• Home
 • »
 • News
 • »
 • entertainment
 • »
 • Johnny Lever: ಜಾನಿಯ ನ್ಯಾಚುರಲ್ ಕಾಮಿಡಿ ಈಗಿಲ್ಲ! ನ್ಯೂ ಜನರೇಷನ್ ನಟರು ಅಡ್ಡಿಪಡಿಸ್ತಿದ್ದಾರಾ?

Johnny Lever: ಜಾನಿಯ ನ್ಯಾಚುರಲ್ ಕಾಮಿಡಿ ಈಗಿಲ್ಲ! ನ್ಯೂ ಜನರೇಷನ್ ನಟರು ಅಡ್ಡಿಪಡಿಸ್ತಿದ್ದಾರಾ?

ಜಾನಿ ಲಿವರ್

ಜಾನಿ ಲಿವರ್

ಒಂದು ಸಿನೆಮಾ ಅಂತ ಬಂದ್ರೆ, ಅದರಲ್ಲಿ ಕಥೆ, ಫೈಟ್, ಹಾಡುಗಳ ಜೊತೆಗೆ ಸ್ವಲ್ಪ ಕಾಮಿಡಿ ಸಹ ಇರಬೇಕು ಅನ್ನೋದು ಸಿನಿ ಪ್ರೇಕ್ಷಕರ ಒಂದು ಸಾಮಾನ್ಯವಾದ ನಿರೀಕ್ಷೆ ಆಗಿರುತ್ತದೆ. ನಿಮಗೆ ಜಾನಿ ಲಿವರ್​ ಅವರ ನ್ಯಾಚುರಲ್ ಕಾಮಿಡಿ ಬಗ್ಗೆ ಅದರೆ ಇದೀಗ ಅವರ ಕಾಮಿಡಿ ನೋಡಲು ಸಿಗುತ್ತಿಲ್ಲಾ.

 • Share this:

  ಒಂದು ಸಿನೆಮಾ (Cinema) ಅಂತ ಬಂದ್ರೆ, ಅದರಲ್ಲಿ ಕಥೆ (Story), ಫೈಟ್ (Fight), ಹಾಡುಗಳ (Song) ಜೊತೆಗೆ ಸ್ವಲ್ಪ ಕಾಮಿಡಿ (Comedy) ಸಹ ಇರಬೇಕು ಅನ್ನೋದು ಸಿನಿ ಪ್ರೇಕ್ಷಕರ ಒಂದು ಸಾಮಾನ್ಯವಾದ ನಿರೀಕ್ಷೆ ಆಗಿರುತ್ತದೆ ಅಂತ ಹೇಳಬಹುದು. ಮೊದಲೆಲ್ಲಾ ಅನೇಕ ಜನಪ್ರಿಯ ಹಾಸ್ಯನಟರನ್ನು ಚಿತ್ರದಲ್ಲಿ ಕಾಮಿಡಿ ಪಾತ್ರಗಳಿಗೆ ಅಂತ ಸೇರಿಸಿಕೊಳ್ಳುತ್ತಿದ್ದರು. ಆದರೆ ಇತ್ತೀಚಿನ ಸಿನೆಮಾಗಳಲ್ಲಿ ಆ ಕಾಮಿಡಿ ಪಾತ್ರಗಳು (Comedy Part) ಅಷ್ಟಾಗಿ ನೋಡಲು ಸಿಗುತ್ತಿಲ್ಲ ಅಂತ ಹೇಳಬಹುದು. ಈಗೆಲ್ಲಾ ಸಿನೆಮಾದಲ್ಲಿ ಕಾಮಿಡಿಯನ್ನು ಸಹ ನಟರಿಂದಲೇ ಮಾಡಿಸುತ್ತಿದ್ದಾರೆ ಮತ್ತು ಆ ಹಾಸ್ಯದ ದೃಶ್ಯಗಳು ನಮಗೆ ಹೆಚ್ಚಾಗಿ ನೋಡಲು ಸಿಗುತ್ತಿಲ್ಲ ಅಂತ ಹೇಳಿದರೆ ತಪ್ಪಾಗುವುದಿಲ್ಲ.


  ಹೀಗೆ ಎಲ್ಲಾ ಚಿತ್ರೋದ್ಯಮದಲ್ಲಿ ಅವರದ್ದೇ ಭಾಷೆಯಲ್ಲಿ ಕಾಮಿಡಿ ಮಾಡುವ ಅನೇಕ ಹಾಸ್ಯನಟರಿರುವುದನ್ನು ನಾವು ನೋಡುತ್ತೇವೆ. ಬಾಲಿವುಡ್ ವಿಷಯಕ್ಕೆ ಬಂದಾಗ ತುಂಬಾನೇ ಜನಪ್ರಿಯ ಹಾಸ್ಯನಟರಲ್ಲಿ ಮುಂಚೂಣಿಯಲ್ಲಿರುವವರು ಎಂದರೆ ಜಾನಿ ಲಿವರ್ ಅಂತ ಹೇಳಬಹುದು.


  ಜಾನಿ ಅವರ ಕಾಮಿಡಿಯನ್ನು ನೋಡಿ ಅನುಕರಣೆ ಮಾಡಿ ಅನೇಕರು ಹಾಸ್ಯನಟರಾದ ಉದಾಹರಣೆಗಳಿವೆ. ಆದರೆ ಇತ್ತೀಚೆಗೆ ಜಾನಿ ಲಿವರ್ ಹೆಚ್ಚಾಗಿ ಯಾವುದೇ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ.


  ಈಗಿನ ಬಾಲಿವುಡ್ ಚಿತ್ರಗಳ ಬಗ್ಗೆ ಏನ್ ಹೇಳಿದ್ರು ಜಾನಿ?


  ಜಾನಿ ಲಿವರ್ ಬಾಲಿವುಡ್ ನ ಈಗಿನ ಸ್ಥಿತಿಯನ್ನು ಖಂಡಿಸಿದ್ದು ಈಗ ಬಾಲಿವುಡ್ ಚಲನಚಿತ್ರಗಳಲ್ಲಿ ತಮ್ಮ ಬ್ರ್ಯಾಂಡ್ ಹಾಸ್ಯದ ಅಗತ್ಯವಿಲ್ಲ ಎಂದು ಹೇಳಿದ್ದಾರೆ.


  ಅವರು ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ, ಅಸುರಕ್ಷಿತ ಭಾವನೆಯನ್ನು ಅನುಭವಿಸುವ ಸ್ಟಾರ್ ನಟರು ತಮಗೇ ಹಾಸ್ಯ ದೃಶ್ಯಗಳನ್ನು ನೀಡುವಂತೆ ಚಿತ್ರದ ನಿರ್ದೇಶಕರನ್ನು ಒತ್ತಾಯಿಸುತ್ತಿದ್ದಾರೆ, ಹಾಗಾಗಿ ಜಾನಿ ಅವರು ಚಿತ್ರರಂಗದಿಂದ ದೂರ ಸರಿಯುವ ಸನ್ನಿವೇಶ ಬಂದೊದಗಿತು ಅಂತ ಹೇಳುತ್ತಾರೆ.


  Johnny s natural comedy is no more Are New Generation Actors Disrupting
  ಜಾನಿ ಲಿವರ


  ಸುದ್ದಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಜಾನಿ ತಮಗೆ ಬಾಲಿವುಡ್ ನಲ್ಲಿ ಬ್ರೇಕ್ ಕೊಟ್ಟ ಚಿತ್ರವಾದ ಶಾರುಖ್ ಖಾನ್ ಅಭಿನಯದ ‘ಬಾಜಿಗರ್’ ಚಿತ್ರದ ಉದಾಹರಣೆಯನ್ನು ಉಲ್ಲೇಖಿಸಿದರು.


  ಆ ಚಿತ್ರದಲ್ಲಿ ಯಾವುದೇ ಬರಹಗಾರರು ಇರಲಿಲ್ಲ ಎಂದು ಅವರು ಹೇಳಿದರು. ಇದರರ್ಥ ಜಾನಿ ಅವರೇ ತಮ್ಮ ಎಲ್ಲಾ ಹಾಸ್ಯ ದೃಶ್ಯಗಳನ್ನು ಸಂಯೋಜಿಸಿಕೊಂಡು ಬರಬೇಕಿತ್ತು. ಆಗ ಅವರು ಅದನ್ನು ಅಚ್ಚುಕಟ್ಟಾಗಿ ಮಾಡಿದರು, 'ಯೌವನದ ಉತ್ಸಾಹ' ಕ್ಕೆ ಧನ್ಯವಾದಗಳು ಅಂತಾರೆ ಜಾನಿ.


  ಇತ್ತೀಚಿನ ಚಿತ್ರಗಳಲ್ಲಿ ಜಾನಿ ಏಕೆ ಹೆಚ್ಚಾಗಿ ನಟಿಸುತ್ತಿಲ್ಲ ಗೊತ್ತೇ?


  ನೀವು ಈಗ ಮೊದಲಿನಷ್ಟು ಚಿತ್ರಗಳಲ್ಲಿ ಏಕೆ ಕಾಣಿಸಿಕೊಳ್ಳುವುದಿಲ್ಲ ಎಂದು ಕೇಳಿದ ಪ್ರಶ್ನೆಗೆ, ಜಾನಿ ಅವರು "ಇತ್ತೀಚಿನ ದಿನಗಳಲ್ಲಿ ಬರವಣಿಗೆ ಕೆಟ್ಟದಾಗಿರುವುದರಿಂದ ನಾನು ಕೆಲಸವನ್ನು ತಿರಸ್ಕರಿಸುತ್ತೇನೆ.


  ನೀವು ಬಾಜಿಗರ್ ಬಗ್ಗೆ ಇನ್ನೂ ಮಾತನಾಡುತ್ತೀರಿ... ಆ ಚಿತ್ರದಲ್ಲಿ ಯಾವುದೇ ಬರಹಗಾರ ಇರಲಿಲ್ಲ, ಅದು ನಾನೇ ಸ್ವತಃ ಮಾಡಿದ ಕಾಮಿಡಿ ದೃಶ್ಯಗಳಾಗಿದ್ದವು.


  ಆ ದಿನಗಳು ಒಳ್ಳೆಯ ದಿನಗಳು, ನಾವು ಕಷ್ಟಪಟ್ಟು ಕೆಲಸ ಮಾಡುತ್ತಿದ್ದೆವು. ಆದರೆ ಇತ್ತೀಚಿನ ದಿನಗಳಲ್ಲಿ ನಮ್ಮಲ್ಲಿ ಹಾಸ್ಯ ಬರಹಗಾರರು ಇಲ್ಲ” ಎಂದು ಹೇಳಿದರು.


  Johnny s natural comedy is no more Are New Generation Actors Disrupting
  ಜಾನಿ ಲಿವರ್


  "ಹಿಂದಿನ ದಿನಗಳಲ್ಲಿ ಹಾಸ್ಯಕ್ಕೆ ಗೌರವ ನೀಡಲಾಗುತ್ತಿತ್ತು, ಆದರೆ ಇತ್ತೀಚಿನ ದಿನಗಳಲ್ಲಿ ಬರುತ್ತಿರುವ ಚಲನಚಿತ್ರಗಳಲ್ಲಿ ಯಾವುದೇ ಹಾಸ್ಯವಿಲ್ಲ. ಹಿಂದೆ, ನಾನು ಮಾಡಿದ ಪಾತ್ರಕ್ಕೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆಯುತ್ತಿದ್ದೆ, ನನ್ನ ದೃಶ್ಯಗಳು ಚಿತ್ರದ ಹೈಲೈಟ್ ಆಗುತ್ತಿದ್ದವು.


  ಕೆಲವೊಮ್ಮೆ, ಹೀರೋಗಳಿಗೆ ಭಯವಾಗಿ ನನ್ನ ಕಾಮಿಡಿ ದೃಶ್ಯಗಳನ್ನು ಎಡಿಟ್ ಮಾಡಿಸುತ್ತಿದ್ದರು. ಪ್ರೇಕ್ಷಕರು ನನ್ನ ದೃಶ್ಯಗಳಿಗೆ ಪ್ರತಿಕ್ರಿಯಿಸುವುದನ್ನು ನೋಡಿ ನಟರಿಗೆ ಅಸುರಕ್ಷಿತ ಭಾವನೆ ಕಾಡುತ್ತಿತ್ತು” ಎಂದು ಅವರು ಹೇಳಿದರು.


  ಇದನ್ನೂ ಓದಿ: RRR Song: ಉಕ್ರೇನ್ ರಾಷ್ಟ್ರಪತಿ ಭವನದಲ್ಲಿ ಶೂಟಿಂಗ್, 18 ಟೇಕ್, 80ಕ್ಕೂ ಹೆಚ್ಚು ಸ್ಟೆಪ್ಸ್! ಇದು ನಾಟು ನಾಟು ಹಾಡಿನ ಗುಟ್ಟು!


  ಜಾನಿ ಅವರ ಕಾಮಿಡಿ ಸೀನ್ ಗಳನ್ನು ಎಡಿಟ್ ಮಾಡಿಸ್ತಿದ್ರಂತೆ ನಟರು..


  “ನಟರು ಈಗ ಬರಹಗಾರರನ್ನು ತಮಗಾಗಿ ಹಾಸ್ಯ ದೃಶ್ಯಗಳನ್ನು ಬರೆಯಲು ಕೇಳಿಕೊಳ್ಳಲು ಪ್ರಾರಂಭಿಸಿದ್ದಾರೆ. ಅದರಂತೆ ಬರಹಗಾರರು ಹಾಸ್ಯ ದೃಶ್ಯಗಳನ್ನು ವಿತರಿಸಲು ಪ್ರಾರಂಭಿಸಿದ್ದಾರೆ.


  ಹಾಗಾಗಿ ಸಿನೆಮಾದಲ್ಲಿ ನನ್ನ ಪಾತ್ರಗಳು ಚಿಕ್ಕದಾಗುತ್ತಾ ಹೋದವು. ಒಟ್ಟಿನಲ್ಲಿ ಹೇಳಬೇಕೆಂದರೆ ಆಗಿನ ಕಾಮಿಡಿ ಹೊರಟು ಹೋಗಿದೆ" ಅಂತ ಜಾನಿ ಹೇಳಿದರು.


  ಕೆಲವೇ ಕೆಲವು ನಿರ್ದೇಶಕರು ರೋಹಿತ್ ಶೆಟ್ಟಿ ಅಂತಹವರು ಇನ್ನೂ ತಮ್ಮ ಚಲನಚಿತ್ರಗಳಲ್ಲಿ ಹಾಸ್ಯವನ್ನು ಗೌರವಿಸುತ್ತಾರೆ ಎಂದು ಅವರು ಹೇಳಿದರು.
  ಇಲ್ಲದಿದ್ದರೆ, ಈ ದಿನಗಳಲ್ಲಿ ಹೀರೋಗಳು ಮತ್ತು ಖಳನಾಯಕರು ಎಲ್ಲರೂ ತಮಾಷೆ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು. ಶೆಟ್ಟಿ ನಿರ್ದೇಶನದ ಸರ್ಕಸ್ ಚಿತ್ರದಲ್ಲಿ ಜಾನಿ ಇತ್ತೀಚೆಗೆ ಕಾಣಿಸಿಕೊಂಡಿದ್ದಾರೆ.

  Published by:Gowtham K
  First published: