Kiccha Sudeep: ಜುಲೈ 6 ಕಿಚ್ಚನ ಬದುಕಿನ ವಿಶೇಷ ದಿನ, ಸುದೀಪ್ ಗೆ ಕಿಚ್ಚ ಅನ್ನೋ ಬಿರುದು ಬಂದಿದ್ದು ಹೇಗೆ ಅನ್ನೋ ಇಂಟರೆಸ್ಟಿಂಗ್ ವಿಚಾರ ಇಲ್ಲಿದೆ

Huccha Film: ಸದ್ಯ ಅಭಿಮಾನಿಗಳು ಕಿಚ್ಚನ ಪ್ಯಾನ್​ ಇಂಡಿಯಾ ಬಿಡುಗಡೆಗೆ ಕಾಯುತ್ತಿದ್ದು, ಇದೇ ಜುಲೈ 28ರಂದು ತೆರೆ ಮೇಲೆ ಅಬ್ಬರಿಸಲು ಸಿನಿಮಾ ಸಿದ್ದವಾಗಿದೆ.

ಕಿಚ್ಚ ಸುದೀಪ್​

ಕಿಚ್ಚ ಸುದೀಪ್​

  • Share this:
ಕಿಚ್ಚ ಸುದೀಪ್ (Kiccha Sudeep) ಸುಮಾರು 25 ವರ್ಷಗಳಿಂದ ಸ್ಯಾಂಡಲ್​ವುಡ್​ (Sandalwood) ನಲ್ಲಿ ಮೆರೆದವರು. ಬದುಕಿನಲ್ಲಿ ಸೋಲು, ಅವಮಾನ ಎಲ್ಲವನ್ನೂ ಮೆಟ್ಟಿನಿಂತು ಸಾಧಿಸಿದ ಸರದಾರ. ದೊಡ್ಡ ಅಭಿಮಾನಿ (Fans) ಬಳಗ, ಭಾಷೆಯ ಎಲ್ಲೆ ಮೀರಿ ಎಲ್ಲೆಡೆ ಹೆಸರು ಪಡೆದಿರುವ ನಟ ಎಂದರೆ ಸುದೀಪ್​. ಕಿಚ್ಚ ಎಂದರೆ ಸಾಕು ಅದೇನೋ ಹರುಷ, ಉತ್ಸಾಹ ಅಭಿಮಾನಿಗಳಲ್ಲಿ ಮೂಡುತ್ತದೆ. ನಿಮಗೆ ಗೊತ್ತಾ ಕಿಚ್ಚನ ಬದುಕಿನಲ್ಲಿ ಈ ದಿನ ಅಂದರೆ ಜುಲೈ 6 ಬಹಳ ವಿಶೇಷವಾದ ದಿನ.

ವೃತ್ತಿ ಜೀವನಕ್ಕೆ ತಿರುವು ಕೊಟ್ಟ ದಿನ

ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ವರ್ಷದಲ್ಲಿ ಒಂದು ದಿನ ಬಹಳ ವಿಶೇಷ ಎಂದಿರುತ್ತದೆ. ಅದಕ್ಕೆ ಕಾರಣ ಏನೇ ಇರಬಹುದು. ಇನ್ನು ನಟ ನಟಿಯರಿಗೂ ಸಹ ಅದು ಇದ್ದೇ ಇರುತ್ತದೆ. ಆ ದಿನ ಅವರ ಫೇವರೇಟ್​ ಸಿನಿಮಾ ಬಿಡುಗಡೆಯಾಗಿರಬಹುದು ಅಥವಾ ಅವರ ಸಿನಿ ಜರ್ನಿಗೆ ಹೊಸ ತಿರುವು ನೀಡಿದ ದಿನವಿರಬಹುದು. ಹೀಗೆ ಒಂದು ದಿನ ಜೀವನದಲ್ಲಿ ಎಂದಿಗೂ ಮರೆಯದ ದಿನವಾಗಿರುತ್ತದೆ. ಕಿಚ್ಚನಿಗೆ ಆ ದಿನ ಜುಲೈ 6.

ಒಂದು  ದಿನ ಹೇಗೆ ವಿಶೇಷವಾಗಿರುತ್ತದೆಯೋ ಹಾಗೆಯೇ ಒಂದು ಸಿನಿಮಾ ಕೂಡ ವಿಶೇಷವಾಗಿರುತ್ತದೆ. ಹಲವಾರು ಸೋಲುಗಳಿಂದ ಕಂಗೆಟ್ಟಿದ್ದ ನಟ, ನಟಿಯರಿಗೆ ಒಂದು ಸಿನಿಮಾ ಟರ್ನಿಂಗ್ ಪಾಯಿಂಟ್​ ಆಗುತ್ತದೆ. ಆ ಸಿನಿಮಾ ಬಿಡುಗಡೆಯಾದ ದಿನವನ್ನು ಎಂದಿಗೂ ಮರೆಯುವುದಿಲ್ಲ. ಕಿಚ್ಚನ ಪಾಲಿಗೆ ಆ ಸಿನಿಮಾ ಹುಚ್ಚ.  ಹೌದು, ಕಿಚ್ಚನ ಮೊದಲ ಸಿನಿಮಾ ಸ್ಪರ್ಷ ಬಿಡುಗಡೆಯಾದಾಗ ಹಲವಾರು ಕಾರಣಗಳಿಂದ ಹೆಚ್ಚು ಸದ್ದು ಮಾಡಲಿಲ್ಲ. ಅಲ್ಲದೇ, ಗಳಿಕೆ ಸಹ ಆಗಿರಲಿಲ್ಲ. ಇದು ಕಿಚ್ಚನ ಸಿನಿ ಜರ್ನಿಗೆ ಹೊಡೆತ ನೀಡಿತ್ತು.

ಇದನ್ನೂ ಓದಿ: ಅಪ್ಪು ಕನಸು ನನಸು ಮಾಡಲು ಶಿವಣ್ಣ ರೆಡಿ, ಚೆಲುವ ಚಾಮರಾಜನಗರ ಯೋಜನೆಗೆ ಕೈ ಜೋಡಿಸಲು ಸಿದ್ದ ಎಂದ ನಟ

ನಂತರ ಸುದೀಪ್​ಗೆ ಅವಕಾಶಗಳು ಕಡಿಮೆಯಾಗಿತ್ತು. ಆದರೆ ಸುಮಾರು ನಾಲ್ಕು ವರ್ಷಗಳ ನಂತರ ಈ ಹುಚ್ಚ ಸಿನಿಮಾ. ನಾವು ಸುದೀಪ್ ಅವರನ್ನು ಕಿಚ್ಚ ಸುದೀಪ್ ಎಂದು ಕರೆಯಲು ಇದೇ ಸಿನಿಮಾ ಕಾರಣ. ಅವರಿಗೆ ಕಿಚ್ಚ ಎಂಬ ಬಿರುದು ಬಂದಿದ್ದು ಈ ಸಿನಿಮಾದಿಂದ. ಈ ಹುಚ್ಚ ಸಿನಿಮಾ ಬಿಡುಗಡೆಯಾಗಿದ್ದು ಜುಲೈ 6 2001ರಂದು. ಈ ಸಿನಿಮಾ ಸೂಪರ್ ಹಿಟ್​ ಆಗಿತ್ತು. ನಂತರ ಕಿಚ್ಚ ತಿರುಗಿ ನೋಡಲಿಲ್ಲ. ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಂಡು ಅಭಿನಯ ಚಕ್ರವರ್ತಿ ಎನಿಸಿಕೊಂಡರು. ಸೂಪರ್ ಹಿಟ್​ ಸಿನಿಮಾಗಳ ಮೂಲಕ ಜನರಿಗೆ ಹತ್ತಿರವಾದರು. ಹಾಗಾಗಿ ಈ ದಿನ ಸುದೀಪ್ ಬದುಕಲ್ಲಿ ಬಹಳ ವಿಶೇಷ.

ಈಗ ಸಿನಿಮಾ ಬಿಡುಗಡೆಯಾದ ದಿನ

ಇದೊಂದೇ ಸಿನಿಮಾ ಅಲ್ಲ, ಅವರ ಸಿನಿ ಜರ್ನಿಯಲ್ಲಿ ಮತ್ತೊಂದು ಮಹತ್ತರವಾದ ಸಿನಿಮಾ ಕೂಡ ಇದೇ ದಿನ ಬಿಡುಗಡೆಯಾಗಿದ್ದು. ಅದು ಈಗ ಚಿತ್ರ. ಹೌದು, ರಾಜಮೌಳಿ ನಿರ್ದೇಶನದ ಸೂಪರ್ ಹಿಟ್​ ಸಿನಿಮಾ ಈಗ ಯಾರಿಗೆ ತಾನೇ ನೆನಪಿಲ್ಲ. ಆ ಸಿನಿಮಾದಲ್ಲಿ ವಿಲನ್ ಆಗಿ ಕಾಣಿಸಿಕೊಂಡಿದ್ದ ಕಿಚ್ಚ ತೆರೆಯ ಮೇಲೆ ಮೋಡಿ ಮಾಡಿದ್ದರು. ದೇಶ ವಿದೇಶದಲ್ಲಿ ಸುದೀಪ್​ಗೆ ಅಭಿಮಾನಿಗಳು ಹುಟ್ಟಿಕೊಂಡಿದ್ದು ಇದೇ ಸಿನಿಮಾದಿಂದ. ಬಹುಭಾಷಾ ನಟನಾಗಿ ಹೊರಹೊಮ್ಮಿದ್ದಾರೆ.



ಈ ಸುಂದರ ದಿನವನ್ನು ನೆನಪಿಸಿಕೊಂಡಿರುವ ನಟ ಅಭಿಮಾನಿಗಳಿಗೆ ಹಾಗೂ ಸಿನಿಮಾ ತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿರುವ ನಟ, ಇದು ನನ್ನ ವೃತ್ತಿ ಜೀವನದ ಬಹಳ ಸುಂದರವಾದ ದಿನ, ಹುಚ್ಚ ಮತ್ತು ಈಗ ಸಿನಿಮಾ ಬಿಡುಗಡೆಯಾದ ದಿನ. ಈ ಎರಡು ಸಿನಿಮಾ ತಂಡಕ್ಕೆ ತುಂಬು ಹೃದಯದಿಂದ ಧನ್ಯವಾದ ಹೇಳುತ್ತೇನೆ. ಒಂದು ನ್ನ ವೃತ್ತಿ ಜೀವನವನ್ನು ಕಟ್ಟಿಕೊಟ್ಟರೆ, ಇನ್ನೊಂದು ಅದನ್ನು ಎತ್ತರಕ್ಕೆ  ಏರಿಸಿದೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಬಾಲಿವುಡ್​ಗೆ ಹೋಗ್ತಾರಾ ಅನೂಪ್ ಭಂಡಾರಿ? ಈ ಹೀರೋಗಳ ಜೊತೆ ಸಿನಿಮಾ ಮಾಡ್ತಾರಂತೆ!

ಸದ್ಯ ಅಭಿಮಾನಿಗಳು ಕಿಚ್ಚನ ಪ್ಯಾನ್​ ಇಂಡಿಯಾ ಬಿಡುಗಡೆಗೆ ಕಾಯುತ್ತಿದ್ದು, ಇದೇ ಜುಲೈ 28ರಂದು ತೆರೆ ಮೇಲೆ ಅಬ್ಬರಿಸಲು ಸಿನಿಮಾ ಸಿದ್ದವಾಗಿದೆ.
Published by:Sandhya M
First published: