ರಾಜಮೌಳಿ ನಿರ್ದೇಶಿಸುವ ಹೊಸ ಚಿತ್ರದ ಕಥೆ ಇದಂತೆ...

news18
Updated:July 30, 2018, 10:05 PM IST
ರಾಜಮೌಳಿ ನಿರ್ದೇಶಿಸುವ ಹೊಸ ಚಿತ್ರದ ಕಥೆ ಇದಂತೆ...
news18
Updated: July 30, 2018, 10:05 PM IST
-ನ್ಯೂಸ್ 18 ಕನ್ನಡ

'ಬಾಹುಬಲಿ' ಚಿತ್ರದ ನಿರ್ದೇಶಕ ರಾಜಮೌಳಿ ಅವರ ಮುಂದಿನ ಚಿತ್ರದ ಕುರಿತು ಕುತೂಹಲಕಾರಿ ಸುದ್ದಿಗಳು ಹೊರ ಬೀಳುತ್ತಿವೆ. ಇತ್ತೀಚೆಗೆ ನಾಯಕಿ ವಿಷಯಕ್ಕೆ ಸುದ್ದಿಯಾಗಿದ್ದ 'ಆರ್​ಆರ್​ಆರ್'​ ಚಿತ್ರ ಈಗ ನಾಯಕನ ಪಾತ್ರದಿಂದ ಗಮನ ಸೆಳೆದಿದೆ. ಚಿತ್ರಕಥೆಯ ಎಳೆಯನ್ನು ಎಲ್ಲೂ ಬಿಚ್ಚಿಡದಿದ್ದರೂ ಇದು ಸ್ವಾತಂತ್ರ್ಯ ಪೂರ್ವದ ಕಥೆ ಹೊಂದಿರಲಿದೆ ಎನ್ನಲಾಗಿದೆ. ಚಿತ್ರದಲ್ಲಿ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ತೇಜಾ ಮತ್ತು ಜೂ. ಎನ್​ಟಿಆರ್ ಮೊದಲ ಬಾರಿ ಜೊತೆಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇಲ್ಲಿ ಸ್ವಾತಂತ್ರ್ಯ ಹೋರಾಟಗಾರ ಪಾತ್ರದಲ್ಲಿ ಜೂ. ಎನ್​ಟಿಆರ್​ ಬಣ್ಣ ಹಚ್ಚಲಿದ್ದಾರೆ ಎಂಬ ಸುದ್ದಿಗಳು ಟಾಲಿವುಡ್​ ಟೌನ್​ಗಳಿಂದ ಕೇಳಿ ಬರುತ್ತಿದೆ.

ಆಂಧ್ರದ ಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರ ಸೀತಾರಾಮರಾಜು ಜೀವನ ಚರಿತ್ರೆಯನ್ನು ರಾಜಮೌಳಿ ಬೆಳ್ಳಿಪರದೆಯಲ್ಲಿ ತೋರಿಸಲಿದ್ದಾರೆ ಎಂಬ ಸುದ್ದಿಗಳಿವೆ. 1924ರ ಮೇ.7 ರಂದು ಸೀತಾರಾಮರಾಜು ಅವರನ್ನು ಬ್ರಿಟಿಷರು ಮರಣದಂಡನೆಗೆ ಗುರಿಪಡಿಸಿದ್ದರು. ಈ ಕಥೆಯ ಚಿತ್ರವೊಂದು ಈ ಹಿಂದೆ ತೆಲುಗಿನಲ್ಲಿ ಬಂದಿತ್ತು.

1974ರಲ್ಲಿ ತೆರೆಗೆ ಕಂಡಿದ್ದ 'ಅಲ್ಲುರಿ ಸೀತಾರಾಮ ರಾಜು' ಚಿತ್ರದಲ್ಲಿ ಹಿರಿಯ ನಟ ಕೃಷ್ಣ  ಸ್ವಾತಂತ್ರ್ಯ ಹೋರಾಟಗಾರನ ಪಾತ್ರದಲ್ಲಿ ಅಭಿನಯಿಸಿದ್ದರು. ಈ ಸಿನಿಮಾದಲ್ಲಿ ಮೊದಲು ಲೆಜೆಂಡ್ ನಟ​ ಎನ್​ಟಿಆರ್​ ಅವರಿಗೆ ಅಭಿನಯಿಸಲು ಕೇಳಿಕೊಳ್ಳಲಾಗಿತ್ತು. ಆದರೆ ಕಾರಣಾಂತರಗಳಿಂದ ಚಿತ್ರದಿಂದ ಎನ್​ಟಿಆರ್ ಹಿಂದೆ ಸರಿದಿದ್ದರು. ಟಾಲಿವುಡ್​ನಲ್ಲಿ ಹಲವು ಭಿನ್ನ ಪಾತ್ರಗಳನ್ನು ಎನ್​ಟಿಆರ್ ನಿರ್ವಹಿಸಿದರೂ, ತಮ್ಮ ಕೆರಿಯರ್​ನಲ್ಲಿ ಮತ್ತೊಮ್ಮೆ ಯಾವುದೇ ಸ್ವಾತಂತ್ರ್ಯ ಹೋರಾಟಗಾರನ ಪಾತ್ರದಲ್ಲಿ ಅಭಿನಯಿಸುವ ಅವಕಾಶ ಅವರಿಗೆ ಒದಗಿರಲಿಲ್ಲ. ಇದೀಗ ಅದೇ ಪಾತ್ರವು ಮೊಮ್ಮಗ ಜೂ. ಎನ್​ಟಿಆರ್​ ಮುಂದಿದೆ.

ನಿರ್ದೇಶಕ ರಾಜಮೌಳಿ, ಅಲ್ಲುರಿ ಸೀತಾರಾಮ ರಾಜು ಅವರ ಕಥೆಯನ್ನು ಆಧರಿಸಿ ಚಿತ್ರಕಥೆ ರೂಪಿಸಿದ್ದು, ಇಲ್ಲಿ ತಾರಕ್ ಸ್ವಾತಂತ್ರ್ಯ ಹೋರಾಟಗಾರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದರೆ ಸದ್ಯ ರಾಮ್ ಚರಣ್ ತೇಜ ಅವರು ಈ ಸಿನಿಮಾದಲ್ಲಿ ಯಾವ ಅವತಾರದಲ್ಲಿ ಕಾಣಿಸಲಿದ್ದಾರೆ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಹುಟ್ಟಿಕೊಂಡಿದೆ. ಒಂದು ಮೂಲಗಳ ಪ್ರಕಾರ ರಾಜಮೌಳಿ ಮಗಧೀರ ಚಿತ್ರದಂತೆ ಇಲ್ಲೂ ಪುನರ್ಜನ್ಮದ ಕಥೆ ಹೇಳಲಿದ್ದು, ಮೊದಲಾರ್ಧದಲ್ಲಿ ಜೂ.ಎನ್​ಟಿಆರ್ ಸ್ವಾತಂತ್ರ್ಯ ಹೋರಾಟಗಾರರಾಗಿ​ ಕಾಣಿಸಿದರೆ, ದ್ವಿತೀಯಾರ್ಧದಲ್ಲಿ ರೆಬೆಲ್ ನಾಯಕನಾಗಿ ರಾಮ್ ಚರಣ್ ಎಂಟ್ರಿಯಾಗಲಿದೆ ಎನ್ನಲಾಗುತ್ತಿದೆ.

ಮಲ್ಟಿಸ್ಟಾರ್ಸ್​ ಚಿತ್ರವಾಗಿರುವುದರಿಂದ ಈಗಾಗಲೇ ತೀವ್ರ ಕುತೂಹಲ ಮೂಡಿಸಿರುವ ಈ ಸಿನಿಮಾದಲ್ಲಿ ನಾಯಕಿಯರಾಗಿ ಸಮಂತಾ ಮತ್ತು ಕೀರ್ತಿ ಸುರೇಶ್ ಆಯ್ಕೆಯಾಗಿದ್ದಾರೆ ಎಂಬ ಮಾತುಗಳೂ ಕೇಳಿ ಬರುತ್ತಿದೆ. ಮತ್ತೊಂದು ವಿಭಿನ್ನ ಪಾತ್ರದ ಮೂಲಕ ಬಾಲಿವುಡ್​ ನಟಿ ಆಲಿಯಾ ಭಟ್​ ಟಾಲಿವುಡ್​ಗೆ ಕಾಲಿಡಲಿದ್ದಾರೆ ಎಂಬ ಸುದ್ದಿಗಳು ಕೂಡ ಹರಿದಾಡುತ್ತಿದೆ.
Loading...

200 ಕೋಟಿ ಬಜೆಟ್​ನಲ್ಲಿ ತಯಾರಾಗಲಿರುವ RRR ಸಿನಿಮಾವನ್ನು ಡಿವಿವಿ ಎಂಟರ್ಟೈನ್ಮೆಂಟ್​ ಸಂಸ್ಥೆ ನಿರ್ಮಿಸಲಿದ್ದು, 2020ರ ಸಂಕ್ರಾಂತಿಗೆ ಈ ಚಿತ್ರವನ್ನು ಬಿಡುಗಡೆ ಮಾಡುವ ಯೋಜನೆ ರೂಪಿಸಲಾಗಿದೆ. ಸದಾ ಸುದ್ದಿಯಿಂದ ಚಿತ್ರೀಕರಣಕ್ಕೂ ಮೊದಲೇ ರಾಜಮೌಳಿ ಅವರ ಈ ಸಿನಿಮಾ ಹಿಟ್ ಆಗಿರುವುದಂತು ಸುಳ್ಳಲ್ಲ.
First published:July 30, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...