Johnny Depp: ಕೇಸ್ ಗೆದ್ದ ಖುಷಿಗೆ ಭಾರತೀಯ ರೆಸ್ಟೊರೆಂಟ್ ನಲ್ಲಿ ಪಾರ್ಟಿ ಮಾಡಿದ ಡೆಪ್, ಲಕ್ಷಗಟ್ಟಲೆ ಬಿಲ್ ಆದ್ರೂ ಡೋಂಟ್ ಕೇರ್!

Johnny Depp Spends 48 lakhs: ಹೌದು, ಅಂಬರ್ ವಿರುದ್ದ ಕೇಸ್​ ಗೆದ್ದ ಖುಷಿಯಲ್ಲಿರುವ ಜಾನಿ ತನ್ನ ಸ್ನೇಹಿತರೊಂದಿಗೆ ಪಾರ್ಟಿ ಮಾಡಿದ್ದು, $ 62,000 (ರೂ. 48.1 ಲಕ್ಷ) ಖರ್ಚು ಮಾಡಿದ್ದಾರೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.

ಜಾನಿ ಡೆಪ್​

ಜಾನಿ ಡೆಪ್​

  • Share this:
ಹಾಲಿವುಡ್​ನ 'ಪೈರೇಟ್ಸ್ ಆಫ್ ದಿ ಕೆರಿಬಿಯನ್ ' (Pirates of the Caribbean) ಸಿನಿಮಾ ಸರಣಿಯ ಮೂಲಕ ಪ್ರಸಿದ್ಧಿ ಪಡೆದಿರುವ ಅಮೆರಿಕದ ನಟ ಜಾನಿ ಡೆಪ್ (Johnny Depp) ಮತ್ತು ಮಾಜಿ ಪತ್ನಿ, ನಟಿ ಅಂಬರ್ ಹರ್ಡ್ (Amber Heard) ಅವರ ಪ್ರಕರಣ ಅಂತ್ಯ ಕಂಡಿದ್ದು ಎಲ್ಲರಿಗೂ ತಿಳಿದಿದೆ. ಈ ವಿಚಾರ ಪ್ರಪಚದಾದ್ಯಂತ ಭಾರೀ ಸದ್ದು ಮಾಡಿರುವ ಸುದ್ದಿ ಎಂದರೆ ತಪ್ಪಲ್ಲ. ಸತತ 6 ವಾರಗಳ ವಿಚಾರಣೆ ಬಳಿಕ ಅಮೇರಿಕಾದ ವರ್ಜೀನಿಯಾದ ಫೇರ್​ಫ್ಯಾಕ್ಸ್ ನಗರದ ಕೋರ್ಟ್​ ತೀರ್ಪು ನೀಡಿದೆ. ಅದರಂತೆ ಜಾನಿ ಡೆಪ್ ಅವರು ಅಂಬರ್ ಅವರ ಮೇಲೆ ಮಾನನಷ್ಟ ಮೊಕದ್ದಮೆ (Defamation Case) ದೂರು ದಾಖಲಿಸಿದ್ದರು. ಇದಾದ ಬಳಿಕೆ ಸುದೀರ್ಘ ವಿಚಾರಣೆ ಬಳಿಕ ಜಾನಿ ಡೆಪ್ ಅವರ ಮೇಲೆ ಅಂಬರ್​ ಅವರು ಮಾನಹಾನಿಗೆ ಯತ್ನಿಸಿದ್ದಾರೆ ಎಂದು ಸಾಕ್ಷಾಧಾರಗಳು ದೊರೆತ ಕಾರಣ ಡೆಪ್​ ಅವರ ಪರ ತೀರ್ಪು ಬಂದಿದೆ. ಇದು ಹಳೆ ಸುದ್ದಿಯಾಯಿತು. ಹೊಸ ಸುದ್ದಿ ಏನೆಂದರೆ ಜಾನಿ ಈ ಖುಷಿಯನ್ನು ಆಚರಿಸಿರುವ ಪರಿ.

ಹೌದು, ಅಂಬರ್ ವಿರುದ್ದ ಕೇಸ್​ ಗೆದ್ದ ಖುಷಿಯಲ್ಲಿರುವ ಜಾನಿ ತನ್ನ ಸ್ನೇಹಿತರೊಂದಿಗೆ ಪಾರ್ಟಿ ಮಾಡಿದ್ದು, $ 62,000 (ರೂ. 48.1 ಲಕ್ಷ) ಖರ್ಚು ಮಾಡಿದ್ದಾರೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. ಭಾನುವಾರ ಸಂಜೆ ಇಂಗ್ಲೆಂಡ್‌ನ ಬರ್ಮಿಂಗ್ಹ್ಯಾಮ್‌ನಲ್ಲಿ ಸಂಭ್ರಮಾಚರಣೆಯ ಪಾರ್ಟಿಯನ್ನು ಆಯೋಜಿಸಲಾಗಿತ್ತು ಎಂದು ವರದಿ ತಿಳಿಸಿದೆ.  ಅಧಿಕೃತ ಭಾರತೀಯ  ಪಾಕಪದ್ಧತಿಯ ರೆಸ್ಟೊರೆಂಟ್​ಗೆ ಭೇಟಿ ನೀಡಿದ್ದು,  ಕಾಕ್‌ಟೇಲ್‌ ಹಾಗೂ ರೋಸ್ ಷಾಂಪೇನ್ ಜೊತೆ ಪಾರ್ಟಿ ಮಾಡಿದ್ದಾರೆ ಎನ್ನಲಾಗುತ್ತಿದೆ.

ಭಾರತೀಯ ರೆಸ್ಟೊರೆಂಟ್​ನಲ್ಲಿ ಪಾರ್ಟಿ ಮಾಡಿದ ಡೆಪ್ 

ಇನ್ನು ವಾರಣಾಸಿ ಎಂಬ ಹೆಸರಿನ ಈ ರೆಸ್ಟೊರೆಂಟ್ ಬರ್ಮಿಂಗ್ಹ್ಯಾಮ್‌ನ ಅತಿದೊಡ್ಡ ಭಾರತೀಯ ರೆಸ್ಟೋರೆಂಟ್ ಎಂದು ಕರೆಯಲಾಗುತ್ತದೆ.   ಈ ರೆಸ್ಟೊರೆಂಟ್​ನ ಸೌಲಭ್ಯಗಳು ಹಾಗೂ ಭದ್ರತೆಯ ಬಗ್ಗೆ ಜಾನಿ ಅವರ ಭದ್ರತಾ ಸಿಬ್ಬಂದಿಗಳು ಪರಿಶಿಲನೆ ನಡೆಸಿದ್ದು, ಆ ಸ್ಥಳದಲ್ಲಿ ಸರಿ ಸುಮಾರು 400 ಜನರು ಸೇರಬಹುದು ಹಾಗೂ ಈ ಸ್ಥಳದಲ್ಲಿ ಅವರ ಭದ್ರತೆಗೆ ಹಾಗೂ ಪ್ರೈವೆಸಿಗೆ ಸಮಸ್ಯೆ ಆಗುವುದಿಲ್ಲ ಎಂಬುದನ್ನ ಖಚಿತ ಪಡಿಸಿಕೊಂಡಿದ್ದರು. ಅಲ್ಲದೇ ಜಾನಿ ಡೆಪ್ ಆ ರೆಸ್ಟೊರೆಂಟ್​ನ ಸಿಬ್ಬಂದಿಗಳನ್ನು ತಬ್ಬಿಕೊಂಡು, ಮಾತನಾಡಿಸಿದ್ದಾರೆ.

ಇದನ್ನೂ ಓದಿ: ಮತ್ತೆ ಹಾಟ್​ ಲುಕ್​ನಲ್ಲಿ ಕಾಣಿಸಿಕೊಂಡ ಸಮಂತಾ, ಫೋಟೋ ನೋಡಿ ಪಡ್ಡೆ ಹೈಕ್ಳು ಕ್ಲೀನ್​ ಬೋಲ್ಡ್​!

ಈ ಬಗ್ಗೆ ರೆಸ್ಟೊರೆಂಟ್​ನ ಡೈರೆಕ್ಟರ್ ಮಾತನಾಡಿ, ನನಗೆ ಜಾನಿ ಡೆಪ್ ಅವರು ಕೆಲ ಗೆಳೆಯರೊಂದಿಗೆ ಬಂದು ಇಲ್ಲಿ ಪಾರ್ಟಿ ಮಾಡಲಿದ್ದಾರೆ ಎಂದು ಕರೆ ಬಂದಿತ್ತು, ನಾನು ಮೊದಲು ಇದು ತಮಾಷೆ ಎಂದು ತಿಳಿದುಕೊಂಡಿದ್ದೆ. ಆದರೆ ನಂತರ ಅವರ ಸಿಬ್ಬಂದಿ ಬಂದು ಎಲ್ಲವನ್ನು ಪರಿಶಿಲನೆ ಮಾಡಿದಾಗ ನನಗೆ ನಂಬಲು ಸಾದ್ಯವಾಗಲಿಲ್ಲ ಎಂದಿದ್ದಾರೆ. ಅಲ್ಲದೇ, ಯಾಕೆಂದರೆ ಬೇರೆ ಅತಿಥಿಗಳಿಂದ ಅವರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ನಾವು ಅವರಿಗಾಗಿ ಪೂರ್ತಿ ರೆಸ್ಟೊರೆಂಟ್​ ಅನ್ನು ನೀಡಿದ್ದೇವು ಎಂದು ತಿಳಿಸಿದ್ದಾರೆ.

ಏನಿದು ಪ್ರಕರಣ:

ಅಂಬರ್ ಹರ್ಡ್ 2018 ರಲ್ಲಿ 'ದಿ ವಾಷಿಂಗ್ಟನ್ ಪೋಸ್ಟ್' ಪತ್ರಿಕೆಯಲ್ಲಿ ಲೇಖನವನ್ನು ಬರೆದಿದ್ದಾರೆ. ಇದರಿಂದ ಅವರ ವೃತ್ತಿಜೀವನ ಹಾಳಾಗಿದೆ ಎಂದು ಜಾನಿ ಡೆಪ್ ಅವರು ಅಂಬರ್ ಹರ್ಡ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಈ ಲೇಖನದಲ್ಲಿ, ಅಂಬರ್ ಕೌಟುಂಬಿಕ ಹಿಂಸಾಚಾರದ ಬಗ್ಗೆ ಬರೆಯುತ್ತಾರೆ. ಆದರೆ ಎಲ್ಲಿಯೂ ಜಾನಿ ಡೆಪ್ ಹೆಸರನ್ನು ನೇರವಾಗಿ ಉಲ್ಲೇಖಿಸಲಿಲ್ಲ. ಆದರೂ, ಈ ಲೇಖನವು ತನ್ನ ವೃತ್ತಿಜೀವನದ ಮೇಲೆ ಪರಿಣಾಮ ಬೀರಿದೆ ಎಂದು ಜಾನಿ ಡೆಪ್ ಅವರು ಅಂಬರ್ ಅವರ ಮೇಲೆ ಮಾನನಷ್ಟ ಪ್ರಕರಣ ದಾಖಲಿಸಿದ್ದರು.

ಇದನ್ನೂ ಓದಿ: ಚಿರು ಸರ್ಜಾ ಇಲ್ಲದೇ ಕಳೀತು 2 ವರ್ಷ! ಮೇಘನಾ ಎಷ್ಟು ಮಿಸ್ ಮಾಡಿಕೊಳ್ತಾರೆ ಅಂತ ಪದಗಳಲ್ಲಿ ವರ್ಣಿಸೋದು ಅಸಾಧ್ಯ

ಜಾನಿ ಡೆಪ್ ಮತ್ತು ಅಂಬರ್ ಹರ್ಡ್ 2015ರಲ್ಲಿ ವಿವಾಹವಾದರು. ಆದರೆ ಮೇ 2016 ರಲ್ಲಿ ಅವರು ಪರಸ್ಪರ ಬೇರ್ಪಟ್ಟಿದ್ದರು. ಆದರೆ ಜಾನಿ ವಿರುದ್ಧ ಅಂಬರ್ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರು. ಜಾನಿ ಎಲ್ಲಾ ಆರೋಪಗಳನ್ನು ನಿರಾಕರಿಸಿದರು. ನಂತರ ಅವರು ಆಗಸ್ಟ್ 2016 ರಲ್ಲಿ ವಿಚ್ಛೇದನ ಪಡೆದಿದ್ದು, ಇದಾದ ಬಳಿಕ ಜಾನಿ ಡೆಪ್ ಅವರು ತಮ್ಮ ಮಾಜಿ ಪತ್ನಿ ವಿರುದ್ದ ಮಾನನಷ್ಟ ಮೊಕದ್ದಮೆ ಮಾಡಿದ್ದರು. ಇದೀಗ ಪ್ರಕರಣವನ್ನು ಗೆದ್ದುಕೊಂಡಿದ್ದಾರೆ.
Published by:Sandhya M
First published: