• Home
  • »
  • News
  • »
  • entertainment
  • »
  • Manasi Sudhir: ಮತ್ತೊಮ್ಮೆ ಅಮ್ಮನಾಗಿ ಪ್ರೇಕ್ಷಕರ ಮುಂದೆ ಬಂದ ಕಾಂತಾರದ ಕಮಲಕ್ಕ!

Manasi Sudhir: ಮತ್ತೊಮ್ಮೆ ಅಮ್ಮನಾಗಿ ಪ್ರೇಕ್ಷಕರ ಮುಂದೆ ಬಂದ ಕಾಂತಾರದ ಕಮಲಕ್ಕ!

ಮಾನಸಿ ಸುಧೀರ್

ಮಾನಸಿ ಸುಧೀರ್

Manasi Sudhir: ನಟಿ ಮಾನಸಿ ಸುಧೀರ್ ಈಗ ಮತ್ತೊಮ್ಮೆ ಅಮ್ಮನಾಗಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಜುಗಲ್ ಬಂದಿ ಸಿನಿಮಾದ ಮಾನಸಿ ಅಭಿನಯದ ಇಂಥವರ ಸಂತಾನ ಹಾಡು ರಿಲೀಸ್ ಆಗಿದೆ.

  • News18 Kannada
  • Last Updated :
  • Bangalore, India
  • Share this:

ಕಾಂತಾರ ಸಿನಿಮಾದಲ್ಲಿ ಕಮಲಕ್ಕ ಪಾತ್ರ ಮಾಡಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ ಮಾನಸಿ ಸುಧೀರ್ ಅವರು ಈಗ ಮತ್ತೊಮ್ಮೆ ಜುಗಲ್ ಬಂದಿ (Jugalbandi) ಮೂಲಕ ಸಿನಿ ಪ್ರಿಯರನ್ನು ರಂಜಿಸಲಿದ್ದಾರೆ. ಜುಗಲ್ ಬಂದಿ ಸಿನಿಮಾ (Cinema) ಮೂಲಕ ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ ಮಾನಸಿ. ಜುಗಲ್ ಬಂದಿ ಸಿನಿಮಾದ ವಿಡಿಯೋ ಸಾಂಗ್ (Video Song) ರಿಲೀಸ್ ಆಗಿದ್ದು ಇದರಲ್ಲಿ ಮಾನಸಿ ಅವರನ್ನು ಮಗುವಿಗಾಗಿ ಹಂಬಲಿಸುವ ತಾಯಿಯ ರೂಪದಲ್ಲಿ ಕಾಣಬಹುದು. ಮಕ್ಕಳಿಲ್ಲದ ಮಹಿಳೆಯಾಗಿ ಕಾಣಿಸಿಕೊಂಡಿರುವ ಮಾನಸಿ ಸುಧೀರ್ (Manasi Sudhir) ಅವರು ಮಗುವಿಗಾಗಿ ಹಂಬಲಿಸುವುದನ್ನು ವಿಡಿಯೋದಲ್ಲಿ ಕಾಣಬಹುದು. 


ಮಕ್ಕಳಿಗಾಗಿ ಹಂಬಲಿಸುವ ತಾಯಿ


ಇಂಥವರ ಸಂತಾನ ಭಾಗ್ಯ ಕಿತ್ತು ನನ್ನಂಥ ಬಂಜೆಗಾದ್ರೂ ನೀಡು ಎಂಬ ಹಾಡು ಯೂಟ್ಯೂಬ್​​ನಲ್ಲಿ ರಿಲೀಸ್ ಆಗಿದೆ. ಮುಂಜಾವದಲ್ಲಿ ಮಗು ಅಳುವ ಸದ್ದು ಕೇಳಿ ಬಂಜೆಯಾಗಿರುವ ಮಹಿಳೆ ಧ್ವನಿ ಅನುಸರಿಸಿ ಹೋಗುವುದನ್ನು ಕಾಣಬಹುದು. ಇಲ್ಲಿ ಬಂಜೆಯಾಗಿ ಮಾನಸಿ ಕಾಣಿಸಿಕೊಂಡಿದ್ದು ಪುಟ್ಟ ಮಗುವನ್ನು ತೋಳಲ್ಲಿ ಎತ್ತಿಕೊಂಡು ಬರುವ ದೃಶ್ಯವನ್ನು ಕಾಣಬಹುದು. ಮನೆಯ ಪಕ್ಕ ಯಾರೋ ಬಿಟ್ಟು ಹೋಗಿರುವ ಮಗುವನ್ನು ಎತ್ತಿ ತಂದು ಅದನ್ನು ಸಾಕುವ ದೃಶ್ಯವನ್ನು ಹಾಡಿನಲ್ಲಿ ಕಾಣಬಹುದು.


ಮಕ್ಕಳಾಗದ ಅಮ್ಮಂದಿರ ನೋವು


ಮಾನಸಿ ಅವರು ಬಂಜೆಯಾಗಿದ್ದು ಪುಟ್ಟ ಮಗುವನ್ನು ಪಡೆದ ಖುಷಿಯಲ್ಲಿ ಅದನ್ನು ಆಡಿಸಿ, ಮುದ್ದಾಡಿ ಸಾಕುವ ದೃಶ್ಯವನ್ನು ಇಲ್ಲಿ ಕಾಣಬಹುದು. ತನ್ನ ಕಂದನ ಎತ್ತಿಕೊಂಡು ಗಲ್ಲಿ ತುಂಬಾ ಓಡಾಡುವ ತನನ್ನನ್ನು ಆಡಿಕೊಂಡವರ ಮುಂದೆ ಮಗುವನ್ನು ಆಡಿಸುವ ದೃಶ್ಯವೂ ಇದೆ. ಮಕ್ಕಳಿಲ್ಲದ ಮಹಿಳೆಯ ನೋವನ್ನು ಅರ್ಥ ಪೂರ್ಣವಾಗಿ ಈ ಹಾಡಿನಲ್ಲಿ ತಿಳಿಸಲಾಗಿದೆ.


ಇದನ್ನೂ ಓದಿ: Kantara-Manasi Sudhir: ಕಾಂತಾರದಲ್ಲಿ ಶಿವನ ಅಮ್ಮನಾಗಿ ನಟಿಸಿದ್ದು ಇವರೇ ನೋಡಿ


ವೈಕ್ಕಂ ವಿಜಯಲಕ್ಷಿ ಗಾಯನ


ವೈಕಂ ವಿಜಯಲಕ್ಷ್ಮಿ ಅವರು ಈ ಹಾಡನ್ನು ಹಾಡಿದ್ದು ಇವರು ತಮಿಳಿನ ಖ್ಯಾತ ಗಾಯಕಿ. ಇದಕ್ಕೆ ನಿರ್ದೇಶಕ ದಿವಾಕರ್ ಡಿಂಡಿಮ ಸಾಹಿತ್ಯ ನೀಡಿದ್ದು, ಪ್ರದ್ಯೋತ್ತನ್ ಸಂಗೀತ ನಿರ್ದೇಶಿಸಿದ್ದಾರೆ.


ಜುಗಲ್ ಬಂದಿ ಸಿನಿಮಾದ ಕಥೆ ಏನು?


ನಾಲ್ಕು ಡಿಫರೆಂಟ್ ಪ್ಲಾಟ್ ಒಳಗೊಂಡ ಸಿನಿಮಾ ‘ಜುಗಲ್ ಬಂದಿ’. ಜುಗಲ್ ಬಂದಿ ದಿವಾಕರ್ ಡಿಂಡಿಮ ನಿರ್ದೇಶನದ ಮೊದಲ ಸಿನಿಮಾ ಎನ್ನುವುದು ಕೂಡಾ ವಿಶೇಷ. ಕಥೆ, ಚಿತ್ರಕಥೆ, ಸಾಹಿತ್ಯ, ನಿರ್ದೇಶನದ ಜೊತೆಗೆ ತಮ್ಮ ಮೊದಲ ಸಿನಿಮಾಗೆ ತಾವೇ ಬಂಡವಾಳ ಕೂಡಾ ಹೂಡುತ್ತಿದ್ದಾರೆ.




ಪಾತ್ರಾಬಳಗದಲ್ಲಿ ಯಾರ್ಯಾರಿದ್ದಾರೆ?


ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಒಳಗೊಂಡ ಈ ಚಿತ್ರದಲ್ಲಿ ಕಾಂತಾರ ಖ್ಯಾತಿಯ ಮಾನಸಿ ಸುಧೀರ್, ಅರ್ಚನಾ ಕೊಟ್ಟಿಗೆ, ಅಶ್ವಿನ್ ರಾವ್, ಸಂತೋಷ್ ಆಶ್ರಯ್, ಯಶ್ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಪ್ರಕಾಶ್ ಬೆಳಗಲ್, ಚಂದ್ರಪ್ರಭಾ ಜಿ ಯುವಕ, ರಂಜನ್, ಯುಕ್ತ ಅಲ್ಲು ಸುಶ್ ಒಳಗೊಂಡ ತಾರಾಬಳಗ ಚಿತ್ರದಲ್ಲಿದೆ.


ಇದನ್ನೂ ಓದಿ: Rishab Shetty-Manasi Sudhir: ಕಾಂತಾರದ ಹೀರೋ ಶಿವ-ಅಮ್ಮ ಕಮಲಕ್ಕನ ವಯಸ್ಸು ಸೇಮ್ ಸೇಮ್


ಡಬ್ಬಿಂಗ್ ಕಂಪ್ಲೀಟ್ ಮಾಡಿ ಅಂತಿಮ ಹಂತದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಇದರ ಜೊತೆಗೆ ‘ಜುಗಲ್ ಬಂದಿ’ ಸಿನಿಮಾ ಪ್ರಚಾರ ಕಾರ್ಯವನ್ನು ಆರಂಭಿಸಿದ್ದು, ಸಿನಿಮಾದ ಮೊದಲ ಹಾಡು ಬಿಡುಗಡೆ ಮಾಡಿದೆ.


ಕಾಂತಾರದಲ್ಲಿ ಕಮಲಕ್ಕ ಆಗಿ ನಟಿಸಿರುವ ಮಾನಸಿ ಅವರು ಅವರ ಅಭಿನಯಕ್ಕಾಗಿ ವ್ಯಾಪಕ ಮೆಚ್ಚುಗೆ ಗಳಿಸುತ್ತಿದ್ದಾರೆ. ಸಿನಿಮಾ ಈಗ ಬೇರೆ ಭಾಷೆಗಳಲ್ಲಿಯೂ ಕ್ಲಿಕ್ ಆಗಿದೆ.

Published by:Divya D
First published: