• Home
 • »
 • News
 • »
 • entertainment
 • »
 • Aacharya: ತ್ರಿಷಾ ಬಳಿಕ ಚಿರಂಜೀವಿ ‘ಆಚಾರ್ಯ‘ ಸಿನಿಮಾದಿಂದ ಹೊರ ನಡೆದ ಮತ್ತೊಬ್ಬ ನಟಿ​!

Aacharya: ತ್ರಿಷಾ ಬಳಿಕ ಚಿರಂಜೀವಿ ‘ಆಚಾರ್ಯ‘ ಸಿನಿಮಾದಿಂದ ಹೊರ ನಡೆದ ಮತ್ತೊಬ್ಬ ನಟಿ​!

ಕಾಜಲ್​

ಕಾಜಲ್​

Aacharya Movie: ಆಚಾರ್ಯ ಸಿನಿಮಾಗಾಗಿ ಕಾಜಲ್​​ ಸ್ಕ್ರೀನ್​ ಟೆಸ್ಟ್​​ ಮಾಡಿಸಿ ಆಯ್ಕೆಯಾಗಿದ್ದರು. ಅಭಿಮಾನಿಗಳು ಕೂಡ ಚಿರಂಜೀವಿ ಅವರಿಗೆ ಸರಿಯಾದ ನಾಯಕಿ ಸಿಕ್ಕಿದ್ದಾರೆಂದು ಸಂಭ್ರಮ ಪಟ್ಟಿದ್ದರು. ಆದರೀಗ ಕಾಜಲ್​ ಕೂಡ ಚಿತ್ರತಂಡದಿಂದ ಹೊರ ನಡೆದಿರುವ ವಿಚಾರ ಅಭಿಮಾನಿಗಳಿಗೆ ಬೇಸರ ತರಿಸಿದೆ.

ಮುಂದೆ ಓದಿ ...
 • Share this:

  ಮೆಗಾಸ್ಟಾರ್​ ಚಿರಂಜೀವಿ ಆಚಾರ್ಯ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಚಿರಂಜೀವಿ ಅವರಿಗೆ ನಾಯಕಿಯಾಗಿ ನಟಿ ತ್ರಿಷಾ ಆಯ್ಕೆಯಾಗಿದ್ದರು. ಆನಂತರ ಅವರು ನಟಿಸುತ್ತಿಲ್ಲವೆಂದು ಹೇಳಿ ಹೊರ ನಡೆದರು. ಇದಾದ ಬಳಿಕ ತ್ರಿಷಾ ಜಾಗಕ್ಕೆ ಕಾಜಲ್​ ಅವರು ಎಂಟ್ರಿ ನೀಡಿದ್ದರು. ಆದರೀಗ ಕಾಜಲ್​ ಕೂಡ ಅಭಿಮಾನಿಗಳಿಗೆ ಬಿಗ್​ ಶಾಕ್​ ನೀಡಿದ್ದಾರೆ.


  ಆಚಾರ್ಯ ಸಿನಿಮಾಗಾಗಿ ಕಾಜಲ್​​ ಸ್ಕ್ರೀನ್​ ಟೆಸ್ಟ್​​ ಮಾಡಿಸಿ ಆಯ್ಕೆಯಾಗಿದ್ದರು. ಅಭಿಮಾನಿಗಳು ಕೂಡ ಚಿರಂಜೀವಿ ಅವರಿಗೆ ಸರಿಯಾದ ನಾಯಕಿ ಸಿಕ್ಕಿದ್ದಾರೆಂದು ಸಂಭ್ರಮ ಪಟ್ಟಿದ್ದರು. ಆದರೀಗ ಕಾಜಲ್​ ಕೂಡ ಚಿತ್ರತಂಡದಿಂದ ಹೊರ ನಡೆದಿರುವ ವಿಚಾರ ಅಭಿಮಾನಿಗಳಿಗೆ ಬೇಸರ ತರಿಸಿದೆ.


  ತಮಿಳಿನ ಬಿಗ್​ ಬಜೆಟ್​ಸ ಸಿನಿಮಾವೊಂದಕ್ಕೆ ಕಾಜಲ್​ ಸಹಿ ಹಾಕಿಕೊಂಡಿದ್ದು, ಮುಂಗಡ ಹಣವನ್ನು ಪಡೆದಿದ್ದಾರಂತೆ. ಹೀಗಾಗಿ ಈ ಹಿಂದೆ ಒಪ್ಪಿಕೊಂಡ ಸಿನಿಮಾ ಡೇಟ್​ ಮತ್ತು ಆಚಾರ್ಯ ಸಿನಿಮಾದ ಡೇಟ್​ ಕ್ಲಾಶ್​​ ಆಗುವ ಕಾರಣದಿಂದಾಗಿ ಸಿನಿಮಾದಿಂದ ಹೊರ ನಡೆದಿದ್ದಾರೆ ಎಂದು ಹೇಳಲಾಗುತ್ತಿದೆ.


  ಆರಂಭಿಂದಲೇ ಆಚಾರ್ಯ ಸಿನಿಮಾಗೆ ನಾಯಕಿಯರ ಸಮಸ್ಯೆ ಕಾಡುತ್ತಿದೆ. ಈಗಾಗಲೇ ಆಯ್ಕೆಯಾದ ಇಬ್ಬರು ನಾಯಕಿಯರು ಕೂಡ ಹೊರ ನಡೆದಿದ್ದಾರೆ. ಹಾಗಿದ್ದರೆ ಇನ್ನು ಯಾವ ನಟಿ ಆಚಾರ್ಯ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲ್ಲಿದ್ದಾರೆ ಎಂಬ ಪ್ರಶ್ನೆ ಅಭಿಮಾನಿಗಳ ಮನಸ್ಸಲ್ಲಿ ಮೂಡುತ್ತಿದ್ದಂತೆ ನಟಿ  ಅನುಷ್ಕಾ ಶೆಟ್ಟಿ ಅವರ ಹೆಸರು ಕೇಳಿಬಂದಿದೆ. ಕಾಜಲ್​ ಜಾಗದಲ್ಲಿ ಅನುಷ್ಕಾ ಶೆಟ್ಟಿ ಕಾಣಿಸಿಕೊಳ್ಳಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.


  ಲಾಕ್​ಡೌನ್​ ಸಮಯದಲ್ಲಿ ಭಾರತೀಯರು ಗೂಗಲ್​ನಲ್ಲಿ ಅತಿ ಹೆಚ್ಚು ಸರ್ಚ್​ ಮಾಡಿದ್ದೇನು ಗೊತ್ತಾ?

  Published by:Harshith AS
  First published: