news18-kannada Updated:January 7, 2021, 10:11 PM IST
Salaar-Prashanth Neel
ಸ್ಯಾಂಡಲ್ವುಡ್ನ ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ಗಾಗಿ ಬಂಡವಾಳವನ್ನು ಹೂಡಲು ಬಾಲಿವುಡ್ ಸೇರಿದಂತೆ ಹಲವು ವುಡ್ಗಳ ನಿರ್ಮಾಪಕರು ಕಾದು ಕುಳಿತಿರುವುದು ಗೊತ್ತಿರುವ ವಿಷಯ. ಅದ್ಭುತ ಮೇಕಿಂಗ್ ಮೂಲಕ 'ಕೆ.ಜಿ.ಎಫ್' ಎಂಬ ಚಿತ್ರವನ್ನು ವಿಶ್ವದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದ ಹಿರಿಮೆ ನೀಲ್ ಅವರದ್ದು. ಹೀಗಾಗಿಯೇ ನಿರ್ಮಾಪಕರ ದಂಡೇ ಕನ್ನಡ ನಿರ್ದೇಶಕನ ಕಾಲ್ಶೀಟ್ಗಾಗಿ ಕಾಯುತ್ತಿದೆ. ಅಷ್ಟೇ ಅಲ್ಲ ನೀಲ್ ಅವರ ಚಿತ್ರದಲ್ಲಿ ನಟಿಸಲು ಸ್ಟಾರ್ ನಟರುಗಳೂ ಕೂಡ ಕ್ಯೂನಲ್ಲಿದ್ದಾರೆ.
ಇದಕ್ಕೆ ಸಾಕ್ಷಿಯೇ ಬಾಹುಬಲಿ ಪ್ರಭಾಸ್ ಏಕಾಏಕಿ ಪ್ರಶಾಂತ್ ನೀಲ್ ಅವರಿಗೆ ಕಾಲ್ಶೀಟ್ ನೀಡಿರುವುದು. ಟಾಲಿವುಡ್ ಯಂಗ್ ಟೈಗರ್ ಜೂ. ಎನ್ಟಿಆರ್ಗೂ ಕೆಜಿಎಫ್ ನಿರ್ದೇಶಕರು ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಅದಕ್ಕೂ ಪ್ರಶಾಂತ್ ನೀಲ್ ಅವರ ಕೆಜಿಎಫ್ ಚಾಪ್ಟರ್-2 ಬಿಡುಗಡೆಯಾಗಲಿದೆ. ಇದರ ಬೆನ್ನಲ್ಲೇ ಟಾಲಿವುಡ್ ರೆಬೆಲ್ ಸ್ಟಾರ್ ಜೊತೆ ಸಲಾರ್ ಶೂಟಿಂಗ್ ಆರಂಭಿಸಲಿದ್ದಾರೆ.
ಒಂದೆಡೆ ಕೆಜಿಎಫ್ ಚಾಪ್ಟರ್-2 ಬಗ್ಗೆ ಬ್ಯಾಕ್ ಟು ಬ್ಯಾಕ್ ಅಪ್ಡೇಟ್ ನೀಡುವ ಮೂಲಕ ನೀಲ್, ಯಶ್ ಅಭಿಮಾನಿಗಳ ಕುತೂಹಲಕ್ಕೆ ಕಿಚ್ಚು ಹಚ್ಚುತ್ತಿದ್ದಾರೆ. ಅತ್ತ ಪ್ರಭಾಸ್ ಅಭಿಮಾನಿಗಳು ಸಹ ಸಲಾರ್ ಚಿತ್ರದ ಅಪ್ಡೇಟ್ಗಳಿಗಾಗಿ ಚಾತಕ ಪಕ್ಷಿಗಳಂತೆ ಕಾದು ಕುಳಿತಿದ್ದಾರೆ. ಏಕೆಂದರೆ ಸಲಾರ್ ಮಾಸ್ ಸಿನಿಮಾ ಎಂಬುದು ಈಗಾಗಲೇ ಬಹಿರಂಗವಾಗಿದೆ. ಆದರೆ ಮಾಸ್ ಹೀರೋಗೆ ಕ್ಲಾಸ್ ವಿಲನ್ ಯಾರು ಎಂಬ ಕೌತುಕ ಚಿತ್ರಪ್ರೇಮಿಗಳಲ್ಲಿದೆ. ಆದರೆ ಅತ್ತ ಸಲಾರ್ ಚಿತ್ರದ ಖಳನಾಯಕನಾಗಲಿರುವುದು ಬಾಲಿವುಡ್ ನಾಯಕ ಎಂಬ ಸುದ್ದಿಯೊಂದು ಹುಟ್ಟಿಕೊಂಡಿದೆ.
ಹೌದು, ಬಾಲಿವುಡ್ ಹಂಕ್ ಜಾನ್ ಅಬ್ರಾಹಂ ಸಲಾರ್ ಚಿತ್ರದಲ್ಲಿ ವಿಲನ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿಯೊಂದು ಟಾಲಿವುಡ್ನಲ್ಲಿ ಹರಿದಾಡುತ್ತಿದೆ. ಧೂಮ್ ಚಿತ್ರದ ಖಳನಾಯಕನನ್ನು ಸಲಾರ್ ಚಿತ್ರಕ್ಕಾಗಿ ಕರೆತರಲು ಕೆಜಿಎಫ್ ನಿರ್ಮಾಪಕರು ಬಿಗ್ ಪ್ಲ್ಯಾನ್ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನು ಜಾನ್ ಅಬ್ರಾಹಂ ಕೂಡ ಸತ್ಯಮೇವ ಜಯತೆ-2 ಚಿತ್ರದಲ್ಲಿ ಬಿಝಿಯಾಗಿದ್ದು, ಇದರ ಬಳಿಕ ಯಾವುದೇ ಚಿತ್ರಕ್ಕೂ ಡೇಟ್ಸ್ ನೀಡಿಲ್ಲ ಎನ್ನಲಾಗಿದೆ. ಹಾಗಾಗಿ ಪ್ರಭಾಸ್ ಹಾಗೂ ಜಾನ್ ಸಲಾರ್ ಚಿತ್ರದಲ್ಲಿ ಧೂಮ್ ಮಚಾಯಿಸಲಿದ್ದಾರೆ ಎಂದೇ ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಚಿತ್ರತಂಡವಾಗಲಿ, ನಿರ್ಮಾಪಕರಾಗಲಿ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ. ಹೀಗಾಗಿ ಸಲಾರ್ನಲ್ಲಿ ಯಾರೆಲ್ಲಾ ದರ್ಬಾರ್ ಮಾಡಲಿದ್ದಾರೆ ಎಂಬುದನ್ನು ಅಧಿಕೃತವಾಗಲು ಇನ್ನಷ್ಟು ದಿನ ಕಾಯಬೇಕಿದೆ.
Published by:
zahir
First published:
January 7, 2021, 9:48 PM IST