ತೆಲುಗಿನ ಸೂಪರ್ ಸ್ಟಾರ್ ಜೂನಿಯರ್ ಎನ್ಟಿಆರ್ (Jr NTR) ಅವರಿಗೆ ಇಂದು 39ನೇ ಜನ್ಮದಿನದ (Birthday) ಸಂಭ್ರಮ. ಇದರೊಂದಿಗೆ ತಾರಕ್ ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಇಂದಿಗೆ ಸರಿಯಾಗಿ 21 ವರ್ಷವಾಗಿದೆ. ಹೀಗಾಗಿ NTR ಹಾಗೂ ಅಭಿಮಾನಿಗಳಿಗೆ ಇಂದು ಡಬಲ್ ಸಂತಸದ ಸುದ್ದಿಯಾಗಿದೆ. ಇದರೊಂದಿಗೆ ಎನ್ಟಿಆರ್ ಅವರ ಸಾಲು ಸಾಲು ಸಿನಿಮಾಗಳ (Movies) ಅನೌನ್ಸ್ ಸಹ ಆಗುತ್ತಿದೆ. ಹೌದು, ತಾರಕ್ ಹುಟ್ಟುಹಬ್ಬದ ಸಂದರ್ಭದಲ್ಲಿ ಹೊಸ ಸಿನಿಮಾಗಳ ಅನೌನ್ಸ್ ಆಗಿದ್ದು, NTR30 ಚಿತ್ರದ ಅಪ್ಡೇಟ್ ಬಂದಿದೆ. NTR30 ಚಿತ್ರವನ್ನು ಕೊರಟಾಲ ಶಿವ ನಿರ್ದೇಶಿಸಲಿದ್ದಾರೆ. ಇದರ ನಡುವೆ NTR31 ಚಿತ್ರದ ಬಗ್ಗೆ ಹೊಸ ಅಪ್‌ಡೇಟ್ ಬಂದಿದೆ.
ಯಂಗ್ ಟೈಗರ್ ಎನ್.ಟಿ.ಆರ್ ನಾಯಕನಾಗಿ ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರವೊಂದು ತಯಾರಾಗುತ್ತಿದೆ ಎಂದು ತಿಳಿದು ಬಂದಿದೆ. ಆದರೆ ಕೆಜಿಎಫ್2 ಬಿಡುಗಡೆಯಾದ ನಂತರ ಮತ್ತು 1,000 ಕೋಟಿ ರೂ.ಗಳನ್ನು ಗಳಿಸಿದ ನಂತರ, NTR31 ಮೇಲಿನ ನಿರೀಕ್ಷೆಗಳು ಗಗನಕ್ಕೇರಿದೆ.
NTR31 ಚಿತ್ರದಲ್ಲಿ ರಾ ಲುಕ್ ನಲ್ಲಿ ತಾರಕ್:
ಇನ್ನು, ಕನ್ನಡದ ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ಜೂನಿಯರ್ ಎನ್ಟಿಆರ್ ಕಾಂಬಿನೇಷನ್ನಲ್ಲಿ ಚಿತ್ರ ಬರಲಿದೆ ಎಂಬ ಸುದ್ದಿ ಹರಿದಾಡುತ್ತಿತ್ತು. ಆದರೆ ಇಂದು ತಾರಕ್ ಹುಟ್ಟುಹಬ್ಬದ ಪ್ರಯುಕ್ತ ನೀಲ್ ಮತ್ತು ತಾರಕ್ ಕಾಂಬಿನೇಷನ್ ಚಿತ್ರದ ಕುರಿತು ಅಧಿಕೃತವಾಗಿ ಮಾಹಿತಿ ಹೊರಬಿದ್ದಿದೆ. ಹೌದು, NTR 31 ಚಿತ್ರದ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದ್ದು, ಪೋಸ್ಟರ್ ನಲ್ಲಿ ಎನ್ಟಿಆರ್ ಸಖತ್ ಖಡಕ್ ಲುಕ್ ನಲ್ಲಿ ಕಾಣಿಸಕೊಂಡಿದ್ದಾರೆ. ಕೋಪದಲ್ಲಿರುವ ಅರ್ಧ ಮುಖವನ್ನು ಪೋಸ್ಟರ್ ನಲ್ಲಿ ಇದ್ದು, ನೀಲ್ ಅವರ ಡಾರ್ಕ್ ಶೇಡ್ ಇಲ್ಲಿಯೂ ಮುಂದುವರೆದಿದ್ದು, ಅಭಿಮಾನಿಗಳಲ್ಲಿ ಸಖತ್ ಕುತೂಹಲ ಮೂಡಿಸಿದೆ.
ಇದನ್ನೂ ಓದಿ: HBD Jr NTR: ಬಲ'ಭೀಮ'ನಿಗೆ 39ರ ಸಂಭ್ರಮ! ಜ್ಯೂ. ಎನ್‌ಟಿಆರ್‌ಗೆ ಅಭಿಮಾನಿಗಳಿಂದ ಶುಭಾಶಯ
ಟ್ವಿಟರ್ನಲ್ಲಿ NTR31 ಪೋಸ್ಟರ್ ಬಿಡುಗಡೆ:
NTR31 ಚಿತ್ರದ ಪೋಸ್ಟರ್ ಅನ್ನು ಮೈತ್ರಿ ಮೂವಿಸ್ ನ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದು, ‘ರಕ್ತದಲ್ಲಿ ತೋಯ್ದ ಮಣ್ಣು ನೆನಪಿನಲ್ಲಿ ಉಳಿಯುತ್ತದೆ. ಅವನ ಮಣ್ಣು, ಅವನ ಆಳ್ವಿಕೆ.. ಆದರೆ ರಕ್ತ ಮಾತ್ರ ಅವನದ್ದಲ್ಲ‘ಎಂಬ ಪವರ್ ಪುಲ್ ಕ್ಯಾಪ್ಷನ್ ನೀಡಲಾಗಿದೆ. ಅಲ್ಲದೇ N ಅಕ್ಷರವು ರಕ್ತದಿಂದ ಕೂಡಿದಂತೆ ಕೆಂಪು ಬಣ್ಣದಲ್ಲಿ ನಿರ್ಮಿಸಲಾಗಿದೆ. ಒಟ್ಟಿನಲ್ಲಿ ತಾರಕ್ ಗೆ ಈ ಚಿತ್ರ ಮತ್ತೊಂದು ದೊಡ್ಡ ಬ್ರೇಕ್ ನೀಡಲಿದೆ ಎಂದು ಅಭಿಮಾನಿಗಳು ಕಾತುರರಾಗಿದ್ದಾರೆ.
ಒಂದು ಪೋಸ್ಟರ್ಗಾಗಿ 6 ತಿಂಗಳ ಪ್ರಯತ್ನ:
ಹೌದು, ಈ ವಿಷಯ ತಿಳಿದವರೆಲ್ಲಾ ಒಮ್ಮೆ ಅಚ್ಚರಿ ಪಡುತ್ತಿದ್ದಾರೆ. ಪ್ರಶಾಂತ್ ನೀಲ್ ಎನ್ ಟಿಆರ್ ನಾಯಕನಾಗಿ NTR31 ಸಿನಿಮಾದ ಫಸ್ಟ್ ಲುಕ್ ಗಾಗಿ ಎನ್ಟಿಆರ್ ಫೋಟೋ ಶೂಟ್ ಟೆಸ್ಟ್ ಶೂಟ್ ನಡೆಸಿದ್ದರಂತೆ. ಈ ಪೋಸ್ಟರ್ ಗಾಗಿ ಪ್ರಶಾಂತ್ ನೀಲ್ ಒಂದೇ ಬಾರಿ 32 ಕ್ಯಾಮೆರಾಗಳನ್ನು ಬಳಸಿದ್ದಾರೆ ಎಂದು ತಿಳಿದು ಬಂದಿದೆ.
ಆದರೆ, ಫೊಟೋ ಬರಲು ಬರೋಬ್ಬರಿ 6 ತಿಂಗಳುಳಾಗಿದ್ದವು ಎಂಬ ಮಾಹಿತಿ ಕೇಳಿಬರುತ್ತಿದ್ದು, ಎನ್ಟಿಆರ್ ಅಭಿಮಾನಿಗಳು ಸಂತಸ ತರಿಸಿದೆ. ಇನ್ನು, ಸದ್ಯ ನೀಲ್ ಪ್ರಭಾಸ್ ಅಭಿನಯದ ಸಲಾರ್ ಚಿತ್ರದಲ್ಲಿ ಬ್ಯೂಸಿ ಆಗಿದ್ದು, ತಾರಕ್ ಜೊತೆ ಈ ಚಿತ್ರವನ್ನು ಆರಂಭಿಸುವುದು ಸ್ವಲ್ಪ ತಡವಾಗಲಿದೆಯಂತೆ. ಮೂಲಗಳ ಪ್ರಕಾರ, ಮುಂದಿನ ವರ್ಷ ಏಪ್ರಿಲ್ ನಿಂದ ಎನ್ ಟಿಆರ್ ಸಿನಿಮಾ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Sunny Leone: ಈ ಕೇಕ್ ತಿನ್ನೋದ್ರಿಂದಲೇ ಸನ್ನಿ ಹಾಗಿರೋದಂತೆ, ಬ್ಯೂಟಿ ಸೀಕ್ರೆಟ್ ಹೇಳಿದಾರೆ ನೋಡಿ!
NTR30 ಚಿತ್ರದ ಟೀಸರ್ ಬಿಡುಗಡೆ:
ಇನ್ನು, ಎನ್ಟಿಆರ್ ಮತ್ತು ಕೊರಟಾಲ ಶಿವ ಕಾಂಬಿನೇಷನ್ ನಲ್ಲಿ NTR30 ಚಿತ್ರ ಅನೌನ್ಸ್ ಆಗಿದ್ದಲ್ಲದೇ ಚಿತ್ರದ ಟೀಸರ್ ಒಂದನ್ನು ಬಿಡುಗಡೆ ಮಾಡಿದ್ದು, ಇದೊಂದು ಪಕ್ಕಾ ಆ್ಯಕ್ಷನ್ ಚಿತ್ರವಾಗಿರಲಿದೆ ಎಂದು ಸೂಚನೆ ದೊರಕಿದೆ.
ಇದಲ್ಲದೇ ಇಂದು ಜೀ5 ರಲ್ಲಿ ರಾಜಮೌಳಿ ನಿರ್ದೇಶನದ NTR ಮತ್ತು ರಾಮ್ ಚರಣ್ ತೇಜಾ ಅಭಿನಯದ RRR ಚಿತ್ರ ಬಿಡುಗಡೆಯಾಗಿದ್ದು, NTR ಅಭಿಮಾನಿಗಳಿಗೆ ಸಂತಸದ ಮೇಲೆ ಸಂತಸ ಆದಂತಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ