• Home
  • »
  • News
  • »
  • entertainment
  • »
  • Johnny Depp: ಕೊನೆಯಾಯ್ತು ಡೆಪ್ ಫ್ಯಾಮಿಲಿ ಡ್ರಾಮಾ! ಮಾಜಿ ಹೆಂಡ್ತಿಯಿಂದ ಸಿಕ್ಕಿದ್ದು 100 ಕೋಟಿ

Johnny Depp: ಕೊನೆಯಾಯ್ತು ಡೆಪ್ ಫ್ಯಾಮಿಲಿ ಡ್ರಾಮಾ! ಮಾಜಿ ಹೆಂಡ್ತಿಯಿಂದ ಸಿಕ್ಕಿದ್ದು 100 ಕೋಟಿ

ಜಾನಿ ಡೆಪ್ ಮತ್ತು ಅಂಬರ್ ಹಾರ್ಡ್

ಜಾನಿ ಡೆಪ್ ಮತ್ತು ಅಂಬರ್ ಹಾರ್ಡ್

ಕೆಲ ದಿನಗಳಿಂದ ಪ್ರಪಂಚದಾದ್ಯಂತ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದ ಹಾಲಿವುಡ್ (Hollywood) ನಟ ಜಾನಿ ಡೆಪ್ ಮತ್ತು ಅವರ ಪತ್ನಿ ಅಂಬರ್ ಹರ್ಡ್ (Amber Heard) ಅವರ ಪ್ರಕರಣ ಇದೀಗ ಅಂತ್ಯಕಂಡಿದೆ.

  • Share this:

ಹಾಲಿವುಡ್​ನ 'ಪೈರೇಟ್ಸ್ ಆಫ್ ದಿ ಕೆರಿಬಿಯನ್ ' (Pirates of the Caribbean) ಸಿನಿಮಾ ಸರಣಿಯ ಮೂಲಕ ಪ್ರಸಿದ್ಧಿ ಪಡೆದಿರುವ ಅಮೆರಿಕದ ನಟ ಜಾನಿ ಡೆಪ್ (Johnny Depp) ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿದ್ದಾರೆ. ಹೌದು ಕೆಲ ದಿನಗಳಿಂದ ಪ್ರಪಂಚದಾದ್ಯಂತ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದ ಹಾಲಿವುಡ್ (Hollywood) ನಟ ಜಾನಿ ಡೆಪ್ ಮತ್ತು ಅವರ ಪತ್ನಿ ಅಂಬರ್ ಹರ್ಡ್ (Amber Heard) ಅವರ ಪ್ರಕರಣ ಇದೀಗ ಅಂತ್ಯಕಂಡಿದೆ. ಸತತ 6 ವಾರಗಳ ವಿಚಾರಣೆ ಬಳಿಕ ಅಮೇರಿಕಾದ ವರ್ಜೀನಿಯಾದ ಫೇರ್​ಫ್ಯಾಕ್ಸ್ ನಗರದ ಕೋರ್ಟ್​ ತೀರ್ಪು ನೀಡಿದೆ. ಅದರಂತೆ ಜಾನಿ ಡೆಪ್ ಅವರು ಅಂಬರ್ ಅವರ ಮೇಲೆ ಮಾನನಷ್ಟ ಮೊಕದ್ದಮೆ (Defamation Case) ದೂರು ದಾಖಲಿಸಿದ್ದರು. ಇದಾದ ಬಳಿಕೆ ಸುದೀರ್ಘ ವಿಚಾರಣೆ ಬಳಿಕ ಜಾನಿ ಡೆಪ್ ಅವರ ಮೇಲೆ ಅಂಬರ್​ ಅವರು ಮಾನಹಾನಿಗೆ ಯತ್ನಿಸಿದ್ದಾರೆ ಎಂದು ಸಾಕ್ಷಾಧಾರಗಳು ದೊರೆತ ಕಾರಣ ಡೆಫ್ ಅವರ ಪರ ತೀರ್ಪು ಬಂದಿದೆ.


ಹೀಗಾಗಿ ಜಾನಿ ಡೆಪ್ ಅವರಿಗೆ ಅವರ ಮಾಜಿ ಪತ್ನಿ ಅಂಬರ್ ಅವರು 15 ಮಿಲಿಯನ್ ಅಮೇರಿಕನ್ ಡಾಲರ್ (ಭಾರತೀಯ ರೂಪಾಯಿಯಲ್ಲಿ 116 ಕೋಟಿ) ಪರಿಹಾರ ನೀಡಬೇಕಿದೆ. ಜೊತೆಗೆ ಜಾನಿ ಡೆಪ್ ಅವರು ಅಂಬರ್​ ಹಾರ್ಡ್ ಅವರಿಗೆ 2 ಮಿಲಿಯನ್ ಡಾಲರ್ (ಭಾರತೀಯ ರೂಪಾಯಿಯಲ್ಲಿ 15 ಕೋಟಿ) ಪರಿಹಾರವನ್ನು ನೀಡಬೇಕಿದೆ.


100 ಗಂಟೆಗೂ ಹೆಚ್ಚು ಕಾಲ ವಿಚಾರಣೆ:


ಇನ್ನು, ಹಾಲಿವುಡ್ ನಟ ಜಾನಿ ಡೆಪ್ ಮತ್ತು ಅವರ ಪತ್ನಿ ಅಂಬರ್ ಹರ್ಡ್ ಅವರಿಬ್ಬರ ನಡುವಿನ ಪ್ರಕರಣ ಅಮೇರಿಕಾದ ವರ್ಜೀನಿಯಾದ ಫೇರ್​ಫ್ಯಾಕ್ಸ್ ನಗರದ ಕೋರ್ಟ್ ನಲ್ಲಿ ಸತತ 6 ವಾರಗಳ 100 ಗಂಟೆಗಳಿಗೂ ಹೆಚ್ಚು ಕಾಲ ಸಾಕ್ಷಿಗಳ ವಿಚಾರಣೆ ನಡೆಸಲಾಗಿದೆ. ಅಂತಿಮವಾಗಿ ಡೆಪ್ ಪರ ತೀರ್ಪು ಬಂದಿದ್ದು, ಮಾಜಿ ಪತ್ನಿ ಅಂಬರ್ ಹಾರ್ಡ್ ಅವರು ಡೆಪ್ ಅವರ ಮಾನ ನಷ್ಟ ಮಾಡಿರುವುದಾಗಿ ತೀರ್ಪು ಬಂದಿದೆ.


ಇದನ್ನೂ ಓದಿ: OTT Movies: ಈ ವಾರ ಒಟಿಟಿ ಪ್ರೀಮಿಯರ್‌ನಲ್ಲಿ ಬಿಡುಗಡೆಗೊಳ್ಳುತ್ತಿದೆ 6 ಚಿತ್ರಗಳು, ಇಲ್ಲಿದೆ ಪುಲ್‌ ಡೀಟೈಲ್ಸ್‌


ಏನಿದು ಪ್ರಕರಣ:


ಅಂಬರ್ ಹರ್ಡ್ 2018 ರಲ್ಲಿ 'ದಿ ವಾಷಿಂಗ್ಟನ್ ಪೋಸ್ಟ್' ಪತ್ರಿಕೆಯಲ್ಲಿ ಲೇಖನವನ್ನು ಬರೆದಿದ್ದಾರೆ. ಇದರಿಂದ ಅವರ ವೃತ್ತಿಜೀವನ ಹಾಳಾಗಿದೆ ಎಂದು ಜಾನಿ ಡೆಪ್ ಅವರು ಅಂಬರ್ ಹರ್ಡ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಈ ಲೇಖನದಲ್ಲಿ, ಅಂಬರ್ ಕೌಟುಂಬಿಕ ಹಿಂಸಾಚಾರದ ಬಗ್ಗೆ ಬರೆಯುತ್ತಾರೆ. ಆದರೆ ಎಲ್ಲಿಯೂ ಜಾನಿ ಡೆಪ್ ಹೆಸರನ್ನು ನೇರವಾಗಿ ಉಲ್ಲೇಖಿಸಲಿಲ್ಲ. ಆದರೂ, ಈ ಲೇಖನವು ತನ್ನ ವೃತ್ತಿಜೀವನದ ಮೇಲೆ ಪರಿಣಾಮ ಬೀರಿದೆ ಎಂದು ಜಾನಿ ಡೆಪ್ ಅವರು ಅಂಬರ್ ಅವರ ಮೇಲೆ ಮಾನನಷ್ಟ ಪ್ರಕರಣ ದಾಖಲಿಸಿದರು.


ಜಾನಿ ಡೆಪ್ ಮತ್ತು ಅಂಬರ್ ಹರ್ಡ್ 2015ರಲ್ಲಿ ವಿವಾಹವಾದರು. ಆದರೆ ಮೇ 2016 ರಲ್ಲಿ ಅವರು ಪರಸ್ಪರ ಬೇರ್ಪಟ್ಟರು. ಜಾನಿ ವಿರುದ್ಧ ಅಂಬರ್ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರು. ಜಾನಿ ಎಲ್ಲಾ ಆರೋಪಗಳನ್ನು ನಿರಾಕರಿಸಿದರು. ಅವರು ಆಗಸ್ಟ್ 2016 ರಲ್ಲಿ ವಿಚ್ಛೇದನ ಪಡೆದರು. ಇದಾದ ಬಳಿಕ ಜಾನಿ ಡೆಪ್ ಅವರು ತಮ್ಮ ಮಾಜಿ ಪತ್ನಿ ವಿರುದ್ದ ಮಾನನಷ್ಟ ಮೊಕದ್ದಮೆ ಮಾಡಿದ್ದರು. ಇದೀಗ ಪ್ರಕರಣವನ್ನು ಗೆದ್ದುಕೊಂಡಿದ್ದಾರೆ.


ತೀರ್ಪಿನ ಕುರಿತು ಅಂಬರ್ ಬೇಸರ:


ಈಗಾಗಲೇ ಡೆಪ್ ಅವರ ಪರ ತೀರ್ಪು ಬಂದಿದ್ದು, ಅಂಬರ್ ಅವರಿಗೆ ಹಿನ್ನಡೆಯಾಗಿದೆ. ಇದರ ಕುರಿತು ಪ್ರತಿಕ್ರಿಯಿಸಿರುವ ಅವರು, ‘ತೀರ್ಪಿನ ಬಗ್ಗೆ ಆಂಬರ್ ಹರ್ಡ್ ನಿರಾಸೆ ವ್ಯಕ್ತಪಡಿಸಿದ್ದು, ಇದು ಮಹಿಳೆಯರಿಗೆ ಆದ ಹಿನ್ನಡೆ ಎಂದು ಹೇಳಿದ್ದಾರೆ. ಅಲ್ಲದೇ ಸಾಕಷ್ಟು ಸಾಕ್ಷ್ಯಗಳು ಇದ್ದರೂ ಸಹ ತಮ್ಮ ಮಾಜಿ ಪತಿ ಡೆಪ್ ಅವರ ಪ್ರಭಾವ ಮತ್ತು ಅಧಿಕಾರದಿಂದ ಕೇಸ್ ತೀರ್ಪು ಬದಲಾಗಿದೆ. ಇದು ನನಗೆ ಇನ್ನಿಲ್ಲದ ನೋವನ್ನು ಉಂಟುಮಾಡಿದೆ. ಜೊತೆಗೆ ಈ ತೀರ್ಪು ಬೇರೆ ಮಹಿಳೆಯರಿಗೆ ಬೇರಯದೇ ಸಂದೇಶ ನೀಡುತ್ತದೆ. ತನ್ನಂತಹ ನೊಂದ ಮಹಿಳೆಯರ ದೈರ್ಯ ಕುಸಿಯುವಂತಾಗಿದೆ‘ ಎಂದು ಹೇಳಿದ್ದಾರೆ.


ಇದನ್ನೂ ಓದಿ: Happy Birthday Sonakshi Sinha: ದಬಾಂಗ್​ ಬೆಡಗಿಗೆ ಇಂದು ಜನ್ಮದಿನದ ಸಂಭ್ರಮ, ಸೋನಾಕ್ಷಿ ಬಗ್ಗೆ ನಿಮಗೆ ಗೊತ್ತಿರದ ವಿಷಯಗಳು


ನನ್ನ ಜೀವನವನ್ನು ಮರಳಿ ನೀಡಿದ್ದಾರೆ:


ಪ್ರಕರಣದಲ್ಲಿ ಗೆಲುವನ್ನು ಸಾಧಿಸಿದ ನಂತರ ಸಂತಸ ವ್ಯಕ್ತಪಡಿಸಿದ ಅವರು, ‘ನ್ಯಾಯಾಧೀಶರು ನನ್ನ ಜೀವನವನ್ನು ಮರಳಿ ನೀಡಿದ್ದಾರೆ. ನಾನು ತೀವ್ರ ಸಂತಸದಲ್ಲಿದ್ದೇನೆ. ಅಲ್ಲದೇ ಈ ಪ್ರಕರಣದ  ಪ್ರಾರಂಭದಿಂದಲೂ ಫಲಿತಾಂಶ ಏನೇ ಬಂದರೂ ಮುಖ್ಯ ಗುರಿ ಸತ್ಯವನ್ನು ಹೊರಗೆ ತರುವುದಾಗಿತ್ತು ಅಷ್ಟೆ‘ ಎಂದು ಡೆಪ್ ಹೇಳಿದ್ದಾರೆ.

Published by:shrikrishna bhat
First published: