Judgemental Hai Kya Trailer: 'ಜಡ್ಜ್​ಮೆಂಟಲ್ ಹೈ ಕ್ಯಾ​' ಸಿನಿಮಾದ ಟ್ರೈಲರ್​ನಲ್ಲಿ ಮಿಂಚಿದ ಕಂಗನಾ-ರಾಜ್​ಕುಮಾರ್ ರಾವ್​..!

Judgemental Hai Kya Trailer: ಬಾಲಿವುಡ್‍ನಲ್ಲಿ ಕಳೆದ ಕೆಲ ಸಮಯದಿಂದ ವಿವಾದಗಳಿಂದಲೇ ಹೆಚ್ಚು ಸುದ್ದಿ ಮಾಡುತ್ತಿದ್ದ ಸುಂದರಿ ಕಂಗನಾ. ಆದರೆ ಈಗ ಇದ್ದಕ್ಕಿದ್ಧಂತೆ ವಿವಾದಗಳಿಂದ ಎದ್ದು ಬಂದು ಸಿನಿಮಾ ಮೂಲಕ ಸದ್ದು ಮಾಡ್ತಿದ್ದಾರೆ ಬಾಲಿವುಡ್ ಕ್ವೀನ್.

'ಜಡ್ಜ್​​ಮೆಂಟಲ್​ ಹೈ ಕ್ಯಾ' ಸಿನಿಮಾದಲ್ಲಿ ಕಂಗನಾ ಹಾಗೂ ರಾಜ್​ಕುಮಾರ್​ ರಾವ್​

'ಜಡ್ಜ್​​ಮೆಂಟಲ್​ ಹೈ ಕ್ಯಾ' ಸಿನಿಮಾದಲ್ಲಿ ಕಂಗನಾ ಹಾಗೂ ರಾಜ್​ಕುಮಾರ್​ ರಾವ್​

  • News18
  • Last Updated :
  • Share this:
ಬಾಲಿವುಡ್​ನ ಕ್ವೀನ್​ ಎಂದೇ ಖ್ಯಾತರಾಗಿರುವ ನಟಿ ಕಂಗನಾ ನಿನ್ನೆ ರಾತ್ರಿಯಿಂದ ಇಂಟರ್​ನೆಟ್​ನಲ್ಲಿ ರಾಜ್ಯಭಾರ ಆರಂಭಿಸಿದ್ದಾರೆ. ಹೌದು, ಕಂಗನಾ ಅಭಿನಯದ 'ಜಡ್ಜ್​ಮೆಂಟಲ್​ ಹೈ ಕ್ಯಾ' ಸಿನಿಮಾದ ಟ್ರೈಲರ್​ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸುತ್ತಿದೆ.

ಏಕ್ತಾ ಕಪೂರ್​ ನಿರ್ಮಾಣದ ಈ ಚಿತ್ರದ ಟ್ರೈಲರ್​ ಅನ್ನು ಏಕ್ತಾ ನಿನ್ನೆ ರಾತ್ರಿ ತಮ್ಮ ಶೇರ್​ ಮಾಡಿದ್ದಾರೆ.ಮೊದಲು 'ಮೆಂಟಲ್ ಹೈ ಕ್ಯಾ' ಅಂತಿದ್ದ ಟೈಟಲ್‍ಅನ್ನು ಚಿತ್ರತಂಡ, ಕಾರಣಾಂತರಗಳಿಂದ 'ಜಡ್ಜ್​ಮೆಂಟಲ್ ಹೈ ಕ್ಯಾ' ಎಂದು ಬದಲಿಸಿದೆ. ಪ್ರಕಾಶ್ ಕೊವೆಲಮುಡಿ ನಿರ್ದೇಶನದ ಈ ಸಸ್ಪೆನ್ಸ್​ ಕಾಮಿಡಿ ಚಿತ್ರದಲ್ಲಿ ಕಂಗನಾ ಪಾತ್ರ ಈಗ ಎಲ್ಲರ ಗಮನ ಸೆಳೆಯುತ್ತಿದೆ.

ಬಾಬಿ ಎಂಬ ಚಾಲಾಕಿ ಯುವತಿಯ ಪಾತ್ರದಲ್ಲಿ ಕಂಗನಾ ಅಭಿನಯ ಪ್ರೇಕ್ಷಕನಿಗೆ ಹುಚ್ಚು ಹಿಡಿಸುತ್ತಿದೆ. ಈ ಹಿಂದೆ 'ಕ್ವೀನ್​' ಸಿನಿಮಾದಲ್ಲಿ ರಾಣಿ ಅಭಿನಯ ನೋಡುಗರಿಗೆ ಸಿಕ್ಕಾಪಟ್ಟೆ ಇಷ್ಟವಾಗಿತ್ತು.

ಇದನ್ನೂ ಓದಿ: ಸ್ಯಾಂಡಲ್‍ವುಡ್ ಬಾಕ್ಸಾಫಿಸ್‍ನಲ್ಲಿ ಸ್ಟಾರ್ಸ್ ಸಿನಿಮಾ ರಂಗು : ಮುಂದಿನ 3 ತಿಂಗಳು ದಚ್ಚು-ಕಿಚ್ಚ, ಅಪ್ಪುರದ್ದೇ ಗುಂಗು !

'ಜಡ್ಜ್​ಮೆಂಟಲ್ ಹೈ ಕ್ಯಾ' ಸಿನಿಮಾದಲ್ಲಿ ಕ್ವೀನ್​ಗೆ ಮತ್ತೊಮ್ಮೆ ಜತೆಯಾಗಿದ್ದಾರೆ ರಾಜ್‍ಕುಮಾರ್ ರಾವ್. ಈ ಸಿನಿಮಾ ಒಂದು ಕೊಲೆಯ ಸುತ್ತ ನಡೆಯುವ ಚಿತ್ರಕತೆಯಾಗಿದೆ. ಟ್ರೈಲರ್​ನಲ್ಲಿ  ಕಂಗನಾ ಹಾಗೂ ರಾಜ್‍ಕುಮಾರ್ ಇಬ್ಬರೂ ಶಂಕಿತ ಆರೋಪಿಗಳು ಎಂದು ತಿಳಿಯುತ್ತದೆ. ಒಬ್ಬರು ಮತ್ತೊಬ್ಬರ ಮೇಲೆ ಆರೋಪ ಮಾಡುತ್ತಾ ಹೇಗೆ ಪೊಲೀಸರನ್ನು ದಾರಿ ತಪ್ಪಿಸುತ್ತಾರೆ ಅನ್ನೋದೇ ಚಿತ್ರದ ಒನ್​ ಲೈನ್​ ಸ್ಟೋರಿ.

ಆದರೆ ಟ್ರೈಲರ್​ನಲ್ಲಿ ಕಂಗನಾ ನಟನೆಯನ್ನು ನೋಡಿಯೇ ಸಿನಿಪ್ರಿಯರು ಫುಲ್ ಫಿದಾ ಆಗಿದ್ದಾರೆ. ಅವರ ಡೈಲಾಗ್, ಎಕ್ಸ್​ಪ್ರೆಶನ್ಸ್, ಕ್ಯಾಮರಾ ಸೆನ್ಸ್​ಗೆ ಮಾರುಹೋಗಿದ್ದಾರೆ. ಅಷ್ಟೆಅಲ್ಲ ಕಂಗನಾ ಹಾಗೂ ರಾಜ್​ಕುಮಾರ್​ ರಾವ್​ ಅವರ ಅಭಿನಯ ಹಾಗೂ ಸಿನಿಮಾದ ಟ್ರೈಲರ್​ಗೆ ಬಾಲಿವುಡ್​ ಸೆಲೆಬ್ರಿಟಿಗಳೇ ಫಿದಾ ಆಗಿದ್ದಾರೆ.

What a mast trailer. Amazing lead and supporting cast backed by some great writting.Looks like alot of fun #JudgementallHaiKyaTrailer https://t.co/S3uM5vlmp5ಒಟ್ಟಾರೆ ವಿವಾದಗಳಿಂದ ಹೊರಬಂದಿರುವ ಕಂಗನಾ ಈಗ ಮತ್ತೆ ಸಿನಿಮಾ ಹಾಗೂ ತಮ್ಮ ಅಭಿನಯದ ಮೂಲಕ ಸದ್ದು ಮಾಡುತ್ತಿದ್ದಾರೆ. ಈ ಸಿನಿಮಾವನ್ನು ಜುಲೈ 26ಕ್ಕೆ ತೆರೆಗೆ ತರಲು ಚಿತ್ರತಂಡ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಇದನ್ನೂ ಓದಿ: Bottle Cap Challenge: ಬಾಟಲ್​ ಕ್ಯಾಪ್​ ಚಾಲೆಂಜ್​ ಸ್ವೀಕರಿಸಿದ ಕಿಲಾಡಿ ಅಕ್ಷಯ್​ ಕುಮಾರ್​- ಗೋಲ್ಡನ್​ ಸ್ಟಾರ್​ ಗಣೇಶ್​
First published: