news18-kannada Updated:November 13, 2020, 12:26 PM IST
ಜೂಹಿ ಚಾವ್ಲಾ
ಕೆಕೆಆರ್ ಸಹ ಮಾಲಕಿ ಹಾಗೂ ನಟಿ ಜೂಹಿ ಚಾವ್ಲಾ ಟ್ವಿಟ್ಟರ್ನಲ್ಲಿ ಸಿಟ್ಟಾಗಿದ್ದಾರೆ. ಐಪಿಎಲ್ ಮ್ಯಾಚ್ ಮುಗಿಸಿ ಭಾರತಕ್ಕೆ ಮರಳಿದ ನಂತರದಲ್ಲಿ ವಿಮಾನ ನಿಲ್ದಾಣದ ಪರಿಸ್ಥಿತಿ ನೋಡಿ ಸಿಟ್ಟಾಗಿರುವ ಅವರು ವಿಡಿಯೋ ಮಾಡಿ ಹಾಕಿದ್ದಾರೆ. ಅಷ್ಟಕ್ಕೂ ವಿಮಾನ ನಿಲ್ದಾಣದಲ್ಲಿ ಆಗಿದ್ದೇನು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.
ಜೂಹಿ ದುಬೈನಿಂದ ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ವಿಮಾನ ನಿಲ್ದಾಣದಿಂದ ನಿರ್ಗಮಿಸುವಾಗ ಬ್ಯಾಗ್ಗಳ ತಪಾಸಣೆ ಸೇರಿ ಸಾಕಷ್ಟು ನಿಯಮಗಳನ್ನು ಪಾಲನೆ ಮಾಡಬೇಕಾಗುತ್ತದೆ. ಈಗ ಕೊರೋನಾ ಇರುವುದರಿಂದ ವಿದೇಶದಿಂದ ಬಂದವರ ಆರೋಗ್ಯ ತಪಾಸಣೆ ಕೂಡ ಮಾಡಿ ಕಳುಹಿಸಲಾಗುತ್ತಿದೆ ಆದರೆ, ವಿಮಾನ ನಿಲ್ದಾಣದಲ್ಲಿ ಕಡಿಮೆ ಸಿಬ್ಬಂದಿ ಇದ್ದಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ನಿಂತಿದ್ದರು. ಅಷ್ಟೇ ಅಲ್ಲ, ಇಲ್ಲಿ ನೂಕು ನುಗ್ಗಲು ಆಗುವಂಥ ಸ್ಥಿತಿ ಕೂಡ ಉಂಟಾಗಿತ್ತು.
ಇದನ್ನು ವಿಡಿಯೀ ಮಾಡಿರುವ ಜೂಹಿ, ಶೀಘ್ರವೇ ವಿಮಾನ ನಿಲ್ದಾಣ ಹಾಗೂ ಸರ್ಕಾರಿ ಅಧಿಕಾರಿಗಳು ಆರೋಗ್ಯ ತಪಾಸಣೆ ಕೇಂದ್ರದಲ್ಲಿ ಹೆಚ್ಚು ಕೌಂಟರ್ ತೆರೆಯಬೇಕು ಮತ್ತು ಹೆಚ್ಚು ಅಧಿಕಾರಿಗಳನ್ನು ನೇಮಕ ಮಾಡಬೇಕು. ಇಲ್ಲಿ ಗಂಟೆಗಟ್ಟಲೆ ನಾವು ಕಾಯಬೇಕಾಯಿತು. ನಾಚಿಕೆಗೇಡಿನ ಸ್ಥಿತಿ ಎಂದು ಬರೆದುಕೊಂಡಿದ್ದಾರೆ.
ಇದಕ್ಕೆ ಭಾರತೀಯ ವಿಮಾನ ಪ್ರಾಧಿಕಾರ ಪ್ರತಿಕ್ರಿಯಿಸಿದ್ದು, ಆದ ತೊಂದರೆಗೆ ಕ್ಷಮೆ ಕೇಳುತ್ತೇವೆ ಮತ್ತು ಯಾವವಿಮಾನ ಎಂದು ತಿಳಿಸಿದರೆ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.
ಸದ್ಯ, ಈ ಟ್ವೀಟ್ ಸಾಕಷ್ಟು ವೈರಲ್ ಆಗಿದೆ.
Published by:
Rajesh Duggumane
First published:
November 13, 2020, 12:10 PM IST