ಕೌನ್ ಬನೇಗ್ ಕರೋಡ್ಪತಿಯ ( Kaun Banega Crorepati) )13ನೇ ಸೀಸನ್( season-13)ಸದಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇದೆ. ಕೌನ್ ಬನೇಗಾ ಕರೋಡ್ಪತಿಯಲ್ಲಿ ಪ್ರತಿ ಶುಕ್ರವಾರ ಬರುವ 'ಶಾನ್ದಾರ್ ಶುಕ್ರವಾರ್' ( Shandar Shukrawar ) ಎಂಬ ವಿಶೇಷ ಸಂಚಿಕೆ ಸೆಲೆಬ್ರಿಟಿಗಳ( celebrity episodes ) ಕಾರಣದಿಂದ ಸಾಕಷ್ಟು ಸದ್ದು ಮಾಡುತ್ತಿದೆ. ಈ ವಾರದ ಶಾನ್ದಾರ್ ಶುಕ್ರವಾರ್ ನಲ್ಲಿ ಈ ಬಾರಿ ಬಾಲಿವುಡ್ ನಟ ಜಾನ್ ಅಬ್ರಹಾಂ,( John Abraham ) ನಿಖಿಲ್ ಅಡ್ವಾಣಿ ( Nikil Advani )ಹಾಗೂ ದಿವ್ಯ ಖೋಸ್ಲ ಕುಮರ್( Divya Khosla Kumar) ಅವರ ಜೊತೆ ಭಾಗಿಯಾಗಿ ಚಾರಿಟಿಗಾಗಿ ಆಟ ಆಡಿದ್ದಾರೆ. ಆದರೆ ಆಟ ಆಡುವ ವೇಳೆ ಇದ್ದಕ್ಕಿದ್ದಂತೆ ಜಾನ್ ಅಬ್ರಹಾಂ (John Abraham)ಬಿಗ್ ಬಿ ಅಮಿತಾಬ್ ಬಚ್ಚನ್(Amitabh Bachchan) ಎದುರು ಕಣ್ಣೀರು ಹಾಕಿದ್ದು, ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಬಿಗ್ ಬಿ ಅಮಿತಾಬ್ ಎದುರು ಜಾನ್ ಕಣ್ಣೀರು
ಕೆಬಿಸಿ ಸೀಸನ್ -13ರ ಶಾನ್ದಾರ್ ಶುಕ್ರವಾರ್ ಸ್ಪೆಷಲ್ ಎಪಿಸೋಡ್ ನಲ್ಲಿ ಅಮಿತಾಬ್ ಬಚ್ಚನ್ ಯಾವ ಉದ್ದೇಶದಿಂದ ಹಣಗಳಿಸುವ ಪ್ರಯತ್ನ ಮಾಡುತ್ತಿದ್ದೀರಾ ಮತ್ತು ಏನು ಮಾಡುತ್ತೀರಾ ಅಂತ ಜಾನ್ ಅಬ್ರಹಾಂಗೆ ಪ್ರಶ್ನಿಸಿದ್ದಾರೆ. ಈ ವೇಳೆ ಜಾನ್ ಅಬ್ರಹಾಂ ಗೆ ಪ್ರಾಣಿಗಳ ಮೇಲಿರುವ ಪ್ರೀತಿಯನ್ನು ವ್ಯಕ್ತಪಡಿಸುತ್ತಾ ಭಾವುಕರಾದರು.
ಪ್ರಾಣಿಗಳ ಮೇಲೆ ಅಮಾನುಷವಾಗಿ ನಡೆದುಕೊಳ್ಳುತ್ತಿರುವ ಅವರ ವಿರುದ್ಧ ಬೇಸರ ವ್ಯಕ್ತಪಡಿಸಿದರು. ಗೆದ್ದ ಹಣವನ್ನು ಪಾಣಿ ಗಳಿಗಾಗಿ ಪ್ರಾಣಿಗಳ ಟ್ರಸ್ಟ್ಗೆ ನೀಡುವುದಾಗಿ ಹೇಳಿದರು..
ಇದನ್ನೂ ಓದಿ :ಜಾನ್ ಅಬ್ರಹಾಂ ಮನೆ ಸೇರಿದ ದುಬಾರಿ ಸೂಪರ್ ಬೈಕ್; ಸಾಮಾಜಿಕ ಜಾಲತಾಣದಲ್ಲಿ ಖುಷಿ ಹಂಚಿಕೊಂಡ ನಟ
ಇನ್ನು ಜಾನ್ ನಿರಾಶ್ರಿತ ಪ್ರಾಣಿಗಳ ಬಗ್ಗೆ ಹೇಳುತ್ತಿದ್ದಂತೆ, ಬಿಗ್ ಬಿ ಅಮಿತಾಬ್ ಬಚ್ಚನ್ ಬೆಕ್ಕುಗಳು, ನಾಯಿಗಳು, ಹಸುಗಳು ಮೂಕರೋಧನೆಯ ವಿಡಿಯೋವನ್ನ ತೋರಿಸಲಾಯಿತು. ವಿಡಿಯೋವನ್ನು ನೋಡಿ ಜಾನ್ ಅಬ್ರಹಾಂ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ..
ಇನ್ನು ಆಟದ ಮಧ್ಯೆ ಜಾನ್ ಅಬ್ರಹಾಂಗೆ ಅಮಿತಾಬಚ್ಚನ್ ಹಲವಾರು ಪ್ರಶ್ನೆಗಳನ್ನು ಕೇಳಿದ್ದಾರೆ. ಜಾನ್ ಅವರ ಎದೆಯ ಮೇಲಿರುವ ಗಾಯದ ಗುರುತಿನ ಬಗ್ಗೆಯೂ ಅಮಿತಾಬಚ್ಚನ್ ಪ್ರಶ್ನೆ ಮಾಡಿದ್ದಾರೆ.. ಇದಕ್ಕೆ ಉತ್ತರಿಸಿದ ಜಾನ್ ಇದು ಥೈಲ್ಯಾಂಡ್ ನಲ್ಲಿ ನಡೆದಿದ್ದ ಕಿಕ್ ಬಾಕ್ಸಿಂಗ್ ಮೌಯ್ ಥಾಯ್ ಪಂದ್ಯಾವಳಿಯಲ್ಲಿ ಆದ ಗಾಯ ಎಂದು ಉತ್ತರಿಸಿದ್ದಾರೆ.. ಅಲ್ಲದೆ ಪ್ರೇಕ್ಷಕರ ಒತ್ತಾಯದ ಮೇರೆಗೆ ಶರ್ಟ್ ಬಿಚ್ಚಿ ಜಾನ್ ಅಬ್ರಹಾಂ ತಮ್ಮ ಸಿಕ್ಸ್ ಪ್ಯಾಕ್ ನ್ನು ಕೂಡ ತೋರಿಸಿದ್ದಾರೆ..
ಪ್ರಾಣಿ ದಯಾ ಸಂಘಕ್ಕೆ ಕಾರು ಉಡುಗೊರೆ ನೀಡಿದ್ದ ಜಾನ್
ಬಾಲಿವುಡ್ ಖ್ಯಾತ ನಟ ಜಾನ್ ಅಬ್ರಾಹಂ ಸಿನಿಮಾದ ಜೊತೆಗೆ ಮನೆಯಲ್ಲಿ ದುಬಾರಿ ಕಾರು, ಬೈಕ್ಗಳನ್ನು ಸಂಗ್ರಹಿಸಿದ್ದಾರೆ.ಜೊತೆಜೊತೆಗೆ ಪ್ರಾಣಿಗಳಿಗಾಗಿ ಪ್ರಾಣಿದಯಾ ಸಂಘಗಳ ಜೊತೆ ಸೇರಿಕೊಂಡು ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಲೇ ಇರುತ್ತಾರೆ.. ಹೀಗಾಗಿಯೇ ಈ ಹಿಂದೆ ಅನಿಮಲ್ ಚಾರಿಟಿಗಾಗಿ ಜಾನ್ ಅಬ್ರಹಮ್ ತಮ್ಮಿಷ್ಟದ ಕಾರನ್ನ ನೀಡಿ ಸುದ್ದಿಯಾಗಿದ್ದರು..
ಇದನ್ನೂ ಓದಿ :ಕಿಚ್ಚ ಸುದೀಪ್ ನಿರ್ದೇಶಿಸಲಿರುವ ಹೊಸ ಚಿತ್ರದಲ್ಲಿರಲಿದ್ದಾರೆ ಬಾಲಿವುಡ್ ಸ್ಟಾರ್ ನಟ
ಇನ್ನು ಭಾರತಕ್ಕೆ ಅಥ್ಲೆಟಿಕ್ಸ್ ನಲ್ಲಿ ಮೊದಲ ಪದಕ ತಂದುಕೊಟ್ಟ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಹಾಗೂ ಭಾರತದ ಪುರುಷರ ಹಾಕಿ ತಂಡದ ಗೋಲ್ ಕೀಪರ್ ಪಿ.ಶ್ರೀಜಿತ್,ಸೌರವ್ ಗಂಗೂಲಿ ಮತ್ತು ವೀರೇಂದ್ರ ಸೆಹ್ವಾಗ್ ಬಾಲಿವುಡ್ನ ಖ್ಯಾತ ನಿರ್ದೇಶಕಿ ಫರಾ ಖಾನ್ ಹಾಗೂ ನಟಿ ದೀಪಿಕಾ ಪಡುಕೋಣೆ, ಸುನಿಲ್ ಶೆಟ್ಟಿ ಜಾಕಿಶ್ರಾಫ್, ಸೇರಿದಂತೆ ಹಲವು ಸೆಲೆಬ್ರಿಟಿ ತಾರೆಯರು ಈವರೆಗೂ ಕೆಬಿಸಿ ಸೀಸನ್ -13ರ ಶಾನ್ದಾರ್ ಶುಕ್ರವಾರ್ ಸ್ಪೆಷಲ್ ಎಪಿಸೋಡ್ ನಲ್ಲಿ ಭಾಗಿಯಾಗಿ ಚಾರಿಟಿಗಾಗಿ ಹಣ ಸಂಗ್ರಹಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ