Aniruddha Jatkar: ಅನಿರುದ್ಧ್‌ ಬಿಟ್ಟರೆ ಆರ್ಯವರ್ಧನ್ ಪಾತ್ರಕ್ಕೆ ಸೂಟ್​ ಆಗೋದು ಇವ್ರೇ! ಆರೂರು ಜಗದೀಶ್ ಆಯ್ಕೆ ಯಾರು?

ನಟ ಅನಿರುದ್ಧ್ ಅವರು ಜೊತೆಜೊತೆಯಲಿ ಸೀರಿಯಲ್​ನಿಂದ ಹೊರ ಹೋದ ಬಳಿಕ ಯಾರು ಸೀರಿಯಲ್​ನ ಮುಂದಿನ ಹೀರೋ ಅನ್ನೋ ಪ್ರಶ್ನೆ ಹುಟ್ಟಿದೆ. ಆರೂರು​ ಜಗದೀಶ್​ ಅವರು ಮೊದಲೇ ನಾಯಕನನ್ನು ಆಯ್ಕೆ ಮಾಡಿಕೊಂಡು ಅನಿರುದ್ಧ್​ಗೆ ಗೇಟ್​ ಪಾಸ್​ ಕೊಟ್ಟಿದ್ದಾರಾ? ಅನ್ನೋ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.

ಅನಿರುದ್ಧ್​ ಬದಲು ಯಾರಾಗ್ತಾರೆ ಆರ್ಯವರ್ಧನ್​

ಅನಿರುದ್ಧ್​ ಬದಲು ಯಾರಾಗ್ತಾರೆ ಆರ್ಯವರ್ಧನ್​

  • Share this:
ಜೀ ಕನ್ನಡದಲ್ಲಿ (Zee Kannada) ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ (Jote Joteyali) ಧಾರಾವಾಹಿಯಲ್ಲಿ (Serial) ಅಲ್ಲೋಲ ಕಲ್ಲೋಲ ಆಗುತ್ತಿದೆ. ರೀಲ್ ಕಥೆಗೂ (Reel Story) ಟ್ವಿಸ್ಟ್ (Twist) ಮೇಲೆ ಟ್ವಿಸ್ಟ್ ಸಿಗುತ್ತಿದ್ದು, ರಿಯಲ್ ಕಥೆಗೂ (Real Story) ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಈ ಧಾರಾವಾಹಿಯಲ್ಲಿ ಇಡೀ ಕಥೆ ಸುತ್ತುವುದೇ ಆರ್ಯವರ್ಧನ್ (Aryavardhan) ಎನ್ನುವ ಕ್ಯಾರೆಕ್ಟರ್ (Character) ಮೇಲೆ. ಈ ಪಾತ್ರ ನಿರ್ವಹಿಸುತ್ತಾ ಇರುವವರು ಖ್ಯಾತ ನಟ, ಸಾಹಸಸಿಂಹ ವಿಷ್ಣು ವರ್ಧನ್ (Vishnuvardhan) ಅವರ ಅಳಿಯ ಅನಿರುದ್ಧ್ ಜತ್ಕರ್ (Aniruddh Jatkar). ಆದ್ರೆ ಇದೀಗ ಅನಿರುದ್ಧ್ ಅವರಿಗೆ ಜೊತೆ ಜೊತೆಯಲಿ ಧಾರಾವಾಹಿಯಿಂದ ಗೇಟ್ ಪಾಸ್ (Gate Pass) ನೀಡಲಾಗಿದೆ. ಆದ್ರೆ ಇದೀಗ ಹುಟ್ಟಿರೋ ಪ್ರಶ್ನೆ ಅಂದ್ರೆ ಯಾರು ಅನಿರುದ್ಧ್​ ಪಾತ್ರ ನಿರ್ವಹಿಸುತ್ತಾರೆ ಅನ್ನೋದು.

ಅನಿರುದ್ಧ್​ ಬದಲು ಯಾರಾಗ್ತಾರೆ ಆರ್ಯವರ್ಧನ್​?

ನಟ ಅನಿರುದ್ಧ್ ಅವರು ಜೊತೆಜೊತೆಯಲಿ ಸೀರಿಯಲ್​ನಿಂದ ಹೊರ ಹೋದ ಬಳಿಕ ಯಾರು ಸೀರಿಯಲ್​ನ ಮುಂದಿನ ಹೀರೋ ಅನ್ನೋ ಪ್ರಶ್ನೆ ಹುಟ್ಟಿದೆ. ಆರೂರ್​ ಜಗದೀಶ್​ ಅವರು ಮೊದಲೇ ನಾಯಕನನ್ನು ಆಯ್ಕೆ ಮಾಡಿಕೊಂಡು ಅನಿರುದ್ಧ್​ಗೆ ಗೇಟ್​ ಪಾಸ್​ ಕೊಟ್ಟಿದ್ದಾರಾ? ಅಥವಾ ಅನಿರುದ್ಧ್​ ಕಿರಿಕಿರಿಗೆ ಬೇಸತ್ತು ಬ್ಯಾನ್​ ಮಾಡಿದ್ದಾರೋ ಗೊತ್ತಿಲ್ಲ ಆದ್ರೆ. ಯಾರು ಅನಿರುದ್ಧ್​ ಪಾತ್ರಕ್ಕೆ ಸೂಕ್ತ ಅನ್ನೋ ಚರ್ಚೆ ಮಾತ್ರ ಇದೀಗ ಶುರುವಾಗಿದೆ.

ವಿಜಯ್​ ರಾಘವೇಂದ್ರ

ಆರ್ಯವರ್ಧನ್​ ಪಾತ್ರವೇ ಖಡಕ್​ ಆಗಿತ್ತು. ಹೀರೋ ಆಗಿ ಬಂದು ತನ್ನ ವಿಲನ್​ ಫೇಸ್ ತೋರಿಸಿದ್ರು, ಜನರಿಗೆ ಆರ್ಯವರ್ಧನ್​ ಅಚ್ಚುಮೆಚ್ಚಾಗಿದ್ರು. ಆರ್ಯನ ಪಾತ್ರಕ್ಕೆ ಅನುರುದ್ಧ್​ ಕೂಡ ಬೆಸ್ಟ್​ ಆಯ್ಕೆಯಾಗಿತ್ತು. ಇವರನ್ನು ಬಿಟ್ಟು ಬೇರೆ ಯಾರು ಈ ಪಾತ್ರಕ್ಕೆ ಸೂಕ್ತರು ಅನ್ನೋ ವಿಚಾರ ಚರ್ಚೆಯಾಗುತ್ತಿದ್ದು, ನಟ ವಿಜಯ ರಾಘವೇಂದ್ರ ಹೆಸರು ಕೂಡ ಇದೀಗ ಕೇಳಿ ಬರ್ತಿದೆ.

ಇದನ್ನೂ ಓದಿ: Jote Joteyali: ವಿಷ್ಣುವರ್ಧನ್ ಅಳಿಯ ಅನಿರುದ್ಧ್‌ಗೆ ಕನ್ನಡ ಕಿರುತೆರೆಯಿಂದ ಬಹಿಷ್ಕಾರ? ಜೊತೆ ಜೊತೆಯಲಿ ಏನಾಯ್ತು?

ಜೆ.ಕೆ ಅಲಿಯಾಸ್​ ಜೈ ಕಾರ್ತಿಕ್​

ಅಶ್ವಿನಿ ನಕ್ಷತ್ರ ಸೀರಿಯಲ್​ನಲ್ಲಿ ಜನಪ್ರಿಯರಾಗಿರೋ ಜೆ.ಕೆ ಅಲಿಯಾಸ್​ ಜೈ ಕಾರ್ತಿಕ್​ ಇತ್ತೀಚಿಗೆ ಹಿಂದಿ ಸೀರಿಯಲ್ ಗಳಲ್ಲಿ ಬ್ಯುಸಿ ಆಗಿದ್ದಾರೆ. ಇವರ ಖಡಕ್ ಲುಕ್, ಆರ್ಯವರ್ಧನ್​ ಪಾತ್ರಕ್ಕೆ ಸೂಕ್ತವಾಗಿರುತ್ತದೆ. ಹೀಗಾಗಿ ಜೆ.ಕೆಯನ್ನು ಆಯ್ಕೆ ಮಾಡಬಹುದು ಎನ್ನಲಾಗ್ತಿದೆ.

ಹರೀಶ್​ ರಾಜ್​

ಅನೇಕ ಸೀರಿಯಲ್ ​ಗಳನ್ನು​ ಮಾಡಿ, ಬಳಿಕ ಸಿನಿಮಾಗಳಲ್ಲೂ ನಟಿಸಿ ಜನಪ್ರಿಯರಾಗಿರೋ ಹರೀಶ್ ರಾಜ್, ಅವರು ಕೂಡ ಈ ಪಾತ್ರಕ್ಕೆ ಆಯ್ಕೆ ಸೂಕ್ತರು ಎಂದು ಹೇಳಲಾಗತ್ತಿದೆ. ಹರೀಶ್ ಕೂಡ ಆರ್ಯವರ್ಧನ್ ಪಾತ್ರ ನಿರ್ವಹಿಸಬಹುದು ಎಂದು ಹೇಳಲಾಗ್ತಿದೆ.

ದಿಲೀಪ್ ರಾಜ್

ಈಗಾಗಲೇ ಹಿಟ್ಲರ್ ಕಲ್ಯಾಣದಲ್ಲಿ ಬ್ಯುಸಿ ಆಗಿರುವ ದಿಲೀಪ್​ ರಾಜ್ ಅವರ ಹೆಸರು ಕೂಡ ಕೇಳಿ ಬರ್ತಿದೆ. ಆರ್ಯವರ್ಧನ್ ಖಡಕ ಲುಕ್​ಗೆ ದಿಲೀಪ್​ ರಾಜ್ ಅವ್ರೆ ಸೂಕ್ತರು ಅನ್ನೋದು ಅನೇಕರ ಅಭಿಪ್ರಾಯವಾಗಿದೆ. ಆದ್ರೆ ಅವರು ಹಿಟ್ಲರ್​ ಕಲ್ಯಾಣ ಸೀರಿಯಲ್​ನಲ್ಲಿ ಬ್ಯುಸಿ ಇರೋದ್ರಿಂದ ಆರ್ಯವರ್ಧನ್ ಪಾತ್ರಕ್ಕೆ ಅವರನ್ನು ಆಯ್ಕೆ ಮಾಡೋ ಸಾಧ್ಯ ಕೂಡ ತೀರಾ ಕಡಿಮೆ

ಇದನ್ನೂ ಓದಿ: Jote Joteyali Serial: ‘ಜೊತೆ ಜೊತೆಯಲಿ’ ಟೀಮ್ ವಿರುದ್ಧ ಸಿಡಿದೆದ್ದ ಆರ್ಯವರ್ಧನ್; ಸೀರಿಯಲ್​ನಿಂದ ಬ್ಯಾನ್ ಆಗ್ತಾರಾ ಅನಿರುದ್ದ್?

ಇನ್ನು ಅನಿರುದ್ಧ ಸೀರಿಯಲ್​ ನಿಂದ ಔಟ್​ ಆದ ಬಳಿಕ ಈ ಪಾತ್ರಕ್ಕೆ ಯಾರನ್ನು ಆಯ್ಕೆ ಮಾಡಿಕೊಂಡಿದ್ದೇವೆ ಅನ್ನೋದನ್ನು ನಿರ್ದೇಶಕ ಆರೂರು ಜಗದೀಶ್​ ಸ್ಪಷ್ಟನೆ ನೀಡಿಲ್ಲ. ಜೊತೆಗೆ ಧಾರಾವಾಹಿ ತಂಡದಿಂದ ಯಾವುದೇ ಮಾಹಿತಿ ಹೊರಬಿದ್ದಿಲ್ಲ.
Published by:Pavana HS
First published: