ತೆಲುಗು ನಟ (Tollywood Actor) ಜೂನಿಯರ್ ಎನ್ಟಿಆರ್ ತೆಲುಗು ಚಿತ್ರೋದ್ಯಮದಲ್ಲಿಯೇ ಅತಿ ಹೆಚ್ಚು ಸಂಭಾವನೆ (Remuneration) ಪಡೆಯುವ ಹೆಚ್ಚು ಜನಪ್ರಿಯ ನಟರಲ್ಲಿ (Actors) ಒಬ್ಬರು. ಅವರು ಟಾಲಿವುಡ್ ನ ಅತ್ಯಂತ ಪ್ರಭಾವಶಾಲಿ ಕುಟುಂಬದಿಂದ ಬಂದ ನಟ. ಅವರ ಅಜ್ಜ ಅವರ ತಂದೆ, ಚಿಕ್ಕಪ್ಪ ನಟರು ಮತ್ತು ರಾಜಕಾರಣಿಯಾಗಿದ್ದರು. ತೆಲುಗು ರಾಜ್ಯಗಳಲ್ಲಿ ಇವರು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. 'ಮ್ಯಾನ್ ಆಫ್ ಮಾಸ್' ಎಂಬ ಖ್ಯಾತಿ ಸಹ ಹೊಂದಿದ್ದಾರೆ. ಬ್ಲಾಕ್ ಬಸ್ಟರ್ ಚಿತ್ರ ‘ಆರ್ಆರ್ಆರ್’ ನಂತರ, ಕ್ರಾಂತಿಕಾರಿ ನಾಯಕ ಕೋಮರಮ್ ಭೀಮ್ ಪಾತ್ರದಲ್ಲಿ ಅವರ ಅಭಿನಯದಿಂದಾಗಿ ಅವರ ಅಭಿಮಾನಿ ಬಳಗ ಇನ್ನಷ್ಟು ಹೆಚ್ಚಾಯಿತು ಅಂತ ಹೇಳಬಹುದು.
ಇಂದು, ಜೂನಿಯರ್ ಎನ್ಟಿಆರ್ ಟಾಲಿವುಡ್ ಅನ್ನು ಮೀರಿ, ಪ್ಯಾನ್-ಇಂಡಿಯನ್ ಸ್ಟಾರ್ ಎಂದು ಕರೆಯಲ್ಪಡುತ್ತಾರೆ. ವಾಸ್ತವವಾಗಿ, ಚಿತ್ರದ ತಯಾರಕರು ಜೂನಿಯರ್ ಎನ್ಟಿಆರ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿಗಾಗಿ ನಾಮನಿರ್ದೇಶನಗಳನ್ನು 2023 ರ ಆಸ್ಕರ್ ಗೆ ಕಳುಹಿಸಿದ್ದಾರೆ.
2023 ರ ಆಸ್ಕರ್ ನಲ್ಲಿ ‘ಆರ್ಆರ್ಆರ್’ ನಾಟು ನಾಟು ಎಂಬ ಹಾಡನ್ನು 'ಒರಿಜಿನಲ್ ಸಾಂಗ್' ಎಂದು ಶಾರ್ಟ್ಲಿಸ್ಟ್ ಮಾಡಲಾಗಿದೆ. 15 ಹಾಡುಗಳ ಪೈಕಿ ರಾಮ್ ಚರಣ್ ಮತ್ತು ಜೂನಿಯರ್ ಎನ್ಟಿಆರ್ ಅವರ ಡ್ಯಾನ್ಸ್ ಸ್ಟೆಪ್ಸ್ ಗಳನ್ನ ಒಳಗೊಂಡಿರುವ ಈ ಹಾಡು ಶಾರ್ಟ್ಲಿಸ್ಟ್ ಆಗಿದೆ.
ನಟನ ಮನೆ ಕೋಟ್ಯಂತರ ರೂಪಾಯಿ ಮೌಲ್ಯದ್ದಾಗಿದೆಯಂತೆ
ನಟ ಜೂನಿಯರ್ ಎನ್ಟಿಆರ್ ಅವರು ಅಪಾರವಾದ ಆಸ್ತಿಯನ್ನು ಹೊಂದಿದ್ದಾರೆ. ಅದರಲ್ಲಿ ಹೈದರಾಬಾದಿನಲ್ಲಿರುವ ಅವರ ಐಷಾರಾಮಿ ಮನೆ ಸಹ ಒಂದಾಗಿದೆ. ಈ ಮನೆ ಕೋಟ್ಯಂತರ ರೂಪಾಯಿ ಮೌಲ್ಯದ್ದಾಗಿದೆ. ಈ ಮನೆಯನ್ನು ಅವರ ಅಭಿಮಾನಿಗಳು, ಈ ವೀಡಿಯೋ ಮತ್ತು ಫೋಟೋಗಳ ಮೂಲಕ ಎಂದರೆ ವರ್ಚುವಲ್ ಪ್ರವಾಸದ ಮೂಲಕ ನೋಡಬಹುದು.
ಐಷಾರಾಮಿ ಮನೆ
ಜೂನಿಯರ್ ಎನ್ಟಿಆರ್ ಹೈದರಾಬಾದ್ ನಲ್ಲಿರುವ ಐಷಾರಾಮಿ ಕಾಲೋನಿ ಜೂಬ್ಲಿ ಹಿಲ್ಸ್ ನಲ್ಲಿ ಐಷಾರಾಮಿ ಮನೆಯನ್ನು ಹೊಂದಿದ್ದಾರೆ. ಹೌಸಿಂಗ್ ಡಾಟ್ ಕಾಂ ಪ್ರಕಾರ ಈ ಮನೆಯ ಮೌಲ್ಯ 25 ಕೋಟಿ ರೂಪಾಯಿ. ಭವ್ಯವಾದ ಮನೆ ವಿಶಾಲವಾದ ಪ್ರದೇಶದಲ್ಲಿ ಹರಡಿದ್ದು, ಅದರ ಸುತ್ತಲೂ ದೊಡ್ಡ ಹುಲ್ಲುಹಾಸು ಸಹ ಇದೆ.
View this post on Instagram
ನಟನ ಐಷಾರಾಮಿ ಮನೆಯ ಲಿವಿಂಗ್ ರೂಂ ಐಷಾರಾಮಿ ಒಳಾಂಗಣದಿಂದ ಅಲಂಕರಿಸಲ್ಪಟ್ಟಿದೆ. ಮನೆ ಪ್ರಾಚೀನ ಮತ್ತು ವಿಶಿಷ್ಟ ವಿನ್ಯಾಸದ ಉತ್ತಮ ಸಂಯೋಜನೆಯಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: Sidharth Malhotra-Kiara Advani: ಜೈಸಲ್ಮೇರ್ ಅರಮನೆಯಲ್ಲಿ ಕಿಯಾರ-ಸಿದ್ಧಾರ್ಥ್ ಮದುವೆ ಡೇಟ್ ಫಿಕ್ಸ್
ಜೂನಿಯರ್ ಎನ್ಟಿಆರ್ ಹಂಚಿಕೊಂಡಿರುವ ಫೋಟೋ ಅವರ ಮನೆಯ ಒಂದು ಸಣ್ಣ ನೋಟವನ್ನು ನೀಡುತ್ತದೆ. ಈ ಚಿತ್ರದಲ್ಲಿ ಅವರ ಮಗ ದೊಡ್ಡ ಹಳದಿ ಸೋಫಾ ಕುರ್ಚಿಯ ಮೇಲೆ ಕುಳಿತು ಫೋಟೋಗೆ ಪೋಸ್ ನೀಡುತ್ತಿರುವುದನ್ನು ತೋರಿಸಲಾಗಿದೆ. ಗೋಡೆಗಳ ಮೇಲಿನ ಕೆನೆಬಣ್ಣದ ಬಣ್ಣಗಳ ಹಿನ್ನೆಲೆಯಲ್ಲಿ ಮಂಚದಂತಿರುವ ಕುರ್ಚಿ ಕೋಣೆಗೆ ಇನ್ನಷ್ಟು ಮೆರುಗನ್ನು ಸೇರಿಸಿದೆ.
ದೊಡ್ಡ ಗಾರ್ಡನ್ ಮತ್ತು ಟೆರೇಸ್
ಮನೆಯ ದೊಡ್ಡ ತೋಟವು ಅನೇಕ ಗಿಡ ಮರಗಳು ಮತ್ತು ತಂಪಾದ ಗಾಳಿ, ಕೆಲವು ಕುರ್ಚಿಗಳು ಮತ್ತು ಜೋಕಾಲಿಗಳಿಂದ ತುಂಬಿದೆ. ಕುಟುಂಬವು ಆಗಾಗ್ಗೆ ಆ ಉದ್ಯಾನದಲ್ಲಿ ಹೋಗಿ ಫೋಟೋಗಳನ್ನು ತೆಗೆಸಿಕೊಳ್ಳುತ್ತಾರೆ.
View this post on Instagram
ಮನೆಯ ಪ್ರವೇಶ ದ್ವಾರವು ತುಂಬಾ ವಿಶಿಷ್ಟವಾಗಿದೆ ಅಂತ ಹೇಳಬಹುದು. ಏಕೆಂದರೆ ಇದು ದೊಡ್ಡ ಘಂಟೆಯೊಂದನ್ನು ಹೊಂದಿದೆ. ಕೋವಿಡ್-19 ಲಾಕ್ಡೌನ್ ಸಮಯದಲ್ಲಿ, ದೇಶವು ಚಪ್ಪಾಳೆ ತಟ್ಟಲು ಮತ್ತು ಒಗ್ಗಟ್ಟಿನಿಂದ ನಿಲ್ಲಲು ಈ ರೀತಿಯ ಶಬ್ದ ಮಾಡಲು ಒಟ್ಟುಗೂಡಿದಾಗ, ನಟ ಮತ್ತು ಅವರ ಮಗ ಗಂಟೆ ಬಾರಿಸುವ ವೀಡಿಯೋವನ್ನು ಹಂಚಿಕೊಂಡಿದ್ದನ್ನು ನಾವು ನೋಡಬಹುದು.
ಆಧುನಿಕ ಅಡುಗೆಮನೆ
ಮನೆಯಲ್ಲಿರುವ ಅಡುಗೆಮನೆಯು ಬಿಳಿ ಮತ್ತು ಕಪ್ಪು ಕಪಾಟುಗಳನ್ನು ಹೊಂದಿರುವ ತೆರೆದ ಅಡುಗೆಮನೆಯಾಗಿದೆ, ಪಕ್ಕದಲ್ಲಿ ಡೈನಿಂಗ್ ಟೇಬಲ್ ಅನ್ನು ಇರಿಸಲಾಗಿದೆ. ಬೂದಿ ಬಣ್ಣದ ರೆಫ್ರಿಜರೇಟರ್ ಕೂಡ ಅಡುಗೆಮನೆಯಲ್ಲಿದೆ. ಇದು ಎಲ್ಲಾ ಈಕ್ವಿಟಿಗಳನ್ನು ಹೊಂದಿರುವ ಆಧುನಿಕ ಅಡುಗೆಮನೆಯಾಗಿದೆ.
ಹೋಮ್ ಥಿಯೇಟರ್ ಸಹ ಇದೆಯಂತೆ
ಈ ಮನೆಯಲ್ಲಿ ಹೋಮ್ ಥಿಯೇಟರ್ ಕೂಡ ಇದ್ದು, ಅಲ್ಲಿ ನಟ ಅವರ ಕುಟುಂಬ ಮತ್ತು ಸ್ನೇಹಿತರೊಂದಿಗೆ ಚಲನಚಿತ್ರಗಳನ್ನು ನೋಡಲು ಬಳಸುತ್ತಾರೆ.
ಮನೆಯ ಮುಂದೆ ಪಾರ್ಕಿಂಗ್ ಗ್ಯಾರೇಜ್ ಸಹ ಇದೆ. ಜೂನಿಯರ್ ಎನ್ಟಿಆರ್ ಮತ್ತು ಅವರ ಕುಟುಂಬದ ಒಡೆತನದ ಎಲ್ಲಾ ಅದ್ದೂರಿ ಕಾರುಗಳನ್ನು ಇಲ್ಲಿ ನಿಲ್ಲಿಸಲಾಗಿದೆ. ಆಡಿ, ರೇಂಜ್ ರೋವರ್ ಮತ್ತು ಮರ್ಸಿಡಿಸ್ ನಂತಹ ಐಷಾರಾಮಿ ಮತ್ತು ಹೈ-ಎಂಡ್ ಕಾರುಗಳನ್ನು ಈ ನಟ ಹೊಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ