ್ದಾರೆ. 'ಅವನ್ಯಾರೋ ಕಾಫಿ ನಾಡಿನ ಚಂದು ಅಂತೆ, ನೋಡೋಕೆ ನನ್ನ ಹಾಗೇ ಇದ್ದಾನಂತೆ. ಎಲ್ಲರೂ ಅವ್ನು ನಾನೇ ಎಂದು ಕೊಂಡು ಮಾತನಾಡಿಸುತ್ತಿದ್ದಾರೆ" ಎಂದು ಜೂನಿಯರ್ ಕಾಫಿ ನಾಡು ಚಂದು ವಿಡಿಯೋದಲ್ಲಿ ಹೇಳಿದ್ದಾರೆ.








View this post on Instagram






A post shared by Madhu Mandya (@jeeva5720)





ಇದನ್ನೂ ಓದಿ: ಕಾಫಿನಾಡಿನಲ್ಲೇ ಚಂದುಗೆ ಜನರಿಂದ ಧಮ್ಕಿ! ಅಪಾಯಿಂಟ್ಮೆಂಟ್​ ಫಿಕ್ಸ್ ಮಾಡಿ ಅಣ್ಣನ್ನ ಭೇಟಿ ಮಾಡ್ಬೇಕಂತೆ








View this post on Instagram






A post shared by Madhu Mandya (@jeeva5720)






ಚಿಕ್ಕಮಗಳೂರಿನಲ್ಲೇ ಚಂದುಗೆ ಫುಲ್​ ಕ್ಲಾಸ್​!

ಸದ್ಯಕ್ಕೆ ಸೋಷಿಯಲ್​ ಮೀಡಿಯಾದಲ್ಲಿ ಚಂದು ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಚಂದು ಆಟೋ ಒಳಗಡೆ ಕೂತಿದ್ದಾರೆ. ವಿಡಿಯೋ ಮಾಡುತ್ತಿರುವ ವ್ಯಕ್ತಿ ಚಂದುಗೆ ಕ್ಲಾಸ್​ ತೆಗೆದುಕೊಂಡಿದ್ದಾರೆ. ಜನ ಆಟೋ ಒಡಿಸಲು ಬಿಡದೆ ಹಾಡು ಹೇಳುವಂತೆ ಕಾಫಿ ನಾಡು ಚಂದುಗೆ ಪೀಡಿಸುತ್ತಿದ್ದಾರೆ. ಇದಲ್ಲದೇ ಚಿಕ್ಕಮಗಳೂರಿನ ಜನರೇ ಚಂದುಗೆ ಅವಾಜ್​ ಹಾಕಿದ್ದಾರೆ. ನಮ್ಮಿಂದ ನೀನು ಹೋಗೋಲೇ ಎಂದು ಬೈಯ್ದು ಕಳಿಸಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಎಲ್ಲರ ಮೊಬೈಲ್​ನಲ್ಲೂ ಈ ವಿಡಿಯೋ ಹರಿದಾಡುತ್ತಿದೆ.

ಇದನ್ನೂ ಓದಿ: ಕೊನೆಗೂ ಆಸೆ ಈಡೇರಿಸಿಕೊಂಡ ಕಾಫಿ ನಾಡಿನ ಚಂದು! ಶಿವಣ್ಣ ಕಂಡು ಕುಣಿದು, ಕುಪ್ಪಳಿಸಿದ ವೈರಲ್​ ಸ್ಟಾರ್​

ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಏನಿದೆ?

ಚಿಕ್ಕಮಗಳೂರಿನ ಜನರು ಕಾಫಿ ನಾಡಿನ ಚಂದುಗೆ ಬರ್ತ್​ಡೇ ಹಾಡು ಹೇಳಲು ಕೇಳಿದ್ದಾರೆ. ಅದಕ್ಕೆ ಚಂದು ಈಗ ಆಗಲ್ಲ ಎಂದಿದ್ದಾರೆ. ಯಾಕೆ ಆಗಲ್ಲ ಚಿಕ್ಕಮಗಳೂರಿನವರೇ ನಿನಗೆ ಬೇಡವಾ ಎಂದು ಕೇಳಿದ್ದಾರೆ. ಅದಕ್ಕೆ ಚಂದು ನಾನೂ ಆಟೋ ಓಡಿಸೋಕೆ ಬಂದಿರೋದು ಈಗ ಆಗಲ್ಲ. ನಾಲ್ಕು ಗಂಟೆಗೆ ಬನ್ನಿ ಎಂದು ಹೇಳಿದ್ದಾರೆ. ಈ ಮಾತು ಕೇಳಿ ಕೋಪಗೊಂಡ ಜನರು ಹೋಗೋಲೋ ನಮ್ಮಿಂದ ನೀನು ಎಂದು ಹೇಳಿದ್ದಾರೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.
Published by:Vasudeva M
First published: