ನಟಿ ಶಿಲ್ಪಾ ಶೆಟ್ಟಿಯ ಫ್ಯಾನ್ ಆದ್ರಾ WWE ಚಾಂಪಿಯನ್ ಜಾನ್ ಸೀನಾ?; ಹೌದೆನ್ನುತ್ತಿದೆ ಈ ಫೋಟೋ

, ಶಿಲ್ಪಾ ಶೆಟ್ಟಿ ಫೋಟೋವನ್ನು ಜಾನ್​ ಸೀನಾ ಯಾಕೆ ಹಾಕಿಕೊಂಡಿದ್ದಾರೆ ಎನ್ನುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆ ವಿಚಾರವನ್ನು ಜಾನ್​ ಸೀನಾ ಕೂಡ ಎಲ್ಲಿಯೂ ಹೇಳಿಕೊಂಡಿಲ್ಲ.

Rajesh Duggumane | news18
Updated:July 13, 2019, 3:27 PM IST
ನಟಿ ಶಿಲ್ಪಾ ಶೆಟ್ಟಿಯ ಫ್ಯಾನ್ ಆದ್ರಾ WWE ಚಾಂಪಿಯನ್ ಜಾನ್ ಸೀನಾ?; ಹೌದೆನ್ನುತ್ತಿದೆ ಈ ಫೋಟೋ
ಜಾನ್​ ಸೀನಾ
  • News18
  • Last Updated: July 13, 2019, 3:27 PM IST
  • Share this:
ನಟಿ ಶಿಲ್ಪಾ ಶೆಟ್ಟಿ ಬಾಲಿವುಡ್​ನಲ್ಲಿ ಮಿಂಚಿ ಈಗ ಮರೆಗೆ ಸರಿದಿದ್ದಾರೆ. ಮದುವೆಯಾದ ನಂತರ ಚಿತ್ರರಂಗದಿಂದ ದೂರವೇ ಉಳಿದುಕೊಂಡಿದ್ದಾರೆ. ಈಗ ಶಿಲ್ಪಾ ಶೆಟ್ಟಿ ಮತ್ತೆ ಸುದ್ದಿಯಲ್ಲಿದ್ದಾರೆ. ಅದಕ್ಕೆ ಕಾರಣ ಡಬ್ಲ್ಯುಡಬ್ಲ್ಯುಇ ಸೂಪರ್​ಸ್ಟಾರ್​ ಜಾನ್​ ಸೀನಾ!

ಹೌದು, 16 ಬಾರಿ ವರ್ಲ್​ ಚಾಂಪಿಯನ್​ ಆಗಿದ್ದ ಜಾನ್​ ಸೀನಾ ಅಚ್ಚರಿ ಎಂಬಂತೆ ಇನ್ಸ್​​ಟಾಗ್ರಾಂ ಖಾತೆಯಲ್ಲಿ ಶಿಲ್ಪಾ ಶೆಟ್ಟಿಯ ಫೋಟೋ ಹಾಕಿದ್ದಾರೆ! ಡಬ್ಲ್ಯುಡಬ್ಲ್ಯುಇ ಆಟಗಾರ ಸ್ಟೋನ್​ ಕೋಲ್ಡ್​  ಅವರ ಮುಖವನ್ನು ಶಿಲ್ಪಾ ಶೆಟ್ಟಿ ಫೋಟೋಗೆ ಎಡಿಟ್​ ಮಾಡಲಾಗಿದೆ. ಅಲ್ಲದೆ, ಸ್ಟೋನ್​ ಕೋಲ್ಡ್​ ಶಿಲ್ಪಾ ಶೆಟ್ಟಿ ಕುಂದ್ರಾ ಎಂದು ಫೋಟೋ ಮೇಲೆ ಬರೆಯಲಾಗಿದೆ.

ಈ ಫೋಟೋ ನೋಡಿದ ಅನೇಕ ಭಾರತೀಯರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇನ್ನೂ ಅನೇಕರು ಜಾನ್​ ಸೀನಾ ಸಾಮಾಜಿಕ ಜಾಲತಾಣ ಖಾತೆಯನ್ನು ಯಾರೋ ಹ್ಯಾಕ್​ ಮಾಡಿದ್ದಾರೆ ಎನ್ನುವ ಸಂಶಯ ವ್ಯಕ್ತಪಡಿಸಿದ್ದಾರೆ. ಈ ಫೋಟೋವನ್ನು ಜಾನ್​ ಸೀನಾ ಪೋಸ್ಟ್​ ಮಾಡಿದ್ದನ್ನು ನೋಡಿ ಶಿಲ್ಪಾ ಶೆಟ್ಟಿ ತುಂಬಾನೇ ಎಗ್ಸೈಟ್​ ಆಗಿದ್ದಾರೆ. ಅಷ್ಟೇ ಅಲ್ಲ ಈ ಬಗ್ಗೆ ಅವರು ಜಾನ್​ ಸೀನಾಗೆ ಧನ್ಯವಾದ ಹೇಳಿದ್ದಾರೆ.

ಇದನ್ನೂ ಓದಿ: ಬಿಟ್​ಕಾಯಿನ್ ಹಗರಣದಲ್ಲಿ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಆರೋಪಿ ? 
View this post on Instagram

 

A post shared by John Cena (@johncena) on


ಇತ್ತೀಚೆಗೆ ಶಿಲ್ಪಾ ಶೆಟ್ಟಿ ಮಗ ವಿಯಾನ್​ ಡಬ್ಲ್ಯುಡಬ್ಲ್ಯುಇ ಸಂದರ್ಶನದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಅವರು ಡಬ್ಲ್ಯುಡಬ್ಲ್ಯುಇ ಆಟದ ಬಗ್ಗೆ ಅಪಾರ ಪ್ರೀತಿ ಹೊಂದಿದ್ದೇನೆ ಎಂದು ಹೇಳಿದ್ದರು. ಇದಕ್ಕೆ ಜಾನ್​ ಸೀನಾ ಖುಷಿಯಿಂದ ವಿಯಾನ್​ಗೆ ಸಂದೇಶವನ್ನೂ ಕಳುಹಿಸಿದ್ದರು.

ಅಂದಹಾಗೆ, ಶಿಲ್ಪಾ ಶೆಟ್ಟಿ ಫೋಟೋವನ್ನು ಜಾನ್​ ಸೀನಾ ಯಾಕೆ ಹಾಕಿಕೊಂಡಿದ್ದಾರೆ ಎನ್ನುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆ ವಿಚಾರವನ್ನು ಜಾನ್​ ಸೀನಾ ಕೂಡ ಎಲ್ಲಿಯೂ ಹೇಳಿಕೊಂಡಿಲ್ಲ. ಇತ್ತೀಚಿಗೆ ಜಾನ್​ ಸೀನಾ ಭಾರತ ಕ್ರಿಕೆಟ್​ ತಂಡದ ನಾಯಕ ವಿರಾಟ್​ ಕೊಹ್ಲಿ ಫೋಟೋವನ್ನು ಶೇರ್​ ಮಾಡಿಕೊಂಡಿದ್ದರು. 
View this post on Instagram

 

A post shared by John Cena (@johncena) on
First published:July 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ