Jote Joteyali: ಆರ್ಯವರ್ಧನ್​ ಪಾತ್ರಕ್ಕೆ ಅನಿರುದ್ಧೇ ಬೇಕು; ಜೊತೆ ಜೊತೆಯಲ್ಲಿ ನಿರ್ಮಾಪಕರ ವಿರುದ್ಧ ಮಹಿಳಾ ಮಣಿಯರು ಗರಂ

ಬೆಂಗಳೂರಿನ ಪ್ರೆಸ್​ ಕ್ಲಬ್​ನಲ್ಲಿ ಅನಿರುದ್ಧ್​ ಅವರ ಮಹಿಳಾ ಅಭಿಮಾನಿಗಳು ಸುದ್ದಿಗೋಷ್ಠಿ ಆರೂರು ವಿರುದ್ಧ ಕಿಡಿಕಾರಿದ್ದಾರೆ. ಧಾರಾವಾಹಿಯ  20ನೇ ಸಂಚಿಕೆಯಲ್ಲಿ ಆದ ತೊಂದರೆಗಳನ್ನು 700 ಎಪಿಸೋಡ್​ ನಂತರ ಹೇಳಿದ್ದು ಸರಿನಾ ಎಂದು ಪ್ರಶ್ನೆ ಮಾಡಿದ್ದಾರೆ.

ನಟ ಅನಿರುದ್ಧ್​

ನಟ ಅನಿರುದ್ಧ್​

  • Share this:
ಜೀ ಕನ್ನಡದಲ್ಲಿ (Zee Kannada) ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ (Jote Joteyali) ಧಾರಾವಾಹಿಯಲ್ಲಿ (Serial) ಅಲ್ಲೋಲ ಕಲ್ಲೋಲ ಆಗುತ್ತಿದೆ. ರೀಲ್ ಕಥೆಗೂ (Reel Story) ಟ್ವಿಸ್ಟ್ (Twist) ಮೇಲೆ ಟ್ವಿಸ್ಟ್ ಸಿಗುತ್ತಿದ್ದು, ರಿಯಲ್ ಕಥೆಗೂ (Real Story) ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಈ ಧಾರಾವಾಹಿಯಲ್ಲಿ ಇಡೀ ಕಥೆ ಸುತ್ತುವುದೇ ಆರ್ಯವರ್ಧನ್ (Aryavardhan) ಎನ್ನುವ ಕ್ಯಾರೆಕ್ಟರ್ (Character) ಮೇಲೆ. ಈ ಪಾತ್ರ ನಿರ್ವಹಿಸುತ್ತಾ ಇರುವವರು ಖ್ಯಾತ ನಟ, ಸಾಹಸಸಿಂಹ ವಿಷ್ಣು ವರ್ಧನ್ (Vishnuvardhan) ಅವರ ಅಳಿಯ ಅನಿರುದ್ಧ್ ಜತ್ಕರ್ (Aniruddh Jatkar). ಆದ್ರೆ ಇದೀಗ ಅನಿರುದ್ಧ್ ಅವರಿಗೆ ಜೊತೆ ಜೊತೆಯಲಿ ಧಾರಾವಾಹಿಯಿಂದ ಗೇಟ್ ಪಾಸ್ (Gate Pass) ನೀಡಲಾಗಿದೆ.  ಇದೀಗ ಮಹಿಳಾ ಅಭಿಮಾನಿಗಳು ಆರೂರು ಜಗದೀಶ್​ ವಿರುದ್ಧ ತಿರುಗಿಬಿದ್ದಿದ್ದಾರೆ. 

ಅನಿರುದ್ಧ್ ಪರ ನಿಂತ ಮಹಿಳಾ ಫ್ಯಾನ್ಸ್

ಜೊತೆ ಜೊತೆಯಲಿ ಸೀರಿಯಲ್, ಜೀ ಕನ್ನಡದ ಜನಪ್ರಿಯ ಧಾರಾವಾಹಿಗಳಲ್ಲಿ  ಒಂದು. ಪ್ರೀತಿ ವಯಸ್ಸಿನ ಅಂತರ ಇಲ್ಲ ಎಂದು ತೋರಿಸಿಕೊಟ್ಟ ಸೀರಿಯಲ್. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8.30ಕ್ಕೆ ಜನ ಟಿವಿ ಮುಂದೆ ಕೂರುವಂತೆ ಮೋಡಿ ಮಾಡಿರುವ ಈ ಸೀರಿಯಲ್​ಗೆ ಸಾವಿರಾರು ಅಭಿಮಾನಿಗಳಿದ್ದಾರೆ.  ಜೊತೆ ಜೊತೆಯಲಿ ಸೀರಿಯಲ್​ನಿಂದ ಅನಿರುದ್ಧ್​ ರನ್ನು ಹೊರಹಾಕಿದ ವಿಷಯ ತಿಳಿದ ಮಹಿಳೆ ಅಭಿಮಾನಿಗಳು ಇದೀಗ ನಿರ್ಮಾಪಕರ ವಿರುದ್ಧ ತಿರುಗಿಬಿದ್ದಿದ್ದಾರೆ

zee kannada jothe jotheyali serial hero Anirudha wrote a letter to PM Modi regarding Bangalore
ನಟ ಅನಿರುದ್ಧ್


ಆರ್ಯನ ಪಾತ್ರಕ್ಕೆ ಅನಿರುದ್ಧ್​ ಒಬ್ಬನೇ ಸೂಕ್ತ

ಬೆಂಗಳೂರಿನ ಪ್ರೆಸ್​ ಕ್ಲಬ್​ನಲ್ಲಿ ಅನಿರುದ್ಧ್​ ಅವರ ಮಹಿಳಾ ಅಭಿಮಾನಿಗಳು ಸುದ್ದಿಗೋಷ್ಠಿ ಆರೂರು ವಿರುದ್ಧ ಕಿಡಿಕಾರಿದ್ದಾರೆ. ಧಾರಾವಾಹಿಯ  20ನೇ ಸಂಚಿಕೆಯಲ್ಲಿ ಆದ ತೊಂದರೆಗಳನ್ನು 700 ಎಪಿಸೋಡ್​ ನಂತರ ಹೇಳಿದ್ದು ಸರಿನಾ? ಆರೂರು ಜಗದೀಶ್​ ಅವರದ್ದೇ ತಪ್ಪು. ನಟರು ಮೊದಲೇ ಸೀನ್​ ಪೇಪರ್​ ಕೊಡಿ ಅಂತ ಕೇಳುವುದೇ ತಪ್ಪಾ? ಬಹಿಷ್ಕಾರ ಮಾಡಿದ್ದರಲ್ಲಿ ದುರುದ್ದೇಶ ಕಾಣುತ್ತಿದೆ. ಇದು ಬೇರೆ ಎಲ್ಲಾ ಕಲಾವಿದರಿಗೂ ಒಂದು ವಾರ್ನಿಂಗ್​ ರೀತಿ ಇದೆ . ಯಾವುದೇ ನಟ-ನಟಿಯರು ಧ್ವನಿ ಎತ್ತಿದರೆ ಅವರಿಗೂ ಹೀಗೆಯೇ ಆಗಲಿದೆ ಎಂಬಂತಾಗಿದೆ ಎಂದು ಅಭಿಮಾನಿಗಳು ಹೇಳಿದ್ದಾರೆ.

ಜೊತೆ ಜೊತೆಯಲಿ ಧಾರಾವಾಹಿ ತಂತ್ರಜ್ಞರಿಗೆ ಅನಿರುದ್ಧ್​ ಅವರು ಸರಿಯಾಗಿ ಸಹಕಾರ ನೀಡಿಲ್ಲ ಎಂಬುದು ನಿರ್ಮಾಪಕ ಆರೂರು ಜಗದೀಶ್​ ಅವರ ಆರೋಪ. ಆ ಕಾರಣದಿಂದ ನಿರ್ಮಾಪಕರ ಸಂಘದವರು ಅನಿರುದ್ಧ್​ ಅವರನ್ನು ಎರಡು ವರ್ಷ ಕಿರುತರೆಯಿಂದ ಹೊರಗಿಡುವ ಬಗ್ಗೆ ನಿರ್ಧರಿಸಿರುವ ವಿಚಾರ ತಿಳಿದುಬಂದಿದೆ. ಇದನ್ನು ಅಭಿಮಾನಿಗಳು ವಿರೋಧಿಸಿದ್ದಾರೆ.

ಇದನ್ನೂ ಓದಿ: Jote Joteyali: ವಿಷ್ಣುವರ್ಧನ್ ಅಳಿಯ ಅನಿರುದ್ಧ್‌ಗೆ ಕನ್ನಡ ಕಿರುತೆರೆಯಿಂದ ಬಹಿಷ್ಕಾರ? ಜೊತೆ ಜೊತೆಯಲಿ ಏನಾಯ್ತು?

ಸೀರಿಯಲ್​ಗೆ ಅನಿರುದ್ಧ್​ ವಾಪಸ್​ ಬರಬೇಕು

ಧಾರಾವಾಹಿಗೆ ಅನಿರುದ್ಧ್​ ವಾಪಸ್​ ಬರಬೇಕು. ಆ ಮೂಲಕ ನ್ಯಾಯ ಸಿಗಬೇಕು ಎಂದು ಫ್ಯಾನ್ಸ್​ ಒತ್ತಾಯಿಸಿದ್ದಾರೆ. ಇತ್ತ ಅನಿರುದ್ಧ್​ ಕೂಡ ನಿರ್ಮಾಪಕರು ಕರೆದ್ರೆ ನಾನು ನಟಿಸಲು ಸಿದ್ದ ಎಂದು ಹೇಳಿದ್ದಾರೆ. ಸೀರಿಯಲ್ ಬಿಡೋ ಮನಸ್ಸಿಲ್ಲದಿದ್ರು ಅವರನ್ನು ತೆಗೆದು ಹಾಕಿದ್ದೀರಿ ಅವ್ರೆ ಬರ್ತೀನಿ ಎಂದ್ರು ಪಾತ್ರಕ್ಕೆ ಅನಿರುದ್ಧ್​ ಬೇಡವೇ ಬೇಡ ಅಂತಿದ್ದೀರಾ ಎಂದು ಅಭಿಮಾನಿಗಳು ನಿರ್ಮಾಪಕ ಆರೂರು ಜಗದೀಶ್​ ವಿರುದ್ಧ ಕಿಡಿಕಾರಿದ್ದಾರೆ.

ಅನಿರುದ್ಧ್​ ಬದಲು ಯಾರಾಗ್ತಾರೆ ಆರ್ಯವರ್ಧನ್​?
ನಟ ಅನಿರುದ್ಧ್ ಅವರು ಜೊತೆಜೊತೆಯಲಿ ಸೀರಿಯಲ್​ನಿಂದ ಹೊರ ಹೋದ ಬಳಿಕ ಯಾರು ಸೀರಿಯಲ್​ನ ಮುಂದಿನ ಹೀರೋ ಅನ್ನೋ ಪ್ರಶ್ನೆ ಹುಟ್ಟಿದೆ. ಆರೂರ್​ ಜಗದೀಶ್​ ಅವರು ಮೊದಲೇ ನಾಯಕನನ್ನು ಆಯ್ಕೆ ಮಾಡಿಕೊಂಡು ಅನಿರುದ್ಧ್​ಗೆ ಗೇಟ್​ ಪಾಸ್​ ಕೊಟ್ಟಿದ್ದಾರಾ? ಅಥವಾ ಅನಿರುದ್ಧ್​ ಕಿರಿಕಿರಿಗೆ ಬೇಸತ್ತು ಬ್ಯಾನ್​ ಮಾಡಿದ್ದಾರೋ ಗೊತ್ತಿಲ್ಲ ಆದ್ರೆ. ಯಾರು ಅನಿರುದ್ಧ್​ ಪಾತ್ರಕ್ಕೆ ಸೂಕ್ತ ಅನ್ನೋ ಚರ್ಚೆ ಮಾತ್ರ ಇದೀಗ ಶುರುವಾಗಿದೆ.
Published by:Pavana HS
First published: