Juhi Chawla: ಟ್ರೋಲ್​ ಮಾಡಿದವರಿಗೆ ನಗುತ್ತಲೇ ಉತ್ತರ ಕೊಟ್ಟ ನಟಿ ಜೂಹಿ ಚಾವ್ಲಾ

5G Network: ಈ ಎಲ್ಲದಕ್ಕೂ ಜೂಹಿ ಚಾವ್ಲಾ ನಗುತ್ತಲೇ ಪ್ರತಿಕ್ರಿಯೆ ನೀಡಿದ್ದಾರೆ. ಹೌದು, ಮೀಮ್ಸ್​ಗಳು ನೋಡಿ ತುಂಬಾ ಖುಷಿಯಾಯಿತು. ಇಷ್ಟು ಕಡಿಮೆ ಸಮಯದಲ್ಲಿ ಇಂತಹ ಕ್ರಿಯೇಟಿವಿಟಿ ನೋಡಿ ಮೆಚ್ಚಿಕೊಳ್ಳಲೇ ಬೇಕು. ಮೀಮ್ಸ್​ ನೋಡಿ ನಿಜಕ್ಕೂ ಮಜಾ ಬಂತು ಎಂದಿರುವ ನಟಿ, ತಮ್ಮನ್ನು ಪ್ರಶ್ನೆ ಮಾಡಿರುವವರಿಗೂ ಉತ್ತರ ನೀಡಿದ್ದಾರೆ. 

ಜೂಹಿ ಚಾವ್ಲಾ

ಜೂಹಿ ಚಾವ್ಲಾ

  • Share this:
ಬಾಲಿವುಡ್​ ನಟಿ ಹಾಗೂ ಪರಿಸರವಾದಿ ಜೂಹಿ ಚಾವ್ಲಾ ಅವರು 5ಜಿ ವೈರ್​ಲೆಸ್​ ನೆಟ್​ವರ್ಕ್​ ವಿರೋಧಿಸಿ ನ್ಯಾಯಾಲಯದ ಮೆಟ್ಟಿಲೇರಿರುವ ವಿಷಯ ಗೊತ್ತೇ ಇದೆ. 5 ಜಿ ತಂತ್ರಜ್ಞಾನದಿಂದಾಗಿ ಮನುಷ್ಯ, ಪ್ರಾಣಿ, ಪಕ್ಷಿ ಸೇರಿದಂತೆ ಭೂಮಿಯ ಮೇಲಿರುವ ಸಸ್ಯ ಸಂಕುಲ ಇದರಿಂದ ಹೊರ ಸೂಸುವ ವಿಕಿರಣದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಈ ತಂತ್ರಜ್ಞಾನದಿಂದ  ಅಪಾಯವೇ ಹೆಚ್ಚು ಎಂದು ಜೂಹಿ ಚಾವ್ಲಾ ಅವರು ದೆಹಲಿ ಹೈ ಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿದ್ದಾರೆ. ಈ ಮೊಕದ್ದಮೆಯು ದೋಷಯುಕ್ತವಾಗಿದ್ದು, ಮಾಧ್ಯಮ ಪ್ರಚಾರಕ್ಕಾಗಿ ಇದನ್ನು ಸಲ್ಲಿಸಲಾಗಿದೆ ಎಂದು ದೆಹಲಿ ಹೈ ಕೋರ್ಟ್​ ಹೇಳಿತ್ತು. 5ಜಿ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ವಿವರಣೆ ನೀಡದೆಯೇ ಮೊಕದ್ದಮೆ ಹೂಡಿದ್ದಕ್ಕಾಗಿ ನ್ಯಾಯಾಲಯ ಚಾವ್ಲಾ ಅವರನ್ನು ಪ್ರಶ್ನಿಸಿತ್ತು. ಅಲ್ಲದೆ ಈ ವಿಷಯದಲ್ಲಿ ಮೊದಲು ಸರ್ಕಾರನ್ನು ಸಂಪರ್ಕಿಸಬೇಕಿತ್ತು. ಒಂದುವೇಳೆ ಸರ್ಕಾರ ನಿರಾಕರಿಸಿದ್ದರೆ ನಂಥರ ನ್ಯಾಯಾಲದ ಮೆಟ್ಟಿಲೇರಬೇಕಿತ್ತು ಎಂದಿತ್ತು.

5ಜಿ ನೆಟ್​ವರ್ಕ್​ಗೆ ಸಂಬಂಧಿಸಿದಂತೆ ಜೂಹಿ ಚಾವ್ಲಾ ಅವರು ಅರ್ಜಿ ಸಲ್ಲಿಸುತ್ತಿದ್ದಂತೆಯೇ ಸಾಕಷ್ಟು ಮಂದಿ ಈ ವಿಷಯವಾಗಿ ಜೂಹಿ ಅವರನ್ನು ಟ್ರೋಲ್​ ಮಾಡಿದ್ದರು.ಸಾಕಷ್ಟು ಮೀಮ್ಸ್​ಗಳು ಹರಿದಾಡಿದ್ದವು. ಇಷ್ಟು ವರ್ಷಗಳು ಏನು ಮಾಡುತ್ತಿದ್ದಿರಿ ಎಂದೆಲ್ಲ ಪ್ರಶ್ನಿಸಿದ್ದರು.

a man interrupted the virtual hearing of Juhi Chawla's 5G lawsuit
ಜೂಹಿ ಚಾವ್ಲಾ


ಈ ಎಲ್ಲದಕ್ಕೂ ಜೂಹಿ ಚಾವ್ಲಾ ನಗುತ್ತಲೇ ಪ್ರತಿಕ್ರಿಯೆ ನೀಡಿದ್ದಾರೆ. ಹೌದು, ಮೀಮ್ಸ್​ಗಳು ನೋಡಿ ತುಂಬಾ ಖುಷಿಯಾಯಿತು. ಇಷ್ಟು ಕಡಿಮೆ ಸಮಯದಲ್ಲಿ ಇಂತಹ ಕ್ರಿಯೇಟಿವಿಟಿ ನೋಡಿ ಮೆಚ್ಚಿಕೊಳ್ಳಲೇ ಬೇಕು. ಮೀಮ್ಸ್​ ನೋಡಿ ನಿಜಕ್ಕೂ ಮಜಾ ಬಂತು ಎಂದಿರುವ ನಟಿ, ತಮ್ಮನ್ನು ಪ್ರಶ್ನೆ ಮಾಡಿರುವವರಿಗೂ ಉತ್ತರ ನೀಡಿದ್ದಾರೆ.
View this post on Instagram


A post shared by Juhi Chawla (@iamjuhichawla)


ನಿಮಗೆ ಈಗ ಎಚ್ಚರವಾಗಿದೆಯೇ... ಈಗ ಅರ್ಜಿ ಸಲ್ಲಿಸಿದ್ದೀರಿ... ಎಂದು ಪ್ರಶ್ನಿಸಿದ್ದವರಿಗೆ ಉತ್ತರಿಸಿರುವ ಜೂಹಿ ಚಾವ್ಲಾ, ನಾನು ಕಳೆದ 10 ವರ್ಷಗಳಿಂದ ರೇಡಿಯೇಷನ್​, ಮೊಬೈಲ್​ ಬಳಕೆ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇನೆ. ಮೊಬೈಲ್​ಗಳು ರೇಡಿಯೋ ತರಂಗಗಳಿಂದಲೇ ಕೆಲಸ ಮಾಡುವುದು. 5ಜಿ ಬಳಕೆಯಿಂದ ರೇಡಿಯೇಷನ್​ ಹೆಚ್ಚುತ್ತದೆ. ರೇಡಿಯೇಷನ್​ ಅಗತ್ಯಕ್ಕಿಂತ ಹೆಚ್ಚಾದರೆ ಅದರ ದುಷ್ಪರಿಣಾಮ ಆರಂಭವಾಗುತ್ತದೆ. ಈ ಬಗ್ಗೆ ನೀವೂ ಸ್ವಲ್ಪ ಸಂಶೋಧನೆ ಮಾಡಿ ಎಂದು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: Amitabh Bachchan: ಅಮಿತಾಭ್​ ಬಚ್ಚನ್​-ಜಯಾ ಬಚ್ಚನ್​ ದಾಂಪತ್ಯಕ್ಕೆ 48ರ ಸಂಭ್ರಮ...!

ಜೂಹಿ ಚಾವ್ಲಾ ಸಲ್ಲಿಸಿರುವ ಅರ್ಜಿ ವಿಚಾರಣೆ ನಿನ್ನೆ ನಡೆಯಿತು. ಕೋವಿಡ್​ ಹಿನ್ನಲೆ ಈ ಪ್ರಕರಣದ ಆನ್​ಲೈನ್​ ಮೂಲಕ​ ವಿಚಾರಣೆ ನಡೆಸಲಾಯಿತು. ಈ ವರ್ಚುಯಲ್​ ವಿಚಾರಣೆಗೆ ಜನರು ಭಾಗಿಯಾಗುವಂತೆ ನಟಿ ಕೂಡ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಲಿಂಕ್​ ಶೇರ್​ ಮಾಡಿದ್ದರು. ವಿಚಾರಣೆ ವೇಳೆ ವ್ಯಕ್ತಿಯೊಬ್ಬರು ಜೂಹಿ ಚಾವ್ಲಾ ಅವರ ನಟನೆಯ ಸಿನಿಮಾದ ಹಾಡುಗಳನ್ನು ಹಾಡುವ ಮೂಲಕ ಅಡ್ಡಿಮಾಡಿದ್ದಾರೆ.

ಮೊದಲಿಗೆ ಜೂಹಿ ಚಾವ್ಲಾ ಅವರ 1993 ಸೂಪರ್​ ಹಿಟ್​ ಚಿತ್ರ 'ಹಮ್​ ಹೈ ರಾಹಿ ಪ್ಯಾರ್​ ಕೆ' ಚಿತ್ರದ 'ಘೂನ್​ಘಟ್​ ಕಿ ಆಡ್​ಸೆ' ಹಾಡನ್ನು ಹಾಡಿ ಕಲಾಪದ ಗಂಭೀರತೆಗೆ ಧಕ್ಕೆ ತಂದರು. ಮತ್ತೆ ಆನ್​ಲೈನ್​ನಲ್ಲಿ ವಿಚಾರಣೆಗೆ ಸೇರಿಕೊಂಡ ಈತ 'ನಾಜಾಯಜ್'​ ಚಿತ್ರದ 'ಲಾಲ್​ ಲಾಲ್​ ಹೊಂಟೋ ಪೆ' ಹಾಡನ್ನು ಹಾಡಲು ಶುರು ಮಾಡಿದ. ಇದಾದ ತಕ್ಷಣಕ್ಕೆ ಮತ್ತೆ ವರ್ಚುಯಲ್​ ಕಲಾಪದಿಂದ ಹೊರ ಹೋಗಿ ಕೆಲ ಕ್ಷಣದ ಬಳಿಕ ಮತ್ತೆ ಬಂದು 'ಬರಾತ್'​ ಸಿನಿಮಾದ 'ಮೇರಿ ಬನ್ನೊ ಕಿ' ಹಾಡನ್ನು ಹಾಡಿ ಕಲಾಪಕ್ಕೆ ಉದ್ದೇಶ ಪೂರ್ವಕವಾಗಿ ಅಡ್ಡಿಪಡಿಸಿದ ಘಟನೆ ನಡೆಯಿತು.

ಇದನ್ನೂ ಓದಿ: Serial Shooting: ಮತ್ತೆ ಬೆಂಗಳೂರಿನಲ್ಲೇ ಆರಂಭವಾಗಲಿದೆ ಧಾರಾವಾಹಿಗಳ ಚಿತ್ರೀಕರಣ..!

ಆನ್​ಲೈನ್​ ಮೂಲಕ ನಡೆಸಿದ ಈ ವಿಚಾರಣೆಯಲ್ಲಿ ನಡೆದ ಈ ವಿಚಿತ್ರ ಘಟನೆ ಹಿನ್ನಲೆ ವಿಚಾರಣೆಯನ್ನು ನಿಲ್ಲಿಸಲಾಯಿತು. ಬಳಿಕ ಆತನನ್ನು ತೆಗೆದು ಹಾಕಿ ವಿಚಾರಣೆಯನ್ನು ಮತ್ತೆ ಆರಂಭಿಸಲಾಯಿತು. ನ್ಯಾಯಾಲಯದ ವಿಚಾರಣೆಗೆ ಅಡ್ಡಿ ಪಡಿಸಿದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ದೆಹಲಿ ಹೈ ಕೋರ್ಟ್,​ ಈ ಸಂಬಂಧ ನ್ಯಾಯಾಲಯದ ಘನತೆಗೆ ಧಕ್ಕೆ ತಂದ ಆರೋಪದ ಮೇಲೆ ನ್ಯಾಯಾಂಗ ನಿಂದನೆ ನೋಟಿಸ್​ ಜಾರಿ ಮಾಡಿದೆ. ಆ ವ್ಯಕ್ತಿಯನ್ನು ಹುಡುಕಿ ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ.
Published by:Anitha E
First published: